• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Ganesh Chaturthi: ಮೈಪೂರ್ತಿ ಚಿನ್ನಾಭರಣ ಧರಿಸಿ ಸಿಂಹಾಸನವೇರಿದ ಗಣಪ! ಅಂಕೋಲಾದ ಗಣೇಶ ಬಲು ಶ್ರೀಮಂತ

Ganesh Chaturthi: ಮೈಪೂರ್ತಿ ಚಿನ್ನಾಭರಣ ಧರಿಸಿ ಸಿಂಹಾಸನವೇರಿದ ಗಣಪ! ಅಂಕೋಲಾದ ಗಣೇಶ ಬಲು ಶ್ರೀಮಂತ

ಅಂಕೋಲದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಗಣಪ

ಅಂಕೋಲದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಗಣಪ

ಅಂಕೋಲಾ ಪಟ್ಟಣದ ಮಹಾಲೆಮನೆ ಕುಟುಂಬ ಪ್ರತಿಷ್ಠಾಪಿಸಿ ಪೂಜಿಸುತ್ತಿರುವ ಶ್ರೀಮಂತ ವಿಘ್ನನಿವಾರಕನಿಗೆ ಪ್ರತಿ ವರ್ಷವೂ ಒಂದಲ್ಲೊಂದು ಚಿನ್ನದ ವಸ್ತುಗಳು ಅರ್ಪಣೆಯಾಗುತ್ತಿವೆ.

  • Share this:

ಅಂಕೋಲಾ, ಉತ್ತರ ಕನ್ನಡ: ಮನೆ ಮನೆಯಲ್ಲಿ ಪ್ರತಿಷ್ಟಾಪಿಸಿದ ಗಣಪನಿಗೂ (Ganapa) ಕೊಟ್ಯಾಂತರ ಮೌಲ್ಯದ ಚಿನ್ನಾಭರಣ (Jewellers) ಇದೆ. ಇದು ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲಾ (Ankola) ಪಟ್ಟಣದ ಮಹಾಲೆ ಮನೆಯಲ್ಲಿ ಪ್ರತಿಷ್ಠಾಪಿಸಿದ ಗಣಪ. ಈತ ಜಿಲ್ಲೆಯ ಶ್ರೀಮಂತ ಗಣಪ (Rich Ganapa). ಮೈ ತುಂಬ ವಿವಿಧ ಚಿನ್ನಾಭರಣಗಳನ್ನ ಧರಿಸಿ ಚಿನ್ನಾಭರಣ ಭೂಷಿತನಾಗಿದ್ದಾನೆ. ಸ್ವಾತಂತ್ರ್ಯ ಹೋರಾಟದ (Freedom Fight) ಸಂದರ್ಭದಿಂದಲೂ ಪೂಜಿಸಲ್ಪಡುವ ಮಹಾಲೆ ಮನೆ‌ಗಣಪನ ನೋಡಲು ಸಾವಿರಾರು ಭಕ್ತರು (Devotees) ಆಗಮಿಸುತ್ತಿದ್ದಾರೆ. ಅಂದಾಜು 40kg ಚಿನ್ನಾಭರಣವನ್ನ (40kg Jewellers) ಧರಿಸಿರುವ ಗಣಪನ ಕಣ್ತುಂಬಿಕೊಳ್ಳುವುದೆ ಒಂದು ಭಾಗ್ಯ. ಮುಂಬೈ ಲಾಲ್ ಬಾಗ್ ಚಾ ರಾಜಾ ಹೊರತು ಪಡಿಸಿದ್ರೆ ಅಂಕೋಲಾದಲ್ಲಿ ಮಹಾಲೆ ಮನೆ ಗಣಪನೆ ಶ್ರೀಮಂತ.


ರಾಜ್ಯದ ಶ್ರೀಮಂತ ಗಣೇಶ


ಮುಂಬೈನ ಲಾಲ್‌ಭಾಗ್ ಚಾ ರಾಜ ಗಣಪತಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ದೇಶದ ಅತಿ ಶ್ರೀಮಂತ ಗಣಪತಿ ಎಂದೇ ಬಿಂಬಿತವಾಗಿರುವ ಈ ಗಣೇಶ, ಎಲ್ಲೆಡೆ ಭಾರೀ ಪ್ರಸಿದ್ಧಿ. ಈ ಲಾಲ್‌ಭಾಗ್ ಚಾ ರಾಜ ಗಣಪತಿಯಷ್ಟು ಶ್ರೀಮಂತನಲ್ಲದಿದ್ದರೂ, ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ, ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಪ್ರತಿಷ್ಠಾಪಿಸುವ ಗಣೇಶನಿಗಿಂತ  ವಸಂತ ಮಹಾಲೆ ಮನೆಯಲ್ಲಿ ಪ್ರತಿಷ್ಠಾಪಿಸಿರುವ ಈ ಗಣಪ ಅತಿ ಶ್ರೀಮಂತ.


ಮೈಮೇಲೆ ಆಭರಣ ತೊಟ್ಟಿರುವ ಗಣಪತಿ


ಅಂಕೋಲಾ ಪಟ್ಟಣದ ಮಹಾಲೆಮನೆ ಕುಟುಂಬ ಪ್ರತಿಷ್ಠಾಪಿಸಿ ಪೂಜಿಸುತ್ತಿರುವ ಶ್ರೀಮಂತ ವಿಘ್ನನಿವಾರಕನಿಗೆ ಪ್ರತಿ ವರ್ಷವೂ ಒಂದಲ್ಲೊಂದು ಚಿನ್ನದ ವಸ್ತುಗಳು ಅರ್ಪಣೆಯಾಗುತ್ತಿವೆ. ಅಲಂಕಾರ ಪ್ರಿಯನಾಗಿರುವ ಈ ಗಣಪ, ಪ್ರತಿ ಕೈ ಬೆರಳಿಗೂ ಐದಾರು ಚಿನ್ನದ ಉಂಗುರಗಳು, ಹತ್ತಾರು ಚಿನ್ನದ ಸರಗಳು, ಚಿನ್ನದ ಕಿರೀಟ, ಚಿನ್ನದ ಗಧೆ... ಚಿನ್ನದ ಖಡ್ಗ ಹೀಗೆ ಮೈಮೇಲೆ ಪೂರ್ತಿ ಚಿನ್ನ ಧರಿಸಿ ಸರ್ವಾಲಂಕಾರ ಭೂಷಿತನಾಗಿ ಕುಳಿತು ಬರುವ ಭಕ್ತರನ್ನ ಹರಸುತ್ತಿದ್ದಾನೆ.


ಇದನ್ನೂ ಓದಿ: Kurudumale: ಕುರುಡುಮಲೆ ವಿನಾಯಕ ಬ್ರಹ್ಮ ರಥೋತ್ಸವ ಸಂಪನ್ನ, ಮಳೆಹಾನಿ ತಡೆಯುವಂತೆ ವಿಘ್ನೇಶ್ವರನಲ್ಲಿ ಮನವಿ


ಗಣಪನನ್ನು ನೋಡಲು ಭಕ್ತಸಾಗರ


ಬೇಡಿದ ವರವ ಕರುಣಿಸುತ್ತಾನೆಂಬ ನಂಬಿಕೆ ಹೊಂದಿರುವ ಭಕ್ತರು, ಇಲ್ಲಿಗೆ ಬಂದು ತಮ್ಮ ಇಷ್ಟಾರ್ಥಗಳ ಈಡೇರಿಸುವಂತೆ ಹರಕೆ ಹೊತ್ತು ತೆರಳುತ್ತಾರೆ. ಹೀಗೆ ಹೊತ್ತ ಹರಕೆ ಈಡೇರಿದ ಬಳಿಕ ವಿಶೇಷ ಪೂಜೆಯ ಜೊತೆಗೆ ಚಿನ್ನಾಭರಣಗಳನ್ನ ಈ ಗಣಪನಿಗೆ ಚೌತಿಯ ಸಮಯದಲ್ಲಿ ಹರಕೆಯ ರೂಪದಲ್ಲಿ ನೀಡುವುದು ರೂಢಿಯಲ್ಲಿ ಬಂದಿದ್ದು, ಇದರಿಂದಾಗಿ ಅತಿ ಶ್ರೀಮಂತ ಗಣಪನಾಗಿ ಈ ಮಹಾಲೆ ಮನೆ ವಿನಾಯಕ ಗುರುತಿಸಿಕೊಂಡಿದ್ದಾನೆ...


ನೂರಾರು ವರ್ಷಗಳ ಇತಿಹಾಸ ಹೊಂದಿರುವ ಗಣಪತಿ


ಅಂದಹಾಗೆ ಈ ಮಹಾಲೆ ಮನೆ ಗಣಪತಿಗೆ ನೂರಾರು ವರ್ಷಗಳ ಇತಿಹಾಸವಿದೆ. ಬ್ರಿಟಿಷರ ಕಾಲದಲ್ಲೇ ಸಾರ್ವಜನಿಕ ಗಣಪತಿ ಗಿಂತಲೂ ಪಟ್ಟಣದಲ್ಲಿ ದೊಡ್ಡ ಗಣಪತಿಯೆಂದು ಈ ಮಹಾಲೆ ಮನೆ ಗಣಪತಿ ಗುರುತಿಸಿಕೊಂಡಿತ್ತು ಅಂತೆ. ಇನ್ನು ಮನುಷ್ಯನ ಮೈಬಣ್ಣವನ್ನೇ ಈ ಗಣಪನ ಮೂರ್ತಿ ಹೋಲುತ್ತದೆ. ನೂರಾರು ವರ್ಷಗಳೇ ಕಳೆದರೂ ಈ ಬಣ್ಣದಲ್ಲಿ, ಗಣಪನ ಮೂರ್ತಿಯ ತೇಜಸ್ಸಿನಲ್ಲಿ ಬದಲಾವಣೆ ಕಾಣದಿರುವುದು ಅಚ್ಚರಿಯ ಸಂಗತಿ ಕೂಡ. ಸ್ವಾತಂತ್ರ್ಯ ಪೂರ್ವದಿಂದಲೂ ಈ ಮಹಾಲೆ ಕುಟುಂಬ ಗಣೇಶನನ್ನ ತಾವೇ ಜೇಡಿ  ಮಣ್ಣಿನಿಂದ ತಯಾರಿಸಿ, ಚತುರ್ಥಿಯ ಸಮಯದಲ್ಲಿ 11 ದಿನವಿಟ್ಟು ಪೂಜಿಸಲಾಗುತ್ತಿದೆ... ವಿಸರ್ಜನಾ ಸಮಯದಲ್ಲಿ ಪೊಲೀಸ್ ಭದ್ರತೆಯನ್ನೂ ಈ ಗಣಪನಿಗೆ ನೀಡುವುದು ವಿಶೇಷ...


ಇದನ್ನೂ ಓದಿ: Ganesh Chaturthi 2022: ಧರ್ಮ ಸಂಘರ್ಷದ ನಡುವೆ ಭಾವೈಕ್ಯತೆ ಸಂದೇಶ; ಮುಸ್ಲಿಂ ಕುಟುಂಬದಿಂದ ಗಣೇಶ ಚತುರ್ಥಿ ಆಚರಣೆ!


 ದಿನನಿತ್ಯವೂ ಸಾವಿರಾರು ಭಕ್ತರು


ಮಹಾಲೆ ಮನೆ ಗಣಪತಿ ನೋಡಲು ಹತ್ತು ದಿನದಲ್ಲಿ ದಿನನಿತ್ಯವೂ ಸಾವಿರಾರು ಭಕ್ತರು ಆಗಮಿಸುತ್ತಾರೆ...ಹಗಲು‌ರಾತ್ರಿ ಎನ್ನದೆ ನಿರಂತರವಾಗಿ ಭಕ್ತರು‌ ವಿಘ್ನನಿವಾರಕನ‌ ದರ್ಶನಕ್ಕಾಗಿ ಬರುತ್ತಾರೆ...ಪೂಜೆ ಸಂದರ್ಭದಲ್ಲಿ ಸರದಿ ಸಾಲಿನಲ್ಲಿ ನಿಂತು‌ ಭಕ್ತಿ ಪರಾಕಾಷ್ಠೆ ಮೆರೆಯುತ್ತಾರೆ.

top videos
    First published: