• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Bengaluru: ಟ್ರಾಫಿಕ್​ ಸಮಸ್ಯೆಯನ್ನು ನಿವಾರಿಸಲು ಹೊಸ ಐಡಿಯಾ! ಬೆಂಗಳೂರಿನ ಜನರ ಈ ಕೆಲಸಕ್ಕೆ ಭಾರೀ ಮೆಚ್ಚುಗೆ

Bengaluru: ಟ್ರಾಫಿಕ್​ ಸಮಸ್ಯೆಯನ್ನು ನಿವಾರಿಸಲು ಹೊಸ ಐಡಿಯಾ! ಬೆಂಗಳೂರಿನ ಜನರ ಈ ಕೆಲಸಕ್ಕೆ ಭಾರೀ ಮೆಚ್ಚುಗೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್​​ ಸಮಸ್ಯೆಗಳು ಹೆಚ್ಚಾಗುತ್ತಲೇ ಇದೆ. ಇದನ್ನು ನಿವಾರಿಸಲೆಂದೇ ಬೆಂಗಳೂರಿನ ಲೇಔಟ್​​ನ ಜನರೊಂದು ಹೊಸ ಐಡಿಯಾವನ್ನು ಮಾಡಿದ್ದಾರೆ. ಇದಕ್ಕಂತನೇ ಇಲ್ಲಿನ ಜನರು ಪಾರ್ಕಿಂಗ್​ಗೆ ಅಂತಾನೇ ಹೊಸ ಜಾಗವನ್ನು ಖರೀದಿಸಿದ್ದಾರೆ.

 • Trending Desk
 • 5-MIN READ
 • Last Updated :
 • Bangalore [Bangalore], India
 • Share this:

ಇವತ್ತು ಟ್ರಾಫಿಕ್​ ಜಾಮ್ (Traffic Jam)​ ಬಹುದೊಡ್ಡ ಸಮಸ್ಯೆಯಾಗಿದೆ. ಇದು ಕೇವಲ ವಾಹನ ಚಲಾಯಿಸುವಾಗ ಮಾತ್ರವಲ್ಲ, ರಸ್ತೆ ಮೇಲೆ ವಾಹನಗಳನ್ನು ಪಾರ್ಕ್​​ ಮಾಡುವುದು ಕೂಡ ಸಮಸ್ಯೆಗೆ ಕಾರಣವಾಗುತ್ತಿದೆ. ಚಿಕ್ಕ ರಸ್ತೆಗಳು, ಸಾಲು ಸಾಲು ಕಾರ್​ಗಳು, ದ್ವಿ ಚಕ್ರವಾಹನಗಳು ಮನೆ ಮುಂದೆ ನಿಂತಿರುವುದು ನಗರದಲ್ಲಿ ಸಾಮಾನ್ಯ ದೃಶ್ಯವಾಗಿರುತ್ತದೆ. ಇದರಿಂದ ಅನೇಕ ಸಮಸ್ಯೆಗಳು ಉಂಟಾಗುತ್ತದೆ. ದೊಡ್ಡ ವಾಹನಗಳು ಚಲಿಸಲು ತೊಂದರೆ ಮತ್ತು ಇದರಿಂದ ಟ್ರಾಫಿಕ್​ ಜಾಮ್​ (Traffic Jam) ಉಂಟಾಗುತ್ತದೆ. ಕೆಲವರು ಅವೈಜ್ಞಾನಿಕವಾಗಿ ಪಾರ್ಕಿಂಗ್ ಕೂಡ ಮಾಡಿರುತ್ತಾರೆ. ಈ ಎಲ್ಲವೂ ಪಾರ್ಕಿಂಗ್​ ಸಮಸ್ಯೆಗೆ (Parking Problem) ಮೂಲ ಕಾರಣವೆಂದು ಗಮನಿಸಿ ಬೆಂಗಳೂರಿನ ಲೇಔಟ್ (Bengaluru Layout)​ ಒಂದು ತಾನೇ ಪಾರ್ಕಿಂಗ್​ ಸ್ಥಳಾವಕಾಶ ಮಾಡಿಕೊಂಡಿದೆ.


ಬ್ರೂಕ್​ಫೀಲ್ಡ್ ಲೇಔಟ್​​​​ನಲ್ಲಿ ಪಾರ್ಕಿಂಗ್​​ ವ್ಯವಸ್ಥೆ
ಬ್ರೂಕ್​ ಫೀಲ್ಡ್​ ಲೇಔಟ್​ನಲ್ಲಿ ಬಹಳ ದಿನಗಳಿಂದ ಟ್ರಾಫಿಕ್​ ಸಮಸ್ಯೆ ಇತ್ತು. ರಸ್ತೆಯಲ್ಲಿ ಮಕ್ಕಳು ಆಡುತ್ತಿದ್ದರು. ದ್ವಿಚಕ್ರವಾಹನಗಳ ನಿರಂತರ ಓಡಾಟ ಅಲ್ಲದೇ, ಅಡ್ಡಾದಿಡ್ಡಿಯಾಗಿ ನಿಲ್ಲಿಸುವ ವಾಹನಗಳು ಕೂಡ ಪಾರ್ಕಿಂಗ್​ ಸಮಸ್ಯೆ ತಂದೊಡ್ಡಿತ್ತು. ಈ ನಿಟ್ಟಿನಲ್ಲಿ ಲೇಔಟ್​ನ ನಿವಾಸಿಗಳು ಖುದ್ದು ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ.


ಖಾಲಿ ನಿವೇಶನದಲ್ಲಿ ಪಾರ್ಕಿಂಗ್​
ಪ್ರತಿನಿತ್ಯ ಬೆಳಿಗ್ಗೆ 8 ಗಂಟೆಗೆ ಆರಂಭವಾಗುವ ಪಾರ್ಕಿಂಗ್​ ಕಿರಿಕಿರಿ ಎಲ್ಲರ ಕೆಲಸಗಳನ್ನು ನಿಧಾನಗೊಳಿಸುತ್ತಿತ್ತು. ತಲೆ ನೋವಾಗಿ ಪರಿಣಮಿಸಿತ್ತು. ಈ ಕಾರಣಕ್ಕಾಗಿ ಖಾಲಿ ನಿವೇಶನಕ್ಕೆ 35,000 ರೂಪಾಯಿ ಬಾಡಿಗೆ ನಿರ್ಧರಿಸಿ ಅಲ್ಲಿ ಎಲ್ಲರ ವಾಹನವನ್ನು ನಿಲುಗಡೆ ಮಾಡಲು ತೀರ್ಮಾನಿಸಲಾಯಿತು.


ಇದನ್ನೂ ಓದಿ: ಡಿಕೆಶಿ ಹಾಕಿರುವ ಸಂಧಾನ ಪೋಸ್ಟ್​​ ಸುಳ್ಳು; ಕೆಪಿಸಿಸಿ ಅಧ್ಯಕ್ಷರ ವಿರುದ್ಧ ‘ಕೈ’ ಟಿಕೆಟ್​ ಆಕಾಂಕ್ಷಿ ಡಾ ಯೋಗೇಶ್​ ಬಾಬು ಕಿಡಿ


ಶಾಲೆ ಮುಂದೆ ಟ್ರಾಫಿಕ್​ ಕಿರಿಕಿರಿ
ಇವತ್ತು ವಿದ್ಯಾಭ್ಯಾಸದ ತೀವ್ರತೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಒಂದೇ ಏರಿಯಾದಲ್ಲಿ ಸಾಕಷ್ಟು ಖಾಸಗಿ ಶಾಲೆಗಳು ಚಿಕ್ಕ ರಸ್ತೆಗಳಲ್ಲೂ ನಿರ್ಮಾಣವಾಗುತ್ತಿವೆ. ಅಲ್ಲಿ ರಸ್ತೆ ಬದಿಗಳಲ್ಲಿ ಸಂಚಾರದಟ್ಟಣೆ ಆಗುವುದು ಸಹಜ.


ಅದರಂತೆ ಕೆಲವು ದೊಡ್ಡ ಶಾಲೆಗಳಲ್ಲಿ ಮಕ್ಕಳ ಪೋಷಕರ ವಾಹನಗಳನ್ನು ಒಳಗಡೆ ಬಿಡದ ನಿಯಮವಿದೆ. ಇಂತಹದ್ದೇ ನಿಯಮವನ್ನು ಹೊಂದಿರುವ ಶಾಲೆಯೊಂದು ಪೋಷಕರ ವಾಹನಗಳನ್ನು ಒಳಗಡೆಗೆ ಅನುಮತಿಸಿಲ್ಲ. ಪರಿಣಾಮ ಪ್ರತಿನಿತ್ಯ ಮಕ್ಕಳನ್ನು ಬಿಡುವ ಪೋಷಕರ ವಾಹನದ ಕಿರಿಕಿರಿ ಉಂಟಾಗುತ್ತಿತ್ತು. ಆಗಲೇ ಈ ಯೋಚನೆ ಬಂದಿದ್ದು.


ಶಾಲೆ ಎದುರಿನ ಖಾಲಿ ನಿವೇಶನ
ಶಾಲೆ ಎದುರುಗಡೆ ಖಾಲಿ ನಿವೇಶನವೊಂದು ಇತ್ತು. ಅದರ ಮಾಲೀಕರ ಬಳಿ ಈ ಪೋಷಕರೆಲ್ಲರು ಮಾತನಾಡಿ ಅದನ್ನು 35 ಸಾವಿರ ರೂಗಳಿಗೆ ಬಾಡಿಗೆಗೆ ಪಡೆದಿದ್ದಾರೆ. ಅದನ್ನು ಸ್ವಚ್ಚಗೊಳಿಸಿಕೊಂಡು ಅಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದಾರೆ.


ಸಾಂದರ್ಭಿಕ ಚಿತ್ರ


ಇತರರಿಗೂ ಅವಕಾಶ
ಈ ಯೋಜನೆ ಯಶಸ್ವಿಯಾಗುತ್ತಿದ್ದಂತೆ ಅಲ್ಲಿ ಟ್ರಾಫಿಕ್​ ಸಮಸ್ಯೆ ಕಡಿಮೆ ಆಗಿದೆ. ಈ ನಿಟ್ಟಿನಲ್ಲಿ ಅಲ್ಲಿನ ಅಪಾರ್ಟ್​​ಮೆಂಟ್​ನ ಜನರು, ಸುತ್ತ ಮುತ್ತಲ ಅಂಗಡಿಯವರು ಸಹ ತಮ್ಮ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಇದು ನಿಜಕ್ಕೂ ನೆಮ್ಮದಿ ತಂದಿದೆ. ರಸ್ತೆಯಲ್ಲಿ ಗೌಜು, ಗದ್ದಲ, ಟ್ರಾಫಿಕ್ ಜಂಜಾಟ, ವಾಹನಗಳ ಹಾರ್ನ್​ ಸದ್ದು, ಪೆಟ್ರೋಲ್​ ವಾಸನೆಗಳಿಲ್ಲದೇ ಅಲ್ಲಿ ನಿವಾಸಿಗಳು ಮತ್ತು ಶಾಲಾ ಮಕ್ಕಳು ನೆಮ್ಮದಿ ಕಂಡಿದ್ದಾರೆ.


ಪಾರ್ಕಿಂಗ್​ ಸ್ಪೇಸ್​​
ಸದ್ಯ ಪಾರ್ಕಿಂಗ್​ ಸ್ಪೇಸ್​ ಬೆಂಗಳೂರಿನಲ್ಲೂ ಕಂಡುಬರುತ್ತಿದೆ. ಇದಕ್ಕಾಗಿಯೇ ಹಲವಾರು ಏಜೆನ್ಸಿಗಳಿದ್ದು ನಿವಾಸಿಗಳ ಏರಿಯಾಗಳಲ್ಲಿ ಪಾರ್ಕಿಂಗ್​​ಗೆ ಅವಕಾಶ ಮಾಡಿಕೊಡುತ್ತಾರೆ. ತಿಂಗಳಿಗೆ ಇಂತಿಷ್ಟು ಬಾಡಿಗೆಯನ್ನು ಅದಕ್ಕಾಗಿ ನೀಡಬೇಕು. ಇವತ್ತು ಒಂದು ಮನೆಯಲ್ಲೇ 3 ಕಾರ್​ಗಳಿದ್ದು, ಅದನ್ನು ಪಾರ್ಕ್​ ಮಾಡುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಈ ನಿಟ್ಟಿನಲ್ಲಿ ಬಾಡಿಗೆ ಮನೆಗಳು ಕೂಡ ಪಾರ್ಕಿಂಗ್​ಗೆ ಹೆಚ್ಚಿನ ಹಣವನ್ನು ಕೂಡ ಪಡೆಯುತ್ತಿದ್ದಾರೆ. ಒಟ್ಟಿನಲ್ಲಿ ಕಾರ್ ಅಥವಾ ಬೈಕ್​​​ ತೆಗೆದುಕೊಳ್ಳುವ ಮುನ್ನ ಅದರ ಪಾರ್ಕಿಂಗ್​​ ಸೌಲಭ್ಯವನ್ನು ನೋಡಿಕೊಂಡರೇ ಒಂದಷ್ಟು ಕಿರಿಕಿರಿಗಳಿಂದ ಮುಕ್ತರಾಗಬಹುದು.

First published: