• Home
  • »
  • News
  • »
  • state
  • »
  • ಯತ್ನಾಳ್ ವಿರುದ್ಧ ಚೀಟಿಂಗ್ ಸೇರಿದಂತೆ 23 ಕೇಸ್​; ಇದನ್ನೇ ಮುಂದಿಟ್ಟು ಶಾಸಕ ಸ್ಥಾನದ ಪದಚ್ಯುತಿಗಾಗಿ ಹೋರಾಡಲಿರುವ ಕೈ ನಾಯಕರು

ಯತ್ನಾಳ್ ವಿರುದ್ಧ ಚೀಟಿಂಗ್ ಸೇರಿದಂತೆ 23 ಕೇಸ್​; ಇದನ್ನೇ ಮುಂದಿಟ್ಟು ಶಾಸಕ ಸ್ಥಾನದ ಪದಚ್ಯುತಿಗಾಗಿ ಹೋರಾಡಲಿರುವ ಕೈ ನಾಯಕರು

ಸಿದ್ದರಾಮಯ್ಯ-ಬಸನಗೌಡ ಪಾಟೀಲ ಯತ್ನಾಳ್.

ಸಿದ್ದರಾಮಯ್ಯ-ಬಸನಗೌಡ ಪಾಟೀಲ ಯತ್ನಾಳ್.

ಶಾಸಕ ಯತ್ನಾಳ್ ಅವರು ಚುನಾವಣಾ ಆಯೋಗಕ್ಕೆ ನೀರುವ ಪ್ರಮಾಣ ಪತ್ರದಲ್ಲಿ ತನ್ನ ಮೇಲೆ 23 ಪ್ರಕರಣಗಳಿವೆ ಎಂದು ಪ್ರಕರಣಗಳ ಪಟ್ಟಿಯನ್ನೂ ಸಲ್ಲಿಸಿದ್ದರು. ಆದರೆ, ಆ ಪಟ್ಟಿಯೇ ಇದೀಗ ಯತ್ನಾಳ್ ಅವರಿಗೆ ಮುಳುವಾಗಿದ್ದು ಇದನ್ನು ಮುಂದಿಟ್ಟಿಕೊಂಡು ಸಿದ್ದರಾಮಯ್ಯ ಸದನದಲ್ಲಿ ಹೋರಾಟ ನಡೆಸಲಿದ್ದಾರೆ ಎನ್ನಲಾಗುತ್ತಿದೆ.

ಮುಂದೆ ಓದಿ ...
  • Share this:

ಬೆಂಗಳೂರು (ಮಾರ್ಚ್ 02); ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ವಿವಾದಕ್ಕೀಡಾಗಿರುವ ವಿಜಾಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಹೋರಾಟ ನಡೆಸಲು ಕಾಂಗ್ರೆಸ್ ಮತ್ತಷ್ಟು ಮಹತ್ವದ ದಾಖಲೆಗಳನ್ನು ಸಂಗ್ರಹಿಸಿದೆ. ಅವರ ವಿರುದ್ಧ ಈವರೆಗೆ ದಾಖಲಾಗಿರುವ 23 ಕೇಸ್​ಗಳ ಡೀಟೈಲ್ಸ್ ಮುಂದಿಟ್ಟು ಪದಚ್ಯುತಿಗಾಗಿ ಆಗ್ರಹಿಸಿ ಸಿದ್ದರಾಮಯ್ಯ ಹೋರಾಟಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.


ಇಂದು ಉಭಯ ಸದನದಲ್ಲೂ ಹೋರಾಟಕ್ಕೆ ಮುಂದಾಗಿರುವ ಕಾಂಗ್ರೆಸ್ ಶಾಸಕ ಯತ್ನಾಳ್ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದ ಧರಣಿ ನಡೆಸಲು ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧರಿಸಲಾಗಿದೆ. ಅಲ್ಲದೆ, ಈ ಧರಣಿ ವೇಳೆ ಯತ್ನಾಳ್ ವಿರುದ್ಧ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಸುಮಾರು 23 ಪ್ರಕರಣಗಳ ಕೇಸ್ ಡೀಟೈಲ್ಸ್ ತರಿಸಿಕೊಂಡು ಹೋರಾಟ ಮಾಡಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.


Page
ಶಾಸಕ ಯತ್ನಾಳ್ ಮೇಲಿರುವ ಪ್ರಕರಣಗಳ ಪಟ್ಟಿ.


ಶಾಸಕ ಯತ್ನಾಳ್ ಅವರು ಚುನಾವಣಾ ಆಯೋಗಕ್ಕೆ ನೀರುವ ಪ್ರಮಾಣ ಪತ್ರದಲ್ಲಿ ತನ್ನ ಮೇಲೆ 23 ಪ್ರಕರಣಗಳಿವೆ ಎಂದು ಪ್ರಕರಣಗಳ ಪಟ್ಟಿಯನ್ನೂ ಸಲ್ಲಿಸಿದ್ದರು. ಆದರೆ, ಆ ಪಟ್ಟಿಯೇ ಇದೀಗ ಯತ್ನಾಳ್ ಅವರಿಗೆ ಮುಳುವಾಗಿದ್ದು ಇದನ್ನು ಮುಂದಿಟ್ಟಿಕೊಂಡು ಸಿದ್ದರಾಮಯ್ಯ ಸದನದಲ್ಲಿ ಹೋರಾಟ ನಡೆಸಲಿದ್ದಾರೆ ಎನ್ನಲಾಗುತ್ತಿದೆ.


“ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಅವಮಾನಿದ ಶಾಸಕ ಯತ್ನಾಳ್ ಅವರನ್ನು ಶಾಸಕ ಸ್ಥಾನದಿಂದಲೇ ಪದಚ್ಯುತಗೊಳಿಸಬೇಕು, ಬಿಜೆಪಿಯಿಂದ ಉಚ್ಛಾಟಿಸಬೇಕು” ಎಂಬುದು ಕಾಂಗ್ರೆಸ್ ನಾಯಕರ ಒತ್ತಾಯವಾಗಿದೆ.


ಇದನ್ನೂ ಓದಿ : ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟಕ್ಕೆ ಸಾಕಷ್ಟು ಸಾಕ್ಷಿ ಇದೆ, ಯತ್ನಾಳ್ ಉಚ್ಛಾಟನೆ ಆಗಲೇಬೇಕು; ಸಿದ್ದರಾಮಯ್ಯ ಕಿಡಿ


ಇದನ್ನೂ ಓದಿ : ವಿಧಾನಮಂಡಲ ಅಧಿವೇಶನ; ಇಂದು ಮಂಡನೆಯಾಗಲಿದೆ ವಿವಾದಾತ್ಮಕ ಕರ್ನಾಟಕ ಭೂ ಸುಧಾರಣ ತಿದ್ದುಪಡಿ ವಿಧೇಯಕ

Published by:MAshok Kumar
First published: