Salary Increase: ಸಿಎಂ, ಸಚಿವರು , ಶಾಸಕರ ಸಂಬಳದಲ್ಲಿ ಭರ್ಜರಿ ಹೆಚ್ಚಳ, ಯಾರಿಗೆ ಎಷ್ಟೆಷ್ಟು ಸಂಬಳ ಗೊತ್ತಾ?

ಒಂದೊಂದು ರಾಜ್ಯದಲ್ಲಿ ಶಾಸಕರು, ಸಚಿವರ ಸಂಬಳ (Salary) ಬೇರೆಯಾಗಿರುತ್ತೆ. ಕರ್ನಾಟಕ ಮುಖ್ಯಮಂತ್ರಿ ಮತ್ತು ಸಚಿವರ ವೇತನ ಶೇಕಡಾ 50 ರಷ್ಟು ಹೆಚ್ಚಳವಾಗಿದೆ.

ವಿಧಾನಸೌಧ

ವಿಧಾನಸೌಧ

  • Share this:
ಬೆಂಗಳೂರು (ಫೆ.21): ನಮ್ಮ ರಾಜ್ಯದ ಸಿಎಂಗೆ (Chief Minister) ಎಷ್ಟು ಸಂಬಳ, ನಮ್ಮ ಕ್ಷೇತ್ರದ ಸಚಿವರಿಗೆ (Minister) ಎಷ್ಟು ಸಂಬಳ ಇರುತ್ತೆ. ನಮ್ಮ ಶಾಸಕರಿ​ಗೆ (MLA) ಸರ್ಕಾರ ಎಷ್ಟು ಸಂಬಳ ಕೊಡುತ್ತೆ ಅನ್ನೋ ಕುತೂಹಲ ಎಲ್ಲಾ ರಾಜ್ಯಗಳ ಜನರಿಗೂ ಇರುತ್ತೆ.  ಒಂದೊಂದು ರಾಜ್ಯದಲ್ಲಿ ಶಾಸಕರು, ಸಚಿವರ ಸಂಬಳ (Salary) ಬೇರೆಯಾಗಿರುತ್ತೆ. ಕರ್ನಾಟಕ ಮುಖ್ಯಮಂತ್ರಿ ಮತ್ತು ಸಚಿವರ ವೇತನ ಶೇಕಡಾ 50 ರಷ್ಟು ಹೆಚ್ಚಳವಾಗಿದೆ. ಜೊತೆಗೆ ಶಾಸಕರು, ಸಭಾಧ್ಯಕ್ಷರು ಹಾಗೂ ಸಚೇತಕರಿಗೂ ಭತ್ಯೆ ಹೆಚ್ಚಿಸಲಾಗಿದೆ. ಮುಖ್ಯಮಂತ್ರಿಗಳ ತಿಂಗಳ ವೇತನ 50 ಸಾವಿರ ರೂಪಾಯಿ ಇತ್ತು. ಇದೀಗ 25 ಸಾವಿರ ಹೆಚ್ಚಾಗಿದ್ದು, ಇನ್ಮುಂದೆ ತಿಂಗಳಿಗೆ 75 ಸಾವಿರ ರೂಪಾಯಿ ಸಿಗಲಿದೆ.

ಸಂಪುಟ ದರ್ಜೆ ಮಂತ್ರಿಗಳಿಗೂ ತಿಂಗಳಿಗೆ 40 ಸಾವಿರ ರೂ. ಇದ್ದ ಸಂಬಳವನ್ನು 60 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ. ವರ್ಷಕ್ಕೆ 3 ಲಕ್ಷವಿದ್ದ ಆತಿಥ್ಯ ಭತ್ಯೆಯನ್ನು ನಾಲ್ಕೂವರೆ ಲಕ್ಷಕ್ಕೆ ಹೆಚ್ಚಿಸಲಾಗಿದೆ. ಮಂತ್ರಿಗಳ ಮನೆ ಬಾಡಿಗೆ 80 ಸಾವಿರದಿಂ 1.20 ಲಕ್ಷ ರೂ.ಗೆ  ಏರಿಸಲಾಗಿದೆ. 20 ಸಾವಿರ ಇದ್ದ ಮನೆ ನಿರ್ವಹಣೆ ವೆಚ್ಚ 30 ಸಾವಿರ ರೂ.ಗೆ ಏರಿಕೆಯಾಗಿದ್ದು,  ತಿಂಗಳಿಗೆ  1 ಸಾವಿರ ಲೀಟರ್​ ಪೆಟ್ರೋಲ್ ಸೌಲಭ್ಯ ನೀಡಲಾಗಿತ್ತು ಇದೀಗ ಅದನ್ನೂ 2 ಸಾವಿರ ಲೀಟರ್​ಗೆ ಏರಿಸಲಾಗಿದೆ.

ಶಾಸಕರು, ಸಭಾಧ್ಯಕ್ಷರು, ವಿಪಕ್ಷ ನಾಯಕರ ಸಂಬಳ ಹೆಚ್ಚಳ

ಸಭಾಧ್ಯಕ್ಷರು ಹಾಗೂ ಉಪಸಭಾಧ್ಯಕ್ಷರ ಸಂಬಳದಲ್ಲೂ ಭಾರೀ ಏರಿಕೆಯಾಗಿದ್ದು ತಿಂಗಳಿಗೆ 50 ಸಾವಿರ ಇದ್ದ ಸಂಬಳ 75 ಸಾವಿರಕ್ಕೆ ಏರಿಕೆಯಾಗಿದೆ.

ಸಂಬಳ : ತಿಂಗಳಿಗೆ 50 ಸಾವಿರ ರೂ.ನಿಂದ 75 ಸಾವಿರಕ್ಕೆ ಏರಿಕೆ

ಇಂಧನ ಭತ್ಯೆ: 1000 ಲೀಟರ್​ ಪೆಟ್ರೋಲ್ ನಿಂದ 2 ಸಾವಿರ ಲೀಟರ್​ಗೆ ಏರಿಕೆ

ಆತಿಥ್ಯ ವೇತನ ವಾರ್ಷಿಕ: 3 ಲಕ್ಷದಿಂದ 4 ಲಕ್ಷರೂಗೆ ಹೆಚ್ಚಳ

ಮನೆ ಬಾಡಿಗೆ: 80 ಸಾವಿರದಿಂದ 1.60 ಲಕ್ಷ ರೂ.ಗೆ ಹೆಚ್ಚಳ

ಪ್ರಯಾಣ ಭತ್ಯೆ: ಪ್ರತಿ ಕಿಲೋ ಮೀಟರ್​ 30 ರೂ.ನಿಂದ 40 ರೂಗೆ ಏರಿಕೆ

ದಿನದ ಭತ್ಯೆ: ದಿನಕ್ಕೆ 2 ಸಾವಿರದಿಂದ 3 ಸಾವಿರ ರೂ.ಗೆ ಏರಿಕೆ

ಹೊರ ರಾಜ್ಯ ಪ್ರವಾಸ: ದಿನಕ್ಕೆ 2500+5000 ರೂಪಾಯಿಯಿಂದ 3000+7000 ರೂಪಾಯಿಗೆ ಏರಿಕೆ

ವಿಪಕ್ಷ ನಾಯಕರ ಸಂಬಳದಲ್ಲಿ ಹೆಚ್ಚಳ

ಸಂಬಳ : ತಿಂಗಳಿಗೆ 40 ಸಾವಿರ ರೂ.ನಿಂದ 60 ಸಾವಿರಕ್ಕೆ ಏರಿಕೆ

ಇಂಧನ ಭತ್ಯೆ: 1000 ಲೀಟರ್​ ಪೆಟ್ರೋಲ್ ನಿಂದ 2 ಸಾವಿರ ಲೀಟರ್​ಗೆ ಏರಿಕೆ

ಆತಿಥ್ಯ ವೇತನ ವಾರ್ಷಿಕ: 2 ಲಕ್ಷದಿಂದ 2.50 ಲಕ್ಷರೂಗೆ ಹೆಚ್ಚಳ

ದಿನದ ಭತ್ಯೆ: ದಿನಕ್ಕೆ 2 ಸಾವಿರದಿಂದ 3 ಸಾವಿರ ರೂ.ಗೆ ಏರಿಕೆ

ಹೊರ ರಾಜ್ಯ ಪ್ರವಾಸ: ದಿನಕ್ಕೆ 5000 ರೂಪಾಯಿಯಿಂದ 7000 ರೂಪಾಯಿಗೆ ಏರಿಕೆ

 ಶಾಸಕರ ಭತ್ಯೆ ಹೆಚ್ಚಳ ಮಾಡಿದ ಸರ್ಕಾರ

ಸಂಬಳ : ತಿಂಗಳಿಗೆ 20 ಸಾವಿರ ರೂ.ನಿಂದ 40 ಸಾವಿರಕ್ಕೆ ಏರಿಕೆ

ಇಂಧನ ಭತ್ಯೆ: 1000 ಲೀಟರ್​ ಪೆಟ್ರೋಲ್ ನಿಂದ 2 ಸಾವಿರ ಲೀಟರ್​ಗೆ ಏರಿಕೆ

ಆತಿಥ್ಯ ವೇತನ ವಾರ್ಷಿಕ: 2 ಲಕ್ಷದಿಂದ 2.50 ಲಕ್ಷರೂಗೆ ಹೆಚ್ಚಳ

ಪ್ರಯಾಣ ಭತ್ಯೆ: ಪ್ರತಿ ಕಿಲೋ ಮೀಟರ್​ 25 ರೂ.ನಿಂದ 30 ರೂಗೆ ಏರಿಕೆ

ದಿನದ ಭತ್ಯೆ: ದಿನಕ್ಕೆ 2 ಸಾವಿರದಿಂದ 3 ಸಾವಿರ ರೂ.ಗೆ ಏರಿಕೆ

ಹೊರ ರಾಜ್ಯ ಪ್ರವಾಸ: ದಿನಕ್ಕೆ 5000 ರೂಪಾಯಿಯಿಂದ 7000 ರೂಪಾಯಿಗೆ ಏರಿಕೆ

ದೂರವಾಣಿ ವೆಚ್ಚ ಯತಾಸ್ಥಿತಿ ತಿಂಗಳಿಗೆ 20,00 ಕಾಯ್ದಿರಿಸಲಾಗಿದೆ. ಆಪ್ತ ಸಹಾಯಕನಿಗೆ ಮತ್ತು ರೂಮ್ ಬಾಯ್​​ ಸಿಬ್ಬಂದಿಗೆ 10 ಸಾವಿರದಿಂದ 20 ಸಾವಿರ ರೂಗೆ ಹೆಚ್ಚಿಸಲಾಗಿದೆ. ಸರ್ಕಾರ ಖಜಾನೆಯಲ್ಲೀ ದುಡ್ಡೆ ಇಲ್ಲ ಅಂತ ಹೇಳೋ ಸರ್ಕಾರ ತಮ್ಮ ಸಂಬಳವನ್ನೂ ಮಾತ್ರ ಏರಿಕೆ ಮಾಡಿಕೊಳ್ತಿದೆ ಅಂತ ಜನ ಸಾಮಾನ್ಯರು ದೂರುತ್ತಿದ್ದಾರೆ. ಸಂಬಳ, ಭತ್ಯೆ ಹೆಚ್ಚಳದ ವಿದೇಯಕವನ್ನು ತಿದ್ದುಪಡಿ ಬಳಿಕ ಸಂಬಳ ಹೆಚ್ಚಳವಾಗಿದೆ. ಇನ್ನೂ ಕೊರೊನಾ ಕಾಲದಲ್ಲಿ ಹಲವು ಸರ್ಕಾರಿ ಇಲಾಖೆಗಳಲ್ಲಿ ಸಿಬ್ಬಂದಿಗಳಿಗೆ ಭತ್ಯೆ ನೀಡಿಲ್ಲ. ನಮಗೆ ಸಂಬಳ, ಭತ್ಯೆ ಹೆಚ್ಚಿಸದೆ ಅವರು ಮಾತ್ರ ಸಂಬಳ ಹೆಚ್ಚಿಸಿಕೊಂಡಿದ್ದಾರೆ ಅಂತಿದ್ದಾರೆ ಸರ್ಕಾರಿ ನೌಕರರು
Published by:Pavana HS
First published: