Karnataka By-Elections 2019: ಮತಯಂತ್ರ ವಾಸ್ತುಪ್ರಕಾರ ಇಲ್ವಂತೆ; ಇವಿಎಂ ಯಂತ್ರವನ್ನೇ ತಿರುಗಿಸಿ ಮತದಾನ ಮಾಡಿ ನಗೆಪಾಟಲಿಗೀಡಾದ ಜೆಡಿಎಸ್ ಅಭ್ಯರ್ಥಿ

Karnataka By Elections Latest news: ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರಂತೆ ಜೆಡಿಎಸ್ ನಾಯಕರಿಗೆ ಏಕೆ ಯಾವಾಗಲೂ ವಾಸ್ತುದೋಷ ಕಾಡುತ್ತದೆ? ಎಂದು ಜನ ಸಾಮಾನ್ಯರು ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ನಾಯಕರ ಮೂಢನಂಬಿಕೆಗಳ ವಿರುದ್ದ ಮುಗಿಬಿದ್ದಿದ್ದಾರೆ.

MAshok Kumar | news18-kannada
Updated:December 5, 2019, 10:01 AM IST
Karnataka By-Elections 2019: ಮತಯಂತ್ರ ವಾಸ್ತುಪ್ರಕಾರ ಇಲ್ವಂತೆ; ಇವಿಎಂ ಯಂತ್ರವನ್ನೇ ತಿರುಗಿಸಿ ಮತದಾನ ಮಾಡಿ ನಗೆಪಾಟಲಿಗೀಡಾದ ಜೆಡಿಎಸ್ ಅಭ್ಯರ್ಥಿ
ಕೆ.ಆರ್​. ಪೇಟೆ ಜೆಡಿಎಸ್ ಅಭ್ಯರ್ಥಿ ಬಿ.ಎಲ್. ದೇವರಾಜ್.
  • Share this:
ಮೈಸೂರು (ಡಿಸೆಂಬರ್ 05); ಚುನಾವಣಾ ಅಧಿಕಾರಿಗಳು ಮತಯಂತ್ರವನ್ನು ವಾಸ್ತು ಪ್ರಕಾರ ಸರಿಯಾದ ದಿಕ್ಕಿಗೆ ಇಟ್ಟಿಲ್ಲ ಎಂದು ಆರೋಪಿಸಿ ಕೆ.ಆರ್. ಪೇಟೆ ಜೆಡಿಎಸ್ ಅಭ್ಯರ್ಥಿ ಬಿ.ಎಲ್. ದೇವರಾಜು ಮತಯಂತ್ರವನ್ನೇ ತಿರುಗಿಸಿ ಮತದಾನ ಮಾಡಿ ನಗಪಾಟಲಿಗೆ ಈಡಾಗಿರುವ ಘಟನೆ ಬೆಳಕಿಗೆ ಬಂದಿದೆ.

ಕೆ.ಆರ್. ಪೇಟೆ ಜೆಡಿಎಸ್ ಪಕ್ಷದ ಅಭ್ಯರ್ಥಿ ಬಿ.ಎಲ್. ದೇವರಾಜು ತಮ್ಮ ಮತ ಚಲಾಯಿಸಲು ಇಂದು ಹುಟ್ಟೂರು ಬಂಡಿಹೊಳೆಗೆ ಕುಟುಂಬ ಸಮೇತರಾಗಿ ತೆರಳಿದ್ದಾರೆ. ಆದರೆ, ಮತಗಟ್ಟೆ 151ರಲ್ಲಿ ಮತದಾನ ಮಾಡಲು ಅವರು ಆಗಮಿಸಿದ ವೇಳೆ ಮತಯಂತ್ರ ವಾಸ್ತು ಪ್ರಕಾರ ಇಲ್ಲ ಎಂದು ಆರೋಪಿಸಿರುವ ಅವರು ಕೂಡಲೇ ಮತಗಟ್ಟೆ ಸಿಬ್ಬಂಧಿಗಳನ್ನು ಕರೆದು ಮತಯಂತ್ರವನ್ನು ತಿರುಗಿಸಿ ಮತದಾನ ಮಾಡಿದ್ದಾರೆ.

ಬಿ.ಎಲ್​. ದೇವರಾಜು ಅವರಿಗೆ ವಾಸ್ತು ಮೇಲೆ ಅಪಾರ ನಂಬಿಕೆ ಇದ್ದು ಇದೇ ಕಾರಣಕ್ಕೆ ಅವರು  ಮತಯಂತ್ರವನ್ನೇ ತಿರುಗಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಜೆಡಿಎಸ್ ಅಭ್ಯರ್ಥಿಯ ಈ ನಡವಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ಇದೀಗ ಚರ್ಚೆಗೆ ಗ್ರಾಸವಾಗಿದೆ.

ಅಲ್ಲದೆ, ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರಂತೆ ಜೆಡಿಎಸ್ ನಾಯಕರಿಗೆ ಏಕೆ ಯಾವಾಗಲೂ ವಾಸ್ತುದೋಷ ಕಾಡುತ್ತದೆ? ಎಂದು ಜನ ಸಾಮಾನ್ಯರು ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ನಾಯಕರ ಮೂಢನಂಬಿಕೆಗಳ ವಿರುದ್ದ ಮುಗಿಬಿದ್ದಿದ್ದಾರೆ.

ಇದನ್ನೂ ಓದಿ : ಹರಾಮಿ ದುಡ್ಡು ಖಾಲಿ ಮಾಡಲು ಲಖನ್ ಚುನಾವಣೆಗೆ ಸ್ಪರ್ಧೆ ಮಾಡಿದ್ದಾನೆ; ರಮೇಶ್ ಜಾರಕಿಹೊಳಿ ವಾಗ್ದಾಳಿ
First published:December 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading