ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣಾ (Karnataka Assembly Election 2023) ಕಣ ರಂಗೇರುತ್ತಿದೆ. ಚುನಾವಣೆ ಹಿನ್ನೆಲೆ ಕಾಪ್ಟರ್‌ಗಳಿಗೆ (Helicopters) ರಾಜ್ಯದಲ್ಲಿ ಭಾರೀ ಬೇಡಿಕೆ ಉಂಟಾಗಿದೆ. ಮೂರು ಪಕ್ಷದ ಘಟಾನುಘಟಿ ನಾಯಕರು (Political Leaders) ಹೆಲಿಕಾಪ್ಟರ್ಗಳ ಮೊರೆ ಹೋಗಿದ್ದಾರೆ. ರಸ್ತೆ (Road) ಮತ್ತು ರೈಲು (Railway) ಮಾರ್ಗದ ಮೂಲಕ ಪ್ರಯಾಣಿಸಿದ್ರೆ ಹೆಚ್ಚು ಸಮಯ ವ್ಯಯವಾಗಲಿದೆ. ಈ ಹಿನ್ನೆಲೆ ಸಮಯ ಉಳಿತಾಯಕ್ಕಾಗಿ ರಾಜಕೀಯ ಮುಖಂಡರು ಕಾಪ್ಟರ್ಗಳನ್ನು ಬುಕ್ ಮಾಡಲಾಗುತ್ತಿದೆ. ಈಗಾಗಲೇ ಸುಮಾರು 150 ಹೆಲಿಕಾಪ್ಟರ್ಗಳು ಹಾಗೂ ಮಿನಿ ವಿಮಾನ ಬುಕ್ಕಿಂಗ್ ಮಾಡಲಾಗಿದೆ.
ರಾಜ್ಯದಲ್ಲಿ 100ಕ್ಕೂ ಅಧಿಕ ಹೆಲಿಕಾಪ್ಟರ್ಗಳು ಹಾಗೂ ಮಿನಿ ವಿಮಾನಗಳಿವೆ. ಹೆಚ್ಚಿನ ಬೇಡಿಕೆ ಹಿನ್ನೆಲೆ ಹೊರ ರಾಜ್ಯದ ಹೆಲಿಕಾಪ್ಟರ್ ಗಳ ಮೊರೆ ಹೋಗಲಾಗಿದೆ. ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆ ಶೇ.15ರಷ್ಟು ಬುಕ್ಕಿಂಗ್ ದರ ಹೆಚ್ಚಳ ಮಾಡಲಾಗಿದೆ.
ಬಾಡಿಗೆ ಎಷ್ಟಿದೆ?
*ಎರಡು ಆಸನದ ಹೆಲಿಕಾಪ್ಟರ್ ಒಂದು ಗಂಟೆ 2 ಲಕ್ಷದ 10 ಸಾವಿರ ರೂಪಾಯಿ
*4 ಆಸನದ ಹೆಲಿಕಾಪ್ಟರ್ ಗಂಟೆಗೆ ಬುಕ್ಕಿಂಗ್ 2 ಲಕ್ಷ 30 ಸಾವಿರ ರೂಪಾಯಿ
*6 ಆಸನದ ಮಿನಿ ವಿಮಾನಕ್ಕೆ ಗಂಟೆಗೆ 2 ಲಕ್ಷ 60 ಸಾವಿರ ರೂಪಾಯಿ
*8 ಆಸನದ ಮಿನಿ ವಿಮಾನಕ್ಕಾಗಿ ಗಂಟೆಗೆ ಮೂರುವರೆ ಲಕ್ಷ ರೂಪಾಯಿ
*13 ಆಸನದ ಮಿನಿ ವಿಮಾನಕ್ಕಾಗಿ ಗಂಟೆಗೆ ಜಿಎಸ್ಟಿ ಸಮೇತ 4 ಲಕ್ಷ ರೂಪಾಯಿ
ಇದನ್ನೂ ಓದಿ: Sudan Clashes: ಸುಡಾನ್ ಕನ್ನಡಿಗರ ಬಗ್ಗೆ ಸಿದ್ದರಾಮಯ್ಯ ಆತಂಕ; ಜೈಶಂಕರ್ ‘ರಾಜಕೀಯ’ ಹೇಳಿಕೆಗೆ ಮಾಜಿ ಸಿಎಂ ಕೌಂಟರ್!
ಮೇ 10ರಂದು ರಾಜ್ಯದಲ್ಲಿ ಒಂದು ಹಂತದ ಮತದಾನ ನಡೆಯಲಿದೆ. ಮೇ 13 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದ 15ನೇ ವಿಧಾನಸಭೆಯ ಅವಧಿಯೂ ಮೇ 24ಕ್ಕೆ ಅಂತ್ಯವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ