• Home
  • »
  • News
  • »
  • state
  • »
  • ಕಚ್ಚಾರೇಷ್ಮೆ ಆಮದು ಶುಲ್ಕ ಹೆಚ್ಚಳ, ಕೇಂದ್ರದ ನಿರ್ಧಾರಕ್ಕೆ ರೇಷ್ಮೆ ಬೆಳೆಗಾರರು ಮೆಚ್ಚುಗೆ 

ಕಚ್ಚಾರೇಷ್ಮೆ ಆಮದು ಶುಲ್ಕ ಹೆಚ್ಚಳ, ಕೇಂದ್ರದ ನಿರ್ಧಾರಕ್ಕೆ ರೇಷ್ಮೆ ಬೆಳೆಗಾರರು ಮೆಚ್ಚುಗೆ 

ರೇಷ್ಮೆ ಬೆಳೆಗಾರರು

ರೇಷ್ಮೆ ಬೆಳೆಗಾರರು

ಕೇಂದ್ರ ಸರ್ಕಾರ ಆಮದು ಶುಲ್ಕವನ್ನ ಹೆಚ್ಚಳ ಮಾಡಿರುವ ಹಿನ್ನೆಲೆ ನಮ್ಮ ರೇಷ್ಮೆಗೆ ಬೇಡಿಕೆ ಬರಲಿದೆ

  • Share this:

ರಾಮನಗರ (ಫೆ. 1) : ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಕಚ್ಚಾರೇಷ್ಮೆ ಆಮದು ಶುಲ್ಕುವನ್ನ ೧೦ ಪರ್ಸೆಂಟ್‌ನಿಂದ 15 ಪರ್ಸೆಂಟ್‌ಗೆ ಏರಿಕೆ ಮಾಡಿರುವ ಕ್ರಮವನ್ನ  ಜಿಲ್ಲೆಯ ರೇಷ್ಮೆ ಬೆಳೆಗಾರರು ಸ್ವಾಗತಿಸಿದ್ದಾರೆ. ನಾವು ಕೇಂದ್ರ ಸರ್ಕಾರಕ್ಕೆ 30 ಪರ್ಸೆಂಟ್‌ಗೆ ಏರಿಕೆ ಮಾಡಲು ಮನವಿ ಮಾಡಿದ್ದೇವು. ಆದರೆ ಕೇಂದ್ರ ಸರ್ಕಾರ 10 ರಿಂದ 15 ಕ್ಕೆ ಏರಿಕೆ ಮಾಡಿರುವುದು ಸಮಾಧಾನ ತಂದಿದೆ ಎಂದು ಬೆಳೆಗಾರರು ತಿಳಿಸಿದ್ದಾರೆ.  ನಾವು ಬೆಳೆದ ರೇಷ್ಮೆಗೆ ಈ ಹಿಂದೆಯೆಲ್ಲ ಅಷ್ಟು ಬೇಡಿಕೆ ಇರುತ್ತಿರಲಿಲ್ಲ. ಚೀನಾದಿಂದ ಆಮದಾಗುವ ರೇಷ್ಮೆಗೆ ಹೆಚ್ಚಿನ ಬೇಡಿಕೆ ಇರುತ್ತಿತ್ತು. ಆದರೆ ಈಗ ಕೇಂದ್ರ ಸರ್ಕಾರ ಆಮದು ಶುಲ್ಕವನ್ನ ಹೆಚ್ಚಳ ಮಾಡಿರುವ ಹಿನ್ನೆಲೆ ನಮ್ಮ ರೇಷ್ಮೆಗೆ ಬೇಡಿಕೆ ಬರಲಿದೆ ಎಂದರು. ಇನ್ನು ಈ ಬಗ್ಗೆ ರೇಷ್ಮೆ ಮಾರುಕಟ್ಟೆಯ ಅಧಿಕಾರಿ ಮಾತನಾಡಿ ರಾಮನಗರ ಮಾರುಕಟ್ಟೆಗೆ ದಿನಕ್ಕೆ 30 ರಿಂದ 35 ಟನ್ ರೇಷ್ಮೆಗೂಡು ಬರುತ್ತಿತ್ತು. ಆದರೆ ಕೋವಿಡ್ ಇದ್ದ ಹಿನ್ನೆಲೆ ಅದು 20 ಟನ್‌ವರೆಗೆ ಕುಸಿತವಾಗಿತ್ತು. ಆದರೆ ಈಗ ಮತ್ತೆ ಗೂಡಿನ ಪ್ರಮಾಣ ಹಳೇಯ ಸ್ವರೂಪವನ್ನೇ ಕಾಪಾಡಿಕೊಂಡಿದೆ ಎಂದರು.


ಇನ್ನು ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಕಚ್ಚಾರೇಷ್ಮೆ ಆಮದಿನ ಶುಲ್ಕವನ್ನ ಹೆಚ್ಚಳ ಮಾಡಿರುವುದು ನಮ್ಮ ರೇಷ್ಮೆ ಬೆಳೆಗಾರರಿಗೆ ಅನುಕೂಲಕರವಾಗಿದೆ. ನಮ್ಮಲ್ಲಿ ಕಚ್ಚಾರೇಷ್ಮೆಯ ಕೊರತೆಯಿಂದಾಗಿ ನಾವು ಚೀನಾದಿಂದ 11 ಸಾವಿರ ಮೆಟ್ರಿಕ್ ಟನ್ ರೇಷ್ಮೆಯನ್ನ ಆಮದು ಮಾಡಿಕೊಳ್ಳುತ್ತಿದ್ದೆವು. ಆದರೆ ನಾವು ನಮ್ಮಲ್ಲೇ ಉತ್ತಮ ರೀತಿಯಲ್ಲಿ ರೇಷ್ಮೆಯನ್ನ ಬೆಳೆದರೆ ಚೀನಾದಿಂದ ಆಮದಾಗುವ ಕಚ್ಚಾರೇಷ್ಮೆಯನ್ನ ಭವಿಷ್ಯದಲ್ಲಿ ಮತ್ತಷ್ಟು ಕಡಿಮೆ ಮಾಡುವ ಅವಕಾಶವಿದೆ ಎಂದು ತಿಳಿಸಿದ್ದಾರೆ.


ಕೇಂದ್ರದ ನಿರ್ಧಾರದಿಂದ ನಮ್ಮ ರೈತರಿಗೆ ಕೊಂಚ ಅನುಕೂಲ


ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಕೈಗೊಂಡಿರುವ ನಿರ್ಧಾರದಿಂದ ನಮ್ಮ ರೈತರಿಗೆ ಕೊಂಚ ಅನುಕೂಲವಾಗಲಿದೆ. ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದ ಕಚ್ಚಾರೇಷ್ಮೆಗೆ ಶುಲ್ಕ ಹೆಚ್ಚಳ ಮಾಡಿದ ಪರಿಣಾಮ ಅಲ್ಲಿನ ಕಚ್ಚಾರೇಷ್ಮೆ ನಮ್ಮ ದೇಶಕ್ಕೆ ಆಮದಾಗುವುದು ಕಡಿಮೆಯಾಗಲಿದೆ. ಜೊತೆಗೆ ನಮ್ಮ ದೇಸಿ ಕಚ್ಚಾರೇಷ್ಮೆಯನ್ನ ಬಳಸಿಕೊಳ್ಳಲು ಸುಲಭವಾಗುತ್ತದೆ. ಇನ್ನು ಇದರ ಜೊತೆಗೆ ನಮ್ಮ ರೈತರು ಸಹ ರೇಷ್ಮೆಗೂಡನ್ನ ಉತ್ತಮವಾಗಿ ಬೆಳೆದರೆ ವಿದೇಶಕ್ಕೂ ರಫ್ತು ಮಾಡುವ ಸದಾವಕಾಶ ಇದೇ ಎನ್ನಲಾಗುತ್ತಿದೆ.


ಇದನ್ನು ಓದಿ: ಸ್ಯಾಂಡಲ್ ವುಡ್ ಮಂದಿಗೆ ರಾಜ್ಯ ಸರ್ಕಾರದಿಂದ ಶಾಕಿಂಗ್ ಸುದ್ದಿ!


ಇನ್ನು ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ನಮ್ಮ ದೇಸಿ ಕಚ್ಚಾರೇಷ್ಮೆಗೆ ಹೆಚ್ಚಿನ ಒತ್ತನ್ನ ಕೊಡಬೇಕು, ವಿದೇಶಿ ರೇಷ್ಮೆಯನ್ನ ಆಮದು ಮಾಡಿಕೊಳ್ಳುವ ಪ್ರಮಾಣ ಕಡಿಮೆಯಾಗಬೇಕೆಂದು  ಜಿಲ್ಲೆಯ ರೇಷ್ಮೆ ಬೆಳೆಗಾರರು ಒತ್ತಾಯಿಸಿದ್ದಾರೆ.


ಇದರ ಜೊತೆಗೆ ಚನ್ನಪಟ್ಟಣದ ಬಳಿ ನಿರ್ಮಾಣವಾಗುತ್ತಿರುವ ಹೈಟೆಕ್ ರೇಷ್ಮೆ ಮಾರುಕಟ್ಟೆಗೆ ಕೇಂದ್ರ ಸರ್ಕಾರ ಹೆಚ್ಚಿನ ಸಹಕಾರ ಕೊಡಬೇಕು, ಜೊತೆಗೆ ಮುಂದುವರಿದ ತಂತ್ರಜ್ಞಾನವನ್ನ ಮಾರುಕಟ್ಟೆಯಲ್ಲಿ ಅಳವಡಿಕೆ ಮಾಡುವ ಮೂಲಕ ರೈತರ ರೇಷ್ಮೆಗೂಡಿಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ.


(ವರದಿ : ಎ.ಟಿ.ವೆಂಕಟೇಶ್)

Published by:Seema R
First published: