Infectious Diseases: ಉತ್ತರ ಕನ್ನಡದಲ್ಲಿ ನಿರಂತರ ಮಳೆಗೆ ಹೆಚ್ಚಿದ ಸಾಂಕ್ರಾಮಿಕ ಕಾಯಿಲೆಗಳು; ಆಸ್ಪತ್ರೆಗಳ ಬಳಿ ಜನ ಸಾಗರ

ನಿರಂತರವಾಗಿ ಸುರಿಯುತ್ತಿರುವ ಮಳೆ ಹತ್ತಾರು ಕಾಯಿಲೆಗಳನ್ನು ಸೃಷ್ಟಿಸಿದೆ. ಸಾಂಕ್ರಾಮಿಕ ರೋಗ ಎಲ್ಲೆಡೆ ಹರಡಿದ್ದು, ಸರಕಾರಿ ಆಸ್ಪತ್ರೆಗೆ ರೋಗಿಗಳ ದಂಡೇ ಹರಿದು ಬರ್ತಿದೆ.

ಆಸ್ಪತ್ರೆ ಬಳಿ ರೋಗಿಗಳ ಸಾಲು

ಆಸ್ಪತ್ರೆ ಬಳಿ ರೋಗಿಗಳ ಸಾಲು

  • Share this:
ಇತ್ತೀಚಿಗೆ ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಹತ್ತಾರು ಕಾಯಿಲೆಗಳನ್ನು (Disease) ಸೃಷ್ಟಿಸಿದೆ. ಕೆಮ್ಮು, ಕಫ, ದಮ್ಮು, ಶೀತ, ಜ್ವರ ಸೇರಿದಂತೆ ಸಾಂಕ್ರಾಮಿಕ ಕಾಯಿಲೆಗಳು (Infectious Diseases) ಎಲ್ಲೆಡೆ ಕಾಣಿಸಿಕೊಂಡಿದ್ದು, ಸರಕಾರಿ ಆಸ್ಪತ್ರೆಗೆ ರೋಗಿಗಳ ದಂಡೇ ಹರಿದು ಬರ್ತಿದೆ. ಸರಕಾರಿ ಆಸ್ಪತ್ರೆ ಎಂದ್ರೆ ಮೂಗು ಮುರಿಯುತ್ತಿದ್ದ ರೋಗಿಗಳು ಈಗ ವಿವಿಧ ಕಾಯಿಲೆಗೆ ಚಿಕಿತ್ಸೆ‌ಪಡೆಯಲು ಸರಕಾರಿ ಆಸ್ಪತ್ರೆಯಲ್ಲಿ (Government Hospital) ತುಂಬಿ ಕೊಳ್ಳುತ್ತಿದ್ದಾರೆ. ನಿರಂತರ ಮಳೆಯಿಂದ  (Heavy Rain) ಸಾಂಕ್ರಾಮಿಕ ಕಾಯಿಲೆ ಹರಡಿಕೊಂಡು ರೋಗಿಗಳ ಸಂಖ್ಯೆ ಹೆಚ್ಚಿಸಿದೆ.

ಮಳೆಯ ಅಬ್ಬರಕ್ಕೆ ಹೆಚ್ಚಿದ ಕಾಯಿಲೆಗಳು

ಉತ್ತರ ಕನ್ನಡ ಜಿಲ್ಲೆಯ ಆಯಾ ಸರಕಾರಿ  ತಾಲೂಕು ಆಸ್ಪತ್ರೆಗಳಲ್ಲಿ ಈಗ ರೋಗಿಗಳದ್ದೇ ಸದ್ದು. ಈ ಹಿಂದೆ ಜಿಲ್ಲೆಯ ಆಯಾ ತಾಲೂಕು ಆಸ್ಪತ್ರೆಗೆ ಕಾಡುತ್ತಿದ್ದ ಹತ್ತಾರು ಸಮಸ್ಯೆಗಳು ಹಂತ ಹಂತವಾಗಿ ನೀಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಬಹುತೇಕ ಸೌಲಭ್ಯಗಳನ್ನು ಅಳವಡಿಸಿಕೊಂಡಿರುವ ತಾಲೂಕು ಆಸ್ಪತ್ರೆಗಳಿಗೆ ಬರುವ ರೋಗಿಗಳ ಸಂಖ್ಯೆಯಲ್ಲೂ ಏರಿಕೆ ಕಂಡು ಬಂದಿದೆ.

ಈಗ ನಿರಂತರ ಮಳೆಗೆ ಹತ್ತಾರು ಕಾಯಿಲೆಗಳು ಉಲ್ಭಣವಾಗುತ್ತಿದ್ದು ದಿನ ನಿತ್ಯವೂ ಸರಕಾರಿ ಆಸ್ಪತ್ರೆಗಳು ರೋಗಿಗಳಿಂದ ತುಂಬಿಕೊಳ್ಳುತ್ತಿವೆ. ದಿನದಿಂದ ದಿನಕ್ಕೆ ಸರಕಾರಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಸರದಿ ಸಾಲು ಕಟ್ಟಡದ ಹೊರಾಂಗಣ ತಲುಪುತ್ತಿದೆ. ನೋಂದಣಿ ಮಾಡಿಕೊಳ್ಳಲು ರೋಗಿಗಳ ಸರದಿ ಸಾಲು ಆಸ್ಪತ್ರೆ ಒಳಗಿನಿಂದ ಹೊರಗಡೆಯವರೆಗೂ ಬಂದಿರುತ್ತದೆ. ಇದು ಇತ್ತೀಚೆಗೆ ಅಂದ್ರೆ ಕಳೆದ ಹತ್ತಾರು ದಿನಗಳಿಂದ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಏರಿಕೆ ಆಗುತ್ತಿದೆ.

ಇದನ್ನೂ ಓದಿ: Rain Effect: ಮಳೆ ಅಬ್ಬರಕ್ಕೆ 1.20 ಲಕ್ಷ ಹೆಕ್ಟೇರ್ ಬೆಳೆ ಹಾನಿ; ಪರಿಹಾರಕ್ಕಾಗಿ ರೈತರ ಪರದಾಟ

ಸರಕಾರಿ ಆಸ್ಪತ್ರೆಯಲ್ಲಿ ತುಂಬಿಕೊಂಡ ರೋಗಿಗಳು

ಗಣೇಶ ಚತುರ್ಥಿ ಹಬ್ಬ ಮುಗಿಯುತ್ತಿದ್ದಂತೆ ಆಸ್ಪತ್ರೆಗೆ ದಾಖಲಾಗುತ್ತಿರುವ ಹೊರ ಹಾಗೂ ಒಳರೋಗಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ನಿತ್ಯವೂ ಪ್ರತಿ ಆಸ್ಪತ್ರೆಯಲ್ಲಿ ಅಂದಾಜು 350 ರಷ್ಟು ಹೊರ ರೋಗಿಗಳು ಹಾಗೂ 30 ರಿಂದ 40 ಒಳ ರೋಗಿಗಳು ದಾಖಲಾಗುತ್ತಿರುವುದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ. ಇದಕ್ಕೆಲ್ಲಾ ಕಾರಣ ಇತ್ತೀಚಿಗೆ ಸುರಿದ ಮಳೆ ಮತ್ತು ಹವಮಾನ ವೈಪರೀತ್ಯ ಎಂದು ಹೇಳಲಾಗ್ತಿದೆ. ಮಕ್ಕಳಿಂದ ಹಿಡಿದು ವಯಸ್ಕರರಿಗೂ ವಿವಿಧ ಕಾಯಿಲೆಗಳು ಉಲ್ಭಣಿಸುತ್ತಿದೆ.

Incessant rains have increased the incidence of infectious diseases in Uttara Kannada
ಆಸ್ಪತ್ರೆ ಬಳಿ ರೋಗಿಗಳ ಸಾಲು


ಉಲ್ಭಣಿಸಿದ ಕೆಮ್ಮ, ದಮ್ಮು, ಶೀತ-ಜ್ವರ

ಹುಬ್ಬಾ ಮಳೆ ಎಡೆಬಿಡದೇ ಸುರಿಯತೊಡಗಿದ್ದು ಮೈ ಚಳಿ ಹೆಚ್ಚಿಸಿದೆ. ಹೀಗಾಗಿ ಹತ್ತಾರು ಬಗೆಯ ರೋಗಗಳು ಜನರಲ್ಲಿ ಕಾಣಿಸಿಕೊಂಡಿವೆ. ಎಲ್ಲೆಡೆ  ಕೆಮ್ಮು, ದಮ್ಮು, ಕಫ, ತಂಡಿ-ತಲೆನೋವು, ಜ್ವರ ಬಾಧೆಗೊಳಗಾಗುತ್ತಿರುವವರ ಸಂಖ್ಯೆ ಅಧಿಕಗೊಂಡಿದೆ. ಕೆಲವರು ಮೆಡಿಕಲ್ ಶಾಪ್‌ಗಳಲ್ಲಿ ಸಿಗುವ ಮಾತ್ರೆಗಳನ್ನು ಕೊಂಡೊಯ್ಯುತ್ತಿರುವುದು ಕಂಡು ಬಂದಿದೆ. ಇನ್ನುಳಿದವರು ವೈದ್ಯರ ಸಲಹೆಯಂತೆ ಔಷಧೋಪಚಾರ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Potholes: ಜನರ ಜೀವದ ಜೊತೆ ಅಧಿಕಾರಿಗಳ ಚೆಲ್ಲಾಟ; ತಾನೇ ರಚಿಸಿದ್ದ ನಿಯಮ ಬ್ರೇಕ್ ಮಾಡಿದ BBMP

ಪೇಪರ್ ಲೆಸ್ ಹಾಗೂ ಸಮಯದ ಉಳಿತಾಯ ಮಾಡುವ ಸರಕಾರದ ಮಹತ್ವಾಕಾಂಕ್ಷೀ ಯೋಜನೆಯಾಗಿರುವ ಕಂಪ್ಯೂಟರೀಕರಣ ವ್ಯವಸ್ಥೆ ಆಸ್ಪತ್ರೆಯಲ್ಲಿ ನೊಂದಣಿ ಮಾಡಿಕೊಳ್ಳುವ ರೋಗಿಗಳು ಪಾಲಿಸಬೇಕಿದೆ. ದಿನದಿಂದ ದಿನಕ್ಕೆ ತಾಲೂಕು ಆಸ್ಪತ್ರೆಗೆ ಹಾಜರಾಗುವ ರೋಗಿಗಳ ಸಂಖ್ಯೆ ತುಂಬಾ ಹೆಚ್ಚಳವಾಗಿದ್ದು, ಸರದಿಯ ಸಾಲಿನಲ್ಲಿ ರೋಗಿಗಳು ನಿಂತುಕೊಳ್ಳುವಂತಾಗಿದೆ. ಕಾಡುತ್ತಿರುವ ನೆಟ್ ವರ್ಕ್​ ಸಮಸ್ಯೆ ಹಾಗೂ ಸುರಿಯುತ್ತಿರುವ ಮಳೆಯಯೇ ನೊಂದಣಿ ಮಾಡಿಕೊಳ್ಳುವ ರೋಗಿಗಳ ಪಾಲಿಗೆ ಸಂಕಷ್ಟ ತಂದಿಟ್ಟಿದೆ. ಜೋಡಣೆಗೊಂಡ ರೇಲ್ವೆ ಬೋಗಿಗಳಂತೆ ರೋಗಿಗಳ ಸಾಲು ಆಸ್ಪತ್ರೆಯ ಆವರಣವನ್ನೂ ದಾಟಿ ಬಿಡುತ್ತಿದೆ.
Published by:ಪಾವನ ಎಚ್ ಎಸ್
First published: