ಬಯಲಾಯ್ತು ಗೋಲ್​ಮಾಲ್​; ಖಾಸಗಿ ಅನುದಾನಿತ ಕಾಲೇಜುಗಳಿಂದ ಸರ್ಕಾರಕ್ಕೆ ಕೋಟಿ ಕೋಟಿ ವಂಚನೆ

ನಿಯಮದ ಪ್ರಕಾರ ಖಾಸಗಿ ಅನುದಾನಿತ ಕಾಲೇಜುಗಳು ಸರ್ಕಾರಕ್ಕೆ ಪ್ರತಿ ವರ್ಷ ನಿಗದಿತ ಶುಲ್ಕ ಪಾವತಿ ಮಾಡಬೇಕು. ಆದರೆ, 2013ರಿಂದ 2014ರವರೆಗೆ ಶುಲ್ಕವನ್ನೇ ಕಟ್ಟಿಲ್ಲ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

Rajesh Duggumane | news18
Updated:May 18, 2019, 8:24 PM IST
ಬಯಲಾಯ್ತು ಗೋಲ್​ಮಾಲ್​; ಖಾಸಗಿ ಅನುದಾನಿತ ಕಾಲೇಜುಗಳಿಂದ ಸರ್ಕಾರಕ್ಕೆ ಕೋಟಿ ಕೋಟಿ ವಂಚನೆ
ಸಾಂದರ್ಭಿಕ ಚಿತ್ರ
Rajesh Duggumane | news18
Updated: May 18, 2019, 8:24 PM IST
ಬೆಂಗಳೂರು (ಮೇ 18): ಖಾಸಗಿ ಅನುದಾನಿತ ಕಾಲೇಜುಗಳಿಂದ ಸರ್ಕಾರಕ್ಕೆ ಕೋಟಿ ಕೋಟಿ ವಂಚನೆಯಾದ ಪ್ರಕರಣ ಬೆಳಕಿಗೆ ಬಂದಿದೆ. ದಶಕಗಳ ಕಾಲ ಶುಲ್ಕವನ್ನು ಸರ್ಕಾರಕ್ಕೆ ನೀಡದೇ ಹಲವು ಖಾಸಗಿ ಶಾಲೆಗಳು ಮೋಸ ಎಸಗಿವೆ. ಈ ವಿಚಾರಕ್ಕೆ ಸಂಬಂಧಿಸಿ ಶಿಕ್ಷಣ ಇಲಾಖೆ ಕಾಲೇಜುಗಳಿಗೆ ನೊಟೀಸ್​ ನೀಡಿದೆ.

ಅನುದಾನಿತ ಕಾಲೇಜುಗಳು ವಿದ್ಯಾರ್ಥಿಗಳಿಂದ ಬೋಧನಾ, ಲ್ಯಾಬ್ ಶುಲ್ಕ ಸಂಗ್ರಹಿತ್ತವೆ. ನಿಯಮದ ಪ್ರಕಾರ ಈ ಕಾಲೇಜುಗಳು ಸರ್ಕಾರಕ್ಕೆ ಪ್ರತಿ ವರ್ಷ ನಿಗದಿತ ಶುಲ್ಕ ಪಾವತಿ ಮಾಡಬೇಕು. ಆದರೆ, 2013ರಿಂದ 2014ರವರೆಗೆ ಶುಲ್ಕವನ್ನೇ ಕಟ್ಟಿಲ್ಲ ಎನ್ನುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಕ್ರೈಸ್ಟ್ ಯೂನಿವರ್ಸಿಟಿ 1.77 ಕೋಟಿ ರೂ., ಸಂತ ಜೋಸೆಫ್ ಕಲಾ ಹಾಗೂ ವಿಜ್ಞಾನ ಕಾಲೇಜ್ ​1.06 ಕೋಟಿ ರೂ, ಜ್ಯೋತಿ ನಿವಾಸ್ ಕಾಲೇಜ್ 61.94 ಲಕ್ಷ ರೂ, ಸಂತ ಜೋಸೆಫರ ವಾಣಿಜ್ಯ ಕಾಲೇಜ್ 44.51 ಲಕ್ಷ ರೂ. ಶುಲ್ಕ ಪಾವತಿಸಬೇಕು. ಆದರೆ, ಈವರೆಗೆ ಸರ್ಕಾರಕ್ಕೆ ಈ ಶಾಲೆಯ ಆಡಳಿತಮಂಡಳಿ ಒಂದೇ ಒಂದು ರೂಪಾಯಿ ಹಣ ಕಟ್ಟಿಲ್ಲ.

ಇದನ್ನೂ ಓದಿ: ಬಿಡುಗಡೆ ಆಯ್ತು 'ನಿಖಿಲ್ ಎಲ್ಲಿದ್ದೀಯಪ್ಪಾ' ಫಸ್ಟ್​ಲುಕ್ ಫೋಸ್ಟರ್: ಹೀರೋ ಯಾರು?

ವಿಚಾರ ಬೆಳಕಿಗೆ ಬರುತ್ತಿದ್ದಂತೆ ಕಾಲೇಜು ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿದ್ದು, ಕಾಲೇಜುಗಳಿಗೆ ನೊಟೀಸ್ ನೀಡಿದೆ. ನೋಟೀಸ್ ತಲುಪಿದ ಒಂದು ವಾರದೊಳಗೆ ಹಣ ಪಾವತಿಸುವಂತೆ ಸೂಚಿಸಲಾಗಿದೆ. ಒಂದೊಮ್ಮೆ ಸೂಚನೆ ಪಾಲಿಸದೇ ಇದ್ದರೆ ವೇತನ ಅನುದಾನ ತಡೆ ಹಿಡಿಯುವುದಾಗಿ ಕಾಲೇಜುಗಳಿಗೆ ಎಚ್ಚರಿಕೆ ನೀಡಿದೆ.

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:May 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ