ಮಾತು ಬಿಟ್ಟಿದ್ದಕ್ಕೆ ಪ್ರೇಯಸಿಯ ಕತ್ತಿಗೆ ಚಾಕು ಹಾಕಿದ ಪ್ರಿಯಕರ!; ಇದು ಬೆಂಗಳೂರಿನ ಪಾಗಲ್ ಪ್ರೇಮಿಯ ಕತೆ

ಘಟನೆ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಜನಾರ್ಧನ್​ ವಿರುದ್ಧ ಕೊಲೆ ಯತ್ನ ಪ್ರಕರಣ ಆರೋಪ ಹೊರಿಸಲಾಗಿದೆ. ಜನಾರ್ಧನ್‌ ತಲೆಮರಿಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ಮುಂದುವರಿದಿದೆ.

Rajesh Duggumane | news18-kannada
Updated:September 12, 2019, 3:20 PM IST
ಮಾತು ಬಿಟ್ಟಿದ್ದಕ್ಕೆ ಪ್ರೇಯಸಿಯ ಕತ್ತಿಗೆ ಚಾಕು ಹಾಕಿದ ಪ್ರಿಯಕರ!; ಇದು ಬೆಂಗಳೂರಿನ ಪಾಗಲ್ ಪ್ರೇಮಿಯ ಕತೆ
ಗಾಯಗೊಂಡ ಯುವತಿ
  • Share this:
ಬೆಂಗಳೂರು (ಸೆ.12): ಪ್ರೀತಿಸಿದಾಕೆ ಮಾತು ಬಿಟ್ಟರೆ ಅವಳನ್ನು ಮನವೊಲಿಸಿ ಮತ್ತೆ ಸಂಬಂಧವನ್ನು ಸರಿ ಮಾಡಿಕೊಳ್ಳಬಹುದು. ಆದರೆ, ಹುಡುಗಿಯನ್ನೇ ಕೊಲೆ ಮಾಡಲು ಮುಂದಾದರೆ? ಹೀಗೊಂದು ಪ್ರಯತ್ನವನ್ನು ಬೆಂಗಳೂರಿನ ಯುವಕ ಮಾಡಿದ್ದಾನೆ. ಸದ್ಯ ಈತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಬೆಂಗಳೂರಿನ ಚೊಕ್ಕಸಂದ್ರದಲ್ಲಿ ಈ ಘಟನೆ ನಡೆದಿದೆ. ಕಾವ್ಯಾ(18) ಮತ್ತು ಜನಾರ್ಧನ್ (26) ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಕಳೆದ ಆರು ತಿಂಗಳ ಹಿಂದೆ ಕಾವ್ಯಾ ಏಕಾಏಕಿ ಜನಾರ್ಧನ್​ ಜೊತೆ ಮಾತನಾಡುವುದನ್ನು ಬಿಟ್ಟಿದ್ದಳು. ಮಾತನಾಡಲು ಎಷ್ಟೇ ಪ್ರಯತ್ನಿಸಿದರೂ ಆಕೆ ಸರಿಯಾಗಿ ಪ್ರತಿಕ್ರಿಯಿಸುತ್ತಿರಲಿಲ್ಲ. ಹೀಗಾಗಿ ಕಾವ್ಯಾ ವಿರುದ್ಧ ದ್ವೇಷ ಸಾಧಿಸಲು ಜನಾರ್ಧನ್ ನಿರ್ಧರಿಸಿದ್ದ.

ಕಾವ್ಯಾ ಬುಧವಾರ ನಡೆದು ಹೋಗುವಾಗ ಅವಳ ಕತ್ತಿಗೆ ಚಾಕು ಹಾಕಿದ್ದ. ಈ ವೇಳೆ ಯುವತಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ. ನಂತರ ಜನಾರ್ಧನ್​ ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಕೆಲವೇ ಕ್ಷಣಗಳಲ್ಲಿ ಧೋನಿ ತುರ್ತು ಸುದ್ದಿಗೋಷ್ಠಿ; ಕ್ರಿಕೆಟ್​ಗೆ ಇಂದೇ ಎಂಎಸ್​ಡಿ ವಿದಾಯ?

ಘಟನೆ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಜನಾರ್ಧನ್​ ವಿರುದ್ಧ ಕೊಲೆ ಯತ್ನ ಪ್ರಕರಣ ಆರೋಪ ಹೊರಿಸಲಾಗಿದೆ. ಜನಾರ್ಧನ್‌ ತಲೆಮರಿಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ಮುಂದುವರಿದಿದೆ.

(ವರದಿ: ಅಭಿಷೇಕ್​)

First published:September 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ