Karnataka Weather Today: ಬೆಂಗಳೂರಿನಲ್ಲಿ ಇವತ್ತು ಸಹ ಸುರಿಯಲಿದೆ ಮಳೆ, 6 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದ್ದು, ಆರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ (Yellow Alert) ಘೋಷಿಸಸಲಾಗಿದೆ. ಆಗ್ನೇಯ ಬಂಗಾಳಕೊಲ್ಲಿಯಲ್ಲಿನ (Bay of Bengal) ಮೇಲ್ಮೈ ಸುಳಿಗಾಳಿ ಪ್ರಬಲವಾಗಿ ರೂಪಗೊಂಡ ಪರಿಣಾಮ ಮಳೆಯಾಗುತ್ತಿದೆ.

ಬೆಂಗಳೂರು ಮಳೆ

ಬೆಂಗಳೂರು ಮಳೆ

  • Share this:
ಕಳೆದ ಒಂದು ವಾರದಿಂದ  ಬೆಂಗಳೂರು (Bengaluru Rainfall) ಮಲೆನಾಡು ಆಗಿ ಬದಲಾಗಿದೆ. ಇಂದು ಸಹ ಬೆಂಗಳೂರಿನಲ್ಲಿ ಭಾರೀ ಮಳೆಯಾಗಲಿದೆ (Karnataka Rains) ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ  ಹಿನ್ನೆಲೆ ತಮಿಳುನಾಡು (Tamilnadu) ಸಹ ತತ್ತರಿಸಿದ್ದು, ಇದರ ಪರಿಣಾಮ ಬೆಂಗಳೂರಿಗೂ (Bengaluru) ಸಹ ತಟ್ಟಿದೆ. ಇನ್ನು ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದ್ದು, ಆರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ (Yellow Alert) ಘೋಷಿಸಸಲಾಗಿದೆ. ಆಗ್ನೇಯ ಬಂಗಾಳಕೊಲ್ಲಿಯಲ್ಲಿನ (Bay of Bengal) ಮೇಲ್ಮೈ ಸುಳಿಗಾಳಿ ಪ್ರಬಲವಾಗಿ ರೂಪಗೊಂಡ ಪರಿಣಾಮ ಮಳೆಯಾಗುತ್ತಿದೆ. ನವೆಂಬರ್ 11 ರಿಂದಲೇ ಬೆಂಗಳೂರು ಸೇರಿದಂತೆ ಹಲವೆಡೆ ಮಳೆಯಾಗುತ್ತಿದೆ. ನಾಳೆಯೂ ಬೆಂಗಳೂರು ಗ್ರಾಮಾಂತರ, ಮೈಸೂರು, ಚಾಮರಾಜನಗರ,ರಾಮನಗರ, ಕೋಲಾರ, ಕೊಡಗು, ಚಿಕ್ಕಬಳ್ಳಾಪುರ ಮತ್ತು ಹಾಸನದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಬೆಂಗಳೂರಿನ ಹಲವೆಡೆ ಭಾರೀ ಮಳೆ ಆಗುವ ಸಾಧ್ಯತೆಗಳಿಗೆ ಎಂದ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ವಿಮಾನ ನಿಲ್ದಾಣದಲ್ಲಿ 3.8 mm, ಹೆಚ್ಎ ಎಲ್ ನಲ್ಲಿ 3.5 mm‌ ಮಳೆಯಾಗಿದೆ. ವಾಯುಭಾರ ವೈಪರೀತ್ಯ ಇಂದು ಸಂಜೆ ಚೆನ್ನೈ ಹಾಗೂ ಆಂಧ್ರದ ಮೂಲಕ ಸಂಚರಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದ ಡ್ಯಾಂಗಳು ಭರ್ತಿ

ರಾಜ್ಯದಲ್ಲಿ ಹಲವು ದಿನಗಳಿಂದ ನಿರಂತರವಾಗಿ ಮಳೆ (Rainfall) ಯಾಗುತ್ತಿದೆ. ಇಂದು ಸಹ ರಾಜ್ಯದ ಹಲವೆಡೆ ಮಳೆ ಮುಂದುವರಿಯುವ ನಿರೀಕ್ಷೆ ಇದೆ. ಭಾರಿ ಮಳೆಗೆ ರಾಜ್ಯದಲ್ಲಿ ನದಿಗಳ ನೀರಿನ ಪ್ರಮಾಣ ಹೆಚ್ಚುತ್ತಿದೆ. ಬಹುತೇಕ ಡ್ಯಾಂ (Karnataka dams)ಗಳು ಭರ್ತಿಯಾಗಿದ್ದು, ನದಿಗಳಿಗೆ ನೀರು ಬಿಡಲಾಗುತ್ತಿದೆ.  ಈ ಹಿನ್ನೆಲೆ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಕೆಆರ್ ಎಸ್ ಕಾವೇರಿ ನದಿ ಪಾತ್ರದ ಜನರಿಗೆ ಎಚ್ಚರಿಕೆಯ ಸೂಚನೆ ನೀಡಿತ್ತು.

ಇದನ್ನೂ ಓದಿ:  Astrology: ಜೀವನ ಸಂಗಾತಿಯ ಬೆಂಬಲದಿಂದ ಈ ರಾಶಿಯವರಿಗೆ ಅದೃಷ್ಟ; ಇಲ್ಲಿದೆ 12 ರಾಶಿಗಳ ದಿನಭವಿಷ್ಯ

ಕರಾವಳಿ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಇವತ್ತು ಮತ್ತು ನಾಳೆ ಇದೇ ಹವಾಮಾನ ಮುಂದುವರಿಯಲಿದೆ. ಬುಧವಾರ ಮತ್ತು ಗುರುವಾರ ಸಹ ದಕ್ಷಿಣ ಕನ್ನಡ ಜಿಲ್ಲೆಯ  ಹಲವು  ಭಾಗಗಳಲ್ಲಿ ಮಳೆಯಾಗಿದೆ. ಸೋಮವಾರದಿಂದ ಮಂಗಳವಾದವರೆಗೆ ಜಿಲ್ಲೆಯಲ್ಲಿ 15.1 ಮಿ.ಮೀ.ನಷ್ಟು  ಮಳೆಯಾಗಿದೆ. ಬಂಟ್ವಾಳ, ಮಂಗಳೂರು, ಮೂಡಬಿದಿರೆ, ಕಡಬ, ಸುಳ್ಯ ಹಾಗೂ ಪುತ್ತೂರು ಭಾಗದಲ್ಲಿ ಮಳೆಯಾಗುತ್ತಿರುವ ಬಗ್ಗೆ ವರದಿಯಾಗಿವೆ.  ಪಶ್ಚಿಮ ಘಟ್ಟ ಜಿಲ್ಲೆಯಲ್ಲಿ ಇಂದು ಮತ್ತು ನಾಳೆ ಮುಂದುವರಿಯಲಿದೆ.

ಇನ್ನು ಉತ್ತರ ಕರ್ನಾಟಕದ ಭಾಗದಲ್ಲಿ ಚಳಿಗಾಲ ಆರಂಭವಾಗಿದ್ದು, ಮಧ್ಯಾಹ್ನ ಸೂರ್ಯನ ಪ್ರಖರತೆ ಇರಲಿದೆ. ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ವಿಜಯಪುರ, ಬಾಗಲಕೋಟೆ, ಗದಗ ಜಿಲ್ಲೆಯ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಇನ್ನುಳಿದಂತೆ ಎಂದಿನಂತೆ ಬಿಸಿಲು ಇರಲಿದೆ.

ಚೆನ್ನೈನಲ್ಲಿ ತಗ್ಗಿದ ಮಳೆ

ಕಳೆದ ಮೂರು ದಿನಗಳಿಂದ ರಣ ಮಳೆಗೆ ತತ್ತರಿಸಿದ್ದ ಚೆನ್ನೈನಲ್ಲಿ ರೆಡ್ ಅಲರ್ಟ್ ಹಿಂಪಡೆಯಲಾಗಿದೆ, ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಗುರುವಾರ ಸಂಜೆ 5.30 ರಿಂದ 6.30ರ ನಡುವೆ ಮೇಲ್ಮೈ ಸುಳಿಗಾಳಿ ತಮಿಳುನಾಡಿನ ಉತ್ತರ ಕರಾವಳಿಯನ್ನು ದಾಟಿದೆ ಎಂದು ಹೇಳಿದೆ. ಈ ಸುಳಿಗಾಳಿ/ ಮಾರುತಗಳು ಶುಕ್ರವಾರ ಪಶ್ಚಿಮ ವಾಯುವ್ಯಕ್ಕೆ ಚಲಿಸಿ ಮುಂದೆ ದುರ್ಬಲಗೊಳ್ಳಲಿದೆ. ಈ ಮೂಲಕ ಮಳೆಯ ಪ್ರಮಾಣ ತಗ್ಗಲಿದೆ. 270ಕ್ಕೂ ಹೆಚ್ಚು ಗುಡಿಸಲುಗಳು, 70ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

ಇದನ್ನೂ ಓದಿ:  Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

ತಮಿಳುನಾಡಿನ ತಿರೂವಲ್ಲೂರು, ಕಲ್ಲಾಕುರಿಚಿ, ಸೇಲಂ, ವೆಲ್ಲೋರ್, ತಿರುನ್ನಾಮಲೈ, ರಾಣಿಪೇಟ್, ತಿರೂಪುತ್ತರ್, ನೀಲಗಿರಿ, ಕೊಯಂಬತ್ತೂರ್, ಚೆಂಗಲಾಪಟ್ಟೂ, ನಮಕ್ಕಲ್, ತಿರುಚಾನಪಲ್ಲಿ ಮತ್ತು ಚೆನ್ನೈನಲ್ಲಿ ಮಳೆಯಾಗಲಿದೆ. ಭಾರೀ ಮಳೆ ಹಿನ್ನೆಲೆ 11 ಎನ್.ಡಿ.ಆರ್.ಎಫ್ ಟೀಂ ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿಕೊಂಡಿದೆ, ಇದುವರೆಗೂ 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
Published by:Mahmadrafik K
First published: