ಇನ್ಮುಂದೆ ಶವದ ಅಂತ್ಯಸಂಸ್ಕಾರಕ್ಕೂ ಆಧಾರ್ ಕಾರ್ಡ್​​ ಕಡ್ಡಾಯ: ಮೈಸೂರು ಪಾಲಿಕೆ ಕ್ರಮ

ಮೃತರಿಂದ ಉಂಟಾಗುವ ಕಾನೂನು ತೊಡಕು ಹಾಗೂ ಕೌಟಂಬಿಕ ವ್ಯಾಜ್ಯ ನಿವಾರಣೆಗಾಗಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮೈಸೂರು(ಮಾ. 04): ಸರ್ಕಾರದ ಯಾವುದೇ ಸೌಲಭ್ಯ ಪಡೆಯಲು ಈಗ ಆಧಾರ್​ ಕಡ್ಡಾಯವಾಗಿದೆ. ಇನ್ಮುಂದೆ ನೀವು ಬದುಕಿದ್ದಾಗ ಮಾತ್ರವಲ್ಲ ಸತ್ತ ಬಳಿಕ ಸ್ಮಶಾನದಲ್ಲಿ ಅಂತ್ಯಕ್ರಿಯೆಗೂ ಈ ಆಧಾರ್ ಇರಲೇಬೇಕು ಎನ್ನುತ್ತಿದ್ದಾರೆ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು. 

  ನಗರದ ಪಾಲಿಕೆ ವ್ಯಾಪ್ತಿಯಲ್ಲಿ ಬರುವ 38 ಸ್ಮಶಾನದಲ್ಲಿ ಶವಗಳ ಅಂತ್ಯ ಸಂಸ್ಕಾರಕ್ಕೆ ಆಧಾರ್​ ಕಡ್ಡಾಯ ಮಾಡಿ ಪಾಲಿಕೆ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಮೃತರಿಂದ ಉಂಟಾಗುವ ಕಾನೂನು ತೊಡಕು ಹಾಗೂ ಕೌಟಂಬಿಕ ವ್ಯಾಜ್ಯ ನಿವಾರಣೆಗಾಗಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ಪಾಲಿಕೆ ಸಾಂಖ್ಯಿಕ ಅಧಿಕಾರಿ ಅನಿಲ್ ಕ್ರಿಷ್ಟಿ ತಿಳಿಸಿದ್ದಾರೆ.

  ಸ್ಮಶಾನದಲ್ಲಿ ಅಂತ್ಯಸಂಸ್ಕಾರದ ವೇಳೆ ಆಧಾರ್ ಜೆರಾಕ್ಸ್ ಪ್ರತಿ  ಅಥವಾ ವಾಸ ಧೃಡೀಕರಣ ಯಾವುದಾದರೂ ದಾಖಲೆ ನೀಡಬೇಕು. ಇಲ್ಲವಾದಲ್ಲಿ ಸ್ಮಶಾನದಲ್ಲಿರುವ ಪಾಲಿಕೆ ಅಧಿಕಾರಿಯಿಂದ ಸ್ಥಳ ಪರಿಶೀಲನೆ ನಡೆಸಬೇಕು. ಆ ನಂತರವಷ್ಟೇ ಅಂತ್ಯಕ್ರಿಯೆಗೆ ಅವಕಾಶ ನೀಡಲಾಗುವುದು.

  ಅಂತ್ಯ ಸಂಸ್ಕಾರ ಸಂದರ್ಭದಲ್ಲಿ ತಪ್ಪು ಮಾಹಿತಿ ಅಥವ ತಪ್ಪು ಹೆಸರು ನೀಡುವ ಉದಾಹರಣೆ ಬಹಳಷ್ಟಿದೆ. ಇದರಿಂದ ಸಮಸ್ಯೆಗಳು ಉಂಟಾಗುತ್ತಿವೆ. ಅಲ್ಲದೇ ಅಪರಾಧ ನಡೆದು ವ್ಯಕ್ತಿ ಸಾವನ್ನಪ್ಪಿದಾಗಲೂ ಪೊಲೀಸರಿಗೆ ಮಾಹಿತಿ ತಿಳಿಯುತ್ತಿರಲಿಲ್ಲ. ಇದರಿಂದ ಅನೇಕ ವೇಳೆ ಶವ ಹೊರತೆಗೆದಿರುವ ಪ್ರಕರಣಗಳು ನಡೆದಿವೆ.

  ಇದನ್ನು ಓದಿ: ನಿಖಿಲ್​ ಮದುವೆ: ರಾಮನಗರ ಜನರಿಗೆ ಭರ್ಜರಿ ಗಿಫ್ಟ್​; ರೇಷ್ಮೆ ಸೀರೆ, ಪಂಚೆ, ಶರ್ಟ್​ ನೀಡಿ ಮತದಾರರಿಗೆ ಎಚ್​ಡಿಕೆ ಆಹ್ವಾನ

  ಇದಲ್ಲದೇ ಅಂತ್ಯ ಸಂಸ್ಕಾರದ ವೇಳೆ ವ್ಯಕ್ತಿಗೆ ಎರಡು ಹೆಸರಿದ್ದಾಗ ಕರೆಯುವ ಹೆಸರಿನ ಮಾಹಿತಿ ನೀಡಿ, ಮರಣ ಪ್ರಮಾಣ ಪತ್ರಕ್ಕಾಗಿ ನ್ಯಾಯಾಲಯಕ್ಕಾಗಿ ಅಲೆದಾಡುವಂತಹ ಪರಿಸ್ಥಿತಿ ಕೂಡ ನಿರ್ಮಾಣವಾಗಿದೆ ಈ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಲಾಗಿದೆ. ಇದು ಜನರ ಅನುಕೂಲಕ್ಕಾಗಿ ಮಾಡಿದ ಕ್ರಮ ಎಂದು ಪಾಲಿಕೆ ಅಧಿಕಾರಿಗಳು ಸ್ಪಷ್ಟಪಡಿಸಿದರು.
  First published: