ನಿಖಿಲ್ ಕುಮಾರಸ್ವಾಮಿ​ ನಿಜಕ್ಕೂ ಕುಡಿದು ರಂಪಾಟ ಮಾಡಿದ್ದರಾ? ವೈರಲ್​ ಆದ ಸುದ್ದಿಯ ಅಸಲಿಯತ್ತು ಇಲ್ಲಿದೆ

ಈ ಬಗ್ಗೆ ನಮ್ಮ ವರದಿಗಾರರು ಪೊಲೀಸರನ್ನು ಸಂಪರ್ಕಿಸಿದಾಗ, ಆ ರೀತಿ ಘಟನೆಯೇ ನಡೆದಿಲ್ಲ ಎಂದು ಹೋಟೆಲ್​ನವರೇ ಸ್ಪಷ್ಟನೆ ನೀಡಿದ್ದಾರೆ. ಈ ಸುದ್ದಿಯಲ್ಲಿ ಹುರುಳಿಲ್ಲ ಎಂದು ಸ್ಟಪಷ್ಟನೆ ನೀಡಿದ್ದಾರೆ.

Rajesh Duggumane | news18
Updated:May 25, 2019, 12:13 PM IST
ನಿಖಿಲ್ ಕುಮಾರಸ್ವಾಮಿ​ ನಿಜಕ್ಕೂ ಕುಡಿದು ರಂಪಾಟ ಮಾಡಿದ್ದರಾ? ವೈರಲ್​ ಆದ ಸುದ್ದಿಯ ಅಸಲಿಯತ್ತು ಇಲ್ಲಿದೆ
ನಿಖಿಲ್ ಕುಮಾರಸ್ವಾಮಿ
  • News18
  • Last Updated: May 25, 2019, 12:13 PM IST
  • Share this:
ಬೆಂಗಳೂರು (ಮೇ 25): ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿಖಿಲ್​ ಕುಮಾರಸ್ವಾಮಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ ವಿರುದ್ಧ 1.30 ಲಕ್ಷ ಮತಗಳ ಅಂತರದಿಂದ ಸೋತಿದ್ದಾರೆ. ಅವರು ಸೋತ ಬೇಸರದಲ್ಲಿ ಮೈಸೂರಿನ ಹೋಟೆಲ್​ ಒಂದರಲ್ಲಿ ರಂಪಾಟ ಮಾಡಿದ್ದರು ಎಂದು ಕನ್ನಡದ ದಿನಪತ್ರಿಕೆಯೊಂದು ವರದಿ ಮಾಡಿತ್ತು. ಇದರ ಸತ್ಯಾಸತ್ಯತೆ ತಿಳಿಯಲು ನ್ಯೂಸ್​18 ಕನ್ನಡ ಪ್ರಯತ್ನಿಸಿದಾಗ ಇದೊಂದು ನಕಲಿ ಸುದ್ದಿ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

“ಚುನಾವಣೆಯಲ್ಲಿ ಸೋತ ನಂತರ ನಿಖಿಲ್​ ಮೈಸೂರಿನ ರ್ಯಾಡಿಸನ್​ ಬ್ಲೂ ಹೋಟೆಲ್​ನಲ್ಲಿ ತಂಗಿದ್ದರು. ಈ ವೇಳೆ ಸೋಲಿನ ಬೇಸರದಿಂದ ಜೋರಾಗಿ ಗಲಾಟೆ-ರಂಪಾಟ ಮಾಡಿದ್ದರು. ಈ ವೇಳೆ ಹೋಟೆಲ್​ ಮ್ಯಾನೇಜರ್​ ಹಾಗೂ ಸಿಬ್ಬಂದಿ ಎಷ್ಟೇ ಸಮಾಧಾನ ಪಡಿಸಿದರೂ ಅವರ ವಿರುದ್ಧವೂ ವಾಗ್ದಾಳಿ ನಡೆಸಿ ಗಲಾಟೆ ಮಾಡಿದ್ದರು.​ ಅಜ್ಜ ದೇವೇಗೌಡರ ವಿರುದ್ಧವೂ ಅವರು ಕೂಗಾಡಿದ್ದರು,” ಎಂದು ಪತ್ರಿಕೆಯೊಂದು ಸುದ್ದಿ ಪ್ರಕಟಿಸಿತ್ತು.

ಈ ಬಗ್ಗೆ ನಮ್ಮ ವರದಿಗಾರರು ಪೊಲೀಸರನ್ನು ಸಂಪರ್ಕಿಸಿದಾಗ, “ಆ ರೀತಿ ಘಟನೆಯೇ ನಡೆದಿಲ್ಲ ಎಂದು ಹೋಟೆಲ್​ನವರೇ ಸ್ಪಷ್ಟನೆ ನೀಡಿದ್ದಾರೆ. ಈ ಸುದ್ದಿಯಲ್ಲಿ ಹುರುಳಿಲ್ಲ. ಸುಳ್ಳು ಸುದ್ದಿಯನ್ನು ಪ್ರಕಟಿಸಲಾಗಿದೆ,” ಎಂದು ಸ್ಪಷ್ಟನೆ ನೀಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಪತ್ರಿಕೆಯ ವರದಿ ಸಖತ್​ ವೈರಲ್​ ಆಗಿದ್ದು, ಭಾರಿ ಚರ್ಚೆಗೆ ಎಡೆ ಮಾಟಿಕೊಟ್ಟಿದೆ. ಆದರೆ, ಈ ಸುದ್ದಿಯಲ್ಲಿ ಯಾವುದೇ ಹುರುಳಿಲ್ಲ.

ಇದನ್ನೂ ಓದಿ: ಇದೆಂಥಾ ಅಂಧಾಭಿಮಾನ?; ಮಂಡ್ಯದಲ್ಲಿ ನಿಖಿಲ್ ಸೋತಿದ್ದಕ್ಕೆ ಅಭಿಮಾನಿ ಹೀಗಾ ಮಾಡೋದು?

ಈ ಬಗ್ಗೆ ಟ್ವಿಟ್ಟರ್ ಮೂಲಕ ಸ್ಪಷ್ಟನೆ ನೀಡಿರುವ ಕುಮಾರಸ್ವಾಮಿ,'ಕನ್ನಡಪತ್ರಿಕೆಯೊಂದು ಇಂದು ನಿಖಿಲ್ ಕುಮಾರಸ್ವಾಮಿ ಕುರಿತು ಪ್ರಕಟಿಸಿದ ಸುದ್ದಿ ಅವಾಸ್ತವಿಕ ಹಾಗೂ ಕಪೋಲಕಲ್ಪಿತ. ನಿಖಿಲ್ ಚಾರಿತ್ರ್ಯ ವಧೆ ಮಾಡುವ ಈ ಸುದ್ದಿಯಿಂದ ಒಬ್ಬ ತಂದೆಯಾಗಿ ಅನುಭವಿಸಿದ ನೋವನ್ನು ಸಂಪಾದಕರ ಗಮನಕ್ಕೆ ತಂದಿದ್ದೇನೆ. ಮಾಧ್ಯಮಗಳು ಇಂಥ ಸುಳ್ಳುಸುದ್ದಿಗಳ ಮೂಲಕ ಭಾವನೆಗಳೊಂದಿಗೆ ಚೆಲ್ಲಾಟವಾಡದಿರಿ ಎನ್ನುವುದು ನನ್ನ ಕಳಕಳಿಯ ಮನವಿ," ಎಂದಿದ್ದಾರೆ.ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ನಿಖಿಲ್​ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್​ ಕಣದಲ್ಲಿದ್ದರು. ಭಾರಿ ಕುತೂಹಲ ಹಾಗೂ ಪೈಪೋಟಿ ಮೂಡಿಸಿದ್ದ ಈ ಕ್ಷೇತ್ರ ಸುಮಲತಾ ಪಾಲಾಯಿತು. ಈ ಬಗ್ಗೆ ಗೌಡರ ಕುಟುಂಬ ತುಂಬಾನೇ ಅಸಮಾಧಾನಗೊಂಡಿದೆ ಎನ್ನಲಾಗಿದೆ.

ಇನ್ನು, ಮೈತ್ರಿ ಅಭ್ಯರ್ಥಿಯಾಗಿ ಹಾಸನದಿಂದ ಸ್ಪರ್ಧಿಸಿ ಬಿಜೆಪಿಯ ಎ.ಮಂಜು 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದ ಪ್ರಜ್ವಲ್​ ರೇವಣ್ಣ  "ಕಾರ್ಯಕರ್ತರ ಹಾಗೂ ಹಿರಿಯ ನಾಯಕರ ಆಶೀರ್ವಾದ ಪಡೆದು ನಾನು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ" ಎಂದು ಹೇಳುವ ಮೂಲಕ ಅಚ್ಚರಿ ತಂದಿದ್ದರು.

First published:May 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading