HOME » NEWS » State » IN PERIOD OF THREE MONTHS SMUGGLERS CARRIED 21 KG GOLD ILLEGALLY AT MANGALORE AIRPORT KKM LG

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮೂರೇ ತಿಂಗಳಿನಲ್ಲಿ 21 ಕೆಜಿ ಅಕ್ರಮ ಚಿನ್ನ ಸಾಗಾಟ; ಬೆಚ್ಚಿಬಿದ್ದ ಕಸ್ಟಮ್ಸ್​ ಅಧಿಕಾರಿಗಳು

ಅಕ್ರಮ ‌ಚಿನ್ನ ಸಾಗಾಟ ಮಾಡುವವರ ಪೈಕಿ ಕೇರಳ ,ಭಟ್ಕಳ, ಮತ್ತು ಉತ್ತರ ಕನ್ನಡ ಮೂಲದವರೇ ಅಧಿಕವಾಗಿದ್ದು ,ಸ್ಮಗ್ಲರ್ ಗಳು ಒಂದು ವರ್ಗದ ಜನರನ್ನೇ ಗುರಿ ಮಾಡಿ ದಂಧೆ ಎಸಗುತ್ತಿದ್ದಾರೆ.

news18-kannada
Updated:April 20, 2021, 10:39 AM IST
ಮಂಗಳೂರು ವಿಮಾನ ನಿಲ್ದಾಣದಲ್ಲಿ ಮೂರೇ ತಿಂಗಳಿನಲ್ಲಿ 21 ಕೆಜಿ ಅಕ್ರಮ ಚಿನ್ನ ಸಾಗಾಟ; ಬೆಚ್ಚಿಬಿದ್ದ ಕಸ್ಟಮ್ಸ್​ ಅಧಿಕಾರಿಗಳು
ಮಂಗಳೂರು ವಿಮಾನ ನಿಲ್ದಾಣ
  • Share this:
ಮಂಗಳೂರು(ಏ.20): ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ‌ಚಿನ್ನ ಸಾಗಾಟ ಪ್ರಕರಣ ಮಿತಿ ಮೀರುತ್ತಿದೆ. ಕಳೆದ ಮೂರು ತಿಂಗಳಿನಿಂದ ಈ ಹಿಂದೆ ಎಂದೂ ಕಾಣದಷ್ಟು ಅಕ್ರಮ ಚಿನ್ನ ಸಾಗಾಟ ಪ್ರಕರಣಗಳು ಕಂಡು ಬಂದಿದೆ. ಲಾಕ್ ಡೌನ್ ತೆರವಾದ ಬಳಿಕ ವಿಮಾನಯಾನ ಆರಂಭವಾದ  ಈ ಹಿಂದೆ ಎಂದೂ ಆಗದಷ್ಟು ಅಕ್ರಮ‌ಚಿನ್ನ ಸಾಗಾಟ ಪ್ರಕರಣ ಗಳು ನಡೆದಿದೆ. ಜನವರಿಯಿಂದ ಎಪ್ರಿಲ್ ವರೆಗೆ ಸುಮಾರು 10ಕೋಟಿ ಮೌಲ್ಯದ 21 ಕೆಜಿ ಚಿನ್ನ ಸಾಗಾಟ ಪ್ರಕರಣ ನಡೆದಿದ್ದು,ಕಸ್ಟಮ್ಸ್ ಅಧಿಕಾರಿಗಳೇ ಈ ರೀತಿಯ ಬೆಳವಣಿಗೆ ಕಂಡು ಬೆಚ್ಚಿ ಬಿದ್ದಿದ್ದಾರೆ.

ಜನವರಿಯಲ್ಲಿ ಒಟ್ಟು 8 ಅಕ್ರಮ ‌ಚಿನ್ನ ಸಾಗಾಟ ಪ್ರಕರಣವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದು, 5.92 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದರು. ಇದರ ಒಟ್ಟು ಮೌಲ್ಯ 3 ಕೋಟಿ ರೂಪಾಯಿ ಆಗಿತ್ತು. ಇನ್ನು ಫೆಬ್ರವರಿ ತಿಂಗಳಿನಲ್ಲಿ ಚಿನ್ನ ಸಾಗಾಟ ಪ್ರಕರಣದಲ್ಲಿ ಏರಿಕೆ ಕಂಡಿದ್ದುಕೇವಲ‌ 29 ದಿನಗಳಲ್ಲಿ  15 ಚಿನ್ನ ಸಾಗಾಟ ಪ್ರಕರಣ ಗಳು ಕಂಡುಬಂದಿತ್ತು. 15 ಪ್ರಕರಣಗಳಲ್ಲಿ 4.94 ಕೆಜಿ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಇದರ ಒಟ್ಟು ಮೌಲ್ಯ 4.39 ಕೋಟಿ ರೂಪಾಯಿಯಾಗಿದೆ.

ಮಾರ್ಚ್ ತಿಂಗಳಿನಲ್ಲೂ 12 ಪ್ರಕರಣ ಗಳನ್ನು ಅಧಿಕಾರಿ ಗಳು ಪತ್ತೆ ಹಚ್ಚಿದ್ದು,  3.2 ಕೋಟಿ ರೂಪಾಯಿ ಮೌಲ್ಯದ 6.94 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಏಪ್ರಿಲ್ ತಿಂಗಳ 20 ದಿನದಲ್ಲಿ 5 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, 2.15 ಕೋಟಿ ರೂಪಾಯಿ ಮೌಲ್ಯದ 4 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ‌.

Coronavirus Bangalore: ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದ ಸೋಂಕಿತರ ಪಾಲಿಗೆ ಇವರೇ ದೇವರು...!

ಅಕ್ರಮ ಚಿನ್ನ ಸಾಗಾಟ ಪ್ರಕರಣ ಹೆಚ್ಚಾಗಲು ನಿರ್ದಿಷ್ಟ ಕಾರಣದ ಬಗ್ಗೆ ಕಾರಣ ಏನು ಅಂತಾ ಕಸ್ಟಮ್ಸ್ ಅಧಿಕಾರಿಗಳಿಗೇ ಗೊತ್ತಾಗುತ್ತಿಲ್ಲ. ಈ ರೀತಿ ಪ್ರಕರಣಗಳು ಬೆಳಕಿಗೆ ಬರಲು ಕಸ್ಟಮ್ಸ್ ಅಧಿಕಾರಿಗಳ ತಪಾಸಣೆ ಈಗ ಬಿಗಿಯಾಗಿದೆ. ಇನ್ನೊಂದೆಡೆ ಉದ್ಯೋಗ ದೊರೆಯದೆ ವಿದೇಶದಿಂದ ವಾಪಸ್ ಬರುವವರನ್ನು ಸ್ಮಗ್ಲರ್ ಗಳು ಉಪಯೋಗಿಸುತ್ತಿದ್ದಾರೆ ಅಂತಾ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ದಂಧೆ ಹಿಂದೆ ಸ್ಮಗ್ಲಿಂಗ್ ಮಾಫಿಯಾ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ವಿದೇಶದಲ್ಲಿರುವ ಸ್ಮಗ್ಲರ್ ಗಳು ಭಾರತಕ್ಕೆ ಬರುವವರನ್ನು ಬಳಸಿಕೊಂಡು ಚಿನ್ನ ಸಾಗಾಟ ಮಾಡುವ ಸಾಧ್ಯತೆಗಳಿವೆ. ಹೆಚ್ಚಿನವರು ಕಮೀಷನ್ ಆಸೆ ಗೆ ಚಿನ್ನ ಸಾಗಾಟ ಮಾಡಿ ವಿಮಾನ ನಿಲ್ದಾಣ ದಲ್ಲಿ ಅಧಿಕಾರಿಗಳಿಗೆ ಸಿಕ್ಕಿಬೀಳುತ್ತಿದ್ದಾರೆ ಅಂತಾ ಹೇಳಲಾಗುತ್ತಿದೆ. ಅಕ್ರಮ ‌ಚಿನ್ನ ಸಾಗಾಟ ಮಾಡುವವರ ಪೈಕಿ ಕೇರಳ, ಭಟ್ಕಳ ಮತ್ತು ಉತ್ತರ ಕನ್ನಡ ಮೂಲದವರೇ ಅಧಿಕವಾಗಿದ್ದು ,ಸ್ಮಗ್ಲರ್ ಗಳು ಒಂದು ವರ್ಗದ ಜನರನ್ನೇ ಗುರಿ ಮಾಡಿ ದಂಧೆ ಎಸಗುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕಸ್ಟಮ್ಸ್ ಅಧಿಕಾರಿಗಳು ಅಕ್ರಮ‌ಚಿನ್ನ ಸಾಗಾಟ ಪತ್ತೆ ಪ್ರಮಾಣ ಹೆಚ್ಚಾಗಿದ್ದು,ನಿರ್ದಿಷ್ಟ ಕಾರಣ ಪತ್ತೆಯಾಗಿಲ್ಲ. ತಪಾಸಣೆ ತೀವ್ರಗೊಳಿಸಿದ್ದೇವೆ. ಸ್ಮಗ್ಲಿಂಗ್ ಭಾಗಿಯಾದವರಿಗೆ 3 ರಿಂದ 7 ವರ್ಷ ಶಿಕ್ಷೆಗೆ ಅವಕಾಶವಿದೆ. ಸ್ಮಗ್ಲಿಂಗ್ ಮಾಡಿದರೆ ಏನಾಗಲ್ಲ ಅಂತಾ ಭ್ರಮೆಯಿಂದ ಜನರು ಹೊರಗೆ ಬರಬೇಕು ಅಂತಾ ಎಚ್ಚರಿಕೆ ನೀಡಿದ್ದಾರೆ. ವಿದೇಶದಿಂದ‌ ಬರುವವರು ನಾನಾ ರೂಪದಲ್ಲಿ ಚಿನ್ನ ಸಾಗಾಟ ಮಾಡುತ್ತಿದ್ದು, ಅಧಿಕಾರಿಗಳಿಗೂ ಪತ್ತೆ ಹಚ್ಚೋದು ಕಠಿಣವಾಗಿದೆ.
Published by: Latha CG
First published: April 20, 2021, 10:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories