ಚುನಾವಣೆಯಲ್ಲಿ ಜನರು ಅಭಿವೃದ್ಧಿ ನೋಡಿ ಮತ ಹಾಕಿಲ್ಲ: ದಿನೇಶ್ ಗುಂಡೂರಾವ್​​

ಸಿಎಂ ಯಡಿಯೂರಪ್ಪ ಅಸಹಾಯಕರಾಗಿದ್ದಾರೆ. ಏನು ಕೇಳಿದ್ರು ಹಣವಿಲ್ಲ ಅಂತಾರೆ. ಅವರು ಅಸಹಾಯಕತೆ ತೋರುತ್ತಿದ್ದಾರೆ. ಅಧಿಕಾರ ನಡೆಸಲು ನಿಮಗೆ ಸಾಧ್ಯವಾಗಲಿಲ್ಲ ಅಂದ್ರೆ ಸಿಎಂ ಸ್ಥಾನ ಬಿಟ್ಟು ಹೋಗಿ.

G Hareeshkumar | news18-kannada
Updated:October 19, 2019, 3:21 PM IST
ಚುನಾವಣೆಯಲ್ಲಿ ಜನರು ಅಭಿವೃದ್ಧಿ ನೋಡಿ ಮತ ಹಾಕಿಲ್ಲ: ದಿನೇಶ್ ಗುಂಡೂರಾವ್​​
ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​
  • Share this:
ಮೈಸೂರು(ಅ.19): ಚುನಾವಣೆಯಲ್ಲಿ ಜನರು ಅಭಿವೃದ್ಧಿ ನೋಡಿ ಮತ ಹಾಕಿಲ್ಲ. ಕೆಲವರಿಗೆ ಯಾವುದು ದೊಡ್ಡ ವಿಚಾರ ಅಂತ ಗೊತ್ತೆ ಆಗಲಿಲ್ಲ.ಬಿಜೆಪಿ ಜನರ ತಲೆ ಕೆಡಿಸಿತು‌. ಮೈತ್ರಿ ಸರ್ಕಾರವನ್ನು ಬಿಳಿಸಿ ಕುತಂತ್ರದಿಂದ ಬಿಜೆಪಿಯವರು ಅಧಿಕಾರಕ್ಕೆ ಬಂದರು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು. 

ಲಿಂಗಾಯತ ಧರ್ಮದ ವಿಚಾರ, ಟಿಪ್ಪು ಜಯಂತಿ, ಸದಾಶಿವ ಆಯೋಗದ ವಿಚಾರವನ್ನೇ ದೊಡ್ಡ ವಿಚಾರ ಅಂತ ಬಿಂಬಿಸಿದರು. ಇವೆಲ್ಲ ದೊಡ್ಡ ವಿಚಾರಗಳಾ? ಸುಮ್ಮನೆ ಸುಳ್ಳು ಪ್ರಚಾರ ಮಾಡಿದರು. ಸಿದ್ದರಾಮಯ್ಯ ವಿಪಕ್ಷ ನಾಯಕರಾದ ಮೇಲೆ ಕರ್ನಾಟಕದ ಎಲ್ಲ‌ ಭಾಗದಿಂದ ಪ್ರತಿಕ್ರಿಯೆ ಬಂದಿದೆ. ಕಾಂಗ್ರೆಸ್ ಒಳ್ಳೆಯ ತೀರ್ಮಾನ ಕೈಗೊಂಡಿದೆ ಅಂತ ಅಭಿನಂದನೆ ಹೇಳುತ್ತಿದ್ದಾರೆ ಎಂದರು.

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜನರಿಗೆ ಅವರು ಅರ್ಥವಾಗಿರಲಿಲ್ಲ. ಮುಖ್ಯಮಂತ್ರಿ ಹುದ್ದೆಯಿಂದ ಇಳಿದ ಮೇಲೆ ಜನ ಅವರನ್ನ ಅರ್ಥ ಮಾಡಿಕೊಂಡರು. ಆದರೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ. ಬಿಜೆಪಿ ಕಾಂಗ್ರೆಸ್ ನಾಯಕರ ಮೇಲೆ ಐಟಿ, ಇಡಿ ಸಂಚು ಮಾಡಿದೆ. ಇತ್ತಿಚಿಗೆ ಸಿದ್ದರಾಮಯ್ಯನವರ ಮೇಲೂ ಸಂಚನ್ನ ರೂಪಿಸುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ : ಶೋಕಾಸ್​ ನೋಟಿಸಿಗೆ ಉತ್ತರಿಸಿದ ಯತ್ನಾಳ್​; ಪಕ್ಷಕ್ಕೆ ಮುಜುಗರ ನೀಡುವ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟನೆ

ಪ್ರಧಾನಿ ನರೇಂದ್ರ ಮೋದಿ , ಕೇಂದ್ರ ಸಚಿವ ಅಮೀತ್ ಶಾ ಅವರಿಗೆ ಇಡೀ ದೇಶವೇ ಹೆದರುವಂತಾಗಿದೆ. ಐಟಿ, ಇಡಿ, ಸಿಬಿಐ ದುರ್ಬಳಕೆ ಮಾಡಿಕೊಂಡು ಎಲ್ಲರನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಸಿದ್ದರಾಮಯ್ಯರನ್ನ ಸಿಲುಕಿಸಲು ಇಬ್ಬರೂ ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ದ  ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

ದೇಶದ ಮಾಧ್ಯಮಗಳು ಅವರಿಗೆ ಶರಣಾಗಿ ಹೋಗಿವೆ. ಬಿಜೆಪಿ ವಿರುದ್ದ ಹೋದ್ರೆ ಮಾಧ್ಯಮಗಳ ಲೈಸನ್ಸ್ ರದ್ದು ಮಾಡಿ ಸಂಸ್ಥೆಗಳ ಮೇಲೆ ಸಿಬಿಐ ರೇಡ್ ಮಾಡುತ್ತಾರೆ. ಕೆಲ ಸಂಸ್ಥೆಗಳ ಮೇಲೆ ಈಗಾಗಲೇ ರೇಡ್ ಮಾಡಿದ್ದಾರೆ. ನೂರಾರು ಕೋಟಿ ಬಂಡವಾಳ ಹಾಕಿರೋ ಮಾಧ್ಯಮಗಳು ಸಹಜವಾಗಿಯೇ ಹೆದರುತ್ತವೆ ಎಂದು ಕೆಪಿಸಿಸಿ ಅಧ್ಯಕ್ಷರು ವಿಷಾದಿಸಿದರು.

ಗಾಂಧಿಯವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ವೀರ ಸಾವರ್ಕರ್ ಭಾರತ ರತ್ನ ನೀಡಲು ಮುಂದಾಗುತ್ತಿದೆ. ವೀರ ಸಾವರ್ಕರ್ ಗಾಂಧಿ ಹತ್ಯೆಗೆ ಸಂಚು ರೂಪಿಸಿದ್ದ ಆರೋಪಕ್ಕೆ ಗುರಿಯಾಗಿದ್ದರು. ಗೋಡ್ಸೆಗೆ ಸಾವರ್ಕರ್ ಆಪ್ತರಾಗಿದ್ದರು.ಇಂಥವರಿಗೆ ಭಾರತ ರತ್ನ ನೀಡೋದು ಸರಿಯೇ? ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್  ಪ್ರಶ್ನೆ ಮಾಡಿದರು.

ಇದನ್ನೂ ಓದಿ : ಸಿದ್ದರಾಮಯ್ಯಗೆ ಮಾನಸಿಕ ಕಾಯಿಲೆ ಎಂದ ಸಿಟಿ ರವಿ; ಕುಡಿದು ಅಪಘಾತ ಮಾಡಿದವರಿಗೆ ರಾಜ್ಯೋತ್ಸವ ನೀಡಿ ಎಂದು ಮಾಜಿ ಸಿಎಂ ತಿರುಗೇಟು

ಸಿಎಂ ಯಡಿಯೂರಪ್ಪ ಅಸಹಾಯಕರಾಗಿದ್ದಾರೆ. ಏನು ಕೇಳಿದ್ರು ಹಣವಿಲ್ಲ ಅಂತಾರೆ.ಅವರು ಅಸಹಾಯಕತೆ ತೋರುತ್ತಿದ್ದಾರೆ. ಅಧಿಕಾರ ನಡೆಸಲು ನಿಮಗೆ ಸಾಧ್ಯವಾಗಲಿಲ್ಲ ಅಂದ್ರೆ ಸಿಎಂ ಸ್ಥಾನ ಬಿಟ್ಟು ಹೋಗಿ. ನಮಗೆ ಅಧಿಕಾರ ಕೊಡಿ. ನಮಗೆ ಹಣ ಹೇಗೆ ತರಬೇಕು ಅದನ್ನ ಹೇಗೆ ಖರ್ಚು ಮಾಡಬೇಕು ಎಂಬುದು ಗೊತ್ತು ಎಂದವರು ಹೇಳಿದರು.

First published: October 19, 2019, 3:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading