News18 India World Cup 2019

ಪಾಕಿಸ್ತಾನದ 22ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಇಮ್ರಾನ್​ ಖಾನ್

news18
Updated:August 18, 2018, 12:19 PM IST
ಪಾಕಿಸ್ತಾನದ 22ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಇಮ್ರಾನ್​ ಖಾನ್
news18
Updated: August 18, 2018, 12:19 PM IST
ನ್ಯೂಸ್ 18 ಕನ್ನಡ

ಇಸ್ಲಾಮಾಬಾದ್ (ಪಾಕಿಸ್ತಾನ) ಆಗಸ್ಟ್ 18: ಪಾಕಿಸ್ತಾನ್ ತೆಹ್ರಿಕ್ ಇ ಇನ್ಸಾಫ್ (ಪಿಟಿಐ) ಅಧ್ಯಕ್ಷ ಇಮ್ರಾನ್​ ಖಾನ್ ಅವರು ಇಂದು (ಶನಿವಾರ) ಪಾಕಿಸ್ತಾನದ 22ನೇ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ರಾಷ್ಟ್ರಗೀತೆ ಹಾಡುವುದರೊಂದಿಗೆ ಪ್ರಮಾಣವಚನ ಕಾರ್ಯಕ್ರಮ ಆರಂಭವಾಯಿತು. ನಂತರ ಪವಿತ್ರ ಗ್ರಂಥ ಕುರಾನ್​ನ ಕೆಲ ಭಾಗವನ್ನು ಪಠಿಸಲಾಯಿತು. ಕಪ್ಪು ಶೇರ್ವಾನಿ ತೊಟ್ಟು ಇರ್ಮಾನ್ ಪ್ರಮಾಣವಚನ ಸ್ವೀಕರಿಸಲು ಆಗಮಿಸಿದ್ದರು. ಮೊದಲ ಬಾರಿಗೆ ದೇಶದ ಉನ್ನತ ಹುದ್ದೆ ಅಲಂಕರಿಸುವ ಸಂದರ್ಭದಲ್ಲಿ ಅವರ ಮುಖದಲ್ಲಿ ಸ್ವಲ್ಪ ಗಾಬರಿ ಇತ್ತು. ಪಾಕಿಸ್ತಾನ ಅಧ್ಯಕ್ಷ ಮ್ಯಾಮ್ನುನ್ ಹುಸೇನ್  ಅವರು ಇಮ್ರಾನ್ ಖಾನ್ ಅವರಿಗೆ  ಪ್ರಮಾಣವಚನ ಬೋಧಿಸಿದಾಗ, ಉರ್ದುವಿನ ಕೆಲ ಪದಗಳನ್ನು ಇಮ್ರಾನ್ ಖಾನ್ ತಪ್ಪಾಗಿ ಉಚ್ಚರಿಸಿದರು.

1992ರಲ್ಲಿ ವಿಶ್ವಕಪ್ ಗೆದ್ದ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಇಮ್ರಾನ್ ಖಾನ್ ನಾಯಕರಾಗಿದ್ದರು. ಇದೀಗ ರಾಜಕೀಯ ಪ್ರವೇಶಿಸಿದ ಎರಡು ದಶಕಗಳ ನಂತರ ಪಾಕಿಸ್ತಾನದ ಪ್ರಧಾನಿಯಾಗಿದ್ದಾರೆ. ಖಾನ್ ಅವರು 1996ರಲ್ಲಿ ರಾಜಕೀಯ ಪ್ರವೇಶಿಸಿದ್ದರು.


ಪ್ರಮಾಣವಚನ ಕಾರ್ಯಕ್ರಮಕ್ಕೆ ಆರ್ಮಿ ಮುಖ್ಯಸ್ಥ ಖ್ವಾಮರ್ ಜಾವೇದ್ ಬಜ್ವಾ, ಭಾರತದ ಮಾಜಿ ಕ್ರಿಕೆಟ್​  ಆಟಗಾರ ಹಾಗೂ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು, ವೀಕ್ಷಕ ವಿವರಣೆಗಾರ ರಮೀಜ್ ರಾಜಾ, ವಾಸೀಂ ಅಕ್ರಂ ವಿಶೇಷ ಅತಿಥಿಗಳಾಗಿ  ಪಾಲ್ಗೊಂಡಿದ್ದರು.
Loading...
ಇಮ್ರಾನ್ ಖಾನ್ ಶುಕ್ರವಾರ ಪ್ರಧಾನಿಯಾಗಿ ಬಹುಮತದಿಂದ ಆಯ್ಕೆಯಾಗುವ ಮೂಲಕ ತಮ್ಮ ಸ್ಪರ್ಧಿಯಾಗಿದ್ದ ಪಾಕಿಸ್ತಾನ್ ಮುಸ್ಲಿಂ ಲೀಗ್​ ನವಾಜ್ (ಪಿಎಂಎಲ್-ಎನ್) ಶಹಬಾಜ್ ಶರೀಫ್​ ಅವರನ್ನು ಸೋಲಿಸಿದರು. 65 ವರ್ಷದ ಹಿರಿಯ ಕ್ರಿಕೆಟಿಗ 176 ಸದಸ್ಯರ ಬಲವನ್ನು ಪಡೆದರೆ, ಪಾಕಿಸ್ತಾನದ ಮಾಜಿ ಪ್ರಧಾನಿ (ಪ್ರಸ್ತುತ ಜೈಲಿನಲ್ಲಿದ್ದಾರೆ) ನವಾಜ್ ಶರೀಫ್ ಅವರ ಸಹೋದರ ಪಿಎಂಐ-ಎನ್ ಅಧ್ಯಕ್ಷ ಶಹಬಾಜ್ ಶರೀಫ್ ಕೇವಲ 96 ಸದಸ್ಯ ಬಲವನ್ನು ಪಡೆದುಕೊಳ್ಳಲು ಶಕ್ತರಾದರು. ಈ ಮೂಲಕ ಇಮ್ರಾನ್ ಖಾನ್ ಪಾಕಿಸ್ತಾನದ 22ನೇ ಪ್ರಧಾನಿಯಾಗಿ ಆಯ್ಕೆಯಾದರು ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಪಾಕಿಸ್ತಾನದಲ್ಲಿ ಸರ್ಕಾರ ರಚಿಸಲು ಬೇಕಾಗಿರುವ ಮ್ಯಾಜಿಕ್ ನಂಬರ್ 172. ಆದರೆ ಕಳೆದ ಜುಲೈ 25ರಂದು ನಡೆದ ಸಾರ್ವತಿಕ್ರ ಚುನಾವಣೆಯಲ್ಲಿ ಪಿಟಿಐ 116 ಸ್ಥಾನಗಳನ್ನು ಪಡೆದಿದ್ದು, ಮಹಿಳಾ ಮತ್ತು ಅಲ್ಪ ಸಂಖ್ಯಾತ ಮೀಸಲು ಪರಿಶೀಲಿಸಿದ ಬಳಿಕ ಪಿಟಿಐ ನ್ಯಾಷನಲ್‌ ಅಸೆಂಬ್ಲಿಯಲ್ಲಿ 158 ಸ್ಥಾನ ಹೊಂದಿದೆ ಎಂದು ಆಗಸ್ಟ್ 11ರಂದು  ಪಾಕಿಸ್ತಾನ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿತ್ತು.

First published:August 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...