ಜನರಿಗೆ, ರೈತರಿಗೆ ಖುಷಿ ಸುದ್ದಿ; ಹೆಚ್ಚೂಕಡಿಮೆ ಇಲ್ಲ, ದೇಶದಲ್ಲಿ ಈ ಬಾರಿ ಸಹಜ ಮುಂಗಾರು: ಹವಾಮಾನ ಇಲಾಖೆ

ಈ ಬಾರಿ ಮಾನ್ಸೂನ್​ ಬಗ್ಗೆ ವರದಿ ನೀಡಿರುವ ಭಾರತೀಯ ಹವಾಮಾನ ಇಲಾಖೆ ಈ ಬಾರಿ ಸಹಜ ಮುಂಗಾರು ಆಗಲಿದ್ದು, ಕೃಷಿಕರಿಗೆ ಸಹಾಯವಾಗಲಿದೆ ಎಂದಿದ್ದಾರೆ.

Seema.R | news18
Updated:April 15, 2019, 5:46 PM IST
ಜನರಿಗೆ, ರೈತರಿಗೆ ಖುಷಿ ಸುದ್ದಿ; ಹೆಚ್ಚೂಕಡಿಮೆ ಇಲ್ಲ, ದೇಶದಲ್ಲಿ ಈ ಬಾರಿ ಸಹಜ ಮುಂಗಾರು: ಹವಾಮಾನ ಇಲಾಖೆ
ಕೃಷಿಯಲ್ಲಿ ತೊಡಗಿರುವ ಕೃಷಿಕರು
Seema.R | news18
Updated: April 15, 2019, 5:46 PM IST
ನವದೆಹಲಿ (ಏ.15): ದಾಖಲೆ ಬಿಸಿಲಿಗೆ ಈ ಬಾರಿ ದೇಶ ಸಾಕ್ಷಿಯಾಗಿದ್ದು, ಮಳೆಗಾಗಿ ರೈತರು ಪರಿತಪಿಸಿದ್ದಾರೆ. ಬಿಸಿಲಿನ ತಾಪವನ್ನು ನೋಡಿದ ರೈತರು ಈ ಬಾರಿ ಮಳೆ ಹೇಗಿರಲಿದೆ; ಕಳೆದ ಬಾರಿಯಂತೆ ಪ್ರವಾಹ ತರಲಿದೆಯಾ ಅಥವಾ ಬರಗಾಲ ಆವರಿಸಲಿದೆಯಾ ಎಂದು ಕಳವಳಗೊಂಡಿರುವ ರೈತರಿಗೆ ಹವಾಮಾನ ಇಲಾಖೆ ಸಂತಸದ ಸುದ್ದಿ ನೀಡಿದೆ. ದೇಶದಲ್ಲಿ ಈ ಬಾರಿ ಸಹಜ ಮಳೆ ಆಗಲಿದೆ ಎಂದು ಅಂದಾಜಿಸುವ ಮೂಲಕ ರೈತರ ಮೊಗದಲ್ಲಿ ಹರ್ಷ ಮೂಡುವಂತೆ ಮಾಡಿದ್ದಾರೆ.

ಮಾನ್ಸೂನ್​ ಬಗ್ಗೆ ವರದಿ ನೀಡಿರುವ ಭಾರತೀಯ ಹವಾಮಾನ ಇಲಾಖೆ ಈ ಬಾರಿ ಸಹಜ ಮುಂಗಾರು ಆಗಲಿದ್ದು, ಕೃಷಿಕರಿಗೆ ಸಹಾಯವಾಗಲಿದೆ ಎಂದಿದ್ದಾರೆ.

2019ರಲ್ಲಿ ನೈರುತ್ಯ ಮಳೆ ಸಾಮಾನ್ಯ ಮಾದರಿಯಾಗಿರಲಿದೆ. ಶೇ. 96ರಷ್ಟು ಪ್ರಮಾಣ ಮಳೆ ಬೀಳುವ  ಸಾಧ್ಯತೆ ಇದೆ.  ಎಂದು  ಎಂದು ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ. ರಾಜೀವನ್​ ನಾಯರ್​ ತಿಳಿಸಿದ್ದಾರೆ.

ಇದನ್ನು ಓದಿ: ತುಲಾಭಾರ ಸೇವೆ ವೇಳೆ ಬಿದ್ದು ಪೆಟ್ಟು ಮಾಡಿಕೊಂಡ ಕಾಂಗ್ರೆಸ್ ನಾಯಕ ಶಶಿ ತರೂರ್

ಈ ಬಾರಿ ಸರಾಸರಿ 90 ಸೆಂ.ಮೀ. ಆಸುಪಾಸಿನ ಪ್ರಮಾಣದಲ್ಲಿ ಮುಂಗಾರು ಮಳೆಯಾಗುವ ಸಂಭವವಿದೆ.

ಸಹಜ ಮುಂಗಾರಿನ ಲೆಕ್ಕ ಹೇಗೆ?
Loading...

ಜೂನ್​ನಿಂದ ಪ್ರಾರಂಭವಾಗಿ 4 ತಿಂಗಳ ಅವಧಿಯನ್ನು, ಅಂದರೆ ಜೂನ್​ನಿಂದ ಸೆಪ್ಟೆಂಬರ್​ವರೆಗಿನ ಅವಧಿಯಲ್ಲಿ ಬೀಳುವ ಮಳೆಯನ್ನು ಮುಂಗಾರು ಎನ್ನಲಾಗುತ್ತದೆ. ಕಳೆದ 50 ವರ್ಷಗಳಿಂದ ಈ ಅವಧಿಯಲ್ಲಿ ಆದ ಮಳೆಯ ಸರಾಸರಿಯನ್ನು ಸಾಮಾನ್ಯ ಮುಂಗಾರು ಎಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ ಇದು 89 ಸೆಂಟಿಮೀಟರ್ ಆಗಿದೆ. ಈ ಪ್ರಮಾಣದ ಆಧಾರದ ಮೇಲೆ ಶೇ. 96ರಿಂದ ಶೇ. 104ರವರೆಗೆ ಆಗುವ ಮಳೆಯನ್ನು ಸಾಮಾನ್ಯ ಮುಂಗಾರು ಎಂದು ಪರಿಗಣಿಸಲಾಗುತ್ತದೆ.

ಈ ನಾಲ್ಕು ತಿಂಗಳ ಅವಧಿಯಲ್ಲಾಗುವ ಮುಂಗಾರು ಮಳೆಯೇ ದೇಶದ ರೈತರಿಗೆ ಜೀವಾಳವಾಗಿದೆ. ಭಾರತದಲ್ಲಾಗುವ ಶೇ. 70ರಷ್ಟು ಮಳೆಯು ಮುಂಗಾರಿನಲ್ಲೇ ಬೀಳುತ್ತದೆ..

First published:April 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626