Kalburgi Murder: ರಾಖಿ ಕಟ್ಟಿದ ಹುಡುಗಿ ಮೇಲೆಯೇ ಕಣ್ಣು; ರೊಚ್ಚಿಗೆದ್ದ ಅಣ್ಣ ಹರಿಸಿಯೇ ಬಿಟ್ಟ ನೆತ್ತರು!

ಇನ್ನೂ ಬರ್ಬರವಾಗಿ ಹತ್ಯೆಯಾದ ಆಕಾಶ್, ಸ್ನೇಹಿತ ಶ್ರೀನಿಧಿ ಇಬ್ಬರು ಸಹ ಕುಚುಕು   ಗೆಳೆಯರು ಅಲ್ಲದೆ ಆಕಾಶ್ ಶ್ರೀನಿಧಿ ಅವರ ಸೆಟರ್ ನಲ್ಲೆ ಗ್ಯಾರಜ್ ಓಪನ್ ಮಾಡಿದ್ದ ಹಾಗಾಗಿ ಆಕಾಶ್ ನನ್ನ ಮನೆ ಮಗನಂತೆ ನೋಡಿಕೊಳ್ಳುತಿದ್ರು.

ಹತ್ಯೆಯಾದ ಆಕಾಶ್

ಹತ್ಯೆಯಾದ ಆಕಾಶ್

  • Share this:
    ಕಲಬುರಗಿ:  ಆ ಯುವಕ ತಾನಾಯಿತು ತನ್ನ ಕೆಲಸವಾಯಿತು ಅಂತಾ ಗ್ಯಾರೇಜ್‌(garage)ನಲ್ಲಿ ಕೆಲಸ ಮಾಡುತ್ತಿದ್ದರೆ ಇಂದು ಬೀದಿ ಹೆಣವಾಗ್ತಿರಲಿಲ್ಲ. ಪ್ರೀತಿ (love) ಎಂಬ ಮಾಯೆಗೆ ಸಿಲುಕಿ ಸ್ನೇಹಿತನಿಂದಲೇ ಬರ್ಬರವಾಗಿ ಹತ್ಯೆ(murder by friend )ಯಾಗಿದ್ದಾನೆ. ಅಷ್ಟಕ್ಕೂ ನಿನ್ನೆ ಸ್ನೇಹಿತ ಬೈಕ್ ಮೇಲೆ ಕರೆದುಕೊಂಡು ಹೋಗಿ ಬುದ್ದಿವಾದ ಹೇಳಿದ್ದು, ಬುದ್ದಿವಾದಕ್ಕೂ ಬಗ್ಗದ ಹಿನ್ನಲೆಯಲ್ಲಿ ಚಾಕುವಿನಿಂದ ಇರಿದು ಬಾರದ‌ ಲೋಕಕ್ಕೆ ಕಳುಹಿಸಿದ್ದಾನೆ. ಕಲಬುರಗಿ ‌ನಗರದ ಫಿಲ್ಟರ್‌ಬೆಡ್ ಬಡಾವಣೆ ನಿವಾಸಿ ಆಕಾಶ್ ಖರ್ಗೆ (21 ) ಸರ್ಕಲ್ ಬಳಿ ಸ್ವತಃ ಗ್ಯಾರೇಜ್ ಹಾಕಿಕೊಂಡು ಕೆಲಸ ಮಾಡುತ್ತಿದ್ದ.. ಈ ವೇಳೆ ಸ್ನೇಹಿತ ಶ್ರೀನಿಧಿ ಎಂಬಾತನ ಸಹೋದರಿಯನ್ನ ಆಕಾಶ್ ಪ್ರೀತಿಸುತ್ತಿದ್ದ.. ಕಳೆದ ಹತ್ತು ದಿನಗಳ ಹಿಂದೆ ಶ್ರೀನಿಧಿ ಸಹೋದರಿಯನ್ನ ಆಕಾಶ್ ಓಡಿಸಿಕೊಂಡು ಹೋಗಿದ್ದ.. ನಂತರ ಶ್ರೀನಿಧಿ ತಮ್ಮ ಸಹೋದರಿ ಕಾಣೆಯಾಗಿದ್ದಾಳೆ ಅಂತಾ ಎಂಬಿ ನಗರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿತ್ತು.. ನಂತರ ಆಕಾಶನ ಕುಟುಂಬಸ್ಥರ ಮಧ್ಯಸ್ಥಿಕೆಯಿಂದ ಶ್ರೀನಿಧಿ ಸಹೋದರಿಯನ್ನ ಆಕೆಯ ಮನೆಗೆ ಕರೆದುಕೊಂಡು ತಂದು ಬಿಟ್ಟಿದ್ದರು.

    ಡಾಭಾ‌ ಬಳಿ ಚಾಕುವಿನಿಂದ ಇರಿದು ಕೊಲೆ 

    ಅಲ್ಲದೆ ಇನ್ನು ಮುಂದೆ ನಮ್ಮ ಮಗ ನಿಮ್ಮ ಮಗಳ ತಂಟೆಗೆ ಬರಲ್ಲ ಅಂತ ಹೇಳಿ ರಾಜಿ ಪಂಚಾಯ್ತಿ ಮಾಡಿ ಬಂದಿದ್ರು ಇನ್ನು ಕೆಲ ದಿನ ನೀನು ಕೆಲ್ಸಾ ಮಾಡೋದು ಬೇಡ ಅಂತ ಆಕಾಶ್ ನನ್ನ ಮನೆಯಲ್ಲಿಯೆ ಇಟ್ಟು ಕೊಂಡಿದ್ರು ಅಲ್ಲದೆ ಇನ್ನು ಕೆಲ ದಿನ ಹೋಗ್ಲಿ ಮನೆ ಹತ್ತಿರವೇ ನೀನಗೆ ಗ್ಯಾರಜ್ ಹಾಕಿ ಕೊಡ್ತಿವಿ ಅಂತ ಹೇಳಿದ್ರು. ಹಾಗಾಗಿ ಆಕಾಶ್ ಕಳೇದ ಒಂದು ವಾರದಿಂದ ಮನೆಯಲ್ಲಿಯೆ ಇದ್ದ ನಿನ್ನ ಸಂಜೆ ಮನೆಯಲ್ಲಿಯೆ ಇದ್ದ ಆಕಾಶ್ ಸ್ವಲ್ಪ ಹೊರಗಡೆ ಹೋಗಿ ಬರ್ತಿನಿ ಅಂತ ಮನೆಯಿಂದ ಬಂದಿದ್ದ. ಬಂದವನೇ ಓಂ ನಗರ ಗೇಟ್ ಹತ್ರ ಬಂದಿದ್ದಾನೆ. ಆಕಾಶ್ ಮತ್ತೆ ಇಲ್ಲಿ ಬಂದಿದ್ದಾನೆ ಅಂತ ತಿಳಿದ ಶ್ರೀನಿಧಿ ಆತನನ್ನ ಮುಗಿಸಬೇಕು ಅಂತ ಪ್ಲಾನ್ ಮಾಡಿ ಅಲ್ಲಿಂದ ಎತ್ತಾಕೊಂಡು ಹೋಗಿ ಸೇಡಂ‌ ರಸ್ತೆಯ ಕಾಳನೂರು ಡಾಭಾ‌ ಬಳಿ ಚಾಕುವಿನಿಂದ ಮನಬಂದಂತೆ ‌ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

    ರಾಖಿ ಕಟ್ಟಿದ ಸಹೋದರಿ ಮೇಲೆಯೇ ಕಣ್ಣು

    ಇನ್ನೂ ಬರ್ಬರವಾಗಿ ಹತ್ಯೆಯಾದ ಆಕಾಶ್, ಸ್ನೇಹಿತ ಶ್ರೀನಿಧಿ ಇಬ್ಬರು ಸಹ ಕುಚುಕು   ಗೆಳೆಯರು ಅಲ್ಲದೆ ಆಕಾಶ್ ಶ್ರೀನಿಧಿ ಅವರ ಸೆಟರ್ ನಲ್ಲೆ ಗ್ಯಾರಜ್ ಓಪನ್ ಮಾಡಿದ್ದ ಹಾಗಾಗಿ ಆಕಾಶ್ ನನ್ನ ಮನೆ ಮಗನಂತೆ ನೋಡಿಕೊಳ್ಳುತಿದ್ರು. ರಾಖಿ ಹುಣ್ಣಿಮೆಯಂದು ರಾಖಿ ಕಟ್ಟಿಸಿಕೊಂಡಿದ್ದಾನೆ ಆದ್ರೆ ರಾಖಿ ಕಟ್ಟಿದ ಸಹೋದರಿ ಮೇಲೆಯೇ ಕಣ್ಣು ಹಾಕಿದ್ದಾನೆ ಇಷ್ಟು ದಿನ ನಮ್ಮ ಜೊತೆಯಲ್ಲೆ ಇದ್ದು ನಮ್ಮ ತಂಗಿ ಮೇಲೆಯೆ ಕಣ್ಣು ಹಾಕಿ ಓಡಿಸಿಕೊಂಡು ಹೋಗಿದ್ದಾನೆ ಅಂತ ಆಕಾಶ್ ಮೇಲೆ ಶ್ರೀನಿಧಿ ಕೆಂಡ ಕಾರ್ತಿದ್ದ. ಬೇಡ ಬೇಡ ಎಂದರು ಸಹ ಸ್ನೇಹಿತನ ಸಹೋದರಿಯನ್ನ ಪ್ರೀತಿಸಿದ್ದಲ್ಲದೇ ಆಕೆಯನ್ನ ಓಡಿಸಿಕೊಂಡು ಹೋಗಿದ್ದ. ಇದು ಸಹಜವಾಗಿ ಶ್ರೀನಿಧಿಯ ಕಣ್ಣು ‌ಕೆಂಪಗೆ ಆಗುವಂತೆ ಆಗಿತ್ತು.

    ಇದನ್ನೂ ಓದಿ: Crime News: ಒನ್ ಸೈಡ್ ಪ್ರೀತಿಗೆ ಬಲಿಯಾಗಿದ್ದು ಇಬ್ಬರು...? ಹುಡುಗಿ ಕೊಲೆ, ಹುಡುಗ ಆತ್ಮಹತ್ಯೆ

    ಅಲ್ಲದೆ ಕಳೇದ ಒಂದು ವಾರದ  ಹೀಗಾಗಿ ಏನಾದರು ಮಾಡಿ ಆಕಾಶ್‌ನನ್ನ ಬುದ್ದಿ ಕಲಿಸಲೆಬೇಕೆಂದು ನಿನ್ನೆ ಕಾಳನೂರು ದಾಭಾ ಬಳಿ‌ ಕರೆದುಕೊಂಡು ಹೋಗಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.. ನಂತರ ನಿಮ್ಮ ತಮ್ಮನನ್ನ ಕೊಲೆ ಮಾಡಿದ್ದಾನೆ ಅಂತಾ ಕೊಲೆಯಾದ ಆಕಾಶ್‌ನ ಸಹೋದರನಿಗೆ ಫೋನ್ ಮಾಡಿ ಹೇಳಿದ್ದಾನೆ.. ಇನ್ನೂ ಘಟನ ಸ್ಥಳಕ್ಕೆ ಡಿಸಿಪಿ ಅಡ್ಡೂರು ಶ್ರೀನಿವಾಸುಲು ಭೇಟಿ‌ ಪರಿಶೀಲನೆ ನಡೆಸಿದ್ದು, ವಿಚಾರಣೆ‌ ನಡೆಸುತ್ತಿರುವುದಾಗಿ ಹೇಳಿದ್ದಾರೆ. ಅದೆನೇ ‌ಇರಲಿ ತಾನಾಯಿತು ತನ್ನ ಕೆಲಸವಾಯಿತು ಮಾಡೊದನ್ನ ಬಿಟ್ಟು, ಇದೀಗ ‌ಪ್ರೀತಿ ಎಂಬ ಮಾಯೆಗೆ‌ ಸಿಲುಕಿ ಸ್ನೇಹಿತನಿಂದಲೇ ಬರ್ಬರವಾಗಿ ಹತ್ಯೆಯಾಗಿದ್ದು ಮಾತ್ರ ದುರಂತವೇ ಸರಿ.

    ವರದಿ: ಅರುಣ್​ ಕುಮಾರ್​
    Published by:Kavya V
    First published: