ನಮ್ಮ ಮೆಟ್ರೊದಲ್ಲಿ (Namma Metro) ಹಿಂದಿ (Hindi) ಹೇರಿಕೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಕನ್ನಡಿಗರು, ಕನ್ನಡ ಪರ ಸಂಘಟನೆಗಳು ಹಿಂದಿ ಫಲಕದ ವಿರುದ್ಧ ಹೋರಾಟವನ್ನು ಮಾಡಿದ್ವು. ಅದಾದ ಬಳಿಕ ಮೆಟ್ರೊದಲ್ಲಿದ್ದ ಹಿಂದಿ ಭಾಷೆಯಲ್ಲಿ ಬರೆದಿದ್ದ ಫಲಕಕ್ಕೆ ಮೆಟ್ರೊ ಸಿಬ್ಬಂದಿ ಟೇಪ್ ಅಂಟಿಸಿದ್ದರು. ಅಲ್ಲಿ ಇಂಗ್ಲಿಷ್ ಮತ್ತು ಕನ್ನಡ (Kannada) ಮಾತ್ರ ಇತ್ತು. ಮೆಟ್ರೊದಲ್ಲಿ ಪ್ರಯಣ ಮಾಡಿದ್ದ ಅಕ್ಷತ್ ಗುಪ್ತಾ ಎಂಬ ವ್ಯಕ್ತಿ, ಹಿಂದಿಗೆ ಅಂಟಿಸಿದ್ದ ಸ್ಟಿಕ್ಕರ್ (Sticker)ಕಿತ್ತಿದ್ದರು. ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದ. ಅದನ್ನು ನೋಡಿದ ಕನ್ನಡ ಪರ ಹೋರಾಟಗಾರರಿಗೆ ಕೋಪ ಬಂದಿದೆ. ರೂಪೇಶ್ ರಾಜಣ್ಣ ಸೇರಿ, ಇತರೆ ಕನ್ನಡ ಹೋರಾಟಗಾರರು ಅವರಿರುವ ಸ್ಥಳಕ್ಕೆ ಹೋಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಕ್ಷತ್ ಗುಪ್ತಾನ ವೀಡಿಯೋ ವೈರಲ್ ಆದ ಬೆನ್ನಲ್ಲೇ ಕನ್ನಡ ಸಂಘಟನೆಗಳು ಆಕ್ರೋಶ ಹೊರಹಾಕಿದ್ದವು.
ಅಕ್ಷಯ್ ಗುಪ್ತಾ ವಿಡಿಯೋ ವೈರಲ್
ಮೆಟ್ರೋದಲ್ಲಿ ಅಕ್ಷತ್ ಗುಪ್ತಾ ಎಂಬ ವ್ಯಕ್ತಿ ಹಿಂದಿ ಫಲಕಕ್ಕೆ ಅಂಟಿಸಿದ್ದ ಸ್ಟಿಕ್ಕರ್ ಕಿತ್ತಿದ್ದರು. ಅದನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದರು. ಆ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಅದರಿಂದ ಕನ್ನಡ ಪರ ಹೋರಾಟಗಾರರು ಕೆರಳಿದ್ದರು. ಅಕ್ಷಯ್ ಗುಪ್ತಾ ಅವರು ವಿಳಾಸವನ್ನು ಜಾಲಡಿದ್ದರು. ಕೊನೆಗೂ ವಿಳಾಸ ಸಿಕ್ಕಿತ್ತು.
Reaction after action. pic.twitter.com/rADLxSlim1
— Mahendra Ballenhalli (@maheshivaramu) January 30, 2023
Sahi kiya? pic.twitter.com/HoASkixHj1
— Dr Gill (@ikpsgill1) January 30, 2023
ಎಲ್ಲೆಡೆ ಮೆಚ್ಚುಗೆ
ರಾಜ್ಯದಲ್ಲಿ ಹಿಂದಿ ಹೇರಿಕೆಗೆ ಹಲವರು ವಿರೋಧ ಇದೆ. ರೂಪೇಶ್ ರಾಜಣ್ಣ ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಒಳ್ಳೆಯ ಕೆಲಸ ಮಾಡಿದ್ದೀರಿ. ನಮ್ಮ ರಾಜ್ಯದಲ್ಲಿ ಕನನ್ಡ ಬೆಳೆಯಬೇಕು. ಬೇರೆ ರಾಜ್ಯದವರು ಕನ್ನಡ ಕಲಿಯಬೇಕು ಎಂದಿದ್ದಾರೆ. ರೂಪೇಶ್ ರಾಜಣ್ಣ ಕಾರ್ಯಕ್ಕೆ ಸೆಲ್ಯೂಟ್ ಹೇಳಿದ್ದಾರೆ.
ಇದನ್ನೂ ಓದಿ: Karnataka Rains: ರಾಜ್ಯದ ಈ ಭಾಗಗಳಲ್ಲಿ ಫೆಬ್ರವರಿ 1 ರಂದು ಮಳೆ, ಹವಾಮಾನ ಇಲಾಖೆ ಮುನ್ಸೂಚನೆ!
ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ
ರೂಪೇಶ್ ರಾಜಣ್ಣ ಕನ್ನಡ ಪರ ಹೋರಾಟಗಾರರಾಗಿದ್ದಾರೆ. ಹಲವು ಬಾರಿ ಕನ್ನಡದ ಪರ ಧ್ವನಿ ಎತ್ತಿದ್ದಾರೆ. ರೂಪೇಶ್ ರಾಜಣ್ಣ ಈ ಬಾರಿ ಬಿಗ್ ಬಾಸ್ ಸೀಸನ್ 09ಕ್ಕೆ ಬಂದಿದ್ದರು. ಈ ರಿಯಾಲಿಟಿ ಶೋ ಮೂಲಕ ಮತ್ತಷ್ಟು ಜನರಿಗೆ ಪರಿಚಿತವಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲೂ ಏನಾದ್ರೂ ಅನ್ಯಾಯ ಆಗಿದೆ ಅನ್ನಿಸಿದ್ರೆ, ಅಲ್ಲೂ ಜಗಳ ಮಾಡ್ತಾ ಇದ್ದರು. ರಾಜಣ್ಣ ಅವರು ಸದಾ ನ್ಯಾಯದ ಪರ ಹೋರಾಟ ನಡೆಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ