Kalaburagi Crime News: ತಂಗಿಯನ್ನು ಓಡಿಸಿಕೊಂಡು ಹೋಗಿದವನ ಹೆಣ ಕೆಡವಿದ್ದ ಅಣ್ಣ; ಆರೋಪಿಗಳು ಅಂದರ್

ರಾಜಿ ಪಂಚಾಯ್ತಿ ಮಾಡಿ ತಂಗಿಯನ್ನು ಮನೆಗೆ ಬಿಟ್ಟು ಹೋಗಿದ್ದ. ಆದ್ರೆ ಅದಾದ ಮೇಲು ಆತ ತನ್ನ ಚಾಳಿ ಬಿಟ್ಟಿರಲಿಲ್ಲ ಹಾಗಾಗಿ ಮತ್ತೆ ಶ್ರೀನಿಧಿ ಪಿತ್ತನೆತ್ತಿಗೇರಿಸುವಂತೆ ಮಾಡಿತ್ತು.

ಬಂಧಿತ ಆರೋಪಿಗಳು

ಬಂಧಿತ ಆರೋಪಿಗಳು

 • Share this:
   ಕಲಬುರಗಿ(kalaburagi news) : ಆತ ತನ್ನ ಸಹೋದರಿಯನ್ನ ಪ್ರೀತಿ(love) ಮಾಡುತ್ತಿದ್ದ ಹಿನ್ನಲೆಯಲ್ಲಿ ಯುವಕನೋರ್ವ ಸಾಕಷ್ಟು ಬಾರಿ ವಾರ್ನ್ (warning) ಮಾಡಿದ್ದ. ಆದರೆ ಅವನು ಮಾತ್ರ ನಂಗೆ ಅದೇ ಹುಡುಗಿ ಬೇಕು ಅಂತಾ ಹಠಕ್ಕೆ ಬಿದ್ದವಂನಂತೆ ಪ್ರೀತಿಸಿದಲ್ಲದೇ, ಆ ಹುಡುಗಿಯನ್ನ ಓಡಿಸಿಕೊಂಡು ಹೋಗಿದ್ದ. ಇಷ್ಟೇ ನೋಡಿ.. ಪ್ರೀತಿ ಮಾಡಿದ ತಪ್ಪಿಗೆ ಯುವಕ ಬಾರದ ಲೋಕಕ್ಕೆ ಹೋದ್ರೆ,  ದುಡುಕಿನ‌ ನಿರ್ಧಾರ ತೆಗೆದುಕೊಂಡು ಮತ್ತೋರ್ವ ಕೃಷ್ಣನ ಜನ್ಮಸ್ಥಾನಕ್ಕೆ ಹೋಗಿದ್ದಾನೆ.  ಅಕ್ಟೋಬರ್ 27 ರಂದು ಕಲಬುರಗಿ ಹೊರವಲಯದ ಸೇಡಂ ರಸ್ತೆಯ(sedam road) ಕಾಳನೂರು ದಾಭಾ ಬಳಿ ಫಿಲ್ಟರ್ ಬೆಡ್‌ ನಿವಾಸಿ 21 ವರ್ಷದ ಆಕಾಶ್ ಎಂಬನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿ ಠಾಣೆ ಪೊಲೀಸರು ಪ್ರಮುಖ ಆರೋಪಿ ಶ್ರೀನಿಧಿ, ಶ್ರೀನಿಧಿ ಸಹೋದರ ನಿಖಿಲ್ ಮತ್ತು ಬಸವರಾಜ್, ವಿಜಯಕುಮಾರ್, ಪ್ರದೀಪ್ ಸೇರಿದಂತೆ ಐವರನ್ನ ಬಂಧಿಸಿದ್ದಾರೆ.

  ಓಡಿಸಿಕೊಂಡು ಹೋಗಿ ಮತ್ತೆ ತಂದು ಬಿಟ್ಟಿದ್ದ..! 

  ಕೊಲೆಯಾದ ಆಕಾಶ್​​ ಖರ್ಗೆ ಸರ್ಕಲ್ ಬಳಿ ಗ್ಯಾರೇಜ್‌ನಲ್ಲಿ ಮ್ಯಾಕಾನಿಕ್ ಕೆಲಸ ಮಾಡ್ತಿದ್ದ, ಆರೋಪಿ ಶ್ರೀನಿಧಿಯ ಸಹೋದರಿಯನ್ನ ಪ್ರೀತಿಸುತ್ತಿದ್ದ,. ಅಲ್ಲದೇ ಆಕೆಯನ್ನ ಕರೆದುಕೊಂಡು ಹೋಗಿ ಪುನಃ ಮನೆಗೆ ಕರೆದುಕೊಂಡು ತಂದು ಬಿಟ್ಟಿದ್ದ..‌ ಇದರಿಂದ ಕೆಂಡಮಂಡಲವಾಗಿದ್ದ ಶ್ರೀನಿಧಿ, ಅ.27 ರಂದು ಸಂಜೆ ಗ್ಯಾರೇಜ್‌ನಲ್ಲಿದ್ದ ಆಕಾಶ್‌ನನ್ನ ಬಲವಂತವಾಗಿ  ಆಟೋದಲ್ಲಿ ದಾಭಾ ಬಳಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಚಾಕುವಿನಿಂದ ಬರ್ಬರವಾಗಿ ಹತ್ಯೆ ಮಾಡಿದ್ದರು. ದಾರಿ ಮಧ್ಯ ಆತನಿಗೆ ಮನಬಂದಂತೆ ಥಳಿಸಿದ್ದಾರೆ. ಅಲ್ಲದೆ ರಾಜಿ ಪಂಚಾಯ್ತಿ ಮಾಡಿ ಮನೆಗೆ ಬಿಟ್ಟು ಹೋಗಿದ್ದ ಆದ್ರೆ ಅದಾದ ಮೇಲು ಆತ ತನ್ನ ಚಾಳಿ ಬಿಟ್ಟಿರಲಿಲ್ಲ ಹಾಗಾಗಿ  ಮತ್ತೆ ಶ್ರೀನಿಧಿ ಪಿತ್ ನೆತ್ತಿಗೇರಿಸುವಂತೆ ಮಾಡಿತ್ತು.

  ಆರೋಪಿಗಳು ನ್ಯಾಯಾಂಗ ಬಂಧನಕ್ಕೆ 

  ಅವತ್ತು ಕೂಡಾ ಆಕಾಶ್ ಮತ್ತೆ ಮನೆ ಹತ್ರ ಬಂದಿದ್ದ. ಹೀಗಾಗಿ ಇಷ್ಟು ಹೇಳಿದ್ರು ಕೇಳ್ತಿಲ್ಲ  ಈತನಿಗೆ ಒಂದು ಗತಿ ಕಾಣಿಸಬೇಕು ಅಂತ ಶ್ರೀನಿಧಿ ಆತನ ಸಹೋದರ ಮತ್ತು ಅವರ ಸ್ನೇಹಿತರು ಸೇರಿ ಬರ್ಬರವಾಗಿ ಹತ್ಯೆ ಮಾಡಿದ್ರು. ನಂತ್ರ ಇಷ್ಟಕ್ಕೆ ಸುಮ್ಮನಾಗದ ಅವರು ಆಕಾಶ್ ಸಹೋದರನಿಗೆ ಕಾಲ್ ಮಾಡಿ ಎಷ್ಟು ಹೇಳಿದ್ರು ನಿಮ್ಮ ತಮ್ಮ ಕೇಳಿಲ್ಲ ಹಾಗಾಗಿ ಆತನಿಗೆ ಒಂದು ಗತಿ ಕಾಣ್ಸಿದ್ವಿ ಬಂದು ಬಾಡಿ ತಗೊಂಡು ಹೋಗಿ ಅಂತ ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬಲೆ ಬೀಸಿದ್ದರು.. ಬಂಧಿತರಿಂದ ಚಾಕು, ಬೈಕ್, ಆಟೋ ವಶಪಡಿಸಿಕೊಂಡು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

  ಇದನ್ನೂ ಓದಿ: Sad Sunday: ಎಲ್ಲೆಲ್ಲೂ ಸೂತಕ.. ಕೊಡಗಿನಲ್ಲಿ ಒಂದೇ ದಿನ ಅಕ್ಕ-ತಂಗಿ, ತಾಯಿ-ಮಗು ದುರ್ಮರಣ

  ಕೊಲೆ ಮಾಡಿರೋದಾಗಿ ಕಾಲ್​​ ಮಾಡಿ ಹೇಳಿದ್ದರು 

  ಇನ್ನೂ ಕೊಲೆಯಾದ ಆಕಾಶ್‌ನನ್ನ ಮುಗಿಸಲೇಬೇಕು ಅಂತಾ ಶ್ರೀನಿಧಿ ಆ್ಯಂಡ್ ಟೀಮ್ ಎಲ್ಲಾ ರೀತಿಯ ಸಿದ್ದತೆಗಳನ್ನ ಮಾಡಿಕೊಂಡಿದ್ದರು.. ಅದಕ್ಕಾಗಿ ಅಂದು ಸಂಜೆ ಆಕಾಶ್‌ನ್ನ ಶ್ರೀನಿಧಿ ಬೈಕ್ ಮೇಲೆ ಬಲವಂತವಾಗಿ ಕುಡಿಸಿಕೊಂಡು ಸೇಡಂ ರಸ್ತೆಯ ಕಾಳನೂರು ದಾಭಾ ಬಳಿ ಕರೆದುಕೊಂಡು ಹೋಗಿದ್ದರು.. ಇನ್ನೂ ಆಕಾಶನನ್ನ ಕೊಲೆ ಮಾಡಿದ ನಂತರ ಅವನದೇ ಮೊಬೈಲ್‌ನಿಂದ ಆಕಾಶನ ಸಹೋದರನಿಗೆ ಕಾಲ್ ಮಾಡಿ, ನಿಮ್ಮ ತಮ್ಮನನ್ನ ಕೊಲೆ ಮಾಡಿದ್ದೇವು ಅಂತಾ ಹೇಳಿದ್ದಾರೆ. ಜೊತೆಗೆ ಸ್ಥಳೀಯರು ಯಾರೊದೊ ಮೃತದೇಹ ಬಿದ್ದಿದೆ ಅಂತಾ ವಿವಿ ಠಾಣೆ ಪೊಲೀಸರಿಗೂ ಸಹ ಮಾಹಿತಿ ನೀಡಿದ್ದಾರೆ. ಅದೆನೇ ಇರಲಿ ತಾನಾಯಿತು ತನ್ನ ಕೆಲಸವಾಯಿತು ಅಂತಾ ಸುಮ್ಮನಿರೊದನ್ನ ಬಿಟ್ಟು, ಇದೀಗ ಆಕಾಶ ಎಂಬ ಯುವಕ ಬಾರದ ಲೋಕಕ್ಕೆ ಹೋದ್ರೆ, ಇತ್ತ ಸಿಟ್ಟಿನ ಕೈಗೆ ಬುದ್ದಿ ಕೊಟ್ಟು ಶ್ರೀನಿಧಿ ಶ್ರೀ ಕೃಷ್ಣನ ಜನ್ಮಸ್ಥಾನಕ್ಕೆ ಹೋಗಿದ್ದು ಮಾತ್ರ ದುರಂತವೇ ಸರಿ.

  ವರದಿ: ಅರುಣ್​ ಕುಮಾರ್​ 
  Published by:Kavya V
  First published: