Pushpa: ಪುಷ್ಪ ಸಿನಿಮಾ ರೀತಿಯಲ್ಲೇ ಕೋಲಾರದಲ್ಲಿ ರಕ್ತಚಂದನ ಸಾಗಾಟ! ಹೇಗಿತ್ತು ಆಪರೇಷನ್?

ಪುಷ್ಪ ಸಿನಿಮಾ ಮಾದರಿಯಲ್ಲೇ ಕೋಲಾರದಲ್ಲಿ ರಕ್ತಚಂದನ ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ. ಪುಷ್ಪ ಸಿನಿಮಾದಲ್ಲಿ ಹಾಲಿನ ಲಾರಿಯಲ್ಲಿ ರಕ್ತಚಂದನ ಸಾಗಿಸಲಾಗುತ್ತೆ. ಇಲ್ಲಿ ಟೊಮ್ಯಾಟೋ ಲಾರಿಯಲ್ಲಿ ಅಕ್ರಮವಾಗಿ ರಕ್ತಚಂದನ ಸಾಗಾಟ ಮಾಡಲಾಗುತ್ತಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಿನಿಮಾಗಳು (Cinema) ಮನುಷ್ಯನ ಜೀವನದಲ್ಲಿ ಪ್ರಭಾವ (Impact) ಬೀರುತ್ತೆ. ಅದರಲ್ಲೂ ಇತ್ತೀಚೆಗೆ ರಿಲೀಸ್​ ಆದ ಅಲ್ಲು ಅರ್ಜುನ್ (Allu Arjun) ನಟನೆಯ ಪುಷ್ಪ ಸಿನಿಮಾದ (Pushpa Movie) ರೀತಿಯಲ್ಲೇ ಹಲವು ಕಡೆ ರಕ್ತಚಂದನ (Red Sandalwood), ಇತರ ವಸ್ತುಗಳ ಸಾಗಾಟ ಪ್ರಕರಣ ಪತ್ತೆಯಾಗಿತ್ತು. ಇಡೀ ಸಿನಿಮಾ ರಕ್ತಚಂದನದ ಕಥಾಹಂದರ ಹೊಂದಿದ್ದು, ಚಿತ್ರದಲ್ಲಿ ಹಾಲಿನ ಲಾರಿಯಲ್ಲಿ ರಕ್ತಚಂದನ ಸಾಗಿಸಲಾಗುತ್ತೆ. ಈಗ ಅದೇ ರೀತಿಯ ಘಟನೆ ಕೋಲಾರದಲ್ಲಿ ನಡೆದಿದೆ. ಟೊಮ್ಯಾಟೋ (Tomato) ಬಾಕ್ಸ್ ಕೆಳಗೆ ರಕ್ತಚಂದನ ಸಾಗಿಸ್ತಿದ್ದ ಇಬ್ಬರನ್ನು ರೋಚಕ ರೀತಿಯಲ್ಲಿ ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ ಬರೋಬ್ಬರಿ 80 ಲಕ್ಷ ಮೌಲ್ಯದ ರಕ್ತಚಂದನವನ್ನು ವಶಪಡಿಸಿಕೊಳ್ಳಲಾಗಿದೆ. ಚೆನ್ನೈನಿಂದ ಬೆಂಗಳೂರಿಗೆ ರಕ್ತಚಂದನ ರವಾನಿಸುತ್ತಿದ್ದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಪುಷ್ಪ ಸಿನಿಮಾ ಮಾದರಿಯಲ್ಲೇ ಕೋಲಾರದಲ್ಲಿ ರಕ್ತಚಂದನ ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ. ಪುಷ್ಪ ಸಿನಿಮಾದಲ್ಲಿ ಹಾಲಿನ ಲಾರಿಯಲ್ಲಿ ರಕ್ತಚಂದನ ಸಾಗಿಸಲಾಗುತ್ತೆ. ಇಲ್ಲಿ ಟೊಮ್ಯಾಟೋ ಲಾರಿಯಲ್ಲಿ ಅಕ್ರಮವಾಗಿ ರಕ್ತಚಂದನ ಸಾಗಾಟ ಮಾಡಲಾಗುತ್ತಿತ್ತು.

ಟೊಮ್ಯಾಟೋ ಲಾರಿಯಲ್ಲಿ ರಕ್ತಚಂದನ ಸಾಗಾಟ!

ಚೆನ್ನೈನಿಂದ ಬೆಂಗಳೂರಿನ ಹೊಸಕೋಟೆಗೆ ರಕ್ತಚಂದನ ಸಾಗಾಟ ಮಾಡಲಾಗ್ತಿತ್ತು. ಮೇಲ್ಗಡೆ ಟೊಮ್ಯಾಟೋ ಇಟ್ಟು ಕೆಳಗೆ ರಕ್ತಚಂದನವನ್ನು ಸಾಗಾಟ ಮಾಡಲಾಗ್ತಿತ್ತು. ನೋಡುವವರಿಗೆ ಟೊಮ್ಯಾಟೋ ಕಾಣುವಂತೆ ಮಿನಿ ಲಾರಿಯಲ್ಲಿ ರಕ್ತಚಂದನವನ್ನು ರವಾನಿಸಲಾಗುತ್ತಿತ್ತು. ಈ ಬಗ್ಗೆ ನಿಖರ ಮಾಹಿತಿಯನ್ನಾಧರಿಸಿ ಪೊಲೀಸರು ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಪ್ರಿಯಕರನೊಂದಿಗೆ ಮೂರು ಮಕ್ಕಳ ತಾಯಿ ಎಸ್ಕೇಪ್, ಮನೆಯಲ್ಲಿದ್ದ ಕಂದಮ್ಮಗಳ ಪಾಲಿಗೆ ತಂದೆಯೇ ಯಮನಾದ!

ಚೆನ್ನೈನಿಂದ ಬೆಂಗಳೂರು ಹೊರವಲಯವಾದ ಹೊಸಕೋಟೆಗೆ ರವಾನಿಸುವಾಗ ಕೋಲಾರದಲ್ಲಿ ಆರೋಪಿಗಳು ಸಿಕ್ಕಿಹಾಕಿಕೊಂಡಿದ್ದಾರೆ. ಕೋಲಾರದ ಮಾಲೂರು ವಲಯ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

80 ಲಕ್ಷ ಮೌಲ್ಯದ ರಕ್ತಚಂದನ ವಶ

ಪ್ರಕರಣ ಸಂಬಂಧ ಅರಣ್ಯ ಇಲಾಖೆಯ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಬರೋಬ್ಬರಿ 800 ಕೆ.ಜಿ ತೂಕದ ಸುಮಾರು 80 ಲಕ್ಷ ಮೌಲ್ಯದ ರಕ್ತಚಂದನವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಮಿನಿ ಲಾರಿಯಲ್ಲಿ ರಕ್ತಚಂದನ ಸಾಗಿಸುತ್ತಿದ್ದರು.

ಬಂಧಿತರಿಂದ ರಕ್ತಚಂದನ ಸಾಗಿಸುತ್ತಿದ್ದ ಮಿನಿ ಟೆಂಪೋವನ್ನು ವಶಕ್ಕೆ ಪಡೆಯಲಾಗಿದೆ. ತಮಿಳುನಾಡು ಮೂಲದ ಉದಯಮೂರ್ತಿ, ಕೋಲಾರ ಮೂಲದ ರಮೇಶ್ ಬಂಧಿತ ಆರೋಪಿಗಳು. ರಕ್ತಚಂದನ ನಿಗದಿತ ಸ್ಥಳವಾದ ಹೊಸಕೋಟೆಗೆ ತಲುಪುವ ಸನಿಹದಲ್ಲೇ ಖೆಡ್ಡಾಕ್ಕೆ ಕೆಡವಲಾಗಿದೆ. ಈ ಮೂಲಕ ದೊಡ್ಡ ಜಾಲವನ್ನು ಅರಣ್ಯ ಇಲಾಖೆ ಭೇದಿಸಿದೆ.

ಅಸಿಸ್ಟೆಂಟ್ ಪ್ರೊಫೆಸರ್​​ನಿಂದ ವಿದ್ಯಾರ್ಥಿನಿಗೆ ಕಿರುಕುಳ!

ರಾಮನಗರದ ಮಾಗಡಿಯಲ್ಲಿ ವಿದ್ಯೆ ಹೇಳಿಕೊಡುವ ಗುರುವೇ ವಿದ್ಯಾರ್ಥಿನಿ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ರಾಮನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕಿರುಕುಳ ಕೊಟ್ಟಿದ್ದಾನೆ. ಅರ್ಥಶಾಸ್ತ್ರ ವಿಭಾಗದ ಡಾ. ರಾಮಕೃಷ್ಣ.ಹೆಚ್.ಆರ್ ಎಂಬಾತ ವಿದ್ಯಾರ್ಥಿನಿಗೆ ವಾಟ್ಸಪ್​ನಲ್ಲಿ ಅಶ್ಲೀಲ ಮೆಸೇಜ್ ಕಳಿಸಿದ್ದಾನೆ.

ಇದನ್ನೂ ಓದಿ: ಯೂಟ್ಯೂಬ್​ ಜಾಹೀರಾತು ನೋಡ್ತೀರಾ? ಇಲ್ನೋಡಿ ತಂದೆ-ಮಗ ಮೋಸ ಹೋದ ಕಥೆ!

ಅಸಿಸ್ಟೆಂಟ್ ಪ್ರೊಫೆಸರ್ ರಾಮಕೃಷ್ಣ ಎಸ್ಕೇಪ್!

ಒಂದು ತಿಂಗಳ ಹಿಂದೆ ವಿದ್ಯಾರ್ಥಿನಿ ಕಾಲೇಜಿಗೆ ಸೇರಿದ್ದಳು. ಅಷ್ಟರಲ್ಲಾಗಲೇ ಈತ ಟಾರ್ಚರ್ ಕೊಟ್ಟಿದ್ದಾನೆ. ವಾಟ್ಸಪ್​ನಲ್ಲಿ ಅಸಭ್ಯವಾಗಿ ಮೆಸೇಜ್ ಮಾಡಿದ್ದಾನೆ. ಈ ಬಗ್ಗೆ ಪೋಷಕರು, ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ. ಕಾಲೇಜಿಗೆ ವಿದ್ಯಾರ್ಥಿನಿಯ ಪೋಷಕರು ಆಗಮಿಸುತ್ತಿದ್ದಂತೆ ಪ್ರಾಧ್ಯಾಪಕ ರಾಮಕೃಷ್ಣ ಎಸ್ಕೇಪ್ ಆಗಿದ್ದಾನೆ.

ಇದೇ ರೀತಿ ಕಳೆದ ವರ್ಷ ಕೂಡ ಮತ್ತೊಬ್ಬ ವಿದ್ಯಾರ್ಥಿನಿಗೆ ಅಸಿಸ್ಟೆಂಟ್​ ಪ್ರೊಫೆಸರ್​​ ರಾಮಕೃಷ್ಣ ಟಾರ್ಚರ್ ಕೊಟ್ಟಿದ್ದ. ಹಾಗಾಗಿ ಆ ವಿದ್ಯಾರ್ಥಿನಿ ಕಾಲೇಜಿನಿಂದ ಟಿಸಿ ಪಡೆದು ಬೇರೆ ಕಾಲೇಜಿಗೆ ದಾಖಲಾಗಿದ್ದಳು. ಇದೀಗ ಮತ್ತೊಬ್ಬ ವಿದ್ಯಾರ್ಥಿನಿಗೆ ಮೆಸೇಜ್​ ಮೂಲಕ ಟಾರ್ಚರ್ ಕೊಟ್ಟಿದ್ದು, ಈಕೆಯೂ ಬೇರೆ ಕಾಲೇಜು ಸೇರಲು ತೀರ್ಮಾನ ಮಾಡಿದ್ದಾಳೆ.
Published by:Thara Kemmara
First published: