• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Koppala Voters: ಸೂರ್ಯ ಮೂಡೋ ಮುನ್ನವೇ ಕೊಪ್ಪಳದಲ್ಲಿ ಮತ ಚಲಾಯಿಸಲು ಬಂದ ವಯೋವೃದ್ಧರು!

Koppala Voters: ಸೂರ್ಯ ಮೂಡೋ ಮುನ್ನವೇ ಕೊಪ್ಪಳದಲ್ಲಿ ಮತ ಚಲಾಯಿಸಲು ಬಂದ ವಯೋವೃದ್ಧರು!

ವಿಧಾನಸಭಾ ಚುನಾವಣೆಗೆ ಮತದಾನ

ವಿಧಾನಸಭಾ ಚುನಾವಣೆಗೆ ಮತದಾನ

Karnataka Election 2023: ಚುನಾವಣೆ ದಿನ ಮತ ಚಲಾಯಿಸಲು ಹಿಂದೇಟು ಹಾಕುತ್ತಿರುವ ಯುವ ಜನರ ಮಧ್ಯೆ ಕೊಪ್ಪಳದ ಗಂಗಾವತಿ ನಗರದಲ್ಲಿ ವಯೋವೃದ್ಧರು ಸೂರ್ಯ ಮೂಡೋ ಮೊದಲೇ ವೋಟ್ ಹಾಕಲು ಬಂದು ಇತರರಿಗೆ ಮಾದರಿಯಾಗಿದ್ದಾರೆ.

  • Share this:

ಕೊಪ್ಪಳ: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ (Assembly Election 2023) ನಡೆಯುತ್ತಿರುವ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಐದು ವರ್ಷಕ್ಕೊಮ್ಮೆ ಬರುವ ಚುನಾವಣಾ ಹಬ್ಬಕ್ಕೆ ಈ ಬಾರಿ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಇಂದು ಮತದಾನ ಆಗಿರೋದ್ರಿಂದ ಹಲವು ಭಾಗಗಳಲ್ಲಿ ತಮ್ಮ ಹಕ್ಕು ಚಲಾಯಿಸಲು ಜನರು ಮುಂದೆ ಬಂದಿದ್ದಾರೆ.


ಇತ್ತ ಕೊಪ್ಪಳದಲ್ಲಿ ಕೂಡ ವಯೋವೃದ್ಧರು ಮತದಾನ ಆರಂಭವಾಗುವ ಮುನ್ನವೇ ಮುಂಜಾನೆ ಬಂದು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ವಯೋವೃದ್ಧರು ಮತದಾನ ಮಾಡಲು ಉತ್ಸಾಹ ತೋರಿಸಿದ್ದು, ವೋಟ್ ಮಾಡೋದನ್ನು ತಪ್ಪಿಸಲು ಕಾರಣ ಹುಡುಕುವ ಯುವಜನರನ್ನು ನಾಚುವಂತೆ ಮಾಡಿದ್ದಾರೆ. ಗಂಗಾವತಿ ನಗರದ ಮತಗಟ್ಟೆಯಲ್ಲಿ ಹತ್ತಾರು ಮಂದಿ ವಯೋ ವೃದ್ಧರು ಸಮಯಕ್ಕೆ ಮೊದಲೇ ಮತ ಚಲಾಯಿಸಲು ಬಂದು ಪಿಂಕ್‌ ಬೂತ್‌ನಲ್ಲಿ ಸಾಲಿನಲ್ಲಿ ನಿಂತಿದ್ದಾರೆ.


ಇದನ್ನೂ ಓದಿ: Ramanagara Elections: ಹಕ್ಕು ಚಲಾಯಿಸಲು ಸಜ್ಜಾದ ರಾಮನಗರ ಜಿಲ್ಲೆಯ ಘಟಾನುಘಟಿ ನಾಯಕರು!


ಬೆಳಗ್ಗೆ ಏಳು ಗಂಟೆಗೆ ಮತದಾನ ಆರಂಭವಾಗುತ್ತದೆ ಅನ್ನೋದು ಗೊತ್ತಿದ್ದರೂ ಕೂಡ 5.45ಕ್ಕೆ ಬಂದು ಪಿಂಕ್ ಬೂತ್‌ನಲ್ಲಿ ಸಾಲಿನಲ್ಲಿ ನಿಂತ ವಯೋವೃದ್ಧರು ಇತರರಿಗೆ ಮಾದರಿಯಾದರು. ಏಳು ಗಂಟೆ ನಂತರ ಸಿಕ್ಕಾಪಟ್ಟೆ ಜನ ಬಂದು ತುಂಬಾ ಹೊತ್ತು ಬಿಸಿಲಿನಲ್ಲಿ ಕಾಯಬೇಕಾಗುತ್ತದೆ ಅನ್ನೋದನ್ನು ಅರಿತ ಹಿರಿಯ ಜೀವಗಳು ಎಲ್ಲರಿಗಿಂತ ಮೊದಲು ನಾವೇ ಹಕ್ಕು ಚಲಾಯಿಸಿ ನಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು ಎಂದು ಪ್ಲಾನ್‌ ಮಾಡಿದ್ರು.


ಮತದಾನಕ್ಕೆ ಮಳೆಯ ಕರಿಛಾಯೆ


ಬೆಂಗಳೂರು: ಈ ಬಾರಿಯ ಚುನಾವಣೆಗೆ ಮಳೆಯ ಕರಿಛಾಯೆಯೂ ತಟ್ಟಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಮುಂದಿನ ನಾಲ್ಕೈದು ದಿನಗಳ ಕಾಲ ರಾಜ್ಯದಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಎರಡು ದಿನದ ಹಿಂದೆಯೇ ಹವಾಮಾನ ಇಲಾಖೆ ಸೂಚಿಸಿತ್ತು. ಇದು ಇಂದು ನಡೆಯಲಿರುವ ಮತದಾನ ಪ್ರಕ್ರಿಯೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ವರ್ಷಧಾರೆ ಸುರಿಯುವ ಸಾಧ್ಯತೆ ಇದ್ದು, ಈ ಭಾಗದಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಿ ಹವಾಮಾನ ಇಲಾಖೆ ಆದೇಶಿಸಿದೆ.


ಇದನ್ನೂ ಓದಿ: Karnataka Election 2023 Live Updates: ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ಆರಂಭ




ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಇರಲಿದೆ. ಇತ್ತ ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.

top videos
    First published: