• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Mysore Palace: ನಾಳೆ ಮೈಸೂರು ಅರಮನೆಗೆ ಹೋಗ್ತಿದ್ದೀರಾ? ಜೂನ್ 21ರವರೆಗೂ ಪ್ಯಾಲೇಸ್‌ಗೆ ನೋ ಎಂಟ್ರಿ!

Mysore Palace: ನಾಳೆ ಮೈಸೂರು ಅರಮನೆಗೆ ಹೋಗ್ತಿದ್ದೀರಾ? ಜೂನ್ 21ರವರೆಗೂ ಪ್ಯಾಲೇಸ್‌ಗೆ ನೋ ಎಂಟ್ರಿ!

ವಿಶ್ವವಿಖ್ಯಾತ ಮೈಸೂರು ಅರಮನೆ (ಚಿತ್ರ ಕೃಪೆ: Internet)

ವಿಶ್ವವಿಖ್ಯಾತ ಮೈಸೂರು ಅರಮನೆ (ಚಿತ್ರ ಕೃಪೆ: Internet)

ಮೈಸೂರು ಪ್ಯಾಲೇಸ್ ನೊಡ್ಬೇಕು ಅಂತ ಅಂದುಕೊಂಡು ತುಂಬಾ ದಿನ ಆಯ್ತಲ್ಲ, ನಾಳೆ ಹೋಗಿ ನೋಡ್ಕೊಂಡು ಬಂದೇ ಬಿಡೋಣ ಅಂತ ಪ್ಲಾನ್ ಮಾಡಿದ್ದೀರಾ? ಹಾಗಿದ್ರೆ ಸ್ವಲ್ಪ ಗಮನವಿಟ್ಟು ಈ ಸುದ್ದಿಯನ್ನು ತಪ್ಪದೇ ಓದಿ…

  • Share this:

ಮೈಸೂರು: ನಾಳೆ ಭಾನುವಾರ (Sunday) ಏಲ್ಲಾದ್ರೂ ಹೊರಗಡೆ (Out Side) ಹೋಗ್ಬೇಕು, ಸಣ್ಣದೊಂದು ಟ್ರಿಪ್ (Trip) ಮಾಡ್ಬೇಕು ಅಂದುಕೊಂಡಿದ್ದೀರಾ? ಅರೇ ಮೈಸೂರು ಪ್ಯಾಲೇಸ್ (Mysuru Palace) ನೊಡ್ಬೇಕು ಅಂತ ಅಂದುಕೊಂಡು ತುಂಬಾ ದಿನ ಆಯ್ತಲ್ಲ, ನಾಳೆ ಹೋಗಿ ನೋಡ್ಕೊಂಡು ಬಂದೇ ಬಿಡೋಣ ಅಂತ ಪ್ಲಾನ್ (Plan) ಮಾಡಿದ್ದೀರಾ? ಹಾಗಿದ್ರೆ ಸ್ವಲ್ಪ ಗಮನವಿಟ್ಟು ಈ ಸುದ್ದಿಯನ್ನು ತಪ್ಪದೇ ಓದಿ… ಯಾಕೆಂದ್ರೆ ನಾಳೆ ನೀವು ಮೈಸೂರು ಅರಮನೆ ನೋಡ್ಬೇಕು ಅಂತ ಪ್ಲಾನ್ ಮಾಡ್ಕೊಂಡು ಹೋದ್ರೆ ನಿಮಗೆ ನಿರಾಶೆಯಾಗೋದು ಗ್ಯಾರೆಂಟಿ. ಹಾಗೆ ಒಂದು ವೇಳೆ ಪ್ಯಾಲೆೇಸ್ ನೋಡೋಕೆ ಅಂತ ಮೈಸೂರಿಗೆ ಹೋದ್ರೆ ಮಹಾದ್ವಾರದ ಬಳಿ ನಿಂತು ಪ್ಯಾಲೇಸ್ ನೋಡಿ ಕಣ್ತುಂಬಿಕೊಂಡು ವಾಪಸ್ ಬರಬೇಕಷ್ಟೇ! ಅರೇ ಇದ್ಯಾಕಪ್ಪಾ, ಮೈಸೂರು ಅರಮನೆ ಒಳ ಪ್ರವೇಶಕ್ಕೆ (Entry) ಯಾಕಿಲ್ಲ ಅವಕಾಶ? ನಾಳೆ ಮೈಸೂರಲ್ಲಿ ಅಂಥಾದ್ದೇನಿದೆ ಅಂದ್ರಾ? ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ ಓದಿ…


 ನಾಳೆಯಿಂದ 21ರವರೆಗೆ ಮೈಸೂರು ಅರಮನೆಗೆ ಪ್ರವೇಶವಿಲ್ಲ


 ನಾಳೆಯಿಂದ ಅದರೆ ಭಾನುವಾರ, ಜೂನ್ 19ರಿಂದ ಜೂನ್ 21 ಅಂದರೆ ಮಂಗಳವಾರದವರೆಗೆ ಮೈಸೂರಿನ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ ಅಥವಾ ಮೈಸೂರು ಅರಮನೆಗೆ ಯಾವುದೇ ಪ್ರವಾಸಿಗರಿಗೆ ಒಳಗಡೆ ಪ್ರವೇಶ ಇರುವುದಿಲ್ಲ.


ಮೋದಿ ಆಗಮನ ಹಿನ್ನೆಲೆಯಲ್ಲಿ ಬಿಗಿ ಭದ್ರತೆ


ಜೂನ್ 21ರಂದು ವಿಶ್ವದ ಎಲ್ಲೆಡೆ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಕೇಂದ್ರ ಸರ್ಕಾರದಿಂದ ಆಯೋಜಿಸಲ್ಪಡುವ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ದಿನಾಚರಣೆ ಈ ಬಾರಿ ಮೈಸೂರು ಅರಮನೆಯಲ್ಲಿ ನಡೆಯಲಿದೆ. ಹೀಗಾಗಿ ಅರಮನೆಗೆ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ನಾಳೆಯಿಂದ ಜೂನ್ 21ರ ಮಧ್ಯಾಗ್ನ 12 ಗಂಟೆವರೆಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.


ಇದನ್ನೂ ಓದಿ: Explained: ಕನ್ನಡಿಗರು ಬೆಳಗೆದ್ದು ನೆನೆಯಲೇ ಬೇಕಾದ ನಾಲ್ವಡಿ ಕೃಷ್ಣರಾಜ ಒಡೆಯರ್, 'ರಾಜರ್ಷಿ' ಹೆಜ್ಜೆ ಗುರುತು ಇಲ್ಲಿದೆ


ಅರಮನೆ ಆವರಣದಲ್ಲಿ ಯೋಗ ದಿನಾಚರಣೆ


ಈ ಬಾರಿ ಮೈಸೂರು ಅರಮನೆ ಆವರಣದಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ಅದಕ್ಕಾಗಿ ಪೂರ್ವ ಸಿದ್ಧತೆ ಕೈಗೊಳ್ಳಬೇಕಿರುವುದರಿಂದಾಗಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಅರಮನೆ ಆವರಣದಲ್ಲಿ ನಡೆಯುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನೂ ಶುಕ್ರವಾರದಿಂದ ಜೂನ್ 22ರವರೆಗೆ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು ಅರಮನೆ ಆಡಳಿತ ಮಂಡಳಿ ತಿಳಿಸಿದೆ.


ಅರಮನೆಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ


ಯೋಗಾಭ್ಯಾಸದ ನಂತರ ಮೈಸೂರು ಅರಮನೆಯಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಯಲಿದ್ದು, ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಆಹ್ವಾನ‌ದ ಮೇರೆಗೆ ಪ್ರಧಾನಿ ಮೋದಿ ಅರಮನೆಗೆ ಭೇಟಿ ನೀಡಲಿದ್ದಾರೆ. ಸುಮಾರು ಒಂದು ಗಂಟೆಗಳ‌ ಕಾಲ ಅರಮನೆಯಲ್ಲಿ ರಾಜ ವಂಶಸ್ಥರ ಜೊತೆ ಪ್ರಧಾನಿ ಮೋದಿ ಮಾತುಕತೆ ನಡೆಸಲಿದ್ದಾರೆ ಅಂತ ಮೂಲಗಳು ತಿಳಿಸಿವೆ.


ಇದನ್ನೂ ಓದಿ: Mysuru: ಟಾಟಾ ತೆಕ್ಕೆಗೆ ಪಾರಂಪರಿಕ ಲಲಿತಮಹಲ್ ಪ್ಯಾಲೇಸ್? ಖಾಸಗಿ ಒಡೆತನಕ್ಕೆ ಪಂಚತಾರಾ ಹೋಟೆಲ್?


ಮೋದಿ ಜೊತೆ ವೇದಿಕೆ ಮೇಲೆ ಯದುವೀರ್ ಯೋಗ


8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ವೇಳೆ ಅರಮನೆ ಆವರಣದಲ್ಲಿ ನಡೆಯಲಿರುವ ಬೃಹತ್ ಯೋಗ ಪ್ರದರ್ಶನ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಪಾಲ್ಗೊಳ್ಳಲು ಮೈಸೂರು ರಾಜವಂಶಸ್ಥರಿಗೆ ಆಹ್ವಾನ ನೀಡಲಾಗಿದೆ. ಈ ಹಿಂದೆ ಯೋಗ ವೇದಿಕೆಗೆ ಐವರಿಗೆ ಮಾತ್ರ ಅವಕಾಶ ಎಂದು ಮೈಸೂರು ಜಿಲ್ಲಾಡಳಿತ ತಿಳಿಸಿತ್ತು. ಪ್ರಧಾನಮಂತ್ರಿ,‌ ಸಿಎಂ, ರಾಜ್ಯಪಾಲರು, ಜಿಲ್ಲಾ ಉಸ್ತುವಾರಿ‌ ಹಾಗೂ ಕೇಂದ್ರ ಆಯುಷ್ ಮಂತ್ರಿಗಳು‌ ಯೋಗಾಭ್ಯಾಸದಲ್ಲಿ‌ ಪಾಲ್ಗೊಳ್ಳಲಿದ್ದು, ಇದೀಗ ರಾಜ್ಯ ಸರ್ಕಾರ ಗಣ್ಯರ ಪಟ್ಟಿಯಲ್ಲಿ ಮೈಸೂರು ಮಹಾರಾಜ ಯದುವೀರ್ ಒಡೆಯರ್ ಹಾಗೂ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರ ಹೆಸರನ್ನೂ ಸೇರಿಸಿದೆ.

Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು