• Home
  • »
  • News
  • »
  • state
  • »
  • Bird flu: ಕುಕ್ಕುಟೋದ್ಯಮದ ಮೇಲೆ ಹಕ್ಕಿ ಜ್ವರದ ಕರಿ ನೆರಳು! ಕರ್ನಾಟಕ ಎಷ್ಟು ಸೇಫ್​? ಏನ್ ಹೇಳ್ತಾರೆ ತಜ್ಞರು?

Bird flu: ಕುಕ್ಕುಟೋದ್ಯಮದ ಮೇಲೆ ಹಕ್ಕಿ ಜ್ವರದ ಕರಿ ನೆರಳು! ಕರ್ನಾಟಕ ಎಷ್ಟು ಸೇಫ್​? ಏನ್ ಹೇಳ್ತಾರೆ ತಜ್ಞರು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಹಾರಾಷ್ಟ್ರದ ಥಾಣೆ ಮತ್ತು ಪಾಲ್ಘರ್ ಜಿಲ್ಲೆಗಳಲ್ಲಿ ಕೆಲವು ಪಕ್ಷಿಗಳಲ್ಲಿ ಹಕ್ಕಿ ಜ್ವರ (Bird flu) ಸೋಂಕು ಪತ್ತೆಯಾಗಿದ್ದು ಆತಂಕ ಹುಟ್ಟುಹಾಕಿದೆ.

  • Share this:

ಮಹಾರಾಷ್ಟ್ರದಲ್ಲಿ ((Maharashtra)) ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದಂತೆ ಈಗ ಹಕ್ಕಿಜ್ವರದ ಭೀತಿ ಹೆಚ್ಚಾಗುತ್ತಿದೆ. ಥಾಣೆ ಮತ್ತು ಪಾಲ್ಘರ್ ಜಿಲ್ಲೆಗಳಲ್ಲಿ ಕೆಲವು ಪಕ್ಷಿಗಳಲ್ಲಿ ಹಕ್ಕಿ ಜ್ವರ (Bird flu) ಸೋಂಕು ಪತ್ತೆಯಾಗಿದ್ದು ಆತಂಕ ಹುಟ್ಟುಹಾಕಿದೆ. ಹೀಗಾಗಿ ಮಹಾರಾಷ್ಟ್ರ ಸರ್ಕಾರವು ಎರಡೂ ಜಿಲ್ಲೆಗಳಲ್ಲಿ ಸೋಂಕಿನ ಹಾಟ್‌ಸ್ಪಾಟ್‌ಗಳ (Hotspot) ಕಿಲೋಮೀಟರ್ ವ್ಯಾಪ್ತಿಯೊಳಗೆ 25,000 ಕ್ಕೂ ಹೆಚ್ಚು ಪಕ್ಷಿಗಳನ್ನು ಕೊಲ್ಲಲು ನಿರ್ಧರಿಸಿದೆ. ಜೊತೆಗೆ ಸೋಂಕಿತ ಜಮೀನಿನಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಪ್ರತ್ಯೇಕಿಸಲಾಗಿದೆ ಎಂದು ಮಹಾರಾಷ್ಟ್ರದ ಪಶುಸಂಗೋಪನೆ ಸಚಿವ ಸುನೀಲ್ ಕೇದಾರ್ (Minister Sunil Kedar) ಹೇಳಿದ್ದಾರೆ.. ಬಿಹಾರ ಹಾಗೂ ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು ಕುಕ್ಕುಟೋದ್ಯಮದ ಮೇಲೆ ಕರಿ ನೆರಳು ಆವರಿಸಿದೆ. ಆದರೆ ಕರ್ನಾಟಕದಲ್ಲಿ (Karnataka) ಕೋಳಿ ಸಾಕಣೆ ಕೇಂದ್ರಗಳಲ್ಲಿ ಬಯೋ ಸೆಕ್ಯುರಿಟಿಯಿಂದ ಹಕ್ಕಿ ಜ್ವರ ಕಾಣಿಸಿಕೊಳ್ಳುವ ಸಾಧ್ಯತೆಗಳು ಬಹಳಷ್ಟು ಕಡಿಮೆಯಿದೆ ಎಂದು ತಜ್ಞರು ಹೇಳಿದ್ದಾರೆ.


ಎಲ್ಲೆಲ್ಲಿ ಹಕ್ಕಿ ಜ್ವರ ಪತ್ತೆ


ಕಳೆದ ವಾರ ಬಿಹಾರದ ಜಮೀನೊಂದರಲ್ಲಿರುವ ಕೋಳಿ ಸಾಕಣೆ ಕೇಂದ್ರವೊಂದರಲ್ಲಿ ಹಕ್ಕಿ ಜ್ವರ ಪತ್ತೆಯಾಗಿದ್ದು, ಅದರಲ್ಲಿದ್ದ 3,859 ಕೋಳಿಗಳ ಪೈಕಿ 787 ಕೋಳಿಗಳು ಮೃತಪಟ್ಟಿವೆ. ಮತ್ತೊಂದೆಡೆ, ಮಹಾರಾಷ್ಟ್ರದ ಠಾಣೆ ಹಾಗೂ ಪಾಲ್ಘರ್‌ ಜಿಲ್ಲೆಗಳಲ್ಲಿರುವ ಕೋಳಿ ಫಾರಂಗಳಲ್ಲಿ ಎಚ್‌5ಎನ್‌1 ಪತ್ತೆಯಾಗಿದ್ದು, ಆತಂಕ ಮೂಡಿಸಿದೆ. ಅಲ್ಲದೆ, ಠಾಣೆಯಲ್ಲಿಈಗಾಗಲೇ 25 ಸಾವಿರ ಕೋಳಿಗಳ ಹತ್ಯೆಗೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.


ಇದನ್ನೂ ಓದಿ: Bird Flu: ಮಹಾರಾಷ್ಟ್ರ ಬಿಹಾರದಲ್ಲಿ ಹೆಚ್ಚಿದ ಹಕ್ಕಿಜ್ವರ: ರಾಜ್ಯದಲ್ಲಿ ಶುರುವಾಯ್ತು ಹಕ್ಕಿಜ್ವರದ ಆತಂಕ


ಕರ್ನಾಟಕ ಸೇಫ್​ ಅಂತಿದ್ದಾರೆ ತಜ್ಞರು


ಕುಕ್ಕುಟ ಫಾರ್ಮ್‍ಗಳಲ್ಲಿ ಬಯೋ ಸೆಕ್ಯುರಿಟಿಯಿಂದ ಹಕ್ಕಿ ಜ್ವರ ಕಾಣಿಸಿಕೊಳ್ಳುವ ಸಾಧ್ಯತೆಗಳು ಬಹಳಷ್ಟು ಕಡಿಮೆಯಿದೆ ಎಂದು ಕೆಪಿಎಫ್‍ಬಿಎ ತಜ್ಞರ ಸಮಿತಿ ವರದಿಯ ಮೂಲಕ ಮಾಹಿತಿ ನೀಡಿದೆ. ಕರ್ನಾಟಕ ಪೌಲ್ಟ್ರಿ ಫಾರ್ಮರ್ಸ್ ಬ್ರೀಡರ್ಸ್ ಅಸೋಸಿಯೇಶನ್ (KPFBA) ತಜ್ಞರು ಈ ಕುರಿತು ರಾಜ್ಯದ ಕುಕ್ಕುಟೋದ್ಯಮ ಕ್ಷೇತ್ರದ ಬಗ್ಗೆ ಅಧ್ಯಯನ ನಡೆಸಿ ಕರ್ನಾಟಕದ ಕೋಳಿ ಫಾರ್ಮ್‍ಗಳಲ್ಲಿ ಕೋಳಿಗಳ ಸುರಕ್ಷತೆಯಲ್ಲಿ ಹೆಚ್ಚು ಗಮನ ನೀಡುತ್ತಾರೆ.


ಕೋಳಿಗಳನ್ನು ಬಯೋ ಸೆಕ್ಯುರಿಟಿ ರೀತಿಯ ವ್ಯವಸ್ಥೆ ಸೇರಿದಂತೆ ಫಾರ್ಮ್‍ನೊಳಗೆ ಪ್ರವೇಶ ಪಡೆಯುವ ವ್ಯಕ್ತಿ, ವಾಹನಗಳಿಗೂ ಕೂಡ ಸ್ಯಾನಿಟೈಸರ್ ಮಾಡಿಕೊಂಡು ಪ್ರವೇಶ ಪಡೆದುಕೊಳ್ಳುವ ವ್ಯವಸ್ಥೆಯಿದೆ. ಫಾರ್ಮ್‍ಗಳು ಕೋಳಿಗಳ ವಿಚಾರದಲ್ಲಿ ಹೆಚ್ಚು ಗಮನ ಹಾಗೂ ಸುರಕ್ಷತೆಗೆ ಕ್ರಮ ಕೈಗೊಳ್ಳುವುದು ಬೇರೆ ಎಲ್ಲೂ ಕಾಣಸಿಗುವುದು ಅಪರೂಪ ಎಂದು ಕೆಪಿಎಫ್‌ಬಿಎ ಅಧ್ಯಯನ ವರದಿ ಮಾಹಿತಿ ನೀಡಿದೆ.


ಇದನ್ನೂ ಓದಿ: Bird Flu: ದೇಶದಲ್ಲಿ ಮತ್ತೆ ಹಕ್ಕಿ ಜ್ವರದ ಭೀತಿ, ಫಾರಂನಲ್ಲಿ 25,000 ಕೋಳಿಗಳನ್ನು ಕೊಲ್ಲಲು ಆದೇಶ


‘ಬೇಸಿಗೆಯಲ್ಲಿ ಹೆಚ್ಚು ಕೋಳಿ ಸಾವನ್ನಪ್ಪುತ್ತೆ’


ಬೇಸಿಗೆಯಲ್ಲಿ ಕೋಳಿಗಳ ಸಾವಿನ ಪ್ರಮಾಣ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಬ್ರಾಯ್ಲರ್ ಕೋಳಿಗಳು ಇತರ ಸಮಯದಲ್ಲಿ ಶೇ. 5ರಷ್ಟು ಸತ್ತರೆ ಬೇಸಿಗೆಯಲ್ಲಿ ಸಾವಿನ ಪ್ರಮಾಣ ಶೇ. 10ರಿಂದ 15 ಇರುತ್ತದೆ. ಇದರ ಜತೆಗೆ ಶ್ವಾಸಕೋಶದ ಸಮಸ್ಯೆ, ರಾಣಿಕೇತು ಕಾಯಿಲೆ ಬಂದರೆ ಮೂರು ತಿಂಗಳು ಫಾರ್ಮ್ ಮುಚ್ಚಬೇಕಾಗುತ್ತದೆ. ತಜ್ಞರು ಕೂಡ ಕೋಳಿ ಸಾಕಾಣೆದಾರರಿಗೆ 1,000 ಮರಿಗಳ ಬದಲು ಈ ಸಮಯದಲ್ಲಿ 800 ಮರಿಗಳನ್ನು ಸಾಕಿ ಎಂದು ಸಲಹೆ ನೀಡುತ್ತಾರೆ. ಸಾಮಾನ್ಯವಾಗಿ ಇತರ ಸಮಯದಲ್ಲಿ ಕೋಳಿಯ ಸಾಮಾನ್ಯ ತೂಕ 2 ರಿಂದ 2.5 ಕೆಜಿ ಇರುತ್ತದೆ ಆದರೆ ಬೇಸಿಗೆಯಲ್ಲಿ 1.8 ರಿಂದ 2 ಕೆಜಿ ತೂಗುತ್ತದೆ. ಕೋಳಿಯ ದರ ಹೆಚ್ಚಳವಾದರೆ ಕೋಳಿ ಮರಿಗಳಿಗೂ ದರ ಏರುತ್ತದೆ


ಬಿಸಿಲಿನ ಝಳ ರೇಟು ಏರುವ ಸಾಧ್ಯತೆ


ಇದರ ಜತೆಗೆ ಈಗ ಕಾಣಿಸಿಕೊಳ್ಳುತ್ತಿರುವ ಬಿರುಬಿಸಿಲಿನ ಹೊಡೆತ ಕುಕ್ಕುಟೋದ್ಯಮದ ಉತ್ಪಾದನೆಗೆ ಹೊಡೆತ ನೀಡಿದೆ. ಉತ್ಪಾದನೆ ಕುಸಿತದಿಂದಾಗಿ ಕುಕ್ಕುಟೋದ್ಯಮದಲ್ಲಿ ಬೆಲೆ ಏರುವ ಲಕ್ಷಣಗಳು ಗೋಚರಿಸಿದೆ. ಇದು ಈ ವರ್ಷದ ವಿಶೇಷ ಬೆಳವಣಿಗೆ ಎನ್ನುವುದು ಉದ್ಯಮಿಗಳ ಅನುಭವದ ಮಾತು. ಈಗ ಬಿರುಬಿಸಿಲು ಕೂಡ ಕುಕ್ಕುಟೋದ್ಯಮದ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ದಾಖಲಿಸಿದೆ. ಪ್ರತಿ ವರ್ಷದ ಉಷ್ಣಾಂಶಕ್ಕಿಂತ ಈ ಬಾರಿ ಎರಡು ಶೇಕಡಾದಷ್ಟು ಉಷ್ಣಾಂಶ ಎಲ್ಲೆಡೆ ಏರಿಕೆ ಕಂಡಿದೆ. ಇದರ ಪರಿಣಾಮ ದೊಡ್ಡ ಪ್ರಮಾಣದಲ್ಲಿ ಕೋಳಿ ಮರಿಗಳನ್ನು ಸಾಕುವ ಮಂದಿ ದೊಡ್ಡ ಪ್ರಮಾಣದಲ್ಲಿ ಸಾಕಲು ಮುಂದಾಗುತ್ತಿಲ್ಲ. ಇದರ ಪರಿಣಾಮ ಉತ್ಪಾದನೆ ಕುಸಿತ ಕಾಣುವ ಜತೆಗೆ ರೇಟ್‍ನಲ್ಲೂ ಏರಿಕೆಯ ಬಿಸಿ ತಟ್ಟಿದೆ.

Published by:Pavana HS
First published: