ಬೆಂಗಳೂರು: ರಾಜ್ಯದೆಲ್ಲೆಡೆ ವಿಧಾನಸಭಾ ಚುನಾವಣೆಗೆ (Karnataka Election 2023) ಬಿರುಸಿನಿಂದ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಮಧ್ಯಾಹ್ನ ತನಕ ಮತದಾನ ಮಾಡಲು ಬರುತ್ತಿರುವವರ ಸಂಖ್ಯೆ ತುಂಬಾನೇ ಹೆಚ್ಚಿತ್ತು. ಆದರೆ ಮಧ್ಯಾಹ್ನ ನಂತರ ಹಕ್ಕು ಚಲಾಯಿಸಲು (Karnataka Polls) ಬರುತ್ತಿರುವವರ ಸಂಖ್ಯೆ ಕಡಿಮೆ ಆಗ್ತಿದೆ. ಇದೆಲ್ಲದರ ಮಧ್ಯೆ ರಾಜ್ಯದ ಅನೇಕ ಕಡೆಗಳಲ್ಲಿ ಮತದಾನದ ದಿನವೇ ರಾಜಕಾರಣ ಕಾರಣಗಳಿಗಾಗಿ ಜಗಳವೂ ನಡೆದಿದೆ.
ರೇಣುಕಾಚಾರ್ಯ ಕಾರ್‌ಗೆ ಮುತ್ತಿಗೆ!
ನೀತಿ ಸಂಹಿತೆ ಉಲ್ಲಂಘಿಸಿ ನ್ಯಾಮತಿ ಯರಗನಾಳ್ ಗ್ರಾಮಕ್ಕೆ ಭೇಟಿ ನೀಡಿದ್ದ ಬಿಜೆಪಿ ಶಾಸಕ ರೇಣುಕಾಚಾರ್ಯ ಅವರ ಕಾರ್‌ಗೆ ಕೈ ಕಾರ್ಯಕರ್ತರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಈ ವೇಳೆ ಶಾಸಕರ ಕಾರ್ ಮುತ್ತಿಗೆ ಹಾಕಿದ್ದಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯ ಗಲಾಟೆಯೂ ನಡೆಯಿತು. ಗಲಾಟೆ ಜೋರಾಗ್ತಿದ್ದಂತೆ ಶಾಸಕ ರೇಣುಕಾಚಾರ್ಯ ಅವರು ಅಲ್ಲಿಂದ ಕಾಲ್ಕಿತ್ತರು.
ಇದನ್ನೂ ಓದಿ: Karnataka Exit Poll 2023 Live Updates: ಕರ್ನಾಟಕದಲ್ಲಿ ಯಾರ ಅಧಿಪತ್ಯ? ಕೆಲವೇ ಕ್ಷಣದಲ್ಲಿ ಸಿಗಲಿದೆ ಉತ್ತರ
ಬಿಜೆಪಿ- ಜೆಡಿಎಸ್ ಕಾರ್ಯಕರ್ತರ ಹೊಡೆದಾಟ
ಇತ್ತ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕೇಶ್ವಾರ ಗ್ರಾಮದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಮಧ್ಯೆ ಹೊಡೆದಾಟ ನಡೆದಿದೆ. ಪೊಲೀಸರ ಸಮ್ಮುಖದಲ್ಲೇ ಎರಡು ತಂಡಗಳ ಮಧ್ಯೆ ಮಾರಾಮಾರಿ ಉಂಟಾಗಿದ್ದು, ಗಲಾಟೆ ನಿಯಂತ್ರಣ ಮಾಡಲು ಪೊಲೀಸರು ಹರಸಾಹಸಪಟ್ಟರು. ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಕಾರ್ಯಕರ್ತರ ವಿಡಿಯೋ ತೆಗೆಯುತ್ತಿದ್ದರು. ವಿಡಿಯೋ ತೆಗೆಯುವ ವಿಚಾರಕ್ಕೆ ನಡೆದ ಮಾತಿನ ಚಕಮಕಿ ಹೊಡೆದಾಟದ ತನಕ ಬಂದು ನಿಂತಿದೆ.
ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
ಬೀದರ್‌ನ ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ - ಬಿಜೆಪಿ ಕಾರ್ಯಕರ್ತರ ಮಧ್ಯ ಗಲಾಟೆ ನಡೆದಿದೆ. ಮತಗಟ್ಟೆ ಅಧಿಕಾರಿಯಿಂದ ಕಾಂಗ್ರೆಸ್‌ಗೆ ಮತಯಾಚನೆ ಮಾಡಿದ ಆರೋಪ ಕೇಳಿ ಬಂದಿದ್ದು, ಇದಕ್ಕಾಗಿ ಕೈ- ಕಮಲ ಕಾರ್ಯಕರ್ತರಿಂದ ಮಾತಿನ ಚಕಮಕಿ ಉಂಟಾಗಿ ಕೈ- ಕೈ ಮಿಲಾಯಿಸುವ ಹಂತಕ್ಕೆ ಬಂದು ನಿಂತಿದೆ. ಈ ವೇಳೆ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು, ಚುನಾವಣೆ ಅಧಿಕಾರಿಗಳು ಭೇಟಿ ನೀಡಿ ಗಲಾಟೆ ಚದುರಿಸಿ, ಸುಗಮ ಮತದಾನಕ್ಕೆ ಅನುವು ಮಾಡಿಕೊಟ್ಟರು.
ಇದನ್ನೂ ಓದಿ: Savitha Bai: ನಾನು ನಿಮ್ಮನ್ನೇ ನಂಬಿ ಬಂದಿದ್ದೇನೆ; ಫೇಸ್‌ಬುಕ್ ಲೈವ್‌ನಲ್ಲಿ ಗಳಗಳನೇ ಅತ್ತ ಪಕ್ಷೇತರ ಅಭ್ಯರ್ಥಿ!
ಪೊಲೀಸ್ ಪೇದೆ ಮೇಲೆ ಹಲ್ಲೆ!
ಪೊಲೀಸ್ ಪೇದೆ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಆರೋಪ ಮಧುಗಿರಿ ತಾಲೂಕಿನ ಎಚ್ ಬಸವನಹಳ್ಳಿ ಮತಗಟ್ಟೆ ಬಳಿ ಕೇಳಿ ಬಂದಿದೆ. ಕಾಂಗ್ರೆಸ್ ಕಾರ್ಯಕರ್ತರು ಮತಗಟ್ಟೆ ಬಳಿ ಬಂದು ಪ್ರಚಾರ ಮಾಡುತಿದ್ದರು. ಈ ವೇಳೆ ಮತಗಟ್ಟೆಯಿಂದ ದೂರ ಹೋಗುವಂತೆ ಪೇದೆ ಹೇಳಿದ್ದಾರೆ. ಪೊಲೀಸ್ ಪೇದೆ ಮಾತಿಗೆ ಪ್ರತಿರೋಧ ಒಡ್ಡಿದ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿ ಪೇದೆಯನ್ನೇ ಅಟ್ಟಾಡಿಸಿದ್ದಾರೆ.
ಅಲ್ಲದೇ ಗಲಾಟೆಯ ದೃಶ್ಯ ಚಿತ್ರೀಕರಣ ಮಾಡುತಿದ್ದ ಯೂಟ್ಯೂಬ್ ವಾಹಿನಿ ವರದಿಗಾರನ ಮೇಲೂ ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ