• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Mandya: ಈ ಮೂವರಲ್ಲಿ ಯಾರಿಗೆ ಸಿಗುತ್ತೆ ಮಂಡ್ಯ ಉಸ್ತುವಾರಿ? ಬಿಜೆಪಿ ಒಳ ಲೆಕ್ಕಾಚಾರ ಏನು?

Mandya: ಈ ಮೂವರಲ್ಲಿ ಯಾರಿಗೆ ಸಿಗುತ್ತೆ ಮಂಡ್ಯ ಉಸ್ತುವಾರಿ? ಬಿಜೆಪಿ ಒಳ ಲೆಕ್ಕಾಚಾರ ಏನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮತ್ತೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಮಾಡಿದ್ದು, ಆ ಸ್ಥಾನದಿಂದ ಆರ್​.ಅಶೋಕ್ ಔಟ್ ಆಗಿದ್ದಾರೆ. ಉಸ್ತುವಾರಿಯಿಂದ ಮುಕ್ತ ಮಾಡಿ ಎಂದು ಸಚಿವ ಆರ್.ಅಶೋಕ್ ಸಿಎಂ ಬಸವರಾಜ್ ಬೊಮ್ಮಾಯಿಗೆ (CM Basavaraj Bommai) ಪತ್ರ ಬರೆದಿದ್ದರು. ಆ ಮನವಿ ಸಿಎಂ ಬೊಮ್ಮಾಯಿ ಪುರಸ್ಕರಿಸಿದ್ದಾರೆ.

ಮುಂದೆ ಓದಿ ...
  • Share this:

ಬೆಂಗಳೂರು: ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ಆರ್​.ಅಶೋಕ್​ರನ್ನು (Minister R Ashok) ನೇಮಕ ಮಾಡಲಾಗಿತ್ತು. ಗೋಪಾಲಯ್ಯ ಬದಲಿಗೆ ಮಂಡ್ಯ ಜಿಲ್ಲಾ ಉಸ್ತುವಾರಿಯನ್ನು (Mandya incharge Minister) ಅಶೋಕ್ ಹೆಗಲಿಗೆ ಹಾಕಿ ರಾಜ್ಯ ಸರ್ಕಾರ ಜನವರಿ 24 ರಂದು ಆದೇಶ ಹೊರಡಿಸಿತ್ತು. ವಿಧಾನಸಭೆ ಚುನಾವಣೆ (Assembly Election 2023) ಸಮೀಪಿಸುತ್ತಿದ್ದಂತೆಯೇ ಮಂಡ್ಯ ಉಸ್ತುವಾರಿ ನೇಮಕ ತೀವ್ರ ಕುತೂಹಲಕ್ಕೂ ಕಾರಣವಾಗಿತ್ತು. ಆದರೆ ಈಗ


ಇನ್ನು ವಿಧಾನಸಭಾ ಚುನಾವಣೆಗೆ ಬೆರಣಿಕೆ ದಿನಗಳು ಉಳಿದಿರುವ ಹಿನ್ನೆಲೆ ಮಂಡ್ಯ ಉಸ್ತುವಾರಿಯನ್ನು ಯಾರಿಗೆ ನೀಡಬೇಕು ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಚರ್ಚೆಗಳ ನಡುವೆ ಮೂವರ ಹೆಸರು ಮುನ್ನಲೆಗೆ ಬಂದಿದ್ದು, ಯಾರು ಮಂಡ್ಯ  ಉಸ್ತುವಾರಿಯನ್ನು ತೆಗೆದುಕೊಳ್ಳಲಿದ್ದಾರೆ ಎಂಬುದರ ಬಗ್ಗೆ ತೀವ್ರ ಕುತೂಹಲ ಮನೆ ಮಾಡಿದೆ.


ಆರ್.ಅಶೋಕ್ ಮಂಡ್ಯ ಉಸ್ತುವಾರಿಯಿಂದ ಹಿಂದೆ ಸರಿದ ಬಳಿಕ ಮೂವರು ಒಕ್ಕಲಿಗ ನಾಯಕರು ಈ ಸ್ಥಾನದ ರೇಸ್​​ನಲ್ಲಿದ್ದಾರೆ. ಸಚಿವರಾದ ಅಶ್ವಥ್ ನಾರಾಯಣ್, ಗೋಪಾಲಯ್ಯ ಮತ್ತು ನಾರಾಯಣಗೌಡರು ಉಸ್ತುವಾರಿ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಈ ಮೂವರು ಹೆಸರುಗಳು ಬಿಜೆಪಿ ಹೈಕಮಾಂಡ್​ ಅಂಗಳದಲ್ಲಿ ಕೇಳಿ ಬರುತ್ತಿವೆ.


1.ಅಶ್ವಥ್ ನಾರಾಯಣ್


ಅಶ್ವಥ್ ನಾರಾಯಣ್ ಅವರಿಗೆ ಮಂಡ್ಯ ಉಸ್ತುವಾರಿ ನೀಡಿದ್ರೆ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರ ನಾಗಲೋಟಕ್ಕೆ ಬ್ರೇಕ್ ಹಾಕುವ ಸಾಧ್ಯತೆಗಳಿವೆ ಎಂಬುವುದು ಬಿಜೆಪಿ ಒಳ ಲೆಕ್ಕಾಚಾರ. ಈಗಾಗಲೇ ರಾಮನಗರದಲ್ಲಿ ದಳಪತಿ ಹಾಗೂ ಕನಕಪುರ ಬಂಡೆ ವಿರುದ್ಧ ಅಶ್ವಥ್ ನಾರಾಯಣ್ ರಾಜಕೀಯ ರಣರಂಗಕ್ಕೆ ಧುಮಕಿದ್ದಾರೆ. ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರಿಗೆ ಟಕ್ಕರ್ ಕೊಡಲು ಅಶ್ವಥ್ ನಾರಾಯಣ್ ಅವರೇ ಸೂಕ್ತ ಎಂಬ ಮಾತುಗಳು ಕೇಳಿ ಬರುತ್ತಿವೆ.


Mandya politics
ಸಚಿವ ಡಾ ಸಿಎನ್ ಅಶ್ವತ್ಥ್ ನಾರಾಯಣ್


2.ಗೋಪಾಲಯ್ಯ


ಸಚಿವ ಗೋಪಾಲಯ್ಯ ಅವರು ಮಂಡ್ಯ ಹಾಗೂ ಹಾಸನ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿರುವ ಕಾರಣ ಇಲ್ಲಿಯ ರಾಜಕಾರಣದ ಬಗ್ಗೆ ಮಾಹಿತಿ ಹೊಂದಿದ್ದರು. ಈಗಾಗಲೇ ಮಂಡ್ಯದ ಬಿಜೆಪಿ ಕಾರ್ಯಕರ್ತರನ್ನ ಗಣನೆಗೆ ತೆಗೆದುಕೊಂಡು ಗೋಪಾಲಯ್ಯ ಕಾರ್ಯನಿರ್ವಹಿಸಿದ್ದಾರೆ.


ಸಚಿವ ಕೆ. ಗೋಪಾಲಯ್ಯ


ಈ ಹಿಂದೆ ಜೆಡಿಎಸ್​​ನಲ್ಲಿದ್ದ ಕಾರಣ ದಳಪತಿಗಳ ಆಳ ಅಗಲವನ್ನ ಬಲ್ಲವರಾಗಿದ್ದಾರೆ. ಈ ಹಿನ್ನಲೆ ಮತ್ತೆ ಗೋಪಾಲಯ್ಯರನ್ನ ಮಂಡ್ಯ ಉಸ್ತುವಾರಿಯನ್ನಾಗಿ ಮಾಡಿದ್ರೆ ಚುನಾವಣೆಯಲ್ಲಿ ಸಹಕಾರಿಯಾಗಲಿದೆ ಎಂಬುವುದು ಬಿಜೆಪಿಯ ಲೆಕ್ಕಾಚಾರ ಆಗಿದೆ.




3.ಕೆ.ಸಿ.ನಾರಾಯಣಗೌಡ


ನಾರಾಯಣಗೌಡ ಮಂಡ್ಯದ ಕೆ.ಆರ್.ಪೇಟೆಯವರೇ ಆದ ಕಾರಣ ಸ್ಥಳೀಯ ಕಾರ್ಯಕರ್ತರ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ಜೆಡಿಎಸ್​ನಲ್ಲಿದ್ದ ಕಾರಣ ನಾರಾಯಣಗೌಡರಿಗೆ ದಳ ಕಾರ್ಯಕರ್ತರು ಮತ್ತು ನಾಯಕರ ಜೊತೆಗೆ ಒಡನಾಟ ಹೊಂದಿದ್ದಾರೆ.


KC narayana gowda
ನಾರಾಯಣ ಗೌಡ, ಸಚಿವ


ಶಿವಮೊಗ್ಗ ಉಸ್ತುವಾರಿ ಕೊಟ್ಟ ಹಿನ್ನೆಲೆ ಅಸಮಾಧಾನಗೊಂಡಿರುವ ಕೆ.ಸಿ.ನಾರಾಯಣಗೌಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ತಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಪ್ರಾಬಲ್ಯ ಇರೋ ಶಿವಮೊಗ್ಗದ ಉಸ್ತುವಾರಿ ನೀಡಿದ್ದಕ್ಕೆ ಈ ಹಿಂದೆ ನಾರಾಯಣಗೌಡರು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ.


ಇದನ್ನೂ ಓದಿ:  Crime News: ಅತ್ಯಾಚಾರಕ್ಕೆ ಯತ್ನ, ಯುವಕರಿಬ್ಬರ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ; ಏಳು ಜನ ಅರೆಸ್ಟ್


ಈ ಹಿನ್ನೆಲೆ ಮಂಡ್ಯ ಉಸ್ತುವಾರಿಯನ್ನು ನಾರಾಯಣ ಗೌಡರಿಗೆ ನೀಡಿದ್ರೆ ಉತ್ತಮ ಎಂಬ ಮಾತುಗಳು ರಾಜಕೀಯ ಮೊಗಸಾಲೆಯಲ್ಲಿ ಕೇಳಿ ಬರುತ್ತಿವೆ. ನಾರಾಯಣಗೌಡರ ಮುನಿಸು ಶಮನಗೊಳಿಸಲು ಉಸ್ತುವಾರಿ ಹೊಣೆ ನೀಡುವ ಸಾಧ್ಯತೆಗಳಿವೆ.

Published by:Mahmadrafik K
First published: