• Home
  • »
  • News
  • »
  • state
  • »
  • Crime Report: ರಾಜ್ಯದಲ್ಲಿ 5 ವರ್ಷಗಳಲ್ಲಿ 6 ಸಾವಿರ ಮಂದಿ ಹತ್ಯೆ! ಈ ಪೈಕಿ ಪ್ರೀತಿಗಾಗಿ ಪ್ರಾಣ ಬಿಟ್ಟವರೆಷ್ಟು?

Crime Report: ರಾಜ್ಯದಲ್ಲಿ 5 ವರ್ಷಗಳಲ್ಲಿ 6 ಸಾವಿರ ಮಂದಿ ಹತ್ಯೆ! ಈ ಪೈಕಿ ಪ್ರೀತಿಗಾಗಿ ಪ್ರಾಣ ಬಿಟ್ಟವರೆಷ್ಟು?

ಸಾಂದರ್ಭಿಕ ಚಿತ್ರ (ಕೃಪೆ: Internet)

ಸಾಂದರ್ಭಿಕ ಚಿತ್ರ (ಕೃಪೆ: Internet)

2018ರ ನವೆಂಬರ್‌ವರೆಗೆ ಸುಮಾರು 5 ವರ್ಷಗಳಲ್ಲಿ ಬೆಂಗಳೂರು ಸೇರಿದಂತೆ ವಿವಿಧೆಡೆ ಒಟ್ಟೂ 6 ಸಾವಿರ ಕೊಲೆಗಳು ನಡೆದಿವೆಯಂತೆ. ಈ ಪೈಕಿ ಶೇಕಡಾ 3.3ರಷ್ಟು ಕೊಲೆಗಳು ನಡೆದಿರುವುದು ಲವ್ ಫೆಲ್ಯೂರ್ (Love Failure) ಹಾಗೂ ಪ್ರೀತಿಯ (Love) ಕಾರಣಕ್ಕಂತೆ!

  • News18 Kannada
  • Last Updated :
  • Karnataka, India
  • Share this:

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ (Karnataka State) ಕಾನೂನು ಸುವ್ಯವಸ್ಥೆ (Law and Order) ಹದಗೆಟ್ಟಿದೆ ಅಂತ ವಿರೋಧ ಪಕ್ಷಗಳು (Opposition Party) ಆಗಾಗ ಆರೋಪ ಮಾಡುತ್ತಲೇ ಇರುತ್ತವೆ. ರಾಜ್ಯ ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ದಿನ ನಿತ್ಯ ಅಪರಾಧ ಚಟುವಟಿಕೆಗಳು (Crime Activities) ನಡೆಯುತ್ತಿರುವುದು ಬೆಳಕಿಗೆ ಬರುತ್ತವೇ ಇವೆ. ಕೊಲೆ, ಅತ್ಯಾಚಾರ, ಕಳ್ಳತನ, ದರೋಡೆ, ಬೆದರಿಕೆ, ಆಸ್ತಿ ಗಲಾಟೆ, ಹೊಡೆದಾಟ ಇತ್ಯಾದಿ ಅಪರಾಧ ಪ್ರಕರಣಗಳು ವರದಿಯಾಗುತ್ತಿವೆ. ಇನ್ನು ಈ ಬಗ್ಗೆ ಶಾಕಿಂಗ್ ವರದಿಯೊಂದು (Shocking Report) ಹೊರಬಿದ್ದಿದೆ. 2018ರ ನವೆಂಬರ್‌ವರೆಗೆ ಸುಮಾರು 5 ವರ್ಷಗಳಲ್ಲಿ ಬೆಂಗಳೂರು ಸೇರಿದಂತೆ ವಿವಿಧೆಡೆ ಒಟ್ಟೂ 6 ಸಾವಿರ ಕೊಲೆಗಳು ನಡೆದಿವೆಯಂತೆ. ಈ ಪೈಕಿ ಶೇಕಡಾ 3.3ರಷ್ಟು ಕೊಲೆಗಳು ನಡೆದಿರುವುದು ಲವ್ ಫೆಲ್ಯೂರ್ (Love Failure) ಹಾಗೂ ಪ್ರೀತಿಯ (Love) ಕಾರಣಕ್ಕಂತೆ!


ಕಾಲೇಜ್‌ನಲ್ಲೇ ವಿದ್ಯಾರ್ಥಿಯನ್ನು ಕೊಂದಿದ್ದ ಯುವಕ


ಇತ್ತೀಚಿಗಷ್ಟೇ ಯಲಹಂಕದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪ್ರಿಯಕರನೊಬ್ಬ ವಿದ್ಯಾರ್ಥಿನಿಯೊಬ್ಬಳನ್ನು ಕೊಂದಿದ್ದ. ಜನವರಿ 2ರಂದು ಪ್ರೆಸಿಡೆನ್ಸಿ ಕಾಲೇಜ್‌ನ ಬಿಟೆಕ್ ವಿದ್ಯಾರ್ಥಿನಿ ಲಯಸ್ಮಿತಾ ಎಂಬಾಕೆಯನ್ನು ಆಕೆಯ ಸಂಬಂಧಿ ಪವನ್ ಕಲ್ಯಾಣ್ ಎಂಬಾತ ಚಾಕು ಹಾಕಿ ಕೊಲೆ ಮಾಡಿದ್ದ. ಬಳಿಕ ತಾನೂ ಚಾಕು ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಇಂತಹ ಘಟನೆ ನಡೆದಿದ್ದು ಬರೀ ಒಂದೆರಡಲ್ಲ ಅಂತಿದೆ ಈ ರಿಪೋರ್ಟ್‌.


ಲಯಸ್ಮಿತಾ-ಪವನ್ ಕಲ್ಯಾಣ್


5 ವರ್ಷಗಳಲ್ಲಿ ನಡೆದಿದ್ದು 6551 ಕೊಲೆಗಳು!


ಪೊಲೀಸ್ ಮೂಲಗಳ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ 2018 ರಿಂದ ನವೆಂಬರ್ 30, 2022 ರವರೆಗೆ 6,551 ಕೊಲೆಗಳು ನಡೆದಿರುವುದು ವರದಿಯಾಗಿವೆ. ಈ ಪೈಕಿ ಪ್ರೇಮ ಸಂಬಂಧಗಳು, ಲವ್ ಫೆಲ್ಯೂರ್‌ಗಳಿಂದ ನಡೆದ ಹತ್ಯೆಗಳ ಪ್ರಮಾಣ ಶೇಕಡಾ 3.3ರಷ್ಟು ಅಂದರೆ 215 ರಷ್ಟಿದೆ. ಈ ಐದು ವರ್ಷಗಳಲ್ಲಿ, ಒಟ್ಟು ಹತ್ಯೆಗಳಲ್ಲಿ 0.1% ರಿಂದ 4.5% ರಷ್ಟು ಮಾತ್ರ ಪ್ರೀತಿ ಕಾರಣಕ್ಕೆ ನಡೆದಿವೆಯಂತೆ.


ಸಾಂದರ್ಭಿಕ ಚಿತ್ರ


ಇದನ್ನೂ ಓದಿ: Bajrang Dal: ನೇತ್ರಾವತಿ ನದಿಯಲ್ಲಿ ಭಜರಂಗದಳ ಕಾರ್ಯಕರ್ತನ ಶವ ಪತ್ತೆ! ಕೊಲೆಯೋ, ಆತ್ಮಹತ್ಯೆಯೋ?


ಪ್ರೇಮ ಹತ್ಯೆಗಳಿಗೆ ಕಾರಣಗಳೇನು?


ಸಾಮಾನ್ಯವಾಗಿ ಪ್ರೇಮ ಸಂಬಂಧ ತಿರಸ್ಕಾರ ಈ ರೀತಿಯ ಕೊಲೆಗೆ ಕಾರಣವಾಗಿರುತ್ತದೆ. ಇದರ ಜೊತೆಗೆ ದಾಂಪತ್ಯ ದ್ರೋಹದ ಅನುಮಾನ ಮತ್ತು ಅಸೂಯೆ ಇಂತಹ ಕೊಲೆಗಳಿಗೆ ಕಾರಣವಾಗುವ ಇತರ ಅಂಶಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕ್ರಮಣಶೀಲತೆ ಮತ್ತು ಬಲವಂತದ ನಿಯಂತ್ರಣ ಮನೋಭಾವವು ಇಂತಹ ಹೇಯ ಕೃತ್ಯಗಳ ಹಿಂದಿನ ಪ್ರಮುಖ ಕಾರಣಗಳಾಗಿವೆ ಎಂದು ಮನೋವೈದ್ಯರು ಹೇಳುತ್ತಾರೆ ಅಂತ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.


ಸಾಂದರ್ಭಿಕ ಚಿತ್ರ


ಮನಶಾಸ್ತ್ರಜ್ಞರು ಹೇಳುವುದೇನು?


ನಿಮ್ಹಾನ್ಸ್‌ನ ಮನೋವೈದ್ಯಶಾಸ್ತ್ರದ ಪ್ರಾಧ್ಯಾಪಕ ಮತ್ತು ಫೋರೆನ್ಸಿಕ್ ಸೈಕಿಯಾಟ್ರಿ ಘಟಕದ ಮುಖ್ಯಸ್ಥ ಡಾ.ಸುರೇಶ್ ಬಡಾ ಮಠ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಪುರುಷರು ಪ್ರೇಮ ವಿಚಾರದಲ್ಲಿ ಮಹಿಳೆಯರನ್ನು ಕೊಲ್ಲುವುದು 'ಲಿಂಗ ಆಧಾರಿತ ಹಿಂಸೆ' ಎಂದು ಬಣ್ಣಿಸಿದ್ದಾರೆ. ಪ್ರಿಯತಮೆ ಅಥವಾ ಹೆಂಡತಿ ಮೇಲೆ ಬಲವಂತದ ನಿಯಂತ್ರಣ'ವನ್ನು ಚಲಾಯಿಸುವ ಬಯಕೆಯೇ ಇಂತಹ ಘಟನೆಗಳಿಗೆ ಪ್ರಮುಖ ಕಾರಣ ಅಂತ ಅವರು ಹೇಳಿದ್ದಾರೆ. ಲಿಂಗ, ಆರ್ಥಿಕ ಸಂಕಷ್ಟ, ರೋಗಗ್ರಸ್ತ ಅಸೂಯೆ, ಪ್ರತ್ಯೇಕತೆಯ ಬೆದರಿಕೆ, ಕೌಟುಂಬಿಕ ವೈಷಮ್ಯ ಮತ್ತು ಪರಸ್ಪರ ಘರ್ಷಣೆಯ ಪಾತ್ರವನ್ನು ಇಂತಹ ಹಿಂಸಾಚಾರಕ್ಕೆ ಕೊಡುಗೆ ನೀಡುತ್ತದೆ ಎಂದು ಅವರು ಹೇಳಿದ್ದಾರೆ.


ಸಾಂದರ್ಭಿಕ ಚಿತ್ರ


ಇದನ್ನೂ ಓದಿ: Hassan: ವಿಧಿ ಆಟ ಎಂತ ಘೋರ; ಅಂದು ಅಣ್ಣ-ಇಂದು ತಮ್ಮ, ಸಹೋದರನ ವರ್ಷದ ತಿಥಿಗೆ ಬರ್ತಿದ್ದ ತಮ್ಮ ಸಾವು


ಪ್ರೀತಿ ನಿರಾಕರಣೆ ವಿಚಾರದಲ್ಲಿ ಕೊಲೆ


ಸ್ಪಂದನ ಹೆಲ್ತ್‌ಕೇರ್‌ನ ಮನೋವೈದ್ಯ ಮಹೇಶ್ ಗೌಡ ಮಾತನಾಡಿ, ಆಕ್ರಮಣಶೀಲತೆ ಮತ್ತು ಉದ್ವೇಗವು ಇಂತಹ ಹತ್ಯೆಗಳ ಹಿಂದೆ ಪ್ರಮುಖ ಪ್ರಚೋದಕ ಅಂಶಗಳಾಗಿವೆಯಂತೆ. ಕೆಲವು ವ್ಯಕ್ತಿಗಳು ಪ್ರೇಮ ಅಥವಾ ಮದುವೆಯಂತ ಸಂಬಂಧಗಳಲ್ಲಿ ನಿರ್ಲಕ್ಷ್ಯ ಅಥವಾ ಪ್ರೀತಿ ನಿರಾಕರಣೆಯನ್ನು ಸಹಿಸಿಕೊಳ್ಳುವುದಿಲ್ಲ. ಹೀಗಾಗಿಯೇ ಈ ರೀತಿಯ ಕೊಲೆಗಳು ನಡೆಯುತ್ತವೆ ಅಂತ ಅವರು ಹೇಳಿದ್ದಾಗಿ ಟೈಮ್ ಆಫ್ ಇಂಡಿಯಾ ವರದಿ ಮಾಡಿದೆ.

Published by:Annappa Achari
First published: