Evening Digest: ಪ್ಲಾಸ್ಟಿಕ್ ಅಂಗಡಿಯಲ್ಲಿ ಅಗ್ನಿ‌ ಅವಘಡ, ISI ಮಾರ್ಕ್ ಇಲ್ಲದ ಹೆಲ್ಮೆಟ್ ಧರಿಸಿದ್ರೆ ಬೀಳುತ್ತೆ ದಂಡ: ಈ ದಿನದ ಓದಲೇಬೇಕಾದ ಸುದ್ದಿಗಳಿವು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಪ್ಲಾಸ್ಟಿಕ್ ಅಂಗಡಿಯಲ್ಲಿ ಅಗ್ನಿ‌ ಅವಘಡ: ಇಬ್ಬರು ಸಜೀವ ದಹನ

ಪ್ಲಾಸ್ಟಿಕ್ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಇಬ್ಬರು ಕಾರ್ಮಿಕರು ಸಜೀವ ದಹನವಾಗಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಬಸವನ ಬಾಗೇವಾಡಿ ಕ್ರಾಸ್ ಬಳಿ ಬೆಂಕಿ ಅವಘಡ ಸಂಭವಿಸಿದೆ. ರಾತ್ರಿ ಅಂಗಡಿಯಲ್ಲಿಯೇ ಇಬ್ಬರು ಕಾರ್ಮಿಕರು ಮಲಗಿದ್ದರು. ಅಶೋಕ ದೇಸ್ನೂಯಿ (25) ಮತ್ತು ಲಿಂಬಾರಾಮ ದೇಸ್ನೂಯಿ(35) ಬೆಂಕಿ ಅವಘಡದಲ್ಲಿ ಮೃತ ಕಾರ್ಮಿಕರು. ಬಾಗೇವಾಡಿ ಕ್ರಾಸ್ ಬಳಿ ಹೆದ್ದಾರಿಯ ಬದಿಯಲ್ಲಿಯೇ ಹಲವು ಪ್ಲಾಸ್ಟಿಕ್ ಸಾಮಾಗ್ರಿಗಳ ಅಂಗಡಿಗಳಿವೆ. ತಡರಾತ್ರಿ ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಾಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ದ್ವಿಚಕ್ರ ವಾಹನ ಸವಾರರೇ ಎಚ್ಚರ, ISI ಮಾರ್ಕ್ ಇಲ್ಲದ ಹೆಲ್ಮೆಟ್ ಧರಿಸಿದ್ರೆ ಬೀಳುತ್ತೆ ದಂಡ! ಇನ್ಮೇಲೆ ಫುಲ್ Strict

ಬೆಂಗಳೂರಲ್ಲಿ ಅತಿ ಹೆಚ್ಚು ದ್ವಿಚಕ್ರ ವಾಹನ (Two wheeler) ಸವಾರು ಆಫ್​ ಹೆಲ್ಮೆಟ್​ (Half helmet) ಧರಿಸಿಯೇ ಓಡಾಡ್ತಾರೆ. ಸುರಕ್ಷತೆಯ ಅರಿವಿಲ್ಲದೇ ಅದೆಷ್ಟೋ ಮಂದಿ ಆಫ್​ ಹೆಲ್ಮೆಟ್​ ಧರಿಸಿ ಪ್ರಾಣ ಕಳೆದುಕೊಂಡಿದ್ದಾರೆ. ನಮ್ಮ ಸುರಕ್ಷತೆಗಾಗಿಯೇ ಸಂಚಾರಿ ಪೊಲೀಸ್ (Traffic police) ಅಧಿಕಾರಿಗಳು ಗುಣಮಟ್ಟದ ಹೆಲ್ಮೆಟ್​ ಧರಿಸಲು ಸಲಹೆ ನೀಡ್ತಾರೆ. ಆದ್ರೆ ನಮ್ಮ ಜನ ಮಾತ್ರ ಎಲ್ಲಿ ಹೆಲ್ಮೆಟ್​ ಧರಿಸದೆ ರೋಡಿಗಿಳಿದ್ರೆ ಪೊಲೀಸರು ದಂಡ (penalty) ಹಾಕ್ತಾರೋ ಅಂತ ಗೊಣಗುತ್ತಾ ಕಳಪೆ ಗುಣಮಟ್ಟದ ಹೆಲ್ಮೆಟ್ ಹಾಕಿ ಓಡಾಡ್ತಾರೆ. ಆದ್ರೆ ಇನ್ಮುಂದೆ ಇದು ನಡೆಯಲ್ಲ, ISI ಮಾರ್ಕ್​ ಇಲ್ಲದ ಹೆಲ್ಮೆಟ್ ಗಳನ್ನು ಬ್ಯಾನ್ ​ ಮಾಡಲು ಪೊಲೀಸ್ ಇಲಾಖೆ ಮುಂದಾಗಿದೆ. ISI ಇಲ್ಲದ ಹೆಲ್ಮೆಟ್‌ಗಳ ಮೇಲೆ ಅಮಾನತುಗೊಂಡಿದ್ದ ನಿಷೇಧವನ್ನು ಟ್ರಾಫಿಕ್ ಪೊಲೀಸರು ಮತ್ತೆ ತರಲಿದ್ದಾರೆ. ಇನ್ಮುಂದೆ  ಆಫ್​ ಹೆಲ್ಮೆಟ್ ಹಾಕಿ ರೋಡಿಗಿಳಿದ್ರೆ ದಂಡ ಬೀಳೋದು ಗ್ಯಾರೆಂಟಿ.

ದಿಗ್ಗಜರು ಸಿನಿಮಾ ಸ್ಟೈಲ್ ನಲ್ಲಿ ನಡೆಯಿತು ತುಮಕೂರಿನಲ್ಲಿ ಘಟನೆ: ಕಾರು ಖರೀದಿಗೆ ಬಂದ ರೈತನಿಗೆ ಶೋರೂಮ್ ಸಿಬ್ಬಂದಿ ಅವಮಾನ

ನೀವೆಲ್ಲಾ ರೆಬೆಲ್ ಸ್ಟಾರ್ ಅಂಬರೀಶ್(Rebel Star Ambarish) ಹಾಗೂ ವಿಷ್ಣುದಾದಾ(Vishnu Vardhan) ಅಭಿನಯದ ದಿಗ್ಗಜರು ಸಿನಿಮಾ(Diggajaru Film) ನೋಡಿಯೇ ನೋಡಿರುತ್ತೀರಿ. ಈ ಸಿನಿಮಾದಲ್ಲಿ ವಿಷ್ಣುವರ್ಧನ್ ಹಾಗೂ ಅಂಬರೀಷ್ ಅವರ ಮನೋಜ್ಞ ಅಭಿನಯಕ್ಕೆ ನೀವೆಲ್ಲಾ ಮಾರುಹೋಗಿ ಇರುತ್ತೀರಿ. ಕನ್ನಡದ ಸಾರ್ವಕಾಲಿಕ ಹಿಟ್ ಸಿನಿಮಾಗಳಲ್ಲಿ(Hit Film) ಒಂದಾಗಿರುವ ದಿಗ್ಗಜರು ಸಿನಿಮಾದ ಪ್ರತಿಯೊಂದು ದೃಶ್ಯಗಳು ಕನ್ನಡಿಗರ(Kannadiga) ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿವೆ.. ಅದರಲ್ಲೂ ದಿಗ್ಗಜರು ಸಿನಿಮಾದ ಹಾಸ್ಯ ದೃಶ್ಯಗಳಲ್ಲೂ ಅತಿ ಹೆಚ್ಚು ನೆನಪಾಗುವ ದೃಶ್ಯ ಅಂದರೆ ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರು ಕಾರು ಖರೀದಿಗೆ ಬರುವ ದೃಶ್ಯ.. ಹಳ್ಳಿಯಿಂದ ಬಂದವರು ಎನ್ನುವ ಕಾರಣಕ್ಕೆ ಕಾರು ಶೋ ರೂಮ್ ನಲ್ಲಿ(Car Show Room) ಇಬ್ಬರಿಗೂ ಅವಮಾನ ಉಂಟಾಗುತ್ತದೆ. ಈ ವೇಳೆ ಮೂಟೆಯಲ್ಲಿ ತಂದಿದ್ದ ಹಣವನ್ನು(Money) ರಾಶಿರಾಶಿಯಾಗಿ ಸುರಿದು ಕಾರು ಖರೀದಿ ಮಾಡಿ ಹಳ್ಳಿಗರು ಯಾವುದಕ್ಕೂ ಕಡಿಮೆಯಿಲ್ಲ ಎನ್ನುವಂತೆ ವಿಷ್ಣುವರ್ಧನ್ ಹಾಗೂ ಅಂಬರೀಶ್ ಆ ಸಿನಿಮಾದ ದೃಶ್ಯದಲ್ಲಿ ನಟಿಸಿದ್ದಾರೆ.

 ಬೆಕ್ಕು ಕಳ್ಳತನ, ದೂರು ದಾಖಲು: ಹುಡುಕಿ ಕೊಟ್ಟವರಿಗೆ ಭಾರೀ ನಗದು ಬಹುಮಾನ

ಬೆಂಗಳೂರು ಸೇರಿದಂತೆ ಮಹಾನಗರಗಳದ ನಿವಾಸಿಗಳು ಮನೆಯಲ್ಲಿ ನಾಯಿ, ಬೆಕ್ಕು, ಮೊಲದಂತಹ ಸಾಕು ಪ್ರಾಣಿಗಳನ್ನು ಸಾಕುತ್ತಾರೆ. ಅವುಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಅವುಗಳ ಕಾಣೆಯಾದಾಗ ಮನೆಯವರು ಮಕ್ಕಳನ್ನೇ ಕಳೆದುಕೊಂಡಂತೆ ಹುಡುಕುತ್ತಾರೆ. ಇದೀಗ ಅಂತಹವುದೇ ಒಂದು ಪ್ರಕರಣ ಬೆಂಗಳೂರಿನಲ್ಲಿ ದಾಖಲಾಗಿದೆ. ಜಯನಗರದ ರಾಜಣ್ಣ ಲೇಔಟ್ ನಿವಾಸಿ ಮಿಸ್ಬಾ ಶರೀಫ್ ಎಂಬುವರು ತಮ್ಮ ಬೆಕ್ಕು ಕಳ್ಳತನವಾಗಿದೆ ಎಂದು ತಿಲಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಎಫ್ಐಆರ್ ಸಹ ದಾಖಲಿಸಿಕೊಳ್ಳಲಾಗಿದೆ.
Published by:Sandhya M
First published: