ಧಾರವಾಡ (ಜೂ 21): ಕಾಲ ಬದಲಾದ್ರು ಸಂಪ್ರದಾಯಗಳು (Tradition) ಮಾತ್ರ ಅಚ್ಚಳಿಯದೇ ಪಾಲನೆ ಮಾಡುತ್ತಿವೆ ಬರುತ್ತಿವೆ ನಮ್ಮ ಗ್ರಾಮೀಣ ಭಾಗದ (Rural Side) ಜನತೆ. ಹಬ್ಬಹರಿದಿನಗಳು, ಜಾತ್ರೆಗಳು ಬಂದ್ರೆ ಸಾಕು ಹಿರಿಯರು ಪಾಲನೆಮಾಡಿಕೊಂಡ ಬಂದ ಸಂಪ್ರದಾಯಗಳನ್ನು ಪಾಲನೆ ಮಾಡುತ್ತ ಬರುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಧಾರವಾಡ ಜಿಲ್ಲೆ ಸಲಕಿನಕೊಪ್ಪ ಗ್ರಾಮಸ್ಥರು ಯಾರು ಚಪ್ಪಲಿ ಹಾಕುವಂತಿಲ್ಲ, ಮನೆಯಲ್ಲಿ ಅಡುಗೆ ಮಾಡುವಂತೆಯು ಸಹ ಇಲ್ಲ, ಮದ್ಯಪಾನ (Alcohol) ಮಾಡುವಂತಿಲ್ಲ ಹಾಗೂ ಮಾರಾಟ ಮಾಡುವಂತಿಲ್ಲ. ನೆರೆದ ನೆಂಟರೆಲ್ಲ ಗ್ರಾಮಸ್ಥರು ಹಾಕಿದ ಸಂಪ್ರದಾಯವನ್ನು ಪಾಲಿಸಲೇಬೇಕು. ಇದು ನೂರು ವರ್ಷದ ಬಳಿಕ ನಡೆಯುತ್ತಿರುವ ದೇವು ಜಾತ್ರೆ ನಡೆಯುತ್ತಿರೊ ಹಿನ್ನೆಲೆ ಗ್ರಾಮಸ್ಥರು ಮಾಡಿರೊ ಸಂಪ್ರದಾಯವನ್ನು ಯಾರೊಬ್ಬರು ವಿರೋಧಿಸುವಂತಿಲ್ಲ. ಇದು ಎಲ್ಲರು ಕಡ್ಡಾಯವಾಗಿ ಪಾಲಿಸಬೇಕು ಇಲ್ಲವಾದಲ್ಲಿಸಾವಿರಾರು ರೂಪಾಯಿ ದಂಡ (Penalty) ಕಟ್ಟಬೇಕು.
ನೂರು ವರ್ಷಗಳ ಬಳಿಕ ಜಾತ್ರೆ ಸಡಗರ
ಧಾರವಾಡ ತಾಲೂಕಿ ಸಲಕಿನಕೊಪ್ಪ ಗ್ರಾಮದಲ್ಲಿ ನಡೆದ ದ್ಯಾಮವ್ವ-ದುರ್ಗವ್ವನ ಜಾತ್ರೆಯು ಕಳೆದ ನೂರು ವರ್ಷಗಳ ಹಿಂದೆ ಜಾತ್ರೆ ಮಾಡಲಾಗಿತ್ತು ಎನ್ನಲಾಗುತ್ತಿದೆ. ಅದೇ ರೀತಿ ಈಗ ಮತ್ತೆ ಗ್ರಾಮದೇವತೆ ದ್ಯಾಮವ್ವ ದುರ್ಗವ್ವನ ಜಾತ್ರೆ ನಡೆಯುತ್ತಿದೆ. ಈ ಜಾತ್ರೆಯ ಸಂಭ್ರಮ ನೋಡುವುದು ಅಂದ್ರೆ ಎಲ್ಲರಿಗೂ ತುಂಬಾನೆ ಖುಷಿ. ಜಾತ್ರೆ ನಿಮಿತ್ತ ಊರಿನಲ್ಲಿ ಬಣ್ಣದೋಕುಳಿ ಮಾದರಿಯಲ್ಲಿಯೇ ಪರಸ್ಪರ ಒಬ್ಬರಿಗೊಬ್ಬರು ಭಂಡಾರ ಎರಚಿಕೊಂಡು ಸಂಭ್ರಮ ಪಡುತ್ತಾರೆ. ಮಹಿಳೆಯರು, ಮಕ್ಕಳು, ಹಿರಿಯರು ಎಲ್ಲರೂ ಜಾತಿ ಬೇಧ ಭಾವವಿಲ್ಲದೇ ಈ ಸಂಭ್ರಮದಲ್ಲಿ ತೊಡಗುತ್ತಾರೆ.
ಇಲ್ಲಿ ಇನ್ನೊಂದು ವಿಶೇಷ ಅಂದ್ರೆ ಗ್ರಾಮದ ಯಾವುದೇ ಮನೆಯಲ್ಲಿ ಯಾರೂ ಕೂಡ ಒಲೆಯನ್ನು ಹಚ್ಚುವುದಿಲ್ಲಾ. ಆದ್ರೆ ಅಡುಗೆ ಮಾಡುವ ಹಾಗಿಲ್ಲ. ಊರಿನ ಎಲ್ಲಾ ಗ್ರಾಮಸ್ಥರು ಒಂದು ಕಡೆ ಸೇರಿ ಅಡುಗೆಯನ್ನು ತಯಾರಿಸಿಕೊಂಡು ಉಪಹಾರ, ಊಟ ಮಾಡುತ್ತಾರೆ. ಇದರ ಜೊತೆಗೆನೆ ಜಾತ್ರೆಯ ಸಂದರ್ಭದಲ್ಲಿ ಯಾರೂ ಕೂಡ ಗ್ರಾಮಸ್ಥರು ಕಾಲಿನಲ್ಲಿ ಚಪ್ಪಲಿಯನ್ನು ಹಾಕುವುದಿಲ್ಲಾ. ಹಾಗೆನಾದ್ರೂ ಚಪ್ಪಲಿ ಹಾಕಿದ್ರೆ, ಮದ್ಯಪಾನ ಮಾಡಿದ್ರೆ ಅವರಿಗೆ ಕೆಡಾಗುವುದು ಗ್ಯಾರಂಟಿ. ಅಷ್ಟೆ ಅಲ್ಲ ದಂಡವನ್ನು ಸಹ ಕಟ್ಟಬೇಕು. ಇದು ಹಿರಿಯರ ಕಾಲದಿಂದಲೂ ನಡೆದುಕೊಂಡ ಬಂದ ಸಂಪ್ರದಾಯವಾಗಿದೆ.
ಇದನ್ನೂ ಓದಿ: Shoot Out: ಮೂರು ತಿಂಗಳಿಂದ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಕೊಲೆ ಆರೋಪಿಯ ಮೇಲೆ ಫೈರಿಂಗ್!
ಹೊಸ ದೇವಸ್ಥಾನ ನಿರ್ಮಾಣ
ನಮ್ಮ ಹಿರಿಯರ ಕಾಲದಲ್ಲಿ ದೇವೆತೆಗಳ ಮೂರ್ತಿ ತಯಾರಿಸಲಾಗಿತ್ತು. ಅವುಗಳಿಗೆ ಹೊಸದಾಗಿ ಬಣ್ಣ ಹಚ್ಚಿ ಹೊಸ ದೇವಸ್ಥಾನ ನಿರ್ಮಾಣ ಮಾಡು ದೇವಿಯ ಜಾತ್ರೆ ಮಾಡಬೆಕೆಂದು ಗ್ರಾಮಸ್ಥರು ತೀರ್ಮಾಮಾಡಿದೇವು. ಅದೇ ರೀತಿ ಗ್ರಾಮಸ್ಥರೆಲ್ಲ ಪಟ್ಟಿ ಎತ್ತಿ ದೇವಸ್ಥಾನ ಕಟ್ಟಿ, ದೇವಿಯರಮೂರ್ತಿಗಳಿ ಬಣ್ಣ ಹಚ್ಚಿ ಈ ವರ್ಷ ಜಾತ್ರೆ ಮಾಡುತ್ತಿದ್ದೆವೆ.
ಒಂಬತ್ತು ದಿನಗಳ ಕಾಲ ಜಾತ್ರೆ ನಡೆಯುತ್ತಿದ್ದು, ಮೂರು ದಿನ ಹೊನ್ನಾಟ ಅಂದ್ರೆ ಭಂಡಾರ ಓಕುಳಿ ಆಡುವುದು. ಬಳಿಕ ದೇವತೆಗಳಿಗೆ ಉಡಿ ತುಂಬ ಕಾರ್ಯ ಸಹ ನಡೆಯುತ್ತದೆ. ಪ್ರತಿದಿನ ಪ್ರವಚನ, ದೇವತೆಗಳ ಪುರಾಣ ಹಚ್ಚಲಾಗುತ್ತಿದೆ. ನಮ್ಮ ಅಜ್ಜನ ಕಾಲದಲ್ಲಿನಡೆದ ಜಾತ್ರೆ ಈಗ ನಾವು ಜಾತ್ರೆ ಮಾಡುತ್ತಿರೊದು ಸಂತಸ ತಂದೆ. ಈ ಜಾತ್ರೆ ಮಾಡೊದ್ರಿಂದ ನಮ್ಮೂರಿಗೆ ಒಳಿತಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರಾದ ಕಿರಣ.
ಇದನ್ನೂ ಓದಿ: Investigation Report: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮ; 600 ಪುಟಗಳ ತನಿಖಾ ವರದಿ ಸಲ್ಲಿಕೆ
ಈ ವಿಶೇಷವಾದ ಜಾತ್ರೆಯಲ್ಲಿ ಮಕ್ಕಳು, ಹಿರಿಯರು ತಮ್ಮ ವಯಸ್ಸಿನ ತಾರತಮ್ಯವಿಲ್ಲದೇ ಎಲ್ಲರೂ ಒಂದೇ ವಯಸ್ಸಿನವರು ಎಂದು ಕೊಂಡು ಜಾತ್ರೆಯನ್ನು ಆನಂದಿಸುತ್ತಾರೆ. ನೀಜಕ್ಕೂ ಈಗಿನ ಆಧುನಿಕ ಯುಗದಲ್ಲಿ ಇಂತಹ ಸಂಪ್ರಾದಯಿಕ ಜಾತ್ರೆಯನ್ನು ನಮ್ಮ ನಡುವೆ ಆಚರಿಸುತ್ತಾರೆ ಎಂದ್ರೆ ಒಂದು ರೀತಿಯ ಹೆಮ್ಮೆಯ ವಿಷಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ