ಬಾರಪ್ಪ ಬಾ.. ಸಿದ್ದರಾಮಣ್ಣ ಬಾ.. ಬಂದು ನೋಡಪ್ಪ.. ಚುನಾವಣಾ ಪ್ರಚಾರದ ವೇಳೆ CM Bommai ಲೇವಡಿ

ಕಾಂಗ್ರೆಸ್ ನಾಯಕರದ್ದು ನಾಟಕ ಕಂಪನಿ. ಕಾಂಗ್ರೆಸ್ ನವರು ಬೆಂಜ್ ಕಾರು ಗಿರಾಕಿಗಳು. ಹಾನಗಲ್ ಕ್ಷೇತ್ರದ ಜನರು ನನಗೆ ಅಳಿಯ.‌ ಮೊಮ್ಮಗ ಅಂತಾರೆ. ನಾನು ನಿಮ್ಮವ.. ನಿಮ್ಮ ಮನೆಯ ಮಗ.. ಎಂದ ಸಿಎಂ ಬೊಮ್ಮಾಯಿ.

ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

  • Share this:
ಹಾವೇರಿ: ಹಾನಗಲ್ ಉಪಚುನಾವಣೆ(hangal by election)ಯ ಬಿಜೆಪಿ(BJP) ಬಹಿರಂಗ ಪ್ರಚಾರ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (cm basavaraj bommai) ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ(siddaramaiah) ವಿರುದ್ದ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಹಿರೇಕೌಂಸಿ, ಬಾಳಬೀಡ ನೀರಾವರಿ ಯೋಜನೆ ಮಾಡಿದ್ದು ಬಿಜೆಪಿ. ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿದ್ದ ವೇಳೆ ಎನೂ ಕೆಲಸ ಮಾಡಿದ್ರು ಎಂದು ಪ್ರಶ್ನಿಸಿದರು. ಕೆರೆ ತುಂಬಿಸುವ ಯೋಜನೆ ಬಗ್ಗೆ ಸಿದ್ದರಾಮಯ್ಯ ನವರಿಗೆ ದಾಖಲೆ ಕಳುಹಿಸಿಕೊಡುವೆ. ಬಾರಪ್ಪ ಬಾ. ಸಿದ್ದರಾಮಣ್ಣ ಬಾ.. ಬಂದು ನೋಡಪ್ಪ ಎಂದು ಸಿಎಂ ಲೇವಡಿ ಮಾಡಿದರು. ಬೊಮ್ಮಾಯಿ ಎನು ಅಭಿವೃದ್ಧಿ ಮಾಡಿದ್ದಾರೆ ಅಂತಾ ನೋಡು ಬಾರಪ್ಪ. ನಾವೂ ಜನರ ಜೊತೆ ಇರುವವರು, ನಾವೂ ಭೂಮಿಯಲ್ಲಿ ಆಳವಾಗಿ ಬೇರು ಉರಿರುವವರು. ನಾವೂ ನಿಮ್ಮ ಹಾಗೆ ಕುಂಡಲಿಯಲ್ಲಿ ಇರುವ ಗಿಡಗಳಲ್ಲ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನವರಿಗೆ ನೈತಿಕತೆ ಎಲ್ಲಿದೆ?

ಅಧಿಕಾರ ಶಾಶ್ವತ ಅಲ್ಲ, ವಿಶ್ವಾಸ ಶಾಶ್ವತ.‌ ನಾನು ನಿಮ್ಮ ಪ್ರೀತಿ ವಿಶ್ವಾಸ ಗಳಿಸಲು ಬಂದಿದ್ದೇನೆ. ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಗಂಗೋತ್ರಿ, ಎಲ್ಲರ ಮೇಲೆ ಆರೋಪ ಇದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್ ನವರಿಗೆ ನೈತಿಕತೆ ಎಲ್ಲಿದೆ. ಮೈಸೂರನಲ್ಲಿ ಮಾಡಲು ಸಾಧ್ಯವಾಗದವರು ಹಾನಗಲ್​​​ಗೆ ಬಂದೂ ಎನು ಮಾಡ್ತೀರಾ. ಮೈಸೂರು ಜನರೇ ನಿಮ್ಮ ಮೇಲೆ ವಿಶ್ವಾಸ ಇಟ್ಟಿಲ್ಲ. ಹಾನಗಲ್ ಜನರ ಯಾಕೆ ನಿಮ್ಮ ಮೇಲೆ ವಿಶ್ವಾಸ ಇಡಬೇಕು ಎಂದು ಗುಡುಗಿದರು. ಸಿದ್ದರಾಮಣ್ಣ ಮಾತು ಮಾತಿಗೂ ಮೋದಿ ಬಗ್ಗೆ ಮಾತನಾಡುತ್ತಾರೆ. ಮೋದಿಯ ವಿರುದ್ದ ಮಾತನಾಡಿದ್ರೆ ದೊಡ್ಡ ವ್ಯಕ್ತಿ ಆಗುತ್ತೇನೆ ಅಂದುಕೊಂಡಿದ್ದಾರೆ ಎಂದು ಮಾತಿನಲ್ಲೇ ತಿವಿದರು.

ಸಿದ್ದರಾಮಯ್ಯ ಕಾಂಗ್ರೆಸ್​​​ನಲ್ಲಿ ಇರುವವರೆಗೂ ಅಚ್ಚೇ ದಿನ ಬರಲ್ಲ

ಸಿದ್ದರಾಮಯ್ಯ ಅಚ್ಚೇದಿನ ಎಲ್ಲಿದೆ ಅಂತಾ ಪದೇ ಪದೇ ಪ್ರಶ್ನೆ ಮಾಡುತ್ತಾರೆ. ಅಚ್ಚೇ ದಿನ ದೇಶದ ಜನರಿಗೆ ಬರುತ್ತಿದೆ. ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿ ಇರುವವರೆಗೂ ಅಚ್ಚೇ ದಿನ ಬರಲ್ಲ. ಸಿದ್ದರಾಮಯ್ಯ ನವರಿಗೆ ಅಚ್ಚೇದಿನ ಬರಲು ಡಿಕೆಶಿ ಬಿಡಲ್ಲ ಎಂದು ಕಾಂಗ್ರೆಸ್​ ಒಳರಾಜಕೀಯದ ಬಗ್ಗ ಪರೋಕ್ಷವಾಗಿ ಪ್ರಸ್ತಾಪಿಸಿದರು. ಕಾಂಗ್ರೆಸ್ ನಲ್ಲಿ ಪಿಸು ಮಾತುಗಳು ಶುರುವಾಗಿದೆ. ಸಿದ್ದರಾಮಯ್ಯ ದೆಹಲಿಗೆ ಹೋಗುವುದು ತಪ್ಪಿಸಿಕೊಳ್ಳಲು. ರಾಜ್ಯದಲ್ಲಿ ಗದ್ದುಗೆ ಗಟ್ಟಿ ಮಾಡಿಕೊಳ್ಳಲು ಸಿದ್ದರಾಮಯ್ಯ ತಮ್ಮ ಶಿಷ್ಯರ ಮೂಲಕ ಪಿಸುಮಾತು ಆಡಿಸುತ್ತಿದ್ದಾರೆ. ಕಾಂಗ್ರೆಸ್ ಮುಗಿಸಲು ಕಾಂಗ್ರೆಸ್ ನಾಯಕರೇ ಸಾಕು ಎಂದು ಸಿಎಂ ಬೊಮ್ಮಾಯಿ ಕೈ ಪಾಳಯದ ವಿರುದ್ಧ ವಾಗ್ಬಾಣ ಬಿಟ್ಟರು.

ಕಾಂಗ್ರೆಸ್ ನವರು ಬೆಂಜ್ ಕಾರು ಗಿರಾಕಿಗಳು

ಕಾಂಗ್ರೆಸ್ ಪಕ್ಷಕ್ಕೆ ಮತ ಕೊಡಬೇಡಿ, ಕಾಂಗ್ರೆಸ್ ನಾಯಕರು ಮೊನ್ನೆ ಚಕ್ಕಡಿ ತಗೆದುಕೊಂಡು ಬಂದ್ರು. ಆದ್ರೆ  ಸಿದ್ದರಾಮಯ್ಯ ಕೈಯಲ್ಲಿ ಹಗ್ಗ, ಡಿಕೆಶಿ ಕೈಯಲ್ಲಿ ಬಾರಕೋಲು ಇತ್ತು. ಕಾಂಗ್ರೆಸ್ ನಾಯಕರದ್ದು ನಾಟಕ ಕಂಪನಿ. ಕಾಂಗ್ರೆಸ್ ನವರು ಬೆಂಜ್ ಕಾರು ಗಿರಾಕಿಗಳು. ಹಾನಗಲ್ ಕ್ಷೇತ್ರದ ಜನರು ನನಗೆ ಅಳಿಯ.‌ ಮೊಮ್ಮಗ ಅಂತಾರೆ. ನಾನು ನಿಮ್ಮವ.. ನಿಮ್ಮ ಮನೆಯ ಮಗ..  ಎಂದು ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನ ಗೆದ್ರೆ ಬೊಮ್ಮಾಯಿ ಗೆದ್ದ ಹಾಗೆ ಎಂದು ಮುಖ್ಯಮಂತ್ರಿ ಮತಯಾಚಿಸಿದರು.

ಇದನ್ನೂ ಓದಿ: BSY & ಅವರ ಪುತ್ರನನ್ನ ಜೈಲಿಗೆ ಕಳುಹಿಸ್ತೀವಿ ಎಂದು ಹೆದರಿಸಿ ಬಿಜೆಪಿ ರಾಜೀನಾಮೆ ಪಡೆದಿದೆ: Siddaramaiah ಆರೋಪ

ದಿವಂಗತ ಉದಾಸಿ ಅಣ್ಣಾವ್ರು ಹಾವೇರಿ ಜಿಲ್ಲೆಯನ್ನಾಗಿ ಮಾಡಿದರು. ಈ ಜಿಲ್ಲೆಯನ್ನು ಕಾಂಗ್ರೆಸ್ ನವರು ಮಾಡಿದ್ರಾ.? ತುಂಗಾ ಮೇಲ್ದಂಡೆ ಯೋಜನೆ ಮಾಡಿದ್ದು ಯಾರು.? ಇಂಜನಿಯರಿಂಗ್ ಕಾಲೇಜು, ಮೆಡಿಕಲ್‌ ಕಾಲೇಜು ಮಾಡಿದ್ದು ಯಾರು.? ಹಾವೇರಿಗೆ ಬಂದಿದ್ದ ಮೆಡಿಕಲ್ ಕಾಲೇಜನ್ನ ಗದಗಗೆ ತೆಗೆದುಕೊಂಡು ಹೋದ್ರಿ. ಚುನಾವಣೆ ಹತ್ತಿರ ಬಂದಾಗ ಸಿದ್ದರಾಮಣ್ಣ ಏಳು ಕೆ.ಜಿ ಅಕ್ಕಿ ಅಂತಾರೆ‌. ಸಿದ್ದರಾಮಯ್ಯ ಮನೆಗಳನ್ನ ಕಟ್ತೀನಿ ಅಂದರು. ಹಾನಗಲ್ ತಾಲೂಕಿನಲ್ಲಿ ಎಷ್ಟು ಮನೆಗಳನ್ನ ಕಟ್ಟಿದ್ದೀರಿ. ಕಳೆದ ತಿಂಗಳು ನಾನು ಐದು ಲಕ್ಷ ಮನೆಗಳನ್ನ ಮಂಜೂರು ಮಾಡಿದ್ದೇನೆ. ಹಾನಗಲ್ ತಾಲೂಕಿಗೆ 7400 ಮನೆಗಳನ್ನ ಮಂಜೂರು ಮಾಡಿದ್ದೇವೆ‌. ಬಡವರ ಮನೆ ಕಟ್ಟೋ ಕೊಡುಗೆ, ಕೆರೆಗಳಿಗೆ ನೀರು ತುಂಬೋ ಕೊಡುಗೆ. ಕೋವಿಡ್ ಸಮಯದಲ್ಲಿ ಜನರ ರಕ್ಷಣೆ ಮಾಡೋ ಕೊಡುಗೆ ಕೊಟ್ಟಿದ್ದೇವೆ. ಇಷ್ಟೆಲ್ಲ ಇದ್ದರೂ ಸಿದ್ದರಾಮಯ್ಯ ಬಿಜೆಪಿಯವರಿಗೆ ಏನು ಕೊಡುಗೆ ಕೊಟ್ಟಿದ್ದೀರಿ ಅಂತಾರೆ.ಎಲ್ಲ ಸಮುದಾಯಗಳನ್ನ ಸಮನಾಗಿ ನೋಡುವಂಥಾ ಸರಕಾರ ನಮ್ಮದು. ಯಾವುದೇ ಸಮುದಾಯಕ್ಕೆ ಅನ್ಯಾಯ ಆಗಲು ನಾನು ಬಿಡೋದಿಲ್ಲ. ಎಲ್ಲರಿಗೂ ನ್ಯಾಯ ಕೊಡೋ ಕೆಲಸ ಮಾಡುತ್ತೇನೆ ಎಂದರು.
Published by:Kavya V
First published: