ಮೊದಲ ಹಂತದಲ್ಲಿ ನಿಖಿಲ್ ಎಲ್ಲಿದೀಯಪ್ಪಾ, 2ನೇ ಹಂತದಲ್ಲಿ ಮುಖ್ಯಮಂತ್ರಿ ಎಲ್ಲಿದೀಯಪ್ಪಾ ಎಂದು ಕೇಳುತ್ತಾರೆ; ಶ್ರೀರಾಮುಲು ವ್ಯಂಗ್ಯ

ಬಳ್ಳಾರಿಯಲ್ಲಿ ಯಾರದ್ದೂ ನಡೆಯಲ್ಲ, ನಡಿಯೋದು ಇಲ್ಲ. ರಾಮುಲು ಅವರದ್ದು ನಡೆಯಲ್ಲ. ಇನ್ನೊಬ್ಬರದು ನಡೆಯಲ್ಲ. ದೇಶದ ಜನ ನರೇಂದ್ರ ಮೋದಿಯವರನ್ನು ನೋಡ್ತಿದ್ದಾರೆ. ಮೋದಿಯವರ ಮುಂದೆ ಡಿಕೆಶಿಯದ್ದು ನಡೆಯಲ್ಲ ಎಂದರು.

HR Ramesh | news18
Updated:April 17, 2019, 3:46 PM IST
ಮೊದಲ ಹಂತದಲ್ಲಿ ನಿಖಿಲ್ ಎಲ್ಲಿದೀಯಪ್ಪಾ, 2ನೇ ಹಂತದಲ್ಲಿ ಮುಖ್ಯಮಂತ್ರಿ ಎಲ್ಲಿದೀಯಪ್ಪಾ ಎಂದು ಕೇಳುತ್ತಾರೆ; ಶ್ರೀರಾಮುಲು ವ್ಯಂಗ್ಯ
ಶ್ರೀರಾಮುಲು
  • News18
  • Last Updated: April 17, 2019, 3:46 PM IST
  • Share this:
ಬಾಗಲಕೋಟೆ: ರಾಜ್ಯದಲ್ಲಿ ಮೊದಲ ಹಂತದ ಚುನಾವಣಾ ಪ್ರಚಾರ ಮುಗಿದಿದೆ. ಎರಡನೇ ಹಂತದ ಚುನಾವಣೆಗಾಗಿ ಅಲ್ಲಿದ್ದ ನಾಯಕರ ತಂಡ ಈ ಕಡೆಗೆ ಬರುತ್ತಿದೆ. ಒಂದನೇ ಹಂತದಲ್ಲಿ ಚುನಾವಣೆಯಲ್ಲಿ ನಿಖಿಲ್ ಎಲ್ಲಿದೀಯಪ್ಪಾ ಅಂತ ಕೇಳ್ತಿದ್ರು. ಈಗ ಈ ಭಾಗದ ಜನರು ಮುಖ್ಯಮಂತ್ರಿ ಎಲ್ಲಿದೀರಪ್ಪಾ ಅಂತ ಕೇಳಬೇಕಾಗುತ್ತದೆ ಎಂದು ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.

ಬಾದಾಮಿಯಲ್ಲಿ ಮಾತನಾಡಿದ ಶ್ರೀರಾಮುಲು, ಉತ್ತರ ಕರ್ನಾಟಕ ಭಾಗವನ್ನು ಕುಮಾರಸ್ವಾಮಿ ನಿರ್ಲಕ್ಷ್ಯ ಮಾಡಿದ್ದಾರೆ. ಎಲ್ಲ ಅನುದಾನವನ್ನು 5 ಜಿಲ್ಲೆಗಳಿಗೆ ಉಪಯೋಗಿಸಿದ್ದಾರೆ. ಭ್ರಷ್ಟಾಚಾರ ಮಾಡುವ ಉದ್ದೇಶದಿಂದ 5 ಜಿಲ್ಲೆಗೆ ನೀಡಿ ಕಮಿಷನ್ ಪಡೆಕೊಂಡಿರುವುದು ಜಗಜ್ಜಾಹಿರಾಗಿದೆ. ಆ ಕಮಿಷನ್ ಹಣದಿಂದಲೇ ಚುನಾವಣೆ ಮಾಡಿ ನೂರಾರು ಕೋಟಿ ಹಾಕಿ ಮಗನ ಗೆಲ್ಲಿಸೋಕೆ ಪ್ರಯತ್ನ ಮಾಡ್ತಿದ್ದಾರೆ. ಆದರೆ ನೂರಕ್ಕೆ ನೂರು ನಿಖಿಲ್ ಸೋಲ್ತಾನೆ, ಸುಮಲತಾ ಗೆಲ್ತಾರೆ ಎಂದು ಭವಿಷ್ಯ ನುಡಿದರು.

ಲೋಕಸಭಾ ಚುನಾವಣೆ ನಂತರ ಈ ಸರ್ಕಾರ ಬಿದ್ದು ಹೋಗುತ್ತೆ. ಮೈತ್ರಿ ಸರ್ಕಾರಕ್ಕೆ ಅಸ್ತಿತ್ವ ಇಲ್ಲ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿಯಾದ್ರೂ ಏಳೆಂಟು ಸ್ಥಾನಕ್ಕಿಂತ ಜಾಸ್ತಿ ಬರೋ ಪರಿಸ್ಥಿತಿ ಇಲ್ಲ. ಸರ್ಕಾರ ಮುಂದುವರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯನವರದ್ದು ಏನು ನಡಿತಿಲ್ಲ. ನಾನು ಈಗಾಗಲೇ ದಕ್ಷಿಣ ಕರ್ನಾಟಕ ಪ್ರವಾಸ ಮಾಡಿ ಬಂದಿದ್ದೇನೆ. ಎಲ್ಲಿಯೂ ಪೋಸ್ಟರ್​ಗಳಲ್ಲೂ ಸಿದ್ದರಾಮಯ್ಯ ಫೋಟೋ ಇಲ್ಲ.  ಇಡೀ ರಾಜ್ಯದಲ್ಲಿ ಕಾಂಗ್ರೆಸ್ - ಜೆಡಿಎಸ್ ಪಕ್ಷದವರು ಎಲ್ಲೂ ಬ್ಯಾನರ್​ನಲ್ಲಿ‌ ಫೋಟೋ ಹಾಕ್ತಿಲ್ಲ. ಪ್ರಚಾರಕ್ಕೆ ಕರೀತಿಲ್ಲ. ಸಿದ್ದರಾಮಯ್ಯ ಅಂದ್ರೆ ಲೆಕ್ಕಕಿಲ್ಲ, ಡೋಂಟ್ ಕೇರ್. ಈಗಿನ ಪರಿಸ್ಥಿತಿ ಸಿದ್ದರಾಮಯ್ಯ ಅಂದ್ರೆ ಕಾಂಗ್ರೆಸ್​ಗೂ ಬೇಡ, ಜೆಡಿಎಸ್​ಗೂ ಬೇಡ ಅಂತಿದ್ದಾರೆ. ನೂರಕ್ಕೂ ನೂರು ಈ ಚುನಾವಣೆಯಲ್ಲಿ ಯಾರ ಆಟಾನೂ ನಡೆಯಲ್ಲ. ಇದು ದೇಶದ ನರೇಂದ್ರ ಮೋದಿಯವರ ಚುನಾವಣೆ. ಇದು ಯಾವುದೋ ಜಾತಿ ಪಕ್ಷದ ಚುನಾವಣೆ ಅಲ್ಲ. ಮೋದಿಯವರ ಮುಂದೆ ಯಾರೂ ನಿಲ್ಲೋಕಾಗಲ್ಲ ಎಂದು ಸವಾಲು ಹಾಕಿದರು.

ಇದನ್ನು ಓದಿ: ಜೋಡೆತ್ತಿನ ನೊಗ ಯಾವಾಗ ಸರಿ ಇತ್ತು? ಡಿಕೆಶಿ ಎಚ್​ಡಿಕೆ ಕಾಲೆಳೆದ ಬಿವೈ ರಾಘವೇಂದ್ರ

ಬಳ್ಳಾರಿ ಲೋಕಸಭಾ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಯಾರದ್ದೂ ನಡೆಯಲ್ಲ, ನಡಿಯೋದು ಇಲ್ಲ. ರಾಮುಲು ಅವರದ್ದು ನಡೆಯಲ್ಲ. ಇನ್ನೊಬ್ಬರದು ನಡೆಯಲ್ಲ. ದೇಶದ ಜನ ನರೇಂದ್ರ ಮೋದಿಯವರನ್ನು ನೋಡ್ತಿದ್ದಾರೆ. ಮೋದಿಯವರ ಮುಂದೆ ಡಿಕೆಶಿಯದ್ದು ನಡೆಯಲ್ಲ ಎಂದರು.

ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರವಾಗಿ ಪ್ರತಿಕ್ರಿಯಿಸಿದ ಶ್ರೀರಾಮುಲು, ಇವರಿಗೆ ಸ್ವಲ್ಪವಾದರೂ ಗೌರವ ಅನ್ನೋದು ಇರಬೇಕಲ್ವಾ. ಚುನಾವಣೆ ಬಂದರೆ ಸಾಕು ಲಿಂಗಾಯತರು ವೀರಶೈವರು ಬೇರೆ ಅಂತ ನೆನಪಾಗುತ್ತವೆ. ಧರ್ಮದ ತಂಟೆಗೆ ಹೋಗಿದ್ದರ ಸಲುವಾಗಿ ಜೇನುಗೂಡಿಗೆ ಕಲ್ಲು ಹಾಕಿದಂತಾಗಿದೆ. ಇವತ್ತು ಎಲ್ಲರೂ ತಿರುಗಿ ಬಿದ್ದಿದ್ದಾರೆ.  ಹೀಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನೆಲಕಚ್ಚಿಸಿದ್ದಾರೆ. ಲಿಂಗಾಯತ ಧರ್ಮಕ್ಕೆ ಹೋರಾಟ ಮಾಡಿದವರೆಲ್ಲಾ ಮೂಲೆ ಗುಂಪಾಗಿದ್ದಾರೆ. ಧರ್ಮದ ತಂಟೆಗೆ ಯಾವತ್ತು ಯಾವ ರಾಜಕಾರಣಿಯೂ ಹೋಗಬಾರದು ಎಂದರು.
First published:April 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ