ಲೋಕ ಕಲ್ಯಾಣಕ್ಕಾಗಿ ಚಿಕ್ಕೋಡಿ ಸಂಸದರಿಂದ ಗಣೇಶನಿಗೆ ಹೋಮ !

G Hareeshkumar | news18
Updated:October 3, 2018, 8:07 PM IST
ಲೋಕ ಕಲ್ಯಾಣಕ್ಕಾಗಿ ಚಿಕ್ಕೋಡಿ ಸಂಸದರಿಂದ ಗಣೇಶನಿಗೆ ಹೋಮ !
G Hareeshkumar | news18
Updated: October 3, 2018, 8:07 PM IST
- ಲೋಹಿತ್ ಶಿರೋಳ ನ್ಯೂಸ್18 ಕನ್ನಡ

-ಚಿಕ್ಕೋಡಿ (ಅ.03) :  ಲೋಕ ಕಲ್ಯಾಣಕ್ಕಾಗಿ ಗಣೇಶನಿಗೆ ಹೋಮ ಹವನ ಕಾರ್ಯಕ್ರಮವನ್ನ ಚಿಕ್ಕೋಡಿ ಸಂಸದ ಪ್ರಕಾಶ್ ಹುಕ್ಕೇರಿ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಹವನ ಕಾರ್ಯಕ್ರಮಕ್ಕೆ ಪಟ್ಟಣದ 501 ದಂಪತಿಗಳು ಸಾಕ್ಷಿಯಾದರು.

ಇನ್ನು ಹೋಮ ಹವನ ಕಾರ್ಯಕ್ರಮದಲ್ಲಿ ಸಂಸದ ಪ್ರಕಾಶ್ ಹುಕ್ಕೇರಿ, ಶಾಸಕ ಗಣೇಶ ಹುಕ್ಕೇರಿ ಪಾಲ್ಗೊಂಡಿದ್ದರು.ಇನ್ನು ಕಾರ್ಯಕ್ರಮ ಮುಗಿಸಿ ಮಾಧ್ಯಮಗಳಿಗೆ ಪ್ರತಿಕ್ರೀಯೆ ನೀಡಿದ ಪ್ರಕಾಶ ಹುಕ್ಕೇರಿ ಲೋಕಸಭೆಗೆ ಬಿಜೆಪಿಯಿಂದ ಡಾ. ಪ್ರಭಾಕರ್ ಕೋರೆ ಸ್ಪರ್ಧೆಯ ವಿಚಾರವಾಗಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಪಕ್ಷದ ತೀರ್ಮಾಣ ಮತ್ತು ಹೈಕಮಾಂಡ್ ತೀರ್ಮಾನ ಮಾಡಿ ನನಗೆ ಟಿಕೇಟ್ ನೀಡಿದರೆ ನಾನು ಸ್ಪರ್ಧೆ ಮಾಡುತ್ತೆನೆ. ನಾನಾಗಲಿ ನನ್ನ ಮಗ ಗಣೇಶ ಹುಕ್ಕೇರಿಯಾಗಲಿ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲ. ಪಕ್ಷದ ನೀಡುವ ಕೆಲಸ ಮಾಡುತ್ತೆವೆ ಅಂತ ಹೇಳಿದರು.

ಇನ್ನು ಚಿಕ್ಕೋಡಿ ಜಿಲ್ಲಾ ರಚನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಮುಖ್ಯಮಂತ್ರಿಗಳು ಈಗಾಗಲೇ ಜಿಲ್ಲಾ ರಚನೆಯ ಕುರಿತಾಗಿ ಸಮಿತಿ ರಚನೆ ಮಾಡಿ ಸಮಿತಿ ನೀಡುವ ನಿರ್ಣಯದ ಪ್ರಕಾರ ಚಿಕ್ಕೋಡಿ ಮತ್ತು ಗೋಕಾಕ್ ಎರಡನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡುವ ಭರವಸೆ ನೀಡಿದ್ದಾರೆ ಎಂದರು.

ಇನ್ನು ಸಂಸದರ ಆದರ್ಶ ಗ್ರಾಮದ ಕುರಿತಾಗಿ ಪ್ರತಿಕ್ರಿಯೆ ನೀಡಿದ ಅವರು ಆದರ್ಶ ಗ್ರಾಮಕ್ಕೆ ಕೇಂದ್ರದಿಂದ ಯಾವುದೇ ಅನುದಾನ ಬಿಡುಗಡೆ ಆಗಿಲ್ಲ. ರಾಜ್ಯ ಸರ್ಕಾರದಿಂದ ಬಿಡುಗಡೆ ಆಗುವ ಅನುದಾನದಲ್ಲಿ ನಮಗೆ ಕೆಲಸ ಮಾಡಲು ತಿಳಿಸಿದ್ದಾರೆ.

 
First published:October 3, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ