ಹೆಸರಘಟ್ಟ ಬಳಿ ತಾಲೂಕು, ಜಿಲ್ಲಾಡಳಿತದ ಕಾರ್ಯಾಚರಣೆ; 204 ಕಾರ್ಮಿಕರ ರಕ್ಷಣೆ

40ಜನ ಮಕ್ಕಳು ಸೇರಿದಂತೆ ಒಟ್ಟು 204 ರಕ್ಷಿತ ಕಾರ್ಮಿಕರನ್ನು ಹೇರೋಹಳ್ಳಿಯ ಇಸ್ರೋ ಲೇಔಟ್ ವಿದ್ಯಾರ್ಥಿ ನಿಲಯದಲ್ಲಿ ಪುನರ್ವಸತಿ ವ್ಯವಸ್ಥೆ ಮಾಡಲಾಗಿತ್ತು. ಇಂದು ಅವರನ್ನು ಮರಳಿ ಒರಿಸ್ಸಾಗೆ ಕಳುಹಿಸಲಾಗಿದೆ.

ರಕ್ಷಿತ ಕಾರ್ಮಿಕರು

ರಕ್ಷಿತ ಕಾರ್ಮಿಕರು

  • Share this:
ಯಲಹಂಕ (ಫೆ.14): ಜಿಲ್ಲಾ ಮತ್ತು ತಾಲೂಕು ಆಡಳಿತದ ಜಂಟಿಕಾರ್ಯಾಚರಣೆ ನಡೆಸಿ ಯಲಹಂಕ ತಾಲೂಕು ಹೆಸರಘಟ್ಟ ಹೋಬಳಿಯ ಕೊಂಡಶೆಟ್ಟಿಹಳ್ಳಿ ಗ್ರಾಮದ ಇಟ್ಟಿಗೆ ತಯಾರಿಕಾ ಘಟಕವೊಂದರಲ್ಲಿ ಕೆಲಸಗಾರರನ್ನು ಕಾನೂನು ಬಾಹಿರವಾಗಿ ದುಡಿಸಿಕೊಳ್ಳುತ್ತಿದ್ದ ಮಾಲಿಕರ ಮೇಲೆ ಕೇಸು ದಾಖಲಿಸಿ 204 ಕಾರ್ಮಿಕರನ್ನು  ರಕ್ಷಸಿದ್ದಾರೆ.

ಹೆಸರಘಟ್ಟ ಹೋಬಳಿಯ ಕೊಂಡಶೆಟ್ಟಿಹಳ್ಳಿಯಲ್ಲಿ ಕಾನೂನು ಬಾಹಿರವಾಗಿ ಕಾರ್ಮಿಕರನ್ನು ಕರೆತಂದು ಇಟ್ಟಿಗೆ ತಯಾರಿಕಾ ಘಟಕದಲ್ಲಿ ದುಡಿಸಿಕೊಳ್ಳುತ್ತಿದ್ದಾರೆ ಎಂದು ಎನ್.ಜಿ.ಓ ಸಂಸ್ಥೆಯೊಂದು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ದೂರು ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಜಿಲ್ಲಾ ಸತ್ರ ನ್ಯಾಯಾಧೀಶರು,ಕಂದಾಯ ಇಲಾಖೆ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಸೇರಿದಂತೆ ಪೊಲೀಸರ ತಂಡ ಸ್ಥಳಕ್ಕಾಗಮಿಸಿ ಕಾರ್ಮಿಕರನ್ನ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ವೇಳೆ ದಾಳಿ ಕುರಿತು ಯಲಹಂಕ ತಹಶೀಲ್ದಾರ್ ರಘುಮೂರ್ತಿ ಪ್ರತಿಕ್ರಿಯಿಸಿ, ಸರ್ವೆ ನಂ.39/7 ಹಾಗೂ ಇತರೆ ಸರ್ವೆ ನಂ.ಗಳಲ್ಲಿ 6ಎಕರೆ 12ಗುಂಟೆ ಜಾಗದಲ್ಲಿ ಯಲ್ಲಪ್ಪ ಬಿನ್ ಹೊಸೂರಪ್ಪ ಎಂಬುವವರಿಗೆ ಸೇರಿದ ಕೃಷಿ ಜಮೀನಿನಲ್ಲಿ ಕಾನೂನು ಬಾಹಿರವಾಗಿ ವಾಣಿಜ್ಯೋದ್ದಿಮೆ ಬಳಸಿಕೊಂಡಿರುವುದರ ಜೊತೆಗೆ, ಒರಿಸ್ಸಾ ಮೂಲದ ಕಾರ್ಮಿಕರನ್ನ ಅಕ್ರಮವಾಗಿ ಕರೆತಂದು ಇಟ್ಟಿಗೆ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಇದು ಜೀತಪದ್ಧತಿಯಂತೆ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಜಮೀನಿನ ಮಾಲೀಕ ಸೇರಿದಂತೆ ಗಣೇಶಪ್ಪ, ದೇವರಾಜು, ಬ್ರಹ್ಮಯ್ಯ, ವೆಂಕಟೇಶ್ ಎಂಬುವವರ ಮೇಲೆ ಜೀತ ಪದ್ಧತಿ ನಿಷೇದ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಹೊಸಪೇಟೆ ಕಾರು ಅಪಘಾತವಾದ ಕಾರನ್ನು ಡ್ರೈವ್​ ಮಾಡಿದ್ದು ರಾಹುಲ್​ ಎಂಬ ವ್ಯಕ್ತಿ: ಬಳ್ಳಾರಿ ಎಸ್​ಪಿ

40ಜನ ಮಕ್ಕಳು ಸೇರಿದಂತೆ ಒಟ್ಟು 204 ರಕ್ಷಿತ ಕಾರ್ಮಿಕರನ್ನು ಹೇರೋಹಳ್ಳಿಯ ಇಸ್ರೋ ಲೇಔಟ್ ವಿದ್ಯಾರ್ಥಿ ನಿಲಯದಲ್ಲಿ ಪುನರ್ವಸತಿ ವ್ಯವಸ್ಥೆ ಮಾಡಲಾಗಿತ್ತು.

ಮರಳಿ ಓರಿಸ್ಸಾಗೆ ತೆರಳಿದ ಕೆಲಸಗಾರರು:

204 ಜನ ರಕ್ಷಿತ ಕಾರ್ಮಿಕರು ಇಂದು ಒರಿಸ್ಸಾಗೆ ರೈಲು ಮುಖಾಂತರ ಪ್ರಯಾಣ ಬೆಳೆಸಿದ್ದಾರೆ. ಮೂರು ಬಸ್ಸುಗಳ ಮೂಲಕ ಯಶವಂತಪುರ ರೈಲ್ವೆ ನಿಲ್ದಾಣ ಮೂಲಕ ಪ್ರಯಾಣ ಬೆಳೆಸಿದ್ದಾರೆ.  ತಲಾ 20 ಸಾವಿರ ಪ್ರೋತ್ಸಾಹ ಧನ ನೀಡಲಾಗಿದೆ.
First published: