Mysuru Dasara 2022: ಇದೇ ಮೊದಲ ಬಾರಿಗೆ ರಾಷ್ಟ್ರಪತಿಗಳಿಂದ ಮೈಸೂರು ದಸರಾ ಉದ್ಘಾಟನೆ, ಈ ಬಾರಿ ದ್ರೌಪದಿ ಮುರ್ಮು ಮುಖ್ಯ ಅತಿಥಿ

ಬಸವರಾಜ ಬೊಮ್ಮಾಯಿ ಅವರೇ ದಸರಾ ಉದ್ಘಾಟನೆ ಬಗ್ಗೆ ಮಾತಾಡಿದ್ದಾರೆ. ಈ ಬಾರಿಯ ದಸರಾವನ್ನು ರಾಷ್ಟ್ರಪತಿ ದ್ರೌಪತಿ ಮುರ್ಮು ಅವರಿಂದ ಉದ್ಘಾಟಿಸಲು‌ ನಿರ್ಧಾರ ಮಾಡಲಾಗಿದೆ ಎಂದು ಹೇಳಿದ್ರು.

ಮೈಸೂರು ದಸರಾ, ದ್ರೌಪದಿ ಮುರ್ಮು

ಮೈಸೂರು ದಸರಾ, ದ್ರೌಪದಿ ಮುರ್ಮು

  • Share this:
ಬೆಂಗಳೂರು (ಸೆ. 10): ಈ ಬಾರಿ ನಾಡಹಬ್ಬ ಮೈಸೂರು ದಸರಾವನ್ನು (Mysuru Dasara 2022) ಅದ್ಧೂರಿಯಾಗಿ ನಡೆಸಲು ರಾಜ್ಯ ಸರ್ಕಾರ (State Government) ನಿರ್ಧರಿಸಿದೆ. ಹೀಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿಶ್ವವಿಖ್ಯಾತ ದಸರಾ ಉದ್ಘಾಟನೆಯನ್ನು ಯಾರು ಮಾಡ್ತಾರೆ ಅನ್ನೋ ಚರ್ಚೆಗಳು ನಡೀತಿದೆ. ಈ ಬಗ್ಗೆ ಹಿಂದೆಯೇ ಮಾತಾಡಿದ್ದ ಮೈಸೂರು ಉಸ್ತುವಾರಿ ಸಚಿವ ಎಸ್​.ಟಿ ಸೋಮಶೇಖರ್ (S.T Somashekhar)​ ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರೇ ನಿರ್ಧಾರ ತೆಗೆದುಕೊಳ್ತಾರೆ ಎಂದು ಹೇಳಿದ್ರು. ಇದೀಗ ಬಸವರಾಜ ಬೊಮ್ಮಾಯಿ ಅವರೇ ದಸರಾ ಉದ್ಘಾಟನೆ ಬಗ್ಗೆ ಮಾತಾಡಿದ್ದಾರೆ. ಈ ಬಾರಿಯ ದಸರಾವನ್ನು ರಾಷ್ಟ್ರಪತಿಗಳಿಂದ ಉದ್ಘಾಟಿಸಲು‌ ನಿರ್ಧಾರ ಮಾಡಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮುರವರಿಂದ (Draupadi Murmu) ಉದ್ಘಾಟನೆ ಮಾಡಿಸೋದಾಗಿ ಬೆಂಗಳೂರಿನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಭಾರತದ 15ನೇ  ರಾಷ್ಟ್ರಪತಿ ದ್ರೌಪದಿ ಮುರ್ಮು

ದ್ರೌಪದಿ ಮುರ್ಮು ಭಾರತದ 15ನೇ  ರಾಷ್ಟ್ರಪತಿ ಆಗಿದ್ದಾರೆ. ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು ಅವರ ಜೀವನ ಮತ್ತು ಸಾಧನೆ ಎಲ್ಲರಿಗೂ ಸ್ಫೂರ್ತಿ ಸೆಲೆಯಾಗುತ್ತದೆ. 64 ವರ್ಷದ ಮುರ್ಮು ಈ ಪರಮೋನ್ನತ ಪದವಿಗೇರಿದ ದೇಶದ ಮೊದಲ ಬುಡಕಟ್ಟು ಮಹಿಳೆ ಹಾಗೂ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಜನಿಸಿದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಡಿಶಾ ವಿಧಾನಸಭೆಯು 2007 ರ ವರ್ಷದ ಅತ್ಯುತ್ತಮ ಶಾಸಕಿಗಾಗಿ ನೀಡಲಾಗುವ ನೀಲಕಂಠ ಪ್ರಶಸ್ತಿ ಯನ್ನು ನೀಡಿ ಗೌರವಿಸಲಾಗಿತ್ತು.

ಈ ಬಾರಿ ಅದ್ಧೂರಿ ನಾಡಹಬ್ಬ

ದಸರಾ ಆಚರಣೆ ಬಗ್ಗೆ ಹಿಂದೆಯೇ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನಾಡಹಬ್ಬ ದಸರಾವನ್ನು ಈ ಬಾರಿ ಅದ್ದೂರಿಯಾಗಿ ಮಾಡುವುದು ಶಾಸಕರ ಅಭಿಲಾಷೆಯಾಗಿದೆ. ಮೈಸೂರು ದಸರಾ, ಕರ್ನಾಟಕದ ಪರಿವರ್ತನೆಯ ಹಬ್ಬವಾಗಬೇಕು. ಕೊರೊನಾದಿಂದ 2 ವರ್ಷ ಸರಳ ದಸರಾ ಆಚರಿಸಲಾಯ್ತು. ಆದ್ರೆ ಈ ಬಾರಿ ಅದ್ಧೂರಿ ದಸರಾ ಆಚರಿಸಲು ನಿರ್ಧರಿಸಲಾಗಿದೆ. ಹೀಗಾಗಿ ದಸರಾ ಕುರಿತು ಹೆಚ್ಚಿನ ಪ್ರಚಾರ ಕೊಡಲು ತೀರ್ಮಾನ ಮಾಡಲಾಗಿದೆ ಎಂದಿದ್ರು.15 ದಿನ ಮುಂಚೆ ವಸ್ತು ಪ್ರದರ್ಶನ
ದಸರಾ ಬ್ರಾಂಡ್ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಲು ತೀರ್ಮಾನ ಮಾಡಲಾಗಿದೆ. ಅಲ್ಲಿನ ವಸ್ತು ಪ್ರದರ್ಶನ 15 ದಿನದ ಮುಂಚೆಯೇ ನಡೆಸಲು ತೀರ್ಮಾನ ಮಾಡಲಾಗಿದೆ. ಸ್ಥಳೀಯ ಕಲಾಕಾರರಿಗೆ ಹೆಚ್ಚು ಒತ್ತು ಕೊಡಲಾಗುತ್ತದೆ. ದಿನಕ್ಕೆ ಒಬ್ಬರು ರಾಷ್ಟ್ರೀಯ ಕಲಾಕಾರರನ್ನು ಮುಖ್ಯ ಆಕರ್ಷಕರಾಗಿ ಕರೆಯಲು ತೀರ್ಮಾನ ಮಾಡಲಾಗಿದೆ. ಶ್ರೀರಂಗಪಟ್ಟಣ ಹಾಗೂ ಚಾಮರಾಜನಗರದಲ್ಲೂ ದಸರಾ ಆಚರಣೆ ಮಾಡಲು ತೀರ್ಮಾನ ಮಾಡಿರೋದಾಗಿ ಸಿಎಂ ತಿಳಿಸಿದ್ರು.

ಒಂದೇ ಟಿಕೆಟ್​​ನಲ್ಲಿ ಹಂಪಿ ಮತ್ತು ಮೈಸೂರು ನೋಡಿ

ಮೈಸೂರು ಮತ್ತು ಹಂಪಿ ಟೂರಿಸಂ ಸರ್ಕ್ಯಿಟ್​​ಗೆ ಆದೇಶ ಹೊರಡಿಸಲಾಗುವುದು. ಅದರಂತೆ ಒಂದೇ ಟಿಕೆಟ್​​ನಲ್ಲಿ ಹಂಪಿ ಮತ್ತು ಮೈಸೂರು ನೋಡಬಹುದು. ವಿದೇಶದಿಂದ ಟಿಕೆಟ್ ಬುಕ್ ಮಾಡೋರಿಗೆ ಹೊರಗಡೆಯಿಂದ ಬರೋರಿಗೆ ಅನುಕೂಲ ಮಾಡಿಕೊಡಲಾಗುವುದು. 26 /9 ಕ್ಕೆ ದಸರಾ ಆರಂಭವಾದರೆ, 5/10 ಕ್ಕೆ ವಿಜಯದಶಮಿ, 5/10ಕ್ಕೆ ಧ್ವಜ ಪೂಜೆ, 5/10 ಕ್ಕೆ ನಂದಿ ಪೂಜೆ ನೆರವೇರಲಿದೆ. 7/8/22 ಕ್ಕೆ ಗಜಪಯಣ ,10/8/22 ಅರಮನೆಯ ಪ್ರವೇಶ , 7/10 ಕ್ಕೆ ಗಜಪಡೆ ನಿರ್ಗಮನವಾಗಲಿದೆ ಎಂದು ವಿವರಿಸಿದರು.

ಇದನ್ನೂ ಓದಿ: Karnataka Rain Alert: ರಾಜ್ಯದಲ್ಲಿ ಮತ್ತೆ ಮುಂದುವರಿಯಲಿದೆ ಮಳೆಯ ಆರ್ಭಟ; ಹಲವೆಡೆ 3 ದಿನಗಳ ಕಾಲ ಅಲರ್ಟ್ ಘೋಷಣೆ


ಕಳೆದ 2 ವರ್ಷ ಸರಳವಾಗಿ ದಸರಾ ಆಚರಣೆ ಮಾಡಿದ್ದೇವೆ. ಈ ಬಾರಿ ಮಳೆ, ಬೆಳೆ ಎಲ್ಲಾ ಚೆನ್ನಾಗಿ ಆಗಿದೆ. ಹೀಗಾಗಿ ಈ ಬಾರಿ ದಸರಾವನ್ನು ಅದ್ಧೂರಿಯಾಗಿ ನಡೆಸಲಾಗುತ್ತದೆ.  ದಸರಾ ಸಂದರ್ಭದಲ್ಲಿ ಜನರಿಗೆ ಸಮಸ್ಯೆ ಆಗದ ರೀತಿ ಅಧಿಕಾರಿಗಳು ಕೆಲಸ ಮಾಡುವಂತೆ ಸಿಎಂ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ ಎಂದು ಎಸ್​ ಟಿ ಸೋಮಶೇಖರ್​ ಹೇಳಿದ್ರು


Published by:ಪಾವನ ಎಚ್ ಎಸ್
First published: