ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಮೊಳಗಿತು ಮೋದಿ ಪರ ಘೋಷಣೆ; ವಿಡಿಯೋ ವೈರಲ್
ನೂರಾರು ಜನರು ರೈಲಿಗಾಗಿ ಕಾದು ನಿಂತಿದ್ದರು. ಈ ವೇಳೆ ನಿಲ್ದಾಣದಲ್ಲಿ ಮೋದಿ ಪರ ಘೋಷಣೆ ಕೇಳಿಬಂದಿದೆ. ಬಿಜೆಪಿ ಪರ ಬಾವುಟ ಕೂಡ ಹಾರಾಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
2014ರ ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅಲೆ ಜೋರಾಗಿತ್ತು. ಇದೇ ಕಾರಣಕ್ಕೆ ಭಾರೀ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. 2019ರ ಲೋಕಸಭಾ ಚುನಾವಣೆಯಲ್ಲೂ ಮೋದಿ ಅಲೆ ಜೋರಾಗಿಯೇ ಇದೆ. ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ನಡೆದ ಘಟನೆ ಇದಕ್ಕೆ ಪುಷ್ಠಿ ನೀಡಿದೆ.
ಕರ್ನಾಟಕದ 28 ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಿಗೆ ಈ ಮೊದಲು ಮತದಾನ ನಡೆದಿತ್ತು. ಉಳಿದ 14 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಹಾಗಾಗಿ ಸೋಮವಾರ ರಾತ್ರಿ ಬೆಂಗಳೂರಿನಲ್ಲಿ ಉಳಿದುಕೊಂಡಿರುವ ಬೇರೆ ಬೇರೆ ಪ್ರದೇಶದ ಜನರು ಮತಚಲಾಯಿಸಲು ಊರಿಗೆ ಹೊರಟಿದ್ದರು.
ಹಾಗಾಗಿ, ಬೆಂಗಳೂರಿನ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಜನ ಜಂಗುಳಿಯಿಂದ ತುಂಬಿತ್ತು. ಯಶ್ವಂತಪುರ ರೈಲ್ವೆ ನಿಲ್ದಾಣ ಕೂಡ ಇದಕ್ಕೆ ಹೊರತಾಗಿರಲಿಲ್ಲ. ನೂರಾರು ಜನರು ರೈಲಿಗಾಗಿ ಕಾದು ನಿಂತಿದ್ದರು. ಈ ವೇಳೆ ನಿಲ್ದಾಣದಲ್ಲಿ ಮೋದಿ ಪರ ಘೋಷಣೆ ಕೇಳಿಬಂದಿದೆ. ಬಿಜೆಪಿ ಪರ ಬಾವುಟ ಕೂಡ ಹಾರಾಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Last night in Yeshwantpur Railway station, Bangalore. voters travelling to their native places to vote. This is Modi Magic 👍 pic.twitter.com/YXVQTdir7Q
ಕರ್ನಾಟಕದ ಜೊತೆಗೆ ಅಸ್ಸಾಮ್, ಬಿಹಾರ, ಗೋವಾ, ಗುಜರಾತ್, ಕೇರಳ, ಮಹಾರಾಷ್ಟ್ರ, ಒಡಿಶಾ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಛತ್ತೀಸ್ಗಡ, ಜಮ್ಮು-ಕಾಶ್ಮೀರ, ತ್ರಿಪುರಾ, ದಮನ್ ಅಂಡ್ ಡಿಯು ಮತ್ತು ದಾದ್ರಾ ನಾಗರ್ ಹವೇಲಿಯಲ್ಲಿ ಮತದಾನವಾಗಲಿದೆ.
ಒಡಿಶಾದ 6 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ 42 ವಿಧಾನಸಭಾ ಕ್ಷೇತ್ರಗಳಿಗೂ ಇವತ್ತೇ ಮತದಾನವಾಗಲಿದೆ. ಗುಜರಾತ್(26), ಕೇರಳ(20), ಕರ್ನಾಟಕ(14), ಮಹಾರಾಷ್ಟ್ರ(14) ಹಾಗೂ ಉತ್ತರ ಪ್ರದೇಶ(10) ಮೂರನೇ ಹಂತದಲ್ಲಿ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಮತದಾನವಾಗುತ್ತಿರುವ ರಾಜ್ಯಗಳಾಗಿವೆ. ಹಾಗೆಯೇ, ಗೋವಾದ 3 ಮತ್ತು ಗುಜರಾತ್ನ 2 ವಿಧಾನಸಭಾ ಕ್ಷೇತ್ರಗಳಿಗೂ ಇವತ್ತೇ ಉಪಚುನಾವಣೆಯಾಗುತ್ತಿದೆ.
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ