ನಗರ ಸ್ವಚ್ಛತೆಯ ಚಲುವ ಚಾಮರಾಜನಗರ ಅಭಿಯಾನಕ್ಕೆ ಚಾಲನೆ

ಮೊದಲ ಹಂತವಾಗಿ ನಗರದ ವಿವಿದೆಡೆ ಬಹಳಷ್ಟು ಕಾಲದಿಂದ ಬಿದ್ದಿರುವ ಅನುಪಯುಕ್ತ ವಸ್ತುಗಳನ್ನು ತೆರವುಗೊಳಿಸಲಾಗುತ್ತಿದೆ. ರಾತ್ರಿ 9 ಗಂಟೆಯ ನಂತರ ನಗರದ ಎಲ್ಲಾ ಬೀದಿಗಳಲ್ಲೂ ರಾತ್ರಿ ವೇಳೆ ಸ್ವಚ್ಚತಾ ಕೆಲಸ ಕೈಗೊಳ್ಳಲಾಗುತ್ತಿದೆ.

G Hareeshkumar | news18-kannada
Updated:March 10, 2020, 5:59 PM IST
ನಗರ ಸ್ವಚ್ಛತೆಯ ಚಲುವ ಚಾಮರಾಜನಗರ ಅಭಿಯಾನಕ್ಕೆ ಚಾಲನೆ
ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ
  • Share this:
ಚಾಮರಾಜ‌ನಗರ(ಮಾ.10) : 'ಚಲುವ ಚಾಮರಾಜನಗರ' ಇದು ಚಾಮರಾಜನಗರದ ನೈರ್ಮಲ್ಯೀಕರಣಕ್ಕೆ ಆರಂಭಿಸಿರುವ ಅಭಿಯಾನ. ರಾತ್ರಿ ವೇಳೆಯೇ ಬೀದಿಗಳ ಕಸ ಗುಡಿಸಿ, ಸ್ವಚ್ಛಗೊಳಿಸಿ ಬೆಳಗಿನ ವೇಳೆಗೆ ಕಸ ಸಂಗ್ರಹಣೆ ಮಾಡಿ ಸ್ವಚ್ಛ ಪರಿಸರ ಉಂಟುವ ಮಾಡುವ  ಪರಿಕಲ್ಪನೆಯೊಂದಿಗೆ ಈ ಅಭಿಯಾನ ಆರಂಭಿಸಲಾಗಿದೆ. 

ಜಿಲ್ಲಾ ಕೇಂದ್ರ ಚಾಮರಾಜನಗರಕ್ಕೆ ನಿತ್ಯ ನೂರಾರು ಜನ ಬಂದು ಹೋಗುತ್ತಾರೆ.  ಬೆಳಿಗ್ಗೆಯಿಂದ ರಾತ್ರಿಯವರೆಗೆ ಅಲ್ಲಲ್ಲಿ ಕಸದ ರಾಶಿಯೇ ನಿರ್ಮಾಣವಾಗುತ್ತದೆ. ಇದರಿಂದ  ಅನೈರ್ಮಲ್ಯದ ವಾತಾವರಣ ಉಂಟಾಗುವುದು ಸಹಜ. ಬೆಳಿಗ್ಗೆ ಎದ್ದು ನೋಡಿದ ಕೂಡಲೇ ಇಡೀ ವಾತಾವರಣ ಅಸಹ್ಯಕರವಾಗಿರುತ್ತದೆ. ಬೆಳಿಗ್ಗೆ ಹೊರಗಿನಿಂದ ಬರುವ ಜನರಿಗೂ ಕಸದ ದರ್ಶನ ವಾಗುತ್ತದೆ.

ಈ ಹಿನ್ನೆಲೆಯಲ್ಲಿ ನಗರದ ಸಮಗ್ರ ನೈರ್ಮಲ್ಯೀಕರಣದ ಅಂಗವಾಗಿ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರ "ಚಲುವ ಚಾಮರಾಜನಗರ"ಎಂಬ ಪರಿಕಲ್ಪನೆಯೊಂದನ್ನು ಹುಟ್ಟು ಹಾಕಿದ್ದಾರೆ. ಇದರ ಅಂಗವಾಗಿ ರಾತ್ರಿಯೇ ನಗರದ ಬೀದಿಗಳನ್ನು ಸ್ವಚ್ಚಗೊಳಿಸಿ ಬೆಳಗ್ಗೆ ಆಗುವುದರೊಳಗೆ ಕಸ ಸಂಗ್ರಹಣೆ ಮಾಡಿ ಸ್ವಚ್ಛ ಪರಿಸರವನ್ನು ಉಂಟು ಮಾಡುವ ಕೆಲಸ ಆರಂಭವಾಗಿದೆ.

ನಗರಕ್ಕೆ ಆಗಮಿಸುವ ಜನರಿಗೆ ಬೆಳಿಗ್ಗೆಯೇ ಕಸದ ದರ್ಶನವಾಗಬಾರದು, ನಗರದ ಬೀದಿಗಳು ಸ್ವಚ್ಛತೆಯಿಂದ ಕೂಡಿರಬೇಕು, ಸ್ವಚ್ಛ ವಾತಾವರಣ ಕಾಣಬೇಕು. ಹೀಗಾಗಿ ರಾತ್ರಿ ವೇಳೆ ಸ್ವಚ್ಚತೆ ಕಾರ್ಯ ನಡೆಸಲಾಗುತ್ತಿದೆ ಎನ್ನುತ್ತಾರೆ ಜಿಲ್ಲಾಧಿಕಾರಿಗಳು.


ಇದನ್ನೂ ಓದಿ : ರಾಜ್ಯದಲ್ಲಿ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯ ದೇವಸ್ಥಾನಗಳಲ್ಲಿ ಮೊಳಗಲಿದೆ ಕನ್ನಡ ಡಿಂಡಿಮ

ಕೆಲವು ಮಹಾನಗರಗಳಲ್ಲಿ ಮಾತ್ರ ಚಾಲನೆಯಲ್ಲಿರುವ ರಾತ್ರಿ ವೇಳೆ ಸ್ವಚ್ಚತಾ ಕಾರ್ಯ ನಿರ್ವಹಿಸುವ ವ್ಯವಸ್ಥೆಯನ್ನು ಇದೀಗ ಚಾಮರಾಜನಗರದಂತಹ ಪಟ್ಟಣದಲ್ಲೂ ಜಾರಿಗೊಳಿಸಿರುವುದು ವಿಶೇಷವಾಗಿದೆ. ಚಾಮರಾಜನಗರ ಸ್ವಚ್ಛವಾಗಿರಬೇಕು ಸುಂದರವಾಗಿ ಕಾಣಬೇಕು ಎಂಬ ಉದ್ದೇಶ ಹೊಂದಿರುವ ಅಭಿಯಾನಕ್ಕೆ  ಸಾರ್ವಜನಿಕರ ಸಹಕಾರವು ಅಷ್ಟೇ ಮುಖ್ಯವಾಗಿದೆ. 

(ವರದಿ : ಎಸ್ ಎಂ ನಂದೀಶ್)

 
First published: March 10, 2020, 5:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading