• Home
  • »
  • News
  • »
  • state
  • »
  • Potholes: ಮಳೆ ಬಂದಾಗ ಗುಂಡಿ ಬಿದ್ದೇ ಬೀಳುತ್ತೆ, ಅದನ್ನ ದೊಡ್ಡದು ಮಾಡಿದ್ರೆ ಹೇಗೆ? ಜಗ್ಗೇಶ್ ಪ್ರಶ್ನೆ

Potholes: ಮಳೆ ಬಂದಾಗ ಗುಂಡಿ ಬಿದ್ದೇ ಬೀಳುತ್ತೆ, ಅದನ್ನ ದೊಡ್ಡದು ಮಾಡಿದ್ರೆ ಹೇಗೆ? ಜಗ್ಗೇಶ್ ಪ್ರಶ್ನೆ

ಜಗ್ಗೇಶ್, ರಾಜ್ಯಸಭಾ ಸಂಸದ

ಜಗ್ಗೇಶ್, ರಾಜ್ಯಸಭಾ ಸಂಸದ

ನಾನು ಜೋಶಿ ಅವರನ್ನು ರಾಷ್ಟ್ರಮಟ್ಟದ ಶಕ್ತಿ ಕೇಂದ್ರದಲ್ಲಿ ನೋಡಿದ್ದೇನೆ. ಮೋದಿ ಹೆಬ್ಬುಲಿ, ಅಮಿತ್ ಶಾ ಹುಲಿ, ಅವರೊಂದಿಗೆ ಹೆಜ್ಜೆ ಹಾಕೋ ಮತ್ತೊಂದು ಹುಲಿ ಪ್ರಹ್ಲಾದ್ ಜೋಶಿ ಎಂದು ವೇದಿಕೆಯಲ್ಲಿ ಕೇಂದ್ರ ಸಚಿವರನ್ನು ಹಾಡಿ ಹೊಗಳಿದರು.

  • News18 Kannada
  • Last Updated :
  • Dharwad, India
  • Share this:

ಮಳೆ (Rainfall) ಬಂದಾಗ ಗುಂಡಿ ಬಿದ್ದೇ (Potholes) ಬೀಳುತ್ತೆ. ಆದ್ರೆ ಅದನ್ನೇ ದೊಡ್ಡದು ಮಾಡಿ ಮುಂದಿನ ಬಾರಿ ನಮಗೆ ಅಧಿಕಾರ ಕೊಡಿ. ನಾವು ಗುಂಡು ಮುಚ್ಚುತ್ತೇವೆ ಅಂತ ಕೆಲವರು ಹೇಳ್ತಾರೆ ಎಂದು ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್ (Rajyasabha MP Jaggesh) ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಧಾರವಾಡ ಜಿಲ್ಲೆ ಕುಂದಗೋಳದಲ್ಲಿ (Kundagol, Dharwad) ಆಯೋಜಿಸಿದ್ದ ಬಣ್ಣದರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಜಗ್ಗೇಶ್, ಸಿದ್ದರಾಮಯ್ಯ ಅವರ ಶೈಲಿಯಲ್ಲಿಯೇ ಮಾತನಾಡಿ ಟಾಂಗ್ ಕೊಟ್ಟರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Union Minister Jaggesh) ಬಗ್ಗೆ ಮಾತಾಡೋದೇ ನನಗೆ ಹೆಮ್ಮೆ ಎಂದ  ಜಗ್ಗೇಶ್, ಇದೊಂದು ಉತ್ತಮ ಕಾರ್ಯಕ್ರಮ ಎಂದರು.


ಯಾರೇ ಹುಳಿ ಹಿಂಡಿದ್ರೂ, ನೀವು ಯೋಚನೆ ಮಾಡಿ ಎಂದ ಜಗ್ಗೇಶ್, ಯಾರೇ ಡೈಲಾಗ್ ಹೊಡೆದ್ರು ಖುಷಿ ಪಡಿ. ಆದ್ರೆ ಯೋಚನೆ ಮಾಡಿ ಮತ ಹಾಕಿ ಎಂದು ಹೇಳಿದರು.


ಕೇಂದ್ರ ಸಚಿವರನ್ನು ಹಾಡಿ ಹೊಗಳಿದ ಜಗ್ಗೇಶ್


ಕುಂದಗೋಳದಲ್ಲಿ ಬಿಜೆಪಿ ಬಾವುಟ ಹಾರುತ್ತೆ, ಅವಾಗ ನಾನು ಮಾತಾಡೋಕೆ ಮತ್ತೆ ಬರ್ತೀನಿ. ಮೋದಿ ಅವರೊಂದಿಗೆ ಹೆಜ್ಜೆ ಹಾಕೋ ಅದ್ಭುತ ನಾಯಕ ಜೋಶಿಯನ್ನ ನೀವು ಕೊಟ್ಟಿದ್ದೀರಿ‌. ನಾನು ಜೋಶಿ ಅವರನ್ನು ರಾಷ್ಟ್ರಮಟ್ಟದ ಶಕ್ತಿ ಕೇಂದ್ರದಲ್ಲಿ ನೋಡಿದ್ದೇನೆ. ಮೋದಿ ಹೆಬ್ಬುಲಿ, ಅಮಿತ್ ಶಾ ಹುಲಿ, ಅವರೊಂದಿಗೆ ಹೆಜ್ಜೆ ಹಾಕೋ ಮತ್ತೊಂದು ಹುಲಿ ಪ್ರಹ್ಲಾದ್ ಜೋಶಿ ಎಂದು ವೇದಿಕೆಯಲ್ಲಿ ಕೇಂದ್ರ ಸಚಿವರನ್ನು ಹಾಡಿ ಹೊಗಳಿದರು.


ಮನೆಗೆ ಒಬ್ಬ ಯಜಮಾನ ಇರಬೇಕು, ಪ್ರಹ್ಲಾದ್ ಜೋಶಿ ಇಂದು ಅದ್ಭುತ ಯಜಮಾನಿಕೆ ಮಾಡ್ತಿದಾರೆ. ಉಳಿದ ಸಂಸದರು ಅವರು ಹೇಳಿದ ಕೆಲಸ ಮಾಡ್ತಾರೆ. ಈ ಭಾಗದಲ್ಲಿ ಬಿಜೆಪಿ ಬಾವುಟ ಹಾರಬೇಕು, ಆವಾಗ ನೀವು ಜೋಶಿ ಅವರಿಗೆ ಗೌರವ ಕೊಟ್ಟಂತೆ. ಇವಾಗಲೇ ರಾಜಕಾರಣ ಡ್ರಾಮಾ ನಡೀತಿದೆ. ಚುನಾವಣೆ ಬಂದಾಗ ಇಂತಹ ಆಸೆ ಸಹಜ ಎಂದರು.


ಮತ್ತೆ ಡಬಲ್ ಎಂಜಿನ್ ಸರ್ಕಾರ ಬರಬೇಕು


ರಾಷ್ಟ್ರ ಮುನ್ನೆಡಸೋ ವ್ಯಕ್ತಿ ಸಾಮಾನ್ಯದವರಲ್ಲ. ಅಮೆರಿಕಾ ಹೆದರೋದು ಕೇವಲ ರಷ್ಯಾಗೆ ಮಾತ್ರ. ರಷ್ಯಾದ ಪುಟಿನ್ ಮೋದಿಯವರನ್ನ ಸ್ವಾಭಿಮಾನ ನಾಯಕ ಎಂದು ಹೇಳಿದ್ದಾರೆ. ಮೋದಿಯ ಜೊತೆ ನೀವು ನಿಲ್ಲಬೇಕು. ಮತ್ತೆ ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರ ಬರಬೇಕು. 25 ವಿರೋಧ ಪಕ್ಷದವರು ಬಾಯಬಡಕೊಂಡರು ಮೋದಿನೇ ಪ್ರಧಾನಿ ಎಂದು ಜಗ್ಗೇಶ್ ಅಭಿಪ್ರಾಯಪಟ್ಟರು.


in rainy season pathoes are normal actor jaggesh rebounds on opposite party saklb mrq
ಬಣ್ಣದರ್ಪಣೆ


ಬಣ್ಣದರ್ಪಣೆ ಕಾರ್ಯಕ್ರಮಕ್ಕೆ ಚಾಲನೆ


ಧಾರವಾಡ ಜಿಲ್ಲೆ ಕುಂದಗೋಳ ಪಟ್ಟಣದಲ್ಲಿ ಸರ್ಕಾರಿ ಶಾಲೆಗಳಿಗೆ ಬಣ್ಣದರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಪರಿಕಲ್ಪನೆಯ ಬಣ್ಣದರ್ಪಣೆ ಕಾರ್ಯಕ್ರಮಕ್ಕೆ ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್ ಚಾಲನೆ ನೀಡಿದರು.


ಇದನ್ನೂ ಓದಿ: Karnataka Schools: ರಾಜ್ಯದ ಶಾಲಾ ಮಕ್ಕಳಿಗೆ ಗುಡ್​ ನ್ಯೂಸ್​; ಬಂತು ಬ್ಯಾಗ್​ ರಹಿತ ದಿನದ ಆಚರಣೆ


1,177 ಸರ್ಕಾರಿ ಶಾಲೆ ಮತ್ತು ಕಾಲೇಜುಗಳಿಗೆ ಬಣ್ಣ ಹಚ್ಚಿಸುವ ಯೋಜನೆ ರೂಪಿಸಲಾಗಿದ್ದು, ಜಿಂದಾಲ್ ಸಹಯೋಗದಲ್ಲಿ ಬಣ್ಣ ಹಚ್ಚೋ ಅಭಿಯಾನ ಕೈಗೊಳ್ಳಲಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಶಂಕರಪಾಟೀಲ ಮುನೇನಕೊಪ್ಪ, ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಅರವಿಂದ್ ಬೆಲ್ಲದ್, ಸಿಎಂ ನಿಂಬೆಣ್ಣನವರ, ಸಂಕನೂರ ಮತ್ತಿತರರು ಉಪಸ್ಥಿತರಿದ್ದರು.


ಶಾಲೆ ಕೋಣೆಗಳ ನಿರ್ಮಾಣ


ಈ ವೇಳೆ ಮಾತನಾಡಿದ ಪ್ರಹ್ಲಾದ್ ಜೋಶಿ, ಬಣ್ಣ ಹಚ್ಚಿಸುವ ಜೊತೆಗೆ ಅಗತ್ಯ ಇರೋ ಕಡೆ ಕೋಣೆಗಳನ್ನು ನಿರ್ಮಿಸ್ತೇವೆ. ರಾಜ್ಯ ಸರ್ಕಾರ 160 ಶಾಲಾ ಕೋಣೆ ನಿರ್ಮಿಸುತ್ತದೆ. ನಾನು 320 ಶಾಲಾ ಕೋಣೆ ನಿರ್ಮಿಸಿ ಕೊಡ್ತೇನೆ. ಸರ್ಕಾರಿ ಶಾಲೆಗಳನ್ನು ಕಲರ್ ಫುಲ್ ಮಾಡೋಣ ಅಂತ ಕರೆ ನೀಡಿದರು.


in rainy season pathoes are normal actor jaggesh rebounds on opposite party saklb mrq
ಬಣ್ಣದರ್ಪಣೆ


ಶಾಲೆಗಳಿಗೆ ಬಣ್ಣ ಯಾಕೆ ಬೇಕೆಂದು ಜೋಶಿ ಹೇಳಿದ್ದಾರೆ. ಮಕ್ಕಳಿಗೆ ಆರರಿಂದ 8 ವರ್ಷದಲ್ಲಿ ಏನ್ ಕಲಿಸ್ತೀರೋ ಸಾಯೋವರೆಗೂ ಅದನ್ನೆ ಪಾಲಸ್ತಾರೆ. 60 ವರ್ಷ ಆಳಿದವರು ಕನ್ನಡ ಶಾಲೆಗಳನ್ನ ಕಟ್ಟಬೇಕಿತ್ತು. ಆದರೆ ನಮ್ಮ ದುರ್ದೈವ, ಅದು ಆಗಲೇ ಇಲ್ಲ.


ಇದನ್ನೂ ಓದಿ:  Bengaluru Pothole: ಬೆಂಗಳೂರಲ್ಲಿ ರಸ್ತೆಗುಂಡಿಗೆ ಮತ್ತೊಂದು ಬಲಿ; ಬೈಕ್ ಸವಾರ ಸಾವು 


ಶಾಲೆ ಸುಧಾರಿಸಿದ್ರೆ ಮಕ್ಕಳ ಭವಿಷ್ಯ ಬೆಳಗುತ್ತೆ


ಜೋಶಿ ಮಾಡ್ತಿರೋ ಕೆಲಸ ಒಂದು ಚಿಂತನೆ ತುಂಬಿರೋ ಕೆಲಸ. ಜೋಶಿ ಅವರದ್ದು ಅದ್ಭುತ ಕಲ್ಪನೆ ಎಂದರು. ಎಲ್ಲ ಶಾಲೆಗಳನ್ನು ಸರ್ಕಾರವೇ ಸುಧಾರಿಸಲು ಆಗಲ್ಲ. ಶಾಲೆ ಸರ್ಕಾರದ್ದಲ್ಲ, ನಮ್ಮೂರಿನದ್ದು ಎಂದು ಬಣ್ಣ ಹಚ್ಚಿ. ಯಾವತ್ತೂ ನಮ್ಮ ಕೆಲಸ ನಾವೇ ಮಾಡಬೇಕು. ಎಲ್ಲವನ್ನೂ ಸರ್ಕಾರದ ಮೇಲೆ ಹಾಕಬಾರದು. ನಮ್ಮ ಕರ್ತವ್ಯವನ್ನು ನಾವು ಮಾಡಬೇಕು. ಆಗ ನಮ್ಮ ಶಾಲೆಗಳು ಸುಧಾರಿಸುತ್ತೆ. ನಮ್ಮ ಶಾಲೆ ಸುಧಾರಿಸಿದರೆ ಮಕ್ಕಳ ಭವಿಷ್ಯವೂ ಬೆಳಗುತ್ತೆ ಎಂದು ಜಗ್ಗೇಶ್ ಅಭಿಪ್ರಾಯಪಟ್ಟರು.

Published by:Mahmadrafik K
First published: