ಪ್ರೇಮವಿವಾಹಕ್ಕೆ ತಂದೆಯೇ ವಿಲನ್.. ಮಗಳು ಗರ್ಭಿಣಿ ಅನ್ನೋದನ್ನು ನೋಡದೆ ಅಳಿಯನ Murder..!?

ಒಂದೇ ಧರ್ಮ, ಸಂಬಂಧಿಕರಾಗಿದ್ದರು ಮಗಳ ಪ್ರೇಮ ವಿವಾಹಕ್ಕೆ ತಂದೆ ದ್ವೇಷ ಕಾರಿದ್ದರು. ಮೃತನ ತಂದೆ ಪೊಲೀಸ್​​ ಆಗಿದ್ದರೂ ಬರ್ಬರವಾಗಿ ಕೊಲೆ ಮಾಡಲಾಗಿದೆ. ಗಂಡನನ್ನು ಕಳೆದುಕೊಂಡು 6 ತಿಂಗಳ ಗರ್ಭಿಣಿ ಕಣ್ಣೀರಿಡುತ್ತಿದ್ದಾಳೆ.

ಮೃತ ಮುಸ್ತಕಿನ್

ಮೃತ ಮುಸ್ತಕಿನ್

  • Share this:
ವಿಜಯಪುರ: ನಗರದ ಹೊರ ವಲಯದಲ್ಲಿರುವ ರೇಡಿಯೋ ಕೇಂದ್ರದ ರಸ್ತೆಯಲ್ಲಿ ದ್ವಿಚಕ್ರ ವಾಹನಕ್ಕೆ (Bike) ಜೀಪ್ ಡಿಕ್ಕಿ ಹೊಡೆಸಿ ಭೀಕರವಾಗಿ ಕೊಲೆ (Murder) ಮಾಡಲಾಗಿದೆ. ವಿಜಯಪುರದ ಗಾಂಧಿಚೌಕ ಪೊಲೀಸ್ ಠಾಣೆಯ (Gandhi Chowk Police Station) ಅಪರಾಧ ವಿಭಾಗದ ಪಿಎಸ್ಐ ಆಗಿರುವ ರಿಯಾಜ್ ಅಹಮ್ಮದ ಕೂಡಗಿ ಅವರ ಮಗ 28 ವರ್ಷದ ಮುಸ್ತಕಿನ್ ಕೂಡಗಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ವಿಜಯಪುರ ಮಹಾನಗರ ಪಾಲಿಕೆಯ 27ನೇ ವಾರ್ಡ್ ನ ಮಾಜಿ ಸದಸ್ಯ ರೌಫ್ ಅಹಮ್ಮದ ಶೇಖ್ ಹಾಗೂ ಕುಟುಂಬದವರಿಂದ ಕೊಲೆ ಆಗಿದೆ ಎಂದು ಆರೋಪಿಸಲಾಗಿದೆ. ಇದಕ್ಕೆ ಕಾರಣ ಮಹಾನಗರ ಪಾಲಿಕೆ ಮಾಜಿ ಸದಸ್ಯ ರೌಫ್ ಅಹಮ್ಮದ ಶೇಖ್ ಎನ್ನಲಾಗ್ತಿದೆ. ಈತನ ಮಗಳು ಹಾಗೂ ಪಿ ಎಸ್ ಐ ರಿಯಾಜ್ ಅಹಮ್ಮದ ಕೂಡಗಿ ಅವರ ಮಗ ಮುಸ್ತಕಿನ್ ಪರಸ್ಪರ ಪ್ರೀತಿಸುತ್ತಿದ್ದುದು. ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿ ಹಾಗೂ ಮುಸ್ತಕಿನ್ ಕಳೆದ ಆರು ತಿಂಗಳ ಹಿಂದೆ ಓಡಿಹೋಗಿ ಮಹಾರಾಷ್ಟ್ರದಲ್ಲಿ ಮದುವೆಯಾಗಿ ಅಲ್ಲಿಯೇ ನೆಲೆಸಿದ್ರು. ಅಲ್ಲಿಯೂ ಮುಸ್ತಕಿನ್ ಮೇಲೆ ಎರಡು ಬಾರಿ ಕೊಲೆಗೆ ಯತ್ನಿಸಿದಾಗ ಮತ್ತೆ ವಾಪಸ್ ವಿಜಯಪುರಕ್ಕೆ ಬಂದು ಜೀವನ ನಡೆಸುತ್ತಿದ್ರು.

ಇದನ್ನೂ ಓದಿ: ಮದುವೆಯಾದ 6 ದಿನದಲ್ಲಿಯೇ ಮಗಳನ್ನ Kidnap ಮಾಡಿದ ಪೋಷಕರು: ಯಾಕೆ ಗೊತ್ತಾ?

ರಕ್ಷಣೆ ಕೋರಿ ವಿಡಿಯೋ ಮಾಡಿದ್ದರು

ಮಗಳು ಪ್ರೀತಿಸಿದ ಹುಡುಗನ ಜೊತೆಗಿನ ಮದುವೆ ಮಾಜಿ ಕಾರ್ಪೊರೇಟರ್ ರೌಫ್ ಅಹಮ್ಮದ ಶೇಖ್ ಗೆ ಇಷ್ಟವಿಲ್ಲದ ಕಾರಣ ಅಳಿಯನನ್ನೇ ಕೊಂದಿದ್ದಾನೆ ಎಂದು ಸ್ವತ ಆತನ ಮಗಳು ಹಾಗೂ ಮೃತನ ತಂದೆ ಪಿ ಎಸ್ ಐ ಕೂಡಗಿ ಆರೋಪಿಸಿದ್ದಾರೆ. ಮದುವೆಯಾದ ಹೊಸತರಲ್ಲೇ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದ ಯುವತಿ ತನ್ನ ತಂದೆಯಿಂದ ಪ್ರಿಯಕರನಿಗೆ ಬೆದರಿಕೆ ಇದೆ. ನಮ್ಮನ್ನು ರಕ್ಷಿಸಿ, ಬದುಕಲು ಬಿಡಿ ಎಂದು ಬೇಡಿಕೊಂಡಿದ್ದಳು.

ತನಿಖೆಗೆ 3 ತಂಡಗಳ ರಚನೆ

ಮೂರು ವರ್ಷದ ಪ್ರೀತಿ, ಆರು ತಿಂಗಳ ಸಹಬಾಳ್ವೆ ಪ್ರೇಮಿಗಳ ದಿನದ ಮಾರನೇ ದಿನವೇ ಕೊನೆಯಾಗಿದ್ದು, ಗಂಡನನ್ನು ಕಳೆದುಕೊಂಡ ಆರು ತಿಂಗಳ ಗರ್ಭಿಣಿ ಕಣ್ಣೀರಿಡುತ್ತಿದ್ದಾಳೆ. ಇತ್ತ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸ್ ಹಿರಿಯ ಅಧಿಕಾರಿಗಳು ಇದೊಂದು ಕೊಲೆ ಎಂದು ದೃಢಪಡಿಸಿದ್ದು, ತನಿಖೆ ಶುರು ಮಾಡಿದ್ದಾರೆ. ಮೇಲ್ನೋಟಕ್ಕೆ ಇದು ಅಪಘಾತ ಎಂದು ಕಂಡುಬಂದ್ರೂ ಸಹ ಇದೊಂದು ಪೂರ್ವ ನಿಯೋಜಿತ ಕೊಲೆ ಎಂಬುದು ಗೊತ್ತಾಗುತ್ತಿದ್ದಂತೆ ಗಾಂಧಿಚೌಕ ಠಾಣೆ ಪೊಲೀಸರು ಮೂರು ತಂಡಗಳೊಂದಿಗೆ ಆರೋಪಿಗಳ ಬಲೆಗೆ ಜಾಲ ಬೀಸಿದ್ದಾರೆ.

ಗರ್ಭಿಣಿಯ ಕಣ್ಣೀರು

ಅತೀಕಾ ಹಾಗೂ ಮುಸ್ತಕಿನ್ ಸಂಬಂಧಿಕರೇ ಆಗಿದ್ರೂ ಸಹ ಅತೀಕಾಳ ತಂದೆಗೆ ಇವರ ಪ್ರೇಮ ವಿವಾಹ ಇಷ್ಟವಿಲ್ಲದ್ದರಿಂದ ಇಷ್ಟೆಲ್ಲ ಅನಾಹುತಗಳು ನಡೆದಿದೆ. ಬದುಕಿ ಬಾಳಬೇಕಿದ್ದ ಮುಸ್ತಕಿನ್ ಕೊನೆಯುಸಿರೆಳಿದಿದ್ರೆ, ಮಗು ಹುಟ್ಟುವ ಮುಂಚೆಯೇ ಅತೀಕಾ ಗಂಡನನ್ನು ಕಳೆದುಕೊಂಡು ವಿಧವೆಯಾಗಿದ್ದಾಳೆ.

ಇದನ್ನೂ ಓದಿ:Suicide: ಕಣ್ಣೆದುರೇ ಕಣ್ಣು ಮುಚ್ಚಿತು 6 ತಿಂಗಳ ಕಂದಮ್ಮ.. ನೊಂದು ಪ್ರಾಣ ಬಿಟ್ಟ ತಾಯಿ..!

ಚಿತ್ರದುರ್ಗದಲ್ಲಿ ಗಂಡ ಹೆಂಡತಿಜಗಳ ಉಂಡು ಮಲಗೋವರೆಗೆ’ ಅಂತ ಗಾದೆ ಮಾತು ಇದೆ. ಸಮಾಜದಲ್ಲಿ ಪತಿ ಮತ್ತು ಪತ್ನಿ ನಡುವೆ ಎಷ್ಟೇ ಭಿನ್ನಾಭಿಪ್ರಾಯ, ವೈಷಮ್ಯಗಳಿದ್ದರು ಭವಿಷ್ಯದ ಬದುಕಲ್ಲಿ ಅವುಗಳನ್ನ ಮರೆತು ಒಂದಾಗಿ ಬದುಕುತ್ತಿರೋ ಅನೇಕ ಕುಟುಂಬಗಳನ್ನ ನಾವು ನೋಡಿದ್ದೇವೆ. ಒಂದು ವೇಳೆ ಪತಿ, ಪತ್ನಿಯರ ನಡುವೆ ಹೊಂದಾಣಿಕೆ ಜೀವನ ಸಾಧ್ಯವೇ ಇಲ್ಲ ಅನ್ನುವಂತ ಸಂದರ್ಭಗಳಲ್ಲಿ ಇಬ್ಬರೂ ದೂರಾಗಿ  ಅವರವರ ಪಾಡಿಗೆ ಬದುಕು ಸಾಗಿಸೋದನ್ನೂ ಕಂಡಿದ್ದೇವೆ. ಆದರೇ ಗಂಡನೇ ಸರ್ವಸ್ವ ಅಂತ ತಿಳಿದು ಬಂದ ಪತ್ನಿಯನ್ನ ಸಂಭಾಳಿಸಲಾಗದ ಪತಿ ಮಾನವೀಯತೆ ಮರೆತು ಕ್ರೌರ್ಯ ಮರೆದು ಹತ್ಯೆ ಮಾಡಿದ್ದಾನೆ. ಎರಡನೇ ಮದುವೆ ಪ್ರಶ್ನಿಸಿ, ಸಂಶಯಿಸಿ ಪತಿ ಜೊತೆ ನಿತ್ಯ ಗಲಾಟೆ ಮಾಡುತ್ತಿದ್ದ ಪತ್ನಿಯನ್ನ ಪತಿಯೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಪತ್ನಿಯ ಹತ್ಯೆ ಮಾಡಿದ ಆರೋಪಿ ಪತಿ ಪೊಲೀಸ್ ಠಾಣೆಗೆ  ತೆರಳಿ, ಕೊಲೆ ಮಾಡಿದ್ದಾಗಿ ತಿಳಿಸಿ ಪೊಲೀಸರಿಗೆ ಶರಣಾಗಿದ್ದಾನೆ.

(ಮಾಹಿತಿ: ಗುರು)
Published by:Kavya V
First published: