Crime News: ಲವರ್​​ಗಾಗಿ ಮದುವೆಯಾದ 5 ದಿನಕ್ಕೆ ಗಂಡನನ್ನು ಬಿಟ್ಟು ಬಂದಳು.. ವಿಧಿಯಾಟಕ್ಕೆ ಬದುಕು ಮೂರಾಬಟ್ಟೆ!

ಈ ಘಟನೆ ನಡೆದಿದ್ದು ಜಿಲ್ಲೆಯ ಇಂಡಿ ಪಟ್ಟಣದಲ್ಲಿ. 26 ವರ್ಷದ ನಿತೀಶ ಮಾಶ್ಯಾಳಕರ ಕೊಲೆಯಾದ ಪ್ರಿಯತಮನಾಗಿದ್ರೆ, ಪ್ರಿಯತಮೆ ಸುಕನ್ಯಾ ಕಂಬಾರಳ ತಮ್ಮ ಶಾಂತೇಶ ಕಂಬಾರ ಆರೋಪಿಯಾಗಿದ್ದಾನೆ.

ಕೊಲೆಯಾದ ನಿತೀಶ, ಆರೋಪಿ ಶಾಂತೇಶ ಕಂಬಾರ

ಕೊಲೆಯಾದ ನಿತೀಶ, ಆರೋಪಿ ಶಾಂತೇಶ ಕಂಬಾರ

 • Share this:
  ವಿಜಯಪುರ: ಪದವಿ ಓದುವಾಗ ಸಹಪಾಠಿಗಳ (Classmates) ನಡುವೆ ಅರಳಿದ ಪ್ರೇಮ ಕಥೆ (Love Story)ಕಳೆದ 8 ವರ್ಷಗಳಿಂದ ನಡೆದಿತ್ತು. ಈ ಮಧ್ಯೆ ಕಳೆದ ವರ್ಷ ಆಕೆಗೆ ಸೊಲ್ಲಾಪುರದ (solapur) ಯುವಕನೊಂದಿಗೆ ಮನೆಯವರು ಮದುವೆ ಮಾಡಿದ್ರು. ಆದ್ರೂ ಸಹ ಬೆನ್ನು ಬಿಡದ ಪ್ರೇಮಿ ಆಕೆಗೆ ಮೇಲಿಂದ ಮೇಲೆ ಕರೆ ಮಾಡಿದ್ದ. ಇದರಿಂದ ಆಕೆ ಮದುವೆಯಾಗಿ ಐದೇ ದಿನಕ್ಕೆ ಕಟ್ಟಿಕೊಂಡ ಗಂಡನನ್ನೇ ಬಿಟ್ಟು ಬಂದಿದ್ಲು. ಇತ್ತ ಆಕೆಗಾಗಿ ಕಾಯುತ್ತಿದ್ದ ಪ್ರಿಯತಮನನ್ನು ಬಂದು ಸೇರಿದ್ಲು, ಇಬ್ಬರು ಹೊಸ ಜೀವನ ನಡೆಸಲು ಪ್ಲಾನ್ ಮಾಡಿದ್ರು. ಇದರ ಮಧ್ಯೆ ಆತ ಜನವರಿ 4ರ ರಾತ್ರಿ ಬರ್ಬರವಾಗಿ ಕೊಲೆಯಾಗಿ ಹೋಗಿದ್ದ. ಕೊಲೆ ಮಾಡಿದ್ದು ಪ್ರಿಯತಮೆಯ ಸೋದರ ಎಂಬುದೇ ಇಲ್ಲಿನ ಪ್ರೇಮ್ ಕಹಾನಿಯ ಟ್ವಿಸ್ಟ್.

  ಲವರ್​​ನ ಕೊಂದ ಸೋದರ

  ಈ ಘಟನೆ ನಡೆದಿದ್ದು ಜಿಲ್ಲೆಯ ಇಂಡಿ ಪಟ್ಟಣದಲ್ಲಿ. 26 ವರ್ಷದ ನಿತೀಶ ಮಾಶ್ಯಾಳಕರ ಕೊಲೆಯಾದ ಪ್ರಿಯತಮನಾಗಿದ್ರೆ, ಪ್ರಿಯತಮೆ ಸುಕನ್ಯಾ ಕಂಬಾರಳ ತಮ್ಮ ಶಾಂತೇಶ ಕಂಬಾರ ಆರೋಪಿಯಾಗಿದ್ದಾನೆ. ಸುಕನ್ಯಾ ಒಂದೆಡೆ ಪ್ರಿಯತಮ ನಿತೀಶನನ್ನು ಕಳೆದುಕೊಂಡಿದ್ರೆ, ಮತ್ತೊಂದೆಡೆ ಆತನನ್ನು ಕೊಲೆ ಮಾಡಿದ ಸೋದರ ಶಾಂತೇಶ ಜೈಲುಪಾಲಾಗಿದ್ದಾನೆ ಎಂದು ಆಕೆ ಗೋಳಾಡುತ್ತಿದ್ದಾಳೆ.

  ಇದನ್ನೂ ಓದಿ: Kalaburagi: ಗಂಡನನ್ನು ತೊರೆದು ತವರು ಸೇರಿದ್ದವಳಿಗಾಗಿ ಸ್ನೇಹಿತರಿಬ್ಬರ ಮಧ್ಯೆ ಕಾದಾಟ.. ಕೊಲೆಯಲ್ಲಿ ಅಂತ್ಯ!

  ಮದುವೆಯಾದರೂ ಪ್ರಿಯತಮೆಯನ್ನು ಬಿಡಲಿಲ್ಲ

  ಸೊಲ್ಲಾಪುರ ನಿವಾಸಿಯಾಗಿದ್ದ ನಿತೀಶ ಮಾಶ್ಯಾಳಕರ ಇಂಡಿ ಪಟ್ಟಣದಲ್ಲಿನ ಸೋದರ ಮಾವನ ಮನೆಯಲ್ಲೇ ಬೆಳೆದಿದ್ದು, ಡಿಗ್ರಿವರೆಗೂ ಇಂಡಿಯಲ್ಲೇ ಓದಿದ್ದಾನೆ. ಹೀಗೆ ಇಂಡಿಯಲ್ಲಿ ಬಿಎ ಓದುವಾಗಲೇ ಆತನ ಕ್ಲಾಸಮೇಟ್ ಸುಕನ್ಯಾಳ ಪರಿಚಯವಾಗಿ ಬಳಿಕ ಇಬ್ಬರೂ ಪ್ರೀತಿಸುತ್ತಿದ್ರು. ಈ ವಿಚಾರ ಮನೆಯವರಿಗೆ ಗೊತ್ತಾಗಿ ಸಾಕಷ್ಟು ಗಲಾಟೆಗಳು ಆದ ಬಳಿಕ ಸುಕನ್ಯಾಳನ್ನು ಬೇರೆಡೆ ಮದುವೆ ಮಾಡಿ ಕೊಟ್ಟಿದ್ರು. ಆದ್ರೂ ಸಹ ಇವರಿಬ್ಬರ ಮದ್ಯೆ ಬಿಡಲಾರದ ಬಾಂಧವ್ಯ ಇದ್ದುದರಿಂದ ಬದುಕಿದ್ರೆ ಪ್ರಿಯಕರನ ಜೊತೆಗೆ ಬದುಕಬೇಕು ಎಂದು ಕಟ್ಟಿಕೊಂಡ ಗಂಡನನ್ನೇ ಬಿಟ್ಟು ಬಂದಿದ್ಲು ಸುಕನ್ಯಾ.

  ಬರ್ಬರವಾಗಿ ಹತ್ಯೆ

  ಆದರೆ ಸುಕನ್ಯಾ ಬಯಸಿದ್ದಂತೆ ಜೀವನ ಇರಲಿಲ್ಲ. ಈ ಮಧ್ಯೆ ವಿಪರೀತ ಕುಡಿತದ ದಾಸನಾಗಿದ್ದ ನಿತೀಶ, ಸುಕನ್ಯಾಳಿಗೆ ಹೊಡೆಯುವುದು, ಬಡಿಯುವುದು ಮಾಡುತ್ತಿದ್ದ. ಇವರಿಬ್ಬರ ಜಗಳ ಬಿಡಿಸಲು ಬಂದಿದ್ದ ಶಾಂತೇಶನ ಜೊತೆಗೂ ಸಹ ಕಿರಿಕ್ ಮಾಡಿಕೊಂಡಿದ್ದ ನಿತೀಶ. ಹೀಗಾಗಿ ಜಗಳವಾಗಿ ಎರಡು ದಿನಗಳ ಬಳಿಕ ನಿತೀಶನನ್ನು ಕರೆಯಿಸಿ ಆತನಿಗೆ ಎಣ್ಣೆ ಹೊಡೆಸಿ ಬಳಿಕ ಇಂಡಿಯ ಅಮೃತ್ ಧಾಬಾದ ಹಿಂದುಗಡೆ ಕರೆದುಕೊಂಡು ಹೋಗಿ ಕತ್ತು ಹಾಗೂ ಹೊಟ್ಟೆಗೆ ಚಾಕು ಚುಚ್ಚಿ ಕೊಲೆ ಮಾಡಿದ್ದಾನೆ. ಎಂಟು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಸುಕನ್ಯಾ-ನಿತೀಶ ಮದುವೆಯಾಗಬೇಕು ಎಂಬ ಪ್ಲಾನ್ ಮಾಡಿಕೊಂಡಿದ್ರು, ಆದ್ರೆ ಅಷ್ಟರಲ್ಲಿ ಈ ಅವಘಡ ನಡೆದಿದೆ. ಘಟನೆ ಕುರಿತು ತನಿಖೆ ನಡೆಸುತ್ತಿರುವ ಇಂಡಿ ಠಾಣೆ ಪೊಲೀಸರು ಇನ್ನಷ್ಟು ಸತ್ಯ ಬಯಲಿಗೆಳೆಯಬೇಕಿದೆ.

  ಇದನ್ನೂ ಓದಿ: Hubli-Dharwad Road: ಪ್ರವಾಸ ಹೊರಟ್ಟಿದ್ದ ಗೆಳತಿಯರನ್ನು ಬಲಿ ಪಡೆದಿದ್ದ ರಸ್ತೆಗೆ ಕೊನೆಗೂ ಮೋಕ್ಷ!

  ಇನ್ನು ನಿನ್ನೆ ಅನೈತಿಕ ಸಂಬಂಧಕ್ಕೆ ಒಪ್ಪದಿದ್ದಕ್ಕೆ ಮಹಿಳೆ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ಗ್ರಾಮದಲ್ಲಿ ನಡೆದಿದೆ. ಕಾಮುಕ ನಟರಾಜು ಎಂಬಾತ ಗೃಹಿಣಿಯ ಹಿಂದೆ ಬಿದ್ದಿದ್ದ. ತನ್ನೊಂದಿಗೆ ಅನೈತಿಕ ಸಂಬಂಧ ಹೊಂದುವಂತೆ ಪೀಡಿಸುತ್ತಿದ್ದ. ಮಹಿಳೆ ಒಪ್ಪದಿದ್ದಾಗ ಕರುಣೆ ಇಲ್ಲದೆ ಮಹಿಳೆ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಆರೋಪಿ ಹಾಗೂ ಮಹಿಳೆ ಇಬ್ಬರೂ ಶಿವನಸಮುದ್ರ ಗ್ರಾಮದ ನಿವಾಸಿಗಳು. ಹಲವು ದಿನಗಳಿಂದ ಮಹಿಳೆಯನ್ನು ಲೈಂಗಿಕ ಸಂಪರ್ಕಕ್ಕಾಗಿ ನಟರಾಜು ಒತ್ತಾಯಿಸುತ್ತಿದ್ದ ಎಂಬ ಮಾಹಿತಿ ಇದೆ. ಮಹಿಳೆ ವಿರೋಧ ವ್ಯಕ್ತಪಡಿಸಿದಾಗ ಹಲ್ಲೆ ಮಾಡಿದ್ದಾನೆ. ತಡೆಯಲು ಬಂದ ಮಹಿಳೆಯ ಮಗಳ ಮೇಲೂ ಹಲ್ಲೆ ಮಾಡಿದ್ದಾನೆ.

  (ವರದಿ: ಗುರುರಾಜ್ ಗದ್ದನಕೇರಿ)
  Published by:Kavya V
  First published: