ಬೆಂಗಳೂರು(ಫೆ.17): ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಶುಕ್ರವಾರ ತಮ್ಮ ಎರಡನೇ ಬಜೆಟ್ (Karnataka Budget 2023) ಮತ್ತು ಪ್ರಸ್ತುತ ಅವಧಿಯಲ್ಲಿ ಬಿಜೆಪಿ ಸರ್ಕಾರದ (BJP Govt) ಕೊನೆಯ ಬಜೆಟ್ ಅನ್ನು ಮಂಡಿಸಿದರು . ಚುನಾವಣಾ ವರ್ಷದಲ್ಲಿ ರೈತರನ್ನು ಓಲೈಸುವ ಉದ್ದೇಶದಿಂದ ಮುಖ್ಯಮಂತ್ರಿಗಳು ಬಡ್ಡಿರಹಿತ ಅಲ್ಪಾವಧಿ ಸಾಲದ ಮಿತಿ ಹೆಚ್ಚಳ ಮಾಡಿದ್ದಾರೆ.
ಬಜೆಟ್ನಲ್ಲಿ ಮಾಡಲಾದ ಪ್ರಮುಖ ಘೋಷಣೆಗಳ ಪಟ್ಟಿ ಇಲ್ಲಿದೆ ನೋಡಿ
* ರೈತರಿಗೆ ನೀಡಲಾಗುವ ಬಡ್ಡಿ ರಹಿತ ಸಾಲದ ಮಿತಿ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ
* ಭೂ ಸಿರಿ ಯೋಜನೆ ಮೂಲಕ 50 ಲಕ್ಷ ರೈತರಿಗೆ ಲಾಭ. ಈ ಯೋಜನೆಯಡಿ, ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ 10,000 ರೂಪಾಯಿ ಹೆಚ್ಚುವರಿ ಸಬ್ಸಿಡಿ.
ಇದನ್ನೂ ಓದಿ: Karnataka Budget 2023-24 Live: ಸರ್ಕಾರಿ ಉದ್ಯೋಗಿಗಳ ಆಸೆಗೆ ತಣ್ಣೀರೆರಚಿದ ಬಜೆಟ್, 7ನೇ ವೇತನ ಆಯೋಗದ ಬಗ್ಗೆ ಸಿಎಂ ಮೌನ
* ರೈತರು ಮತ್ತು ಕುಟುಂಬಗಳಿಗೆ ₹150 ಕೋಟಿ ಮೌಲ್ಯದ ಜೀವನ್ ಜ್ಯೋತಿ ವಿಮಾ ಯೋಜನೆ
* ರೈತರಿಗೆ 100 ಕಟಾವು ಯಂತ್ರಗಳನ್ನು ಖರೀದಿಸುವ ಯೋಜನೆಗೆ 50 ಕೋಟಿ ರೂ
* ಪ್ರತಿ ರೈತ ಉತ್ಪಾದಕ ಸಂಸ್ಥೆಗಳಿಗೆ ರೂ 10 ಲಕ್ಷ ಹೂಡಿಕೆ
* 1,000 ಸಣ್ಣ ಟ್ಯಾಂಕ್‌ಗಳ ಅಭಿವೃದ್ಧಿ
* ಅಂತರ್ಜಲವನ್ನು ಸುಧಾರಿಸುವ ಯೋಜನೆಯಾದ ಜಲ ನಿಧಿಯನ್ನು MNREGAದಡಿ ಸೇರ್ಪಡೆ.
* ಬೆಂಗಳೂರಿನ ಅಭಿವೃದ್ಧಿಗೆ 10,000 ಕೋಟಿ ರೂ ಮೀಸಲು.
* ಅಂಗನವಾಡಿ ಕಾರ್ಯಕರ್ತೆಯರು, ಅಡುಗೆಯವರು, ಆಶಾ ಕಾರ್ಯಕರ್ತೆಯರು ಮತ್ತು ಗ್ರಂಥಪಾಲಕರ ಗೌರವಧನ 1,000 ರೂ ಹೆಚ್ಚಳ
* ಬೊಮ್ಮಾಯಿ ಅವರು 'ಸಿಎಂ ವಿದ್ಯಾ ಶಕ್ತಿ ಯೋಜನೆ'ಯನ್ನು ಘೋಷಿಸಿದರು, ಇದರ ಅಡಿಯಲ್ಲಿ ಸರ್ಕಾರಿ ಪಿಯು ಮತ್ತು ಪದವಿ ಕಾಲೇಜುಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ. 8 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಯೋಜನೆ
* ವಿದ್ಯಾರ್ಥಿಗಳಿಗೆ 'ಮಕ್ಕಳ ಬಸ್' ಎಂಬ ಮೀಸಲಾದ ಬಸ್‌ಗಳನ್ನು ನಿರ್ವಹಿಸಲು ರಸ್ತೆ ಸಾರಿಗೆ ನಿಗಮಗಳಿಗೆ ರಾಜ್ಯದಿಂದ 100 ಕೋಟಿ ರೂ.
* ಗ್ರಾಮೀಣ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಶಾಲೆ ಮುಗಿಸಿ ಸರ್ಕಾರಿ ಕೋಟಾದಡಿ ವೃತ್ತಿಪರ ಕೋರ್ಸ್‌ಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳ ಶುಲ್ಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭರಿಸಲಿದೆ.
* ದೇಶೀಯ ತಳಿ ಮುಧೋಳ ಶ್ವಾನವನ್ನು ಅಭಿವೃದ್ಧಿಪಡಿಸಲು 5 ಕೋಟಿ ರೂಪಾಯಿಗಳ ಯೋಜನೆಯನ್ನು ಘೋಷಿಸಲಾಯಿತು, ಇದರಿಂದಾಗಿ ನಾಯಿ ಪ್ರೇಮಿಗಳು ಅವುಗಳನ್ನು ಮತ್ತಷ್ಟು ದತ್ತು ಪಡೆದುಕೊಳ್ಳಲು ಪ್ರೋತ್ಸಾಹಿಸಿದಂತಾಗುತ್ತದೆ.
* 50 ಕೋಟಿ ವೆಚ್ಚದಲ್ಲಿ 250 'ಶೀ ಟಾಯ್ಲೆಟ್'ಗಳನ್ನು ಸಿಎಂ ಘೋಷಿಸಿದ್ದಾರೆ. ಬೆಂಗಳೂರಿನ ಹೆಚ್ಚಿನ ಜನಸಂಖ್ಯೆಯ ಮಾರುಕಟ್ಟೆಗಳು ಮತ್ತು ಬೃಹತ್ ವಾಣಿಜ್ಯ ಸಂಕೀರ್ಣಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗುವುದು.
* ಸಾಂಕ್ರಾಮಿಕವಲ್ಲದ ರೋಗಗಳ ಆರಂಭಿಕ ಪತ್ತೆಗೆ ಆದ್ಯತೆಯನ್ನು ನೀಡುತ್ತಾ, 45 ಜಿಲ್ಲಾ ಆಸ್ಪತ್ರೆಗಳನ್ನು ಜಯದೇವ ಆಸ್ಪತ್ರೆಗೆ ಮ್ಯಾಪಿಂಗ್ ಮಾಡಲು ಮತ್ತು ಶಿವಮೊಗ್ಗ, ಕಲಬುರ್ಗಿ ಮತ್ತು ಮೈಸೂರಿನಲ್ಲಿ ಕಿದ್ವಾಯಿ ಶಾಖೆಗಳನ್ನು ಪ್ರಾರಂಭಿಸಲು ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ.
ಇದನ್ನೂ ಓದಿ: Karnataka Budget 2023: ಬಣ್ಣ ಬಣ್ಣದ ಘೋಷಣೆ ಮಾಡಿ, ಕಿವಿ ಮೇಲೆ ಹೂ ಇರಿಸುವ ಪ್ರಯತ್ನ; ಬಜೆಟ್ಗೆ ಕಾಂಗ್ರೆಸ್ ಪ್ರತಿಕ್ರಿಯೆ
* ಆರು ಹೊಸ ಇಎಸ್‌ಐ ಆಸ್ಪತ್ರೆಗಳು, 28 ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು 10 ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗಳನ್ನು ಪ್ರಾರಂಭಿಸುವ ಪ್ರಸ್ತಾವನೆಯನ್ನು ಸಿಎಂ ಘೋಷಿಸಿದರು.
* ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನು ಮಕ್ಕಳ ಪೋಷಣೆ ಇಲಾಖೆ ಮತ್ತು ಮಹಿಳಾ ಸಬಲೀಕರಣ ಇಲಾಖೆಯಾಗಿ ವಿಭಜಿಸಲಾಗುತ್ತದೆ.
* ಸಿಎಂ ಬೊಮ್ಮಾಯಿ 'ಗೃಹಿಣಿ ಶಕ್ತಿ ಯೋಜನೆ' ಘೋಷಣೆ. ಇದರ ಅಡಿಯಲ್ಲಿ, 'ಶ್ರಮ ಶಕ್ತಿ' ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸಲಾಗುವುದು, ಡಿಬಿಟಿ ಅಡಿಯಲ್ಲಿ ಭೂರಹಿತ ಮಹಿಳಾ ರೈತ ಕಾರ್ಮಿಕರಿಗೆ ತಿಂಗಳಿಗೆ ತಲಾ 500 ರೂ. ನೀಡಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ