news18-kannada Updated:August 22, 2020, 12:04 PM IST
ವೆಬ್ ಸೀರಿಸ್
ಬೆಂಗಳೂರು(ಆ.22): ಕಾಡುಗಳ್ಳ ವೀರಪ್ಪನ್ ಕುರಿತಾಗಿ ವೆಬ್ ಸೀರೀಸ್ ಶುರುವಾಗಿದೆ. ಈ ಹಿಂದೆ ವೀರಪ್ಪನ್ ಬಗ್ಗೆ ಅಟ್ಟಹಾಸ ಚಿತ್ರ ನಿರ್ಮಾಣ ಮಾಡಿದ್ದ ಎಎಂಆರ್ ರಮೇಶ್ ವೆಬ್ ಸೀರೀಸ್ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ದಂತಚೋರ ವೀರಪ್ಪನ್ ಕುರಿತಾಗಿ ನಿರ್ಮಾಣ ಆಗುತ್ತಿರುವ ವೆಬ್ ಸೀರೀಸ್ ಗೆ ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದರು. ಕೆಎಸ್ಆರ್ ಪಿ ಅವರಣದ ದೇವಸ್ಥಾನದಲ್ಲಿ ವೆಬ್ ಸೀರೀಸ್ ಚಿತ್ರೀಕರಣಕ್ಕೆ ಅಲೋಕ್ ಕುಮಾರ್ ಚಾಲನೆ ನೀಡಿದರು. ಈ ವೇಳೆ ವೆಬ್ ಸೀರೀಸ್ ನಿರ್ದೇಶಕ ಎಎಂಆರ್ ರಮೇಶ್, ನಟ ಕಿಶೋರ್ ಹಾಗೂ ಚಿತ್ರತಂಡ ಹಾಜರಿದ್ದರು.
ಕಾಡುಗಳ್ಳ, ದಂತಚೋರ ಎಂದೇ ಕುಖ್ಯಾತನಾಗಿದ್ದ ವೀರಪ್ಪನ್ ಬೇಟೆಯಲ್ಲಿ ರಾಜ್ಯದ ಕೆಎಸ್ಆರ್ ಪಿ ಪ್ರಮುಖ ಪಾತ್ರ ವಹಿಸಿತ್ತು. ವೀರಪ್ಪನ್ ಪತ್ತೆ ಮತ್ತು ಬಂಧನದ ಕಾರ್ಯಾಚರಣಗಾಗಿ ರಚನೆಯಾಗಿದ್ದ ಎಸ್ ಟಿ ಎಫ್ ಪಡೆಯಲ್ಲಿ ಕೆಎಸ್ಆರ್ ಪಿ ಪಡೆ ಪ್ರಮುಖ ಪಾತ್ರ ವಹಿಸಿತ್ತು. ಹಾಗೂ ಎಎನ್ಎಫ್ ಪಡೆ ಸಹ ಬಂಧನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
Petrol Price: ವಾರದಲ್ಲಿ 6ನೇ ಬಾರಿಗೆ ಪೆಟ್ರೋಲ್ ದರ ಏರಿಸಿದ ಕೇಂದ್ರ ಸರ್ಕಾರಎಎನ್ಎಫ್ ಪಡೆಯಲ್ಲಿಯೂ ಸಹ ಕೆಎಸ್ಆರ್ ಪಿ ತುಕಡಿ ಸಿಬ್ಬಂದಿ ಭಾಗಿಯಾಗಿದ್ದರು. ಆದ್ದರಿಂದ ನಿರ್ದೇಶಕ ಎಎಂಆರ್ ರಮೇಶ್ ಕೆಎಸ್ಆರ್ ಪಿ ಆವರಣದಲ್ಲೇ ಕನ್ನಡದಲ್ಲಿ ಇದೇ ಮೊದಲ ಬಾರಿಗೆ ನಿರ್ಮಾಣವಾಗುತ್ತಿರುವ ವೆಬ್ ಸೀರೀಸ್ ಗೆ ಚಾಲನೆ ನೀಡಿದರು. ಎಡಿಜಿಪಿ ಅಲೋಕ್ ಕುಮಾರ್ ವೆಬ್ ಸೀರೀಸ್ ಗೆ ಚಾಲನೆ ನೀಡಿ ಶುಭ ಕೋರಿದರು. ಅಂದಹಾಗೇ ವೆಬ್ ಸೀರೀಸ್ ಗೆ 'Veerappan Hunger for killing' ಹೆಸರು ಇಟ್ಟಿದ್ದು ಚಿತ್ರೀಕರಣ ಆರಂಭವಾಗಿದೆ.
ನಿರ್ದೇಶಕ ಎಎಂಆರ್ ರಮೇಶ್ ಅವರು 2013 ರಲ್ಲಿ ವೀರಪ್ಪನ್ ಕುರಿತಾಗಿ ಆಟ್ಟಹಾಸ ಚಿತ್ರ ನಿರ್ಮಿಸಿದ್ದರು. ಚಿತ್ರದಲ್ಲಿ ನಟ ಕಿಶೋರ್ ವೀರಪ್ಪನ್ ಪಾತ್ರದಲ್ಲಿ ಮಿಂಚಿದ್ದರು. ನಟ ಅರ್ಜುನ್ ಸರ್ಜಾ ಪೊಲೀಸ್ ಆಧಿಕಾರಿಯ ಪಾತ್ರ ನಿರ್ವಹಿಸಿದ್ದರು.
Published by:
Latha CG
First published:
August 22, 2020, 11:29 AM IST