ಈ ಉಪಚುನಾವಣೆಯಲ್ಲಿ ವಿರೋಧ ಪಕ್ಷದವರ ಕುತಂತ್ರಗಳು ನಡೆಯಲ್ಲ; ಸಚಿವ ಶ್ರೀರಾಮುಲು

ವಿಧಾನಸಭೆ ಚುನಾವಣೆಯಲ್ಲಿ ಸಂದರ್ಭದಲ್ಲಿ ನಾನು ಡಿಸಿಎಂ ಆಗಬೇಕು ಎಂಬುದು ಜನರ ಅಭಿಪ್ರಾಯವಾಗಿತ್ತು. ಆದ್ರೆ, ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿಲ್ಲ. ಬೇರೆ ಬೇರೆ ಕಾರಣಗಳಿಂದ ಡಿಸಿಎಂ ಸ್ಥಾನ ಕೈ ತಪ್ಪಿದೆ. ಮುಂದಿನ ದಿನಗಳಲ್ಲಿ ಸಿಎಂ ಹಾಗೂ ರಾಷ್ಟ್ರೀಯ ನಾಯಕರ ಆಶೀರ್ವಾದ ಇದ್ರೆ ಆಗಬಹುದು ಎಂದು ಶ್ರೀರಾಮುಲು ಹೇಳಿದರು.

ಸಚಿವ ಶ್ರೀರಾಮುಲು.

ಸಚಿವ ಶ್ರೀರಾಮುಲು.

  • Share this:
ಗದಗ(ಅ.19): ಶಿರಾ ಹಾಗೂ ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರ ತಂತ್ರ-ಕುತಂತ್ರಗಳು ಯಾವುದು ನಡೆಯುವುದಿಲ್ಲ. ಎಲ್ಲವನ್ನೂ ಬಿಜೆಪಿ ಪಕ್ಷ ಛಿದ್ರ ಮಾಡುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಕಾಂಗ್ರೆಸ್ ವಿರುದ್ಧ ಗದಗನಲ್ಲಿ ವಾಗ್ದಾಳಿ ನಡೆಸಿದ್ದಾರೆ. ಗದಗನ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಹಾಗೂ ನಾಲ್ಕು ವಿಧಾನ ಪರಿಷತ್  ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ಹೇಳಿದರು. ಡಿ.ಕೆ. ಶಿವಕುಮಾರ ಅವರು ನಮ್ಮ ಪಕ್ಷ ವಿರುದ್ಧ‌ ಸಾಕಷ್ಟು ಟೀಕೆ‌ ಟಿಪ್ಪಣಿ ಮಾಡ್ತಿದ್ದಾರೆ. ಈಗ ಸಹೋದರ ಡಿ.ಕೆ. ಸುರೇಶ್ ಅವರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಆರ್.ಆರ್ ನಗರ ವಿಧಾನಸಭೆ ಕ್ಷೇತ್ರ ಉಳಿಸಿಕೊಳ್ಳುವ ಪ್ರತಿಷ್ಠೆಯಿದ್ದು, ಈ ಬಾರಿ ಜಿದ್ದಾಜಿದ್ದಿನ ಅಖಾಡವಾಗಿದೆ. ಸೋಲುವ ಭಯದಲ್ಲಿ ಡಿಕೆ ಸಹೋದರರು ಹತಾಶರಾಗಿದ್ದಾರೆ ಎಂದು ಹೇಳಿದರು.

ಊರಿಗೆ ಊರೇ ಮುಳುಗಿ ಹೋಗಿದೆ; ಸಿಎಂಗೆ ಶಿಕಾರಿಪುರ ಪ್ರವಾಸ ಹೆಚ್ಚಾಯ್ತು; ಎಚ್​.ಡಿ.ಕುಮಾರಸ್ವಾಮಿ ಕಿಡಿ

ಇದೇ ವೇಳೆ, ಸಮಾಜ ಕಲ್ಯಾಣ ಖಾತೆ ಸಿಕ್ಕಿದ್ದಕ್ಕೆ ಖುಷಿ ಇದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ  ಮಕ್ಕಳು ಓಲಂಪಿಕ್ ನಲ್ಲಿ ಭಾಗವಹಿಸುವಷ್ಟು ಬದಲಾವಣೆ ಮಾಡುತ್ತೇನೆ ಎಂದರು. ವಿಧಾನಸಭೆ ಚುನಾವಣೆಯಲ್ಲಿ ಸಂದರ್ಭದಲ್ಲಿ ನಾನು ಡಿಸಿಎಂ ಆಗಬೇಕು ಎಂಬುದು ಜನರ ಅಭಿಪ್ರಾಯವಾಗಿತ್ತು. ಆದ್ರೆ, ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿಲ್ಲ. ಬೇರೆ ಬೇರೆ ಕಾರಣಗಳಿಂದ ಡಿಸಿಎಂ ಸ್ಥಾನ ಕೈ ತಪ್ಪಿದೆ. ಮುಂದಿನ ದಿನಗಳಲ್ಲಿ ಸಿಎಂ ಹಾಗೂ ರಾಷ್ಟ್ರೀಯ ನಾಯಕರ ಆಶೀರ್ವಾದ ಇದ್ರೆ ಆಗಬಹುದು ಎಂದು ಶ್ರೀರಾಮುಲು ಹೇಳಿದರು.

ಎಸ್ಟಿ ಮೀಸಲಾತಿ ಹೆಚ್ಚಳ ಬಗ್ಗೆ ಶ್ರೀಗಳ ಜೊತೆ ಮಾತಾಡಿದ್ದೇನೆ. ಶೇ.7.5ರಷ್ಟು ಮೀಸಲಾತಿ ನೀಡುವ ಬಗ್ಗೆ ವಾಲ್ಮೀಕಿ ಶ್ರೀಗಳ ನೇತೃತ್ವದಲ್ಲಿ ಒತ್ತಾಯ ಮಾಡಲಾಗುತ್ತಿದೆ. ಈ ಬಗ್ಗೆ ಸರ್ಕಾರ ಶೀಘ್ರ ಅಂತಿಮ ತೀರ್ಮಾನ ತೆಗೆದುಕೊಳ್ಳುವ ವಿಶ್ವಾಸವಿದೆ ಎಂದರು. ಆರೋಗ್ಯ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇಲಾಖೆಯಲ್ಲಿ ನಾನು ನಯಾಪೈಸೆ ಭ್ರಷ್ಟಾಚಾರ ಮಾಡಿಲ್ಲ.  ಸೋಶಿಯಲ್ ಆಡಿಟ್ ನಡೆದಿದ್ದು ಅದರಲ್ಲಿ ಎಲ್ಲವೂ ಗೊತ್ತಾಗಲಿದೆ ಎಂದರು.

ಪಶ್ಚಿಮ ಪದವಿಧರರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಎಸ್.ವಿ.ಸಂಕನೂರ್ ಅವರು ಸ್ಪರ್ಧಿಸಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ಕೂಡ ಸಂಕನೂರ್ ಅವರಿಗೆ ಮತ ನೀಡಬೇಕು ಎಂದು ಪದವೀಧರರಿಗೆ ಮನವಿ ಮಾಡಿದರು. ಸಂಸದ ಶಿವಕುಮಾರ್ ಉದಾಸಿ, ಮುಖಂಡ ಅನಿಲ್ ಮೆಣಸಿನಕಾಯಿ ಪಾಲ್ಗೊಂಡಿದ್ದರು.
Published by:Latha CG
First published: