ವಿಜಯಪುರದಲ್ಲಿ ಹಾಡಹಗಲೇ ಕಳ್ಳರ ಕೈಚಳಕ; ಕೇವಲ 10 ನಿಮಿಷಗಳಲ್ಲಿ ಮನೆ ದರೋಡೆ ಮಾಡಿ ಪರಾರಿ

ವಿಜಯಪುರ ನಗರದ ಜಲ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಲಕ್ಷ್ಮಿ ನಗರದ ಮನೆಯಲ್ಲಿ ಹಾಡು ಹಗಲೇ ಕಳ್ಳತನವಾಗಿದೆ. ಮಲ್ಲಿಕಾರ್ಜುನ ಪಾಟೀಲ್ ಎಂಬುವರರ ಮನೆಯಲ್ಲಿ ಕೈಚಳಕ ತೋರಿರುವ ಖದೀಮರು, 105 ಗ್ರಾಂ ಚಿನ್ನಾಭರಣ, 800 ಗ್ರಾಂ ಬೆಳ್ಳಿ ಮತ್ತು ರೂ. 29 ಸಾವಿರ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ. 

news18-kannada
Updated:August 13, 2020, 2:24 PM IST
ವಿಜಯಪುರದಲ್ಲಿ ಹಾಡಹಗಲೇ ಕಳ್ಳರ ಕೈಚಳಕ; ಕೇವಲ 10 ನಿಮಿಷಗಳಲ್ಲಿ  ಮನೆ ದರೋಡೆ ಮಾಡಿ ಪರಾರಿ
ವಿಜಯಪುರ ನಗರದ ಜಲ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಲಕ್ಷ್ಮಿ ನಗರದ ಮನೆಯಲ್ಲಿ ಹಾಡು ಹಗಲೇ ಕಳ್ಳತನವಾಗಿದೆ. ಮಲ್ಲಿಕಾರ್ಜುನ ಪಾಟೀಲ್ ಎಂಬುವರರ ಮನೆಯಲ್ಲಿ ಕೈಚಳಕ ತೋರಿರುವ ಖದೀಮರು, 105 ಗ್ರಾಂ ಚಿನ್ನಾಭರಣ, 800 ಗ್ರಾಂ ಬೆಳ್ಳಿ ಮತ್ತು ರೂ. 29 ಸಾವಿರ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ. 
  • Share this:
ವಿಜಯಪುರ (ಆ. 13): ಕಳೆದ ಆಗಷ್ಟ 3 ರಂದು ಫಿನಾಯಿಲ್ ಸೇಲ್ಸ್ ಗರ್ಲ್ ರೂಪದಲ್ಲಿ ಬಂದ ಯುವತಿಯೊಬ್ಬಳು ಮನೆಲೂಟಿ ಮಾಡಿದ ಘಟನೆ ಮಾಸುವ ಮುನ್ನವೇ ಗುಮ್ಮಟ ನಗರಿ ವಿಜಯಪುರದಲ್ಲಿ ಮತ್ತೋಂದು ಹಗಲು ಕಳ್ಳತನ ನಡೆದಿದೆ.


ವಿಜಯಪುರ ನಗರದ ಜನನಿಬಿಡ ಕಾಲೋನಿಯಲ್ಲಿ ಮನೆಗೆ ನುಗ್ಗಿರುವ ಕಳ್ಳರು ತಮ್ಮ ಕೈಚಳ ತೋರಿಸಿ ಎಸ್ಕೆಪ್ ಆಗಿದ್ದಾರೆ.  ವಿಜಯಪುರ ನಗರದ ಜಲ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಲಕ್ಷ್ಮಿ ನಗರದ ಮನೆಯಲ್ಲಿ ಹಾಡು ಹಗಲೇ ಕಳ್ಳತನವಾಗಿದೆ. ಮಲ್ಲಿಕಾರ್ಜುನ ಪಾಟೀಲ್ ಎಂಬುವರರ ಮನೆಯಲ್ಲಿ ಕೈಚಳಕ ತೋರಿರುವ ಖದೀಮರು, 105 ಗ್ರಾಂ ಚಿನ್ನಾಭರಣ, 800 ಗ್ರಾಂ ಬೆಳ್ಳಿ ಮತ್ತು ರೂ. 29 ಸಾವಿರ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ.

ಮಲ್ಲಿಕಾರ್ಜುನ ಪಾಟೀಲ ಬೆಳಿಗ್ಗೆ ಎಂದಿನಂತೆ ತಮ್ಮ ಅಂಗಡಿಗೆ ತೆರಳಿದ್ದಾರೆ.  ಅವರ ಪತ್ನಿ ಅಶ್ವಿನಿ ಮಲ್ಲಿಕಾರ್ಜುನ ಪಾಟೀಲ ಮಗುವಿನೊಂದಿಗೆ ಕೆಲಸದ ನಿಮಿತ್ತ ಬಾಗಿಲಿಗೆ ಬೀಗ ಹಾಕಿಕೊಂಡು ಪಕ್ಕದ ಮನೆಗೆ ತೆರೆಳಿದ್ದಾರೆ.  ಕೇವಲ 10 ರಿಂದ 20 ನಿಮಿಷದಲ್ಲಿಯೇ ವಾಪಸ್ ಮನೆಗೆ ಬಂದಿದ್ದಾರೆ. ಈ ವೇಳೆ ಕಳ್ಳತನ ಆಗಿರುವ ವಿಚಾರ ಬಯಲಾಗಿದೆ. ಮನೆಯಲ್ಲಿದ್ದ ಅಲ್ಮೇರಾ ಹಾಗೂ ವಾರ್ಡ್ ಬೋರ್ಡ್ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದನ್ನು ಕಂಡು ಪತಿ ಮಲ್ಲಿಕಾರ್ಜುನ ಪಾಟೀಲ ಅವರಿಗೆ ವಿಷಯ ತಿಳಿಸಿದ್ದಾರೆ.  ನಂತರ ಮಲ್ಲಿಕಾರ್ಜುನ ಪಾಟೀಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಕಳ್ಳತನದ ಸುದ್ದಿ ತಿಳಿದ ಕೂಡಲೇ ಜಲನಗರ ಪೊಲೀಸ್ ಠಾಣೆಯ ಪಿಎಸ್ಐ ರಾಯಗೊಂಡ ಜನಾರ ಮತ್ತು ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.  ಅಲ್ಲದೇ, ವಿಜಯಪುರ ಡಿವೈಎಸ್ಪಿ ಲಕ್ಷ್ಮೀ ನಾರಾಯಣ ಹಾಗೂ ಇತರ ಸಿಬ್ಬಂದಿಯೂ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಘಟನಾ ಸ್ಥಳಕ್ಕೆ ಶ್ವಾನದಳ ಮತ್ತು ಸ್ಥಳಕ್ಕೆ ಬೆರಳಚ್ಚು ತಜ್ಞರೂ ಆಗಮಿಸಿ ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.

ಮನೆಯವರ ಅಜಾಗರೂಕತೆಯೇ ಘಟನೆಗೆ ಕಾರಣವೆಂದು ಪೊಲೀಸ್ ಮೂಲಗಳು ತಿಳಿಸಿದ್ದು, ಮನೆಯಲ್ಲಿದ್ದ ಗೃಹಿಣಿ ಮನೆಯ ಮುಂಬಾಗಿಲಿಗೆ ಕೀಲಿ ಹಾಕಿಕೊಂಡು ಪಕ್ಕದ ಮನೆಗೆ ಹೋಗಿದ್ದಾರೆ.  ಆದರೆ, ಮನೆಯ ಹಿಂಬಾಗಿಲಿನ್ನು ಲಾಕ್ ಮಾಡದೇ, ಕೇವಲ ಬೋಲ್ಟ್ ಹಾಕಿಕೊಂಡು ಹೋಗಿದ್ದರು.  ಆ ಬೋಲ್ಟ್ ಸಹ ಪೂರ್ಣವಾಗಿ ಹಾಕಲಾಗದ ಸ್ಥಿತಿಯಲ್ಲಿದೆ.  ಮನೆಯವರೂ ಸಹ ಇಂಥವುಗಳ ಬಗ್ಗೆ ಗಮನ ಹರಿಸಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಆ. 3 ರಂದು ವಿಜಯಪುರ ನಗರದ ಶಾಂತಿನಗರದಲ್ಲಿ ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕಿ ಸುನಂದಾ ತೋಳಬಂದಿ ಎಂಬುವವರ ಮನೆಗೆ ಫಿನಾಯಿಲ್ ಮಾರಾಟ ಮಾಡಲು ಸೇಲ್ಸ್ ಗರ್ಲ್​ ಬಂದಿದ್ದಳು. ಸುನಂದಾ ತೋಳಬಂದಿ ಅವರ ಮಗನಿಗೆ ಫುಸಲಾಯಿಸಿ ವಾಸನೆ ತೋರಿಸೋ ನೆಪದಲ್ಲಿ ಪ್ರಜ್ಞೆ ತಪ್ಪಿಸಿದ್ದಳು.  ನಂತರ ಮನೆಯಲ್ಲಿದ್ದು ಸುನಂದಾ ತೋಳಬಂದಿ ಮತ್ತು ಅವರ ಪತಿ ವಾಸುದೇವ ತೋಳಬಂದಿ ಮಲಗಿದ್ದಾಗ ಅವರಿಗೆ ಸ್ಪೆ ಸಿಂಪಡಿಸಿ ಪ್ರಜ್ಞೆ ತಪ್ಪಿಸಿ ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗಿದ್ದಳು.  ಇದಾದ 11 ದಿನಗಳ ಬಳಿಕ ಹಾಡು ಹಗಲೇ ಮನೆಗಳ್ಳತನವಾಗಿದ್ದು ವಿಜಯಪುರದಲ್ಲಿ ಕಳ್ಳರು ಮತ್ತು ಸುಲಿಗೆಕೋರರ ಕೈಚಳಕ ಹೆಚ್ಚಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ.
Published by: Rajesh Duggumane
First published: August 13, 2020, 2:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading