ಬೆಂಗಳೂರು: ಅದು ಒಂದೇ ಕಟ್ಟಡ. ಅಲ್ಲಿ ಎರಡು ಕುಟುಂಬ (Family) ವಾಸವಿದೆ. ಇದ್ದಕ್ಕಿದ್ದಂತೆ ಮೇಲ್ಮನೆಯಲ್ಲಿದ್ದವನ ಪತಿ. ಕೆಳ ಮನೆಯಲ್ಲಿದ್ದವನ ಪತ್ನಿ ಕಾಣೆಯಾಗಿಬಿಟ್ಟಿದ್ದರು. (Husband and Wife ) ಇಬ್ಬರು ಕಾಣೆಯಾದ ಬಗ್ಗೆ 2 ಪ್ರತ್ಯೇಕ ದೂರು ದಾಖಲಾಗಿದೆ. ಒಟ್ಟಿಗೆ ಮಿಸ್ ಆದವರ ಅಸಲಿ ಕಹಾನಿ ಏನು? (Missing Case) ಅದೇ ನೋಡಿ ಇಂಟರಸ್ಟಿಂಗ್ ವಿಚಾರ. ಇದು ಮೇಲಿನ ಮನೆ ಅಂಕಲ್, ಕೆಳಗಿನ ಮನೆ ಆಂಟಿ ಲವ್ ಸ್ಟೋರಿ. ಲವ್ (Love) ಆಗಬಾರದ ವಯಸ್ಸಲ್ಲಿ ಲವ್ ಆಗಿದೆ. ಗಂಡ-ಹೆಂಡತಿ ಮಕ್ಕಳು ಇರುವವರೇ ಹೇಳದೆ ಕೇಳದೆ ಜೂಟ್ ಹೇಳಿದ್ದಾರೆ. ಗಂಡ-ಹೆಂಡತಿ ಕಳೆದುಕೊಂಡವರು ಒಂದೇ ಕಣ್ಣಲ್ಲಿ ಗೋಳೋ ಅಂತ ಅಳುತ್ತಿದ್ದಾರೆ.
ನನ್ನ ಹೆಂಡತಿ ಒಂದು ತಿಂಗಳಿಂದ ಕಾಣ್ತಿಲ್ಲ, ಇವರ ಗಂಡನ ಜೊತೆ ಹೋಗಿದ್ದಾಳೆ
ಪೊಲೀಸ್ ಠಾಣೆ ಮುಂದೆ ನಿಂತು ಎಫ್ಐಆರ್ ತೋರಿಸುತ್ತಾ ನಿಂತಿರುವ ಇವರ ಹೆಸರು ಮುಬಾರಕ್. ಇವರ ಜೊತೆ ಇರುವವರು ಝೀನತ್. ಇವರಿಬ್ಬರ ಗಂಡ, ಹೆಂಡತಿಯೇ ಕಳೆದೊಂದು ತಿಂಗಳಿಂದ ಕಾಣೆಯಾಗಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾರುತಿನ ಗರದಲ್ಲಿ ವಾಸಿಯಾಗಿದ್ದವರ ಬಾಳಲ್ಲಿ ಗಂಡ-ಹೆಂಡಿರ ಬಿರುಗಾಳಿಯೇ ಎದ್ದಿದೆ.
ಇದನ್ನೂ ಓದಿ: Bengaluru: ತಂಗಿಗಾಗಿ ಹೆಂಡತಿಯ ಅಣ್ಣನನ್ನ ಚಾಕುವಿನಿಂದ ಚುಚ್ಚಿ ಕೊಲೆಗೈದ; ಬಾವನಿಂದಲೇ ಬಾಮೈದನ ಬರ್ಬರ ಹತ್ಯೆ
ಕೆಳಮನೆಯ ಗಂಡ, ಮೇಲ್ಮನೆ ಹೆಂಡತಿ. ಪ್ರತ್ಯೇಕ ದೂರು!
ಇದೊಂಥರ ಡಿಫರೆಂಟ್ ಕಹಾನಿ. ಇವರಿಬ್ಬರ ಸಂಸಾರ ಒಂದೇ ಬಿಲ್ಡಿಂಗ್ನಲ್ಲಿ ವಾಸವಾಗಿತ್ತು. ಮುಭಾರಕ್ ಕೆಳಮನೆಯಲ್ಲಿದ್ದರೆ, ಝೀನತ್ ಮೇಲ್ಮನೆಯಲ್ಲಿದ್ದರು. ಅದ್ಯಾವ ಗ್ಯಾಪ್ನಲ್ಲಿ ಅದೇನ್ ಆಯಿತೋ ಗೊತ್ತಿಲ್ಲ ಕೆಳಮನೆಯಲ್ಲಿದ್ದ ಹೆಂಡತಿ ಕಾಣ್ತಿಲ್ಲ ಅಂತ ಗಂಡ ಕಂಪ್ಲೈಂಟ್ ಕೊಟ್ಟರೆ, ಮೇಲ್ಮನೆಯಲ್ಲಿದ್ದ ಗಂಡ ಕಾಣಿಸುತ್ತಿಲ್ಲ ಅಂತ ಹೆಂಡತಿ ದೂರು ಕೊಟ್ಟಿದ್ದಾರೆ. ಇಂಟ್ರೆಸ್ಟಿಂಗ್ ವಿಷಯ ಎಂದರೆ ಈಕೆಯ ಗಂಡನೇ ಈತನ ಹೆಂಡತಿ ಜೊತೆ ಪರಾರಿಯಾಗಿದ್ದಾರೆ ಅನ್ನೋ ಅನುಮಾನ ವ್ಯಕ್ತಪಡಿಸ್ತಿದ್ದಾರೆ.
12 ವರ್ಷದ ಹಿಂದೆ ವಿವಾಹವಾಗಿದ್ದ ನವೀದ್ ಮತ್ತು ಝೀನತ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮುಬಾರಕ್ ಸಹ ಶಾಜಿಯಾ ಜೊತೆ 8 ವರ್ಷದ ಹಿಂದೆಯೇ ಮದುವೆಯಾಗಿದ್ದರು. ಇವರಿಗೂ ಸಹ ಇಬ್ಬರು ಮಕ್ಕಳು. ಒಂದೇ ಬಿಲ್ಡಿಂಗ್ನಲ್ಲಿದ್ದವರ ನಡುವೆ ಕಣ್ಕಣ್ ಸಲುಗೆ ಬೆಳೆದಿದೆ. ಫೋನ್ ನಂಬರ್ ಸಿಗ್ತಿದ್ದಂತೆ ಚಾಟಿಂಗ್ ಸಹ ಜೋರಾಗಿದೆ.
ಇದನ್ನೂ ಓದಿ: Bengaluru: ಆಟೋ ಹತ್ತಿದಾಕೆಯ ಮಗಳನ್ನೇ ಪಟಾಯಿಸಿದ, ಸೂಸೈಡ್ ನಾಟಕ ಮಾಡಿದ ಯುವತಿ ಸಾವು!
ಇದ್ದಕ್ಕಿದ್ದಂತೆ ಕಳೆದ ತಿಂಗಳು 9 ರಂದು ಇಬ್ಬರೂ ಕಾಣೆಯಾಗಿದ್ದಾರೆ. ಹೀಗಾಗಿ ಇವರಿಬ್ಬರ ಮಧ್ಯೆಯೇ ಅಕ್ರಮ ಸಂಬಂಧವಿದೆ ಅಂತ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪೊಲೀಸರಿಗೆ ದೂರು ಕೊಟ್ಟು ಒಂದು ತಿಂಗಳಾದರೂ ಇಬ್ಬರ ಸುಳಿವಿಲ್ಲ. ಪೊಲೀಸರು ನಮ್ಮ ಕೇಸ್ ಬಗ್ಗೆ ಇಂಟ್ರೆಸ್ಟ್ ತೋರಿಸ್ತಿಲ್ಲ ಅಂತ ಆರೋಪ ಮಾಡಿದ್ದಾರೆ.
ಮಾವನನ್ನೇ ಚಾಕುವಿನಿಂದ ಇರಿದು ಕೊಲೆಗೈದ ಅಳಿಯ
ಆಸ್ತಿ ವಿಚಾರಕ್ಕೆ ಮಾವನನ್ನೇ ಚಾಕುವಿನಿಂದ ಇರಿದು ಅಳಿಯ ಕೊಲೆ ಮಾಡಿರುವ ಪ್ರಕರಣ ಹುಬ್ಬಳ್ಳಿ (Hubli) ತಾಲೂಕಿನ ಸುಳ್ಳ ಗ್ರಾಮದಲ್ಲಿ ನಡೆದಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿ ಸ್ವಂತ ಅಳಿಯನೇ ಮಾವನನ್ನು 20ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಗುರುವಾರ ರಾತ್ರಿ ಘಟನೆ ನಡೆದಿದ್ದು, ಸುಳ್ಳದ ಗ್ರಾಮದ ಶಿವಪ್ಪ ಕೊಲೆಯಾದ ವ್ಯಕ್ತಿಯಾಗಿದ್ದಾರೆ.
ಆಸ್ತಿಯ ವಿಚಾರಕ್ಕೆ ಜಗಳ ತೆಗೆದಿದ್ದ ಅಳಿಯ ಊರಿನಲ್ಲಿರುವ ಹಾಲಿನ ಕೇಂದ್ರದ ಮುಂದೆಯೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ಕೊಲೆಯ ದೃಶ್ಯಾವಳಿಗಳು ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗ್ರಾಮಸ್ಥರು ಅಳಿಯನನ್ನು ತಡೆಯಲು ಪ್ರಯತ್ನಪಟ್ಟರೂ ಕೊಲೆ ತಡೆಯುವಲ್ಲಿ ವಿಫಲರಾಗಿದ್ದರು. ಸದ್ಯ ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು, ಅಳಿಯನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ