ಬಂಗಾಳ ಕೊಲ್ಲಿಯಲ್ಲಿ (Bay Of Bengal) ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ತಮಿಳುನಾಡು (Tamilnadu Rains) ವರುಣನ (Rainfall) ಕೆಂಗಣ್ಣಿಗೆ ಗುರಿಯಾಗಿದೆ. ಒಂದು ಮಳೆಯಿಂದ ಚೇತರಿಸಿಕೊಳ್ಳುತ್ತಿದ್ದ ಚೆನ್ನೈಗೆ (Chennai) ಸೈಕ್ಲೋನ್ (Cyclone) ಗಾಯದ ಮೇಲೆ ಬರೆ ಎಳೆಯುತ್ತಿದೆ. ಅತಿ ಹೆಚ್ಚು ಮಳೆ ಬೀಳುವ ಸಾಧ್ಯತೆ ಇರುವ 20 ಜಿಲ್ಲೆಗಳ ಶಾಲಾ – ಕಾಲೇಜುಗಳಿಗೆ ರಜೆ ನೀಡಲಾಗಿದೆ. ಇತ್ತ ಕೇರಳ (Kerala Rain) ಸಹ ಪ್ರವಾಸಿಗರು ಮತ್ತು ಜನತೆಗೆ ಎಚ್ಚರಿಕೆಯಿಂದ ಇರಬೇಕೆಂದ ಸಂದೇಶ ರವಾನಿಸಿದೆ. ಸೈಕ್ಲೋನ್ ಪರಿಣಾಮ ಬೆಂಗಳೂರಿನಲ್ಲಿ ತುಂತುರು ಮಳೆಯಾಗುವ ಸಾಧ್ಯತೆಗಳಿವೆ. ಗುರುವಾರ ಬೆಂಗಳೂರಿನ (Bengaluru) ಬಹುತೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣ (Cloudy Weather) ನಿರ್ಮಾಣವಾಗಿತ್ತು. ಇಂದು ಮಳೆ ಬೀಳುವ (Bengaluru Rains) ಸಾಧ್ಯತೆಗಳಿವೆ.
ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾ(Rainfall)ಗಲಿದೆ. ಶಿವಮೊಗ್ಗ, ಹಾಸನ. ದಾವಣಗೆರೆ, ಚಿಕ್ಕಬಳ್ಳಾಪುರ, ಮೈಸೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಗಳಿವೆ. ಇನ್ನುಳಿದಂತೆ ಚಳಿ (Winter) ಸಹ ರಾಜ್ಯದಲ್ಲಿ (Karnataka Rains) ಆರಂಭವಾಗಲಿದೆ. ಉತ್ತರ ಕರ್ನಾಟಕ (North Karnataka) ಭಾಗದಲ್ಲಿ ಚಳಿ ಮತ್ತು ಸುಳಿ ಗಾಳಿಯ ಜೊತೆ ಒಣ ಹವೆ ಇರಲಿದೆ.
ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ಸಂದೇಶ
ಮಾಧ್ಯಮಗಳ ಜೊತೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್. ನವೆಂಬರ್ 26 ಮತ್ತು 27ರಂದು ಮಳೆಯಾಗಲಿದೆ ಎಂಬ ಮಾಹಿತಿ ಬಂದ ಹಿನ್ನೆಲೆ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗುವ ಸೈಕ್ಲೋನ್ ನನ್ನು ಮೊದಲು ಚೆನ್ನೈ ಎದುರಿಸಲಿದೆ. ಈ ಸೈಕ್ಲೋನ್ ಮಳೆ ಬೆಂಗಳೂರು, ಮೈಸೂರು ಭಾಗ ಮತ್ತು ಉಡುಪಿಯವರೆಗೆ ಸುರಿಯಲಿದೆ. ಮುಂಜಾಗ್ರತ ಕ್ರಮಗಳೊಂದಿಗೆ ಸಿದ್ಧರಾಗಿರುವಂತೆ ಹೇಳಲಾಗಿದೆ. ಡಿಸೆಂಬರ್ 2ರ ನಂತರ ಮತ್ತೊಮ್ಮೆ ಮಳೆಯಾಗಲಿದೆ ಎಂದು ಹೇಳಲಾಗುತ್ತಿದ್ದು, ಮಾಹಿತಿ ದೃಢಪಟ್ಟಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: Astrology: ಶನಿವಾರದ ಈ ದಿನ ಹೇಗಿರಲಿದೆ 12 ರಾಶಿಗಳ ಭವಿಷ್ಯ
ತಮಿಳುನಾಡಿನಲ್ಲಿ ರೆಡ್ ಅಲರ್ಟ್
ತಮಿಳುನಾಡಿನಲ್ಲಿ ಮುಂದಿನ ಐದು ದಿನ ಭಾರೀ ಮಳೆಯಾಗುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ರಾಜಧಾನಿ ಚೆನ್ನೈ ಸೇರಿದಂತೆ ಚೆಂಗಲಗಟ್ಟು, ತಿರುವಳ್ಳೂರ್ ಭಾಗದಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ. ಮುನ್ನೆಚ್ಚರಿಕೆ ಕ್ರಮವಾಗಿ ತಮಿಳುನಾಡಿನ 20 ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷನೆ ಮಾಡಲಾಗಿದೆ. ತಮಿಳುನಾಡಿನ ಕರಾವಳಿಯ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.
ಈರೋಡ್, ನಾಮಕ್ಕಲ್, ಕರೂರ್, ಸೇಲಂ, ತಿರುಚಿರಾಪಳ್ಳಿ, ರಾಮನಾಥಪುರಂ, ಶಿವಗಂಗಾ, ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ, ತಿರುವಳ್ಳೂರು, ವಿಲ್ಲುಪುರಂ, ವೆಲ್ಲೂರು, ರಾಣಿಪೇಟ್ ಮತ್ತು ತಿರುಪತ್ತೂರ್ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕಡಲೂರು, ಅರಿಯಲೂರು, ಪೆರಂಬಲೂರು, ಪುದುಕೊಟ್ಟೈ, ತಂಜಾವೂರು, ತಿರುವರೂರು, ನಾಗಪಟ್ಟಣಂ ಮತ್ತು ಮೈಲಾಡುತುರೈ ಜಿಲ್ಲೆಗಳು, ಪುದುಚೇರಿ ಮತ್ತು ಕಾರೈಕಲ್ ನಲ್ಲಿಯೂ ಮಳೆಯಾಗಿರುವ ವರದಿಗಳು ಬರುತ್ತಿವೆ.
ಎಲ್ಲೆ ಎಷ್ಟು ಮಳೆಯಾಗಿದೆ?
ಶುಕ್ರವಾರ ಸಂಜೆವರೆಗೆ ಎಂಆರ್ಸಿ ನಗರ (ಚೆನ್ನೈ) 23.5 ಮಿ.ಮೀ., ತಾರಾಮಣಿ (ಚೆನ್ನೈ) 15 ಮಿ.ಮೀ., ವೈಎಂಸಿಎ ನಂದನಂ (ಚೆನ್ನೈ) 26 ಮಿ.ಮೀ.,, ಎಸಿಎಸ್ ವೈದ್ಯಕೀಯ ಕಾಲೇಜು (ಕಾಂಚೀಪುರಂ) – 36 ಮಿ.ಮೀ., ಹಿಂದೂಸ್ತಾನ್ ವಿಶ್ವವಿದ್ಯಾಲಯ (ಕಾಂಚಿಪುರಂ) 21 ಮಿಮೀ, ಗುಡ್ ವಿಲ್ ಶಾಲೆ, ವಿಲ್ಲಿವಕ್ಕಂ (ತಿರುವವಳ್ಳುರ್. ಚೆಂಬರ್ 6 ಟಿಎಂಎಂ 6) ) - 8.5 ಮಿಮೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಇದನ್ಣೂ ಓದಿ: Corona Virus: ಧಾರವಾಡದ SDM ಕಾಲೇಜಿನ 66 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್
ತಮಿಳುನಾಡಿನ ಎಲ್ಲ ನದಿಗಳು ತುಂಬಿ ಹರಿಯುತ್ತಿದ್ದು, ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸಲಾಗಿದೆ. ಇನ್ನು ಯಾವುದೇ ಕ್ಷಣದಲ್ಲಿಯೂ ಜಲಾಶಯಗಳಿಂದ ನದಿಗೆ ನೀರು ಬಿಡುವ ಸಾಧ್ಯತೆಗಳಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ