Heavy Rain: ಕಾಫಿನಾಡಿನ ಇತಿಹಾಸದಲ್ಲೇ ಒಂದು ಗಂಟೆಯಲ್ಲಿ 200 ಮಿಮೀ ಮಳೆ! ಚಿಕ್ಕಮಗಳೂರಿನ ಜನ ತತ್ತರ

ಚಿಕ್ಕಮಗಳೂರು ಜಿಲ್ಲೆಯ ಇತಿಹಾಸದಲ್ಲೇ ದಾಖಲೆಯ ಮಳೆ ಕಳೆದ ರಾತ್ರಿ ಸುರಿದಿದೆ. ಕೇವಲ 1 ಗಂಟೆಯಲ್ಲಿ ಸಾರಗೋಡು ಗ್ರಾಮದಲ್ಲಿ 200 ಮಿಲಿ ಮೀಟರ್ ಮಳೆಯಾಗಿದ್ದು, ರಣರಕ್ಕಸ ಮಳೆಗೆ ಕಾಫಿನಾಡಿಗರು ಬೆಚ್ಚಿ ಬಿದ್ದಿದ್ದಾರೆ. ಸಾರಗೋಡಿ ಗ್ರಾಮದಲ್ಲಿ ಒಂದೇ ಗಂಟೆಯಲ್ಲಿ ಹಿಂದೆಂದೂ ಕಾಣದ 200 ಮಿಲಿಮೀಟರ್ ಗೂ ಅಧಿಕ ವರ್ಷಧಾರೆಯಾಗಿದೆ.

ಚಿಕ್ಕಮಗಳೂರಲ್ಲಿ ಭಾರೀ ಮಳೆ

ಚಿಕ್ಕಮಗಳೂರಲ್ಲಿ ಭಾರೀ ಮಳೆ

  • Share this:
ಚಿಕ್ಕಮಗಳೂರು: ಜಿಲ್ಲೆಯ ಇತಿಹಾಸದಲ್ಲೇ (in history) ದಾಖಲೆಯ ಮಳೆ (Rain) ಕಳೆದ ರಾತ್ರಿ ಸುರಿದಿದೆ. ಕೇವಲ 1 ಗಂಟೆಯಲ್ಲಿ ಸಾರಗೋಡು ಗ್ರಾಮದಲ್ಲಿ 200 ಮಿಲಿ ಮೀಟರ್ ಮಳೆಯಾಗಿದ್ದು, ರಣರಕ್ಕಸ ಮಳೆಗೆ ಕಾಫಿನಾಡಿಗರು ಬೆಚ್ಚಿ ಬೆರಗಾದರು, ಸಾರಗೋಡಿ ಗ್ರಾಮದಲ್ಲಿ ಒಂದೇ ಗಂಟೆಯಲ್ಲಿ ಹಿಂದೆಂದೂ ಕಾಣದ  200 ಮಿಲಿಮೀಟರ್‌ಗೂ ಅಧಿಕ ವರ್ಷಧಾರೆಯಾಗಿದೆ, ಸಾರಗೋಡು, ಹುಯಿಗೆರೆ ಸುತ್ತಮುತ್ತ ಸಹಾ ಕಳೆದ ರಾತ್ರಿ ಭಾರೀ ಮಳೆ ಸುರಿದಿದೆ. ರಸ್ತೆ ಮೇಲೆ ನದಿಯಂತೆ ಮಳೆ ನೀರು ಹರಿದಿದ್ದು, ಹಲವೆಡೆ ಮನೆಗಳಿಗೂ ನೀರು ನುಗ್ಗಿದ್ದು, ಕಾಂಪೌಂಡ್ ಗಳು ಕುಸಿತಗೊಂಡಿವೆ, ದಾಖಲೆ ಪ್ರಮಾಣದ ಮಳೆ ಕಂಡು ಸ್ಥಳೀಯರು ಕಂಗಾಲಾಗಿದ್ದಾರೆ. ಈ ನಡುವೆ ಕಳಸಾಪುರ ಗ್ರಾಮದ ಹೃದಯ ಭಾಗದಲ್ಲೇ ನದಿಯೊಂದು (River) ಸೃಷ್ಠಿಯಾಗಿದೆ, ವರುಣನ ಆರ್ಭಟಕ್ಕೆ ಅರ್ಧಕರ್ಧ ಗ್ರಾಮವೇ ಮುಳುಗಡೆ ಆಗಿದೆ, ಕಳಸಾಪುರ ಗ್ರಾಮದಲ್ಲಿ ಕಳೆದ ರಾತ್ರಿ ವರುಣ ಅಬ್ಬರಿಸಿದ್ದಾನೆ. ಇದರಿಂದಾಗಿ ಗ್ರಾಮದ ಹಲವು ರಸ್ತೆ (Road) ಮನೆಗಳು (House) ಜಲಾವೃತಗೊಂಡಿವೆ ಇದ್ದಕ್ಕಿದ್ದಂತೆ ಸುರಿದ ಭಾರಿ ಮಳೆಗೆ ಜನ ಕಂಗಾಲಾಗಿದ್ದು, ನೋಡ ನೋಡುತ್ತಿದ್ದಂತೆ ಗ್ರಾಮದ ರಸ್ತೆಗಳು ನದಿಯಂತಾಗಿದ್ದು ಗ್ರಾಮ ಅಂಚಿನ ಶೆಟ್ಟಿಕೆರೆ ಕೋಡಿ ಬಿದ್ದ ಹಿನ್ನೆಲೆ ಈ ಅನಾಹುತ ಸಂಭವಿಸಿದೆ ರಸ್ತೆಯ ಮೇಲೆ ಭೋರ್ಗರಿಯುತ್ತಿರೋ ಮಳೆಯ ನೀರು ಗ್ರಾಮದಲ್ಲಿ ಇತಿಹಾಸದಲ್ಲೇ ಕಂಡು ಕೇಳರಿಯದ ಮಳೆಗೆ ಸಾಕ್ಷಿಯಾಗಿದೆ.

ಗ್ರಾಮದ ಮಧ್ಯವೇ ಕೃತಕ ನದಿ ಸೃಷ್ಟಿ

ಗ್ರಾಮದ ಹೃದಯ ಭಾಗದಲ್ಲಿ ಕೃತಕ ನದಿ ಸೃಷ್ಟಿಯಾದಂತಾಗಿದೆ , ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಶೆಟ್ಟಿಕೆರೆ ಗ್ರಾಮದ ಕೆರೆ ನೀರು ಅಪಾಯಕ್ಕೆ ಕಾದು ಕುಳಿತಿದೆ. ಇದರಿಂದಾಗಿ ಕಳಸಾಪುರ ಗ್ರಾಮದಲ್ಲಿ ಭಯ ಆತಂಕ ಸೃಷ್ಟಿಯಾಗಿದೆ. ನೆರೆಗೆ ಕಂಗಾಲಾದ ಸಾವಿರಾರು ಜನರು ಭೀತಿ ವ್ಯಕ್ತಪಡಿಸಿದ್ದಾರೆ, ತಡರಾತ್ರಿಯಿಂದ ಸುರಿದ ಭಾರಿ ಮಳೆಗೆ ಕಳಸಾಪುರ ಗ್ರಾಮ ತತ್ತರವಾಗಿದ್ದು, ಬಿಟ್ಟು ಬಿಡದೆ ಸುರಿದ ಮಳೆಗೆ ಇಡೀ ಗ್ರಾಮವೇ ಜಲಾವೃತವಾಗಿದೆ, ಸದ್ಯ ಮಳೆ ಬಿಡುವು ಕೊಟ್ಟರು ನಿಲ್ಲದ ನೆರೆ ಆತಂಕ ಸಹಾ ಭಯ ಉಂಟುಮಾಡಿದೆ , ಶೆಟ್ಟಿ ಕೆರೆಯಿಂದ ಹರಿದ ನೀರು ಮುಂಜಾನೆಯಿಂದ ನೆರೆಯಿಂದ ಗ್ರಾಮಸ್ಥರು  ಕಂಗಾಲಾಗುವಂತೆ ಮಾಡಿದೆ, ಗ್ರಾಮದ ಹೃದಯ ಭಾಗದಲ್ಲಿ ಭೋರ್ಗರೆಯುತ್ತಿರುವ ಕೋಡಿ ನೀರು ಜನರ ಕಣ್ಣೆದುರೇ ಹೋಗುತ್ತಿರುವ ಮರದ ದಿಮ್ಮಿಗಳು ಮಳೆಯ ಆರ್ಭಟಕ್ಕೆ ಸಾಕ್ಷಿ ಆಗಿವೆ.

ಮಳೆಯಿಂದಾಗಿ ಮನೆಗಳಿಗೆ ಹಾನಿ

ಕಾಫಿನಾಡಿನಲ್ಲಿ ಸೋಮವಾರ ರಾತ್ರಿ ಭಾರೀ ಮಳೆಯಾಗಿದ್ದು, ಅವಾಂತರಗಳನ್ನು ಸೃಷ್ಟಿಸಿದೆ. ಮೂಡಿಗೆರೆ ತಾಲ್ಲೂಕು ಮತ್ತು ತರೀಕೆರೆ ತಾಲ್ಲೂಕಿನಲ್ಲಿ 4 ಮನೆಗಳಿಗೆ ಹಾನಿಯಾಗಿದೆ. ಭಾರೀ ಮಳೆಗೆ ಮೂಡಿಗೆರೆ ತಾಲ್ಲೂಕು ಫಲ್ಗುಣಿ, ಹಳೆಕೋಟೆ, ಹೆಸ್ಗಲ್ ತರೀಕೆರೆ ತಾಲ್ಲೂಕು ಅರುಣಳ್ ಗ್ರಾಮದಲ್ಲಿ ಮನೆ ಕುಸಿದಿವೆ. ಸಾರಗೋಡು ಗ್ರಾಮದಲ್ಲಿ ಒಂದು ಗಂಟೆಗಳ ಕಾಲದಲ್ಲಿ 200 ಮಿ.ಮೀ. ಮಳೆಯಾಗಿದ್ದು ಭಾರೀ ಮಳೆಯಿಂದ ಕಾಫಿನಾಡಿಗರು ಬೆಚ್ಚಿ ಬಿದಿದ್ದಾರೆ.

ಇದನ್ನೂ ಓದಿ: Bengaluru Rain: ಮುಳುಗಿದ ಬೆಂಗಳೂರು ನಗರದ ಮತ್ತಷ್ಟು ಚಿತ್ರಗಳನ್ನು ನೋಡಿ

ಪರದಾಡುತ್ತಿರುವ ಜನರು

ಸಾರಗೋಡು, ಹುಯಿಗೆರೆ ಸುತ್ತಮುತ್ತಲ ಪ್ರದೇಶ ಹಾಗೂ ಮಲೆನಾಡಿನ ಹಲವೆಡೆ ರಾತ್ರಿ ಆರಂಭವಾದ ಮಳೆ ಬೆಳಗಿನವರೆಗೆ ನಿರಂತರ ಮಳೆಯಾಗಿದೆ. ಮಳೆನೀರು ರಸ್ತೆ ಮೇಲೆ ಹರಿದಿದ್ದು, ರಸ್ತೆಗಳು ಹಳ್ಳದಂತೆ ಮಾರ್ಪಟ್ಟಿತು. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು ಮನೆಯ ಕಂಪೌಂಡ್‍ಗಳು ಕುಸಿದು ಬಿದ್ದಿವೆ. ಎಡಬಿಡದೆ ಸುರಿದ ಮಳೆಯಿಂದ ಬಾಣಾವರ, ಚಿಕ್ಕಮಗಳೂರು ಮಾರ್ಗದ ಚಿಕ್ಕದೇವನೂರು ಅಂಡರ್ ಪಾಸ್ ಸಂಪೂರ್ಣವಾಗಿ ಮುಳುಗಿದ್ದು ಬಸ್ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ದೇವನೂರು ಕೆರೆಕೋಡಿಯಿಂದ ಭಾರೀ ಪ್ರಮಾಣದ ನೀರು ಹರಿದ ಪರಿಣಾಮ ಚಿಕ್ಕದೇವನೂರು ಗ್ರಾಮದ ಕೆಲವು ಮನೆಗಳಿಗೆ ನೀರು ನುಗ್ಗಿದ್ದು, ಕುಟುಂಬಸ್ಥರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ರಸ್ತೆ ಸಂಪರ್ಕ ಕಡಿತ

ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ರಾಜ್ಯ ಹೆದ್ಧಾರಿ ಜಲಾವೃತವಾಗಿದೆ. ಈಶ್ವರಹಳ್ಳಿ ಕೆರೆ ಕೋಡಿ ಬಿದ್ದು ಅವಾಂತರ ಸೃಷ್ಟಿ ಯಾಗಿದೆ. ಇನ್ನು ಚಿಕ್ಕಮಗಳೂರು-ಜಾವಗಲ್ ರಸ್ತೆ ಜಲಾವೃತವಾಗಿ ರಸ್ತೆಯ ಮೇಲೆ ಕೆರೆಯ ಕೋಡಿ ನೀರು  ಹರಿಯುತ್ತಿದ್ದು ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿ ಜೀವಭಯದಲ್ಲೇ ಓಡಾಡುವ ಪರಿಸ್ಥಿತಿ ನಿರ್ಮಾಣ ನಿರ್ಮಾಣವಾಗಿದೆ.

ಇದನ್ನೂ ಓದಿ: Bengaluru Rain: ಬೆಂಗಳೂರಿನಲ್ಲಿ ಮತ್ತೆ ಶುರುವಾದ ಭಾರೀ ಮಳೆ, 2 ಗಂಟೆ ನಿರಂತರ ಸುರಿದ್ರೆ ಅನಾಹುತ ಫಿಕ್ಸ್

ಈಶ್ವರಹಳ್ಳಿ ಗ್ರಾಮದೇವತೆಗೆ ಜಲದಿಗ್ಬಂಧನ

ಈಶ್ವರಹಳ್ಳಿ ಕೆರೆ ಕೋಡಿ ಬಿದ್ದ ಪರಿಣಾಮ ಈಶ್ವರಹಳ್ಳಿ ಗ್ರಾಮದೇವತೆಗೆ ಜಲದಿಗ್ಬಂಧನ  ಎದುರಾಗಿದೆ‌. ಗ್ರಾಮದ ಹೊಟಗಟ್ಟಮ್ಮ ದೇವಸ್ಥಾನ ಕ್ಕೆ ನೀರು ನುಗ್ಗಿದೆ. ದೇವಾಲಯದ ಒಳಭಾಗದಲ್ಲಿ ಎರಡು ಅಡಿ ನೀರು ನಿಂತಿದೆ‌. ದೇವಾಲಯ ಜಲಾವೃತದ ನಡುವೆಯೂ ದೇವರಿಗೆ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದ್ದಾರೆ.‌
Published by:Annappa Achari
First published: