ನನ್ನ ಸಿಎಂ ಅಭಿಯಾನದಲ್ಲಿ ಸಿದ್ದರಾಮಯ್ಯ ಆಯ್ತು ಈಗ ಸಚಿವ ಸತೀಶ್ ಜಾರಕಿಹೊಳಿ ಸೇರ್ಪಡೆ..!

ಕಾರ್ಯಕ್ರಮವೊಂದರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಯಾಕಾಗಬಾರದೂ ಎಂದು ಪ್ರಶ್ನಿಸಿದ್ದರು. ಜೊತೆಗೆ ಮುಖ್ಯಮಂತ್ರಿ ಸ್ಥಾನಕ್ಕೆ ಅವರು ಅರ್ಹ ವ್ಯಕ್ತಿ ಎಂದು ಸಿದ್ದರಾಮಯ್ಯ ಅವರು ಬಿಂಬಿಸಿದ್ದರು. ಇದು ಅಭಿಮಾನಿಗಳ ಇಂದಿನ ಬೇಡಿಕೆಗೆ ಕಾರಣ ಎನ್ನಲಾಗುತ್ತಿದೆ

G Hareeshkumar | news18
Updated:February 2, 2019, 1:41 PM IST
ನನ್ನ ಸಿಎಂ ಅಭಿಯಾನದಲ್ಲಿ ಸಿದ್ದರಾಮಯ್ಯ ಆಯ್ತು ಈಗ ಸಚಿವ ಸತೀಶ್ ಜಾರಕಿಹೊಳಿ ಸೇರ್ಪಡೆ..!
ಸಾಂದರ್ಭಿಕ ಚಿತ್ರ
  • News18
  • Last Updated: February 2, 2019, 1:41 PM IST
  • Share this:
- ಚಂದ್ರಕಾಂತ ಸುಗಂಧಿ

ಬೆಳಗಾವಿ (ಫೆ.02) : ಅತ್ತ ಸಿದ್ದರಾಮಯ್ಯನವರೇ ನಮ್ಮ ಸಿಎಂ ಎಂದು ಅವರ ಆಪ್ತರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿ ಸಂಚಲನ ಮೂಡಿಸಿರುವ ಬೆನ್ನಲ್ಲೇ ಇದೀಗ ಅರಣ್ಯ ಸಚಿವ ಸತೀಶ್​ ಜಾರಕಿಹೊಳಿ ಬೆಂಬಲಿಗರೂ ಸತೀಶ್​ ಜಾರಕಿಹೊಳಿ ನಮ್ಮ ಸಿಎಂ ಎಂಬ ಹೆಸರಿನಡಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.

ನಮ್ಮ ಸಿಎಂ ಸತೀಶ್ ಜಾರಕಿಹೊಳಿ ಅವರು ಎನ್ನುವ ಅಭಿಯಾನ ಆರಂಭಿಸಿದ್ದು, ಈ ಅಭಿಯಾನಕ್ಕೆ ಸತೀಶ್​ ಅಭಿಮಾನಿಗಳಿಂದ ಸಾಕಷ್ಟು ಬೆಂಬಲ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಫೇಸ್‍ಬುಕ್, ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ‘ನಮ್ಮ ಸಿಎಂ ನಮ್ಮ ಸಾಹುಕಾರ್’ ಎಂದು ಹೇಳಿಕೊಂಡಿದ್ದಾರೆ. 
ಈ ಹಿಂದೆ ಕೂಡ ಸತೀಶ್​ ಜಾರಕಿಹೊಳಿ ಮುಂದಿನ 10 ವರ್ಷಗಳ ಬಳಿಕ ನಾನು ಕಾಂಗ್ರೆಸ್‍ನ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಹೇಳಿಕೊಂಡಿದ್ದರು. ಅಲ್ಲದೇ ಸಹೋದರ ‌ರಮೇಶ್​ ಜಾರಕಿಹೊಳಿ ಕೂಡ ಸತೀಶ್​ರನ್ನು‌ ಸಿಎಂ ಮಾಡೇ ಮಾಡುತ್ತೇನೆ‌ ಎಂದಿದ್ದರು. ಅದಕ್ಕೆ ಪೂರಕವಾಗಿ ಅವರ ಬೆಂಬಲಿಗರೇ ಅಭಿಯಾನ ಆರಂಭಿಸಿದ್ದು ಸಂಚಲನ ಸೃಷ್ಟಿಸಿದೆ ಎನ್ನಲಾಗಿದೆ.

ಇದನ್ನೂ ಓದಿ :  'ನನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ'; ಫೇಸ್​ಬುಕ್​ನಲ್ಲಿ ಆರಂಭವಾಗಿರುವ ಅಭಿಯಾನದ ಹಿಂದೆ ಯಾರಿದ್ದಾರೆ?ಈ ಹಿಂದೆ ಸಿದ್ದರಾಮಯ್ಯ ರಾಜ್ಯಾದ್ಯಂತ ನಡೆಸಿದ ಅಹಿಂದಾ ಸಮಾವೇಶಕ್ಕೆ ಬೆನ್ನೆಲುಬಾಗಿ ನಿಂತಿದ್ದ ಸತೀಶ್​ ಜಾರಕಿಹೊಳಿ ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸಿದ್ದರು. ಅಲ್ಲದೇ ಸಿದ್ದರಾಮಯ್ಯ ಅವರ ಅತೃಪ್ತರಲ್ಲಿ ಸತೀಶ್​ ಜಾರಕಿಹೊಳಿ ಗುರುತಿಸಿಕೊಂಡಿದ್ದಾರೆ. ಸತೀಶ್ ಅಭಿಮಾನಿಗಳ ಅಭಿಯಾನದಿಂದ ಕಾಂಗ್ರೆಸ್​​ನಲ್ಲಿ ಮತ್ತೆ ಭಿನ್ನಮತ ಭುಗಿಲೇಳುವ ಲಕ್ಷಣಗಳು ಹೆಚ್ಚಾಗಿವೆ

ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಯಾಕಾಗಬಾರದೂ ಎಂದು ಪ್ರಶ್ನಿಸಿದ್ದರು. ಜೊತೆಗೆ ಮುಖ್ಯಮಂತ್ರಿ ಸ್ಥಾನಕ್ಕೆ ಅವರು ಅರ್ಹ ವ್ಯಕ್ತಿ ಎಂದು ಸಿದ್ದರಾಮಯ್ಯ ಅವರು ಬಿಂಬಿಸಿದ್ದರು. ಇದು ಅಭಿಮಾನಿಗಳ ಇಂದಿನ ಬೇಡಿಕೆಗೆ ಕಾರಣ ಎನ್ನಲಾಗುತ್ತಿದೆ.

ಇದನ್ನು ಓದಿ: ಸಿಎಂ ಹೇಳಿಕೆಯಿಂದ ಕಾಂಗ್ರೆಸ್​ಗೆ ಡ್ಯಾಮೇಜ್​ ಆಗಿದೆ: ಸತೀಶ್​ ಜಾರಕಿಹೊಳಿ ಅಸಮಾಧಾನ

ಕೆಲವು ತಿಂಗಳ ಹಿಂದೆ ಸಿದ್ದರಾಮಯ್ಯ ಅವರು ಹೊಳೆನರಸೀಪುರದಲ್ಲಿ ನಾನು ಮುಖ್ಯಮಂತ್ರಿಯಾಗಬೇಕು ಎಂಬ ಹೇಳಿಕೆ ಸಾಕಷ್ಟು ರಾಜಕೀಯ ಚರ್ಚೆಗೆ ಆಸ್ಪದ ನೀಡಿತ್ತು. ಆನಂತರ ಸಿದ್ದರಾಮಯ್ಯ ಅವರೇ ಈ ವಿಚಾರವಾಗಿ ನಾನು ಹೇಳಿದ್ದು, ಈಗ ಸಿಎಂ ಆಗುತ್ತೇನೆ ಎಂದಲ್ಲ, ಬದಲಿಗೆ ಮುಂದಿನ ಚುನಾವಣೆಯಲ್ಲಿ ಗೆದ್ದು, ಕಾಂಗ್ರೆಸ್ ಸರ್ಕಾರ ರಚಿಸುವಂತಾದರೆ ಆಗ ಮುಖ್ಯಮಂತ್ರಿಯಾಗುತ್ತೇನೆ ಎಂದು ಸ್ಪಷ್ಟನೆ ನೀಡಿದ್ದರು.

ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರದಲ್ಲಿ ಭಿನ್ನಮತ ಎಂಬುದು ಮೊದಲೇ ಬೂದಿಮುಚ್ಚಿದ ಕೆಂಡದಂತಿದೆ. ಇದೀಗ ಫೇಸ್​ಬುಕ್​ನಲ್ಲಿ ಸೃಷ್ಟಿಯಾಗಿರುವ ನಮ್ಮ ಸಿಎಂ ಅಭಿಯಾನ ಮುಂದೆ ಯಾವ ಪರಿಸ್ಥಿತಿ ತಂದೊಡ್ಡಲಿದೆಯೋ ಎಂಬುದು ಸದ್ಯದ ಕುತೂಹಲವಾಗಿದೆ.

First published:February 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ