ಬೆಂಗಳೂರು: ರಾಜ್ಯ ರಾಜಧಾನಿಯ ಚಿನ್ನದ ವ್ಯಾಪಾರಿಗಳಿಗೆ (Gold Merchant) ಬೆಳ್ಳಂಬೆಳಗ್ಗೆಯೇ ಐಟಿ ಅಧಿಕಾರಿಗಳು (Income Tax Raid) ಶಾಕ್ ನೀಡಿದ್ದಾರೆ. ತೆರಿಗೆ ವಂಚನೆ (Tax Evasion) ಆರೋಪದ ಮೇಲೆ ಬೆಂಗಳೂರು (Bengaluru) ನಗರದ 25ಕ್ಕೂ ಹೆಚ್ಚು ಚಿನ್ನದ ವ್ಯಾಪಾರಿಗಳ ಅಂಗಡಿ (Jewellery Shops) ಮತ್ತು ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು ನಗರದ ಜಯನಗರ, ಯಶವಂತಪುರ, ಬಸವನಗುಡಿ, ಚಿಕ್ಕಪೇಟೆ ಸೇರಿದಂತೆ ಹಲವೆಡೆ ಚಿನ್ನದ ವ್ಯಾಪಾರಿಗಳ ಅಂಗಡಿ ಮತ್ತು ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದ್ದು, ಜಯನಗರದ ಚಿನ್ನದ ವ್ಯಾಪಾರಿ ರಾಜೇಶ್ ಕುಮಾರ್ ಜೈನ್ ಮನೆ ಮೇಲೆ ದಾಳಿ ನಡೆಸಿದಾಗ ತೆರಿಗೆ ಪಾವತಿಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ಹೀಗಾಗಿ ಆದಾಯ ಇಲಾಖೆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Indian IT Companies: ಭಾರತೀಯ ಐಟಿ ಕಂಪನಿಗಳಿಗೆ ಕಿರಿಕಿರಿಯಾಗಿರುವ ಕನ್ಸಲ್ಟಿಂಗ್ ಸಂಸ್ಥೆಗಳು, ವರದಿ ಏನು ಹೇಳ್ತಿದೆ?
ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ
ಜ್ಯುವೆಲ್ಲರ್ಸ್ ಶಾಪ್‌ಗಳಲ್ಲಿ ಹೂಡಿಕೆ ಮತ್ತು ಬನಶಂಕರಿಯಲ್ಲಿರುವ ಪಾರ್ಶ್ವ ಫಾರ್ಮಾಸ್ಯುಟಿಕಲ್‌ನಲ್ಲಿ ಬ್ಯುಸಿನೆಸ್ ನಡೆಸುತ್ತಿರುವ ರಾಜೇಶ್ ಜೈನ್ ಅವರ ಮನೆಯ ಮೇಲೆ ಬರೋಬ್ಬರಿ ಹದಿನೈದು ಮಂದಿ ಆದಾಯ ಇಲಾಖೆ ಅಧಿಕಾರಿಗಳು ಶೋಧ ನಡೆಸಿದ್ದು, ಮಂಗಳವಾರ ಮಧ್ಯಾಹ್ನವಾದರೂ ದಾಖಲೆಗಳ ಪರಿಶೀಲನೆ ಮುಗಿದಿರಲಿಲ್ಲ. ದಾಳಿ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭದ್ರತೆಗಾಗಿ ಸಿಎಆರ್ ಸಿಬ್ಬಂದಿಯನ್ನು ಕೂಡ ಐಟಿ ಅಧಿಕಾರಿಗಳು ನಿಯೋಜಿಸಿಕೊಂಡಿದ್ದಾರೆ.
ಇದನ್ನೂ ಓದಿ: IT Notice: ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬಂದ್ರೆ ಏನ್ ಮಾಡಬೇಕು? ಪಾವತಿದಾರರಿಗೆ ಒಂದಿಷ್ಟು ಸಲಹೆ ಇಲ್ಲಿವೆ
ಇನ್ನು ಮೂರು ಇನ್ನೋವಾ ಕಾರುಗಳಲ್ಲಿ ಬಂದಿದ್ದ ಆದಾಯ ಇಲಾಖೆ ಅಧಿಕಾರಿಗಳು ಶಂಕರ್ ಪುರಂನ ಚಿನ್ನದ ವ್ಯಾಪಾರಿ ಉತ್ತಮ್ ಜೈನ್ ಅವರ ಫ್ಲಾಟ್ ಮೇಲೆ ದಾಳಿ ನಡೆಸಿದ್ದಾರೆ ಮೂರು ಕಾರ್‌ಗಳಲ್ಲಿ ಬಂದಿರುವ ಒಟ್ಟು ಹದಿನೈದು ಮಂದಿ ಐಟಿ ಅಧಿಕಾರಿಗಳು ಬೆಳಗ್ಗೆ ಏಳು ಗಂಟೆಯಿಂದ ಶೋಧ ಮುಂದುವರೆಸಿದ್ದಾರೆ. ಚಿನ್ನದ ವ್ಯಾಪಾರಿ ಉತ್ತಮ್ ಜೈನ್ ವಾಸವಿರುವ ಹರಿಹಂತ್ ಕಾಸ್ಟಲ್ ಅಪಾರ್ಟ್ಮೆಂಟ್ ಮೇಲೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಐಟಿ ದಾಳಿ ತೆರಿಗೆ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಕಲೆ ಹಾಕುತ್ತಿದ್ದಾರೆ.
ಮನೆಯ ಬೀಗ ಒಡೆದು ಕಳ್ಳತನ
ಚಾಮರಾಜನಗರ: ನಗರದ ಸಿದ್ದಾರ್ಥ ಕಾಲೇಜು ಎದುರು ಇರುವ ಮನೆಯ ಬೀಗ ಒಡೆದು ಕಳ್ಳತನ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ವಿನೋದ್ ಕುಮಾರ್ ಮ್ಯಾಥ್ಯು ಎಂಬುವರಿಗೆ ಸೇರಿದ ಮನೆಯಲ್ಲಿ ಖದೀಮರು ಕೈ ಚಳಕ ತೋರಿದ್ದು ಮನೆಯಲ್ಲಿ ಇದ್ದ ಟಿ. ವಿ, ಕೂಲರ್, ಡಿಜಿಟಲ್ ಕ್ಯಾಮೆರಾ, ನಗದು ಸೇರಿ ಅನೇಕ ಬೆಲೆ ಬಾಳುವ ವಸ್ತುಗಳನ್ನು ಕಿರಾತಕರು ದೋಚಿದ್ದಾರೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಪಕ್ಕಾ ಪ್ಲಾನ್ ಮಾಡ್ಕೊಂಡು ಮನೆಯ ಬೀಗ ಒಡೆದು ಕಳ್ಳತನ ಮಾಡಿರುವ ಕಳ್ಳರು, ತಾವು ಅಂದುಕೊಂಡಂತೆ ಕಾರ್ಯ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಕಳ್ಳತನ ಮಾಡಿರುವ ಆರೋಪಿಗಳ ವಿರುದ್ಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ. ವಿಪರ್ಯಾಸ ಅಂದ್ರೆ ಕಳೆದ ವರ್ಷ ಏಪ್ರಿಲ್‌ನಲ್ಲಿ ಕೂಡ ಇದೇ ಮನೆಯಲ್ಲಿ ಕಳ್ಳತನವಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ