HOME » NEWS » State » IN THE CM ABSENCE LAXMAN SAVADI FILES NOMINATION FOR MLC ELECTION SESR

ಡಿಸಿಎಂ ಲಕ್ಷ್ಮಣ್ ಸವದಿ ನಾಮಪತ್ರ ಸಲ್ಲಿಕೆಗೆ ಗೈರಾದ ಸಿಎಂ ಬಿಎಸ್​ ಯಡಿಯೂರಪ್ಪ

ಲಕ್ಷ್ಮಣ ಸವದಿ ಆಯ್ಕೆಗೆ ಸಿಎಂ ಬಿಎಸ್​ ಯಡಿಯೂರಪ್ಪರಿಂದ ಸಂಪೂರ್ಣ ಬೆಂಬಲ ಇಲ್ಲ. ಇದೇ ಹಿನ್ನೆಲೆಯಲ್ಲಿ ಅವರು ಕಾರ್ಯಕ್ರಮಕ್ಕೆ ಏಕಾಏಕಿ ಗೈರಾಗಿದ್ದಾರೆ ಎಂಬ ಮಾತು ಕೇಳಿಬಂದಿದೆ. 

news18-kannada
Updated:February 5, 2020, 12:24 PM IST
ಡಿಸಿಎಂ ಲಕ್ಷ್ಮಣ್ ಸವದಿ ನಾಮಪತ್ರ ಸಲ್ಲಿಕೆಗೆ ಗೈರಾದ ಸಿಎಂ ಬಿಎಸ್​ ಯಡಿಯೂರಪ್ಪ
ಡಿಸಿಎಂ ಲಕ್ಷ್ಣಣ ಸವದಿ
  • Share this:
ಬೆಂಗಳೂರು (ಫೆ.5): ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ರಾಜೀನಾಮೆಯಿಂದ ತೆರವಾಗಿರುವ ವಿಧಾನಪರಿಷತ್​ ಸದಸ್ಯ ಸ್ಥಾನಕ್ಕೆ ಬಿಜೆಪಿಯಿಂದ ಲಕ್ಷ್ಮಣ ಸವದಿ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಮೂಲಕ ತಮ್ಮ ಡಿಸಿಎಂ ಸ್ಥಾನವನ್ನು ಖಾಯಂ ಮಾಡಿಕೊಳ್ಳಲು ಸಚಿವರು ಮುಂದಾಗಿದ್ದಾರೆ.

ಹೈ ಕಮಾಂಡ್​ ಸೂಚನೆಯಂತೆ ಲಕ್ಷ್ಮಣ ಸವದಿ ಇಂದು ನಾಮಪತ್ರ ಸಲ್ಲಿಸಿದ್ದು, ಈ ವೇಳೆ ಸಿಎಂ ಬಿಎಸ್​ ಯಡಿಯೂರಪ್ಪ ಗೈರು ಹಾಜರಿ ಎದ್ದುಕಾಣುತ್ತಿತ್ತು. ಕಲಬುರಗಿಯಲ್ಲಿ 85ನೇ ಕನ್ನಡ ಸಾಹಿತ್ಯ ಸಮ್ಮೇಳನ ಇರುವ ಹಿನ್ನೆಲೆ ಡಿಸಿಎಂ ಲಕ್ಷ್ಮಣ ಸವದಿ ನಾಮಪತ್ರದಲ್ಲಿ ಸಿಎಂ ಭಾಗಿಯಾಗಲಿಲ್ಲ. ಅವರ ಬದಲು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿಟಿ ರವಿ ಡಿಸಿಎಂಗೆ ಬೆಂಬಲವಾಗಿ ನಿಂತಿದ್ದರು ಎನ್ನಲಾಗಿದೆ.

ಆದರೆ, ಮೂಲಗಳ ಪ್ರಕಾರ ಲಕ್ಷ್ಮಣ ಸವದಿ ಆಯ್ಕೆಗೆ ಸಿಎಂ ಬಿಎಸ್​ ಯಡಿಯೂರಪ್ಪರಿಂದ ಸಂಪೂರ್ಣ ಬೆಂಬಲ ಇಲ್ಲ. ಇದೇ ಹಿನ್ನೆಲೆಯಲ್ಲಿ ಅವರು ಕಾರ್ಯಕ್ರಮಕ್ಕೆ ಏಕಾಏಕಿ ಗೈರಾಗಿದ್ದಾರೆ ಎಂಬ ಮಾತು ಕೇಳಿಬಂದಿದೆ.

ಈ ಹಿಂದೆ ನಾಮಪತ್ರ ಸಲ್ಲಿಕೆ ವೇಳೆ ಸಿಎಂ ಕೂಡ ಭಾಗಿಯಾಗುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ, ಕಡೆಕ್ಷಣದಲ್ಲಿ ಸಿಎಂ ಏಕಾಏಕಿ ಗೈರಾಗಿದ್ದಾರೆ. ಇದಕ್ಕೆ ಕಾರಣ ಲಕ್ಷ್ಮಣ ಸವದಿ ಹೈಕಮಾಂಡ್​ ಅಭ್ಯರ್ಥಿ ಎಂಬುದರ ಜೊತೆಗೆ ವೀರಶೈವ-ಲಿಂಗಾಯತ ಸಮುದಾಯದ ನಾಯಕರಾಗಲು ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಅಂಶ.

ಸದ್ಯ ಕರ್ನಾಟಕದಲ್ಲಿ ವೀರಶೈವ- ಲಿಂಗಾಯತ ನಾಯಕರಾಗಿ ಸಿಎಂ ಬಿಎಸ್​ ಯಡಿಯೂರಪ್ಪ ಗುರುತಿಸಿಕೊಂಡಿದ್ದು, ಅವರಿಗೆ ಪರ್ಯಾಯವಾಗಿ ಪಕ್ಷದಲ್ಲಿ ಲಕ್ಷ್ಮಣ ಸವದಿಯವರನ್ನು ಬೆಳೆಸಲು ಹೈ ಕಮಾಂಡ್​ ತೀರ್ಮಾನಿಸಿತ್ತು. ಇದೇ ಕಾರಣಕ್ಕೆ ಸೋತರು ಕೂಡ ಸವದಿಗೆ ಹೈ ಕಮಾಂಡ್​ ಮಣೆ ಹಾಕಿದೆ. ಇದರಿಂದ ಸಿಎಂ ಮೌನವಾಗಿದ್ದು, ಹೈ ಕಮಾಂಡ್​ ನಿರ್ದೇಶನ ಪಾಲಿಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ: ಸರ್ಕಾರ ರಚಿಸುವಾಗ ಇಲ್ಲದ ವಿರೋಧ, ಸಚಿವ ಸ್ಥಾನ ನೀಡುವಾಗ ಯಾಕೆ?; ಸಿಪಿ ಯೋಗೇಶ್ವರ್​​

ಇನ್ನು ಇದೇ ಸ್ಥಾನದ ಮೇಲೆ ಆರ್​ ಶಂಕರ್​ ಕೂಡ ಕಣ್ಣಿಟ್ಟಿದ್ದರು. ಅಲ್ಲದೇ ಈ ಸ್ಥಾನವನ್ನ ತಮಗೆ ಈ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದರು. ಆದರೆ, ಹೈ ಕಮಾಂಡ್​ ಮಾತಿಗೆ ಕಟ್ಟುಬಿದ್ದ ಸಿಎಂ ಈ ಬಗ್ಗೆ ಯಾವುದೇ ಭರವಸೆಯನ್ನು ಆರ್​ ಶಂಕರ್​ಗೆ ನೀಡಲಿಲ್ಲ.ಫೆ.17ರಂದು ನಡೆಯಲಿರುವ ಒಂದು ವಿಧಾನ ಪರಿಷತ್​​ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಗೆಲ್ಲುವುದು ಖಚಿತ.  ವಿಧಾನಸಭೆಯಿಂದ ವಿಧಾನ ಪರಿಷತ್‍ಗೆ ಆಯ್ಕೆಯಾಗಲು ಬೇಕಾದ 112 ಮತಗಳನ್ನು ಬಿಜೆಪಿ ಹೊಂದಿದೆ. ಸದ್ಯ ಬಿಜೆಪಿ 117 ಜತೆಗೆ ಒಬ್ಬ ಪಕ್ಷೇತರ ಶಾಸಕರ ಬೆಂಬಲವೂ ಇದೆ. ಕಾಂಗ್ರೆಸ್ 65, ಜೆಡಿಎಸ್ 35 ಶಾಸಕರು ಹೊಂದಿದೆ. ಹಾಗಾಗಿ ಬಿಜೆಪಿಗೇ ಈ ಸ್ಥಾನ ಒಲಿಯಲಿದೆ.
First published: February 5, 2020, 12:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories