Karnataka Weather Report: ರಾಜ್ಯದಲ್ಲಿ ಮತ್ತೆ ಮಳೆಯ ಅಬ್ಬರ​; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಇಂದು ರಾಜ್ಯದ ಬಹುತೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಚದುರಿದ ರೀತಿಯಲ್ಲಿ ಮಳೆಯಾಗಲಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 27 ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದ್ದು, ತುಂತುರು ಮಳೆಯ ಸಾಧ್ಯತೆಗಳಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಜೂನ್ ಮತ್ತು ಜುಲೈ ತಿಂಗಳಲ್ಲಿ ಅಬ್ಬರಿಸಿದ್ದ ವರುಣ ದೇವ (Heavy Rainfall) ಕಳೆದ ಎರಡು ವಾರಗಳಿಂದ ಬ್ರೇಕ್ ನೀಡಿದ್ದ. ಇದೀಗ ಮತ್ತೆ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (IMD) ಹೇಳಿದೆ. ಇಂದು ರಾಜ್ಯದ ಹಲವು ಭಾಗಗಳಲ್ಲಿ ಹಗುರವಾದ ಮಳೆಯಾಗಲಿದೆ. ನಾಳೆಯಿಂದ ಅಂದ್ರೆ ಆಗಸ್ಟ್ 23 ರಿಂದ ರಾಜ್ಯದಲ್ಲಿ ಮಳೆಯಾಗುವ ನಿರೀಕ್ಷೆಗಳಿವೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಈಗಾಗಲೇ ಗೋವಾ (Goa), ಕೊಂಕಣ (konkana) ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿಯೂ (Maharashtra Rains) ಸತತವಾಗಿ ಮಳೆ ಸುರಿಯುತ್ತಿದೆ. ಈ ಬಾರಿ ಉತ್ತರ ಒಳನಾಡಿನ ಜಿಲ್ಲೆಗಳಾದ ಬೀದರ್ (Bidar), ಕಲಬುರಗಿ (Kalaburagi) ಮತ್ತು ಯಾದಗಿರಿ (Yadagiri) ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ.

ನಾಳೆ (ಆಗಸ್ಟ್ 23) ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಮೈಸೂರು, ಹಾಸನ ಮತ್ತು ಕೋಲಾರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಪ್ರಕಟಿಸಲಾಗಿದೆ.

ನಾಳೆ ಈ ಭಾಗದಲ್ಲಿ ಯೆಲ್ಲೋ ಅಲರ್ಟ್

ಆಗಸ್ಟ್ 24ರಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಾಮರಾಜನಗರ, ತುಮಕೂರು, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಇದನ್ನೂ ಓದಿ: Bengaluru To Mangaluru: ಬೆಂಗಳೂರು-ಮಂಗಳೂರು ಪ್ರಯಾಣಿಕರಿಗೆ ಸಿಹಿಸುದ್ದಿ!

ಬೆಂಗಳೂರಿನಲ್ಲಿ ತುಂತುರು ಮಳೆ

ಇಂದು ರಾಜ್ಯದ ಬಹುತೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಚದುರಿದ ರೀತಿಯಲ್ಲಿ ಮಳೆಯಾಗಲಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 27 ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದ್ದು, ತುಂತುರು ಮಳೆಯ ಸಾಧ್ಯತೆಗಳಿವೆ.

IMD issues yellow alert for rain next two days Karnataka Weather Report 22 August 2022 mrq
ಸಾಂದರ್ಭಿಕ ಚಿತ್ರ


ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್​ಗಳಲ್ಲಿ)

ಬೆಂಗಳೂರು 27-20, ಮೈಸೂರು 27-20, ಚಾಮರಾಜನಗರ 27-21, ರಾಮನಗರ 28-21, ಮಂಡ್ಯ 28-21, ಬೆಂಗಳೂರು ಗ್ರಾಮಾಂತರ 27-20, ಚಿಕ್ಕಬಳ್ಳಾಪುರ 28-19, ಕೋಲಾರ 29-21, ಹಾಸನ 25-19, ಚಿತ್ರದುರ್ಗ 28-21, ಚಿಕ್ಕಮಗಳೂರು 24-18, ದಾವಣಗೆರೆ 27-21, ಶಿವಮೊಗ್ಗ 27-21, ಕೊಡಗು 22-17, ತುಮಕೂರು 27-20, ಉಡುಪಿ 28-21

ಮಂಗಳೂರು 28-24, ಉತ್ತರ ಕನ್ನಡ 26-21, ಧಾರವಾಡ 26-21, ಹಾವೇರಿ 25-17, ಹುಬ್ಬಳ್ಳಿ 27-21, ಬೆಳಗಾವಿ 24-20, ಗದಗ 28-21, ಕೊಪ್ಪಳ 31-22, ವಿಜಯಪುರ 29-22, ಬಾಗಲಕೋಟ 30-23 , ಕಲಬುರಗಿ 31-22, ಬೀದರ್ 29-21, ಯಾದಗಿರಿ 32-23, ರಾಯಚೂರ 32-23 ಮತ್ತು ಬಳ್ಳಾರಿ 32-23

ಸಹಜ ಸ್ಥಿತಿಯತ್ತ ಕೊಡಗು

ಈ ಬಾರಿಯ ರಣಮಳೆ, ಪ್ರವಾಹ (Flood), ಮೇಘಸ್ಫೋಟಕ್ಕೆ(Cloud burst) ಕೊಡಗು ತತ್ತರಿಸಿತ್ತು. ಹಿಂದೆ ಸಂಭವಿಸಿದ ಮಹಾಪ್ರವಾಹದ ಭೀತಿ ಕೂಡ ಮತ್ತೊಮ್ಮೆ ಆವರಿಸಿತ್ತು. ಅದರಲ್ಲೂ ಆಗಸ್ಟ್ 1ರ ರಾತ್ರಿ ಉಂಟಾದ ಜಲಸ್ಫೋಟ, ಭೂಕುಸಿತ (Landslide), ಕುಂಭದ್ರೋಣ ಮಳೆ ಮತ್ತು ಮಾರಿ ಪ್ರವಾಹದಿಂದಾಗಿ ದಕ್ಷಿಣ ಕನ್ನಡ ಮತ್ತು ಕೊಡಗಿನ (Kodagu) ಗಡಿಪ್ರದೇಶಗಳು ಕಂಗೆಟ್ಟು ಹೋಗಿತ್ತು.

ಜನ- ವಾಹನ ಸಂಚಾರ ಆರಂಭ

ಅದರಲ್ಲೂ ಸುಳ್ಯ ತಾಲೂಕಿನ ಕೊಲ್ಲಮೊಗ್ರು, ಕಲ್ಮಕಾರ್, ಹರಿಹರ- ಬಾಳುಗೋಡು ಪರಿಸರದಲ್ಲಿ ಅನಾಹುತಗಳೇ ಸಂಭವಿಸಿತ್ತು. ಈಗ ಸಾಹಸಿಕ ಕಾರ್ಯಾಚರಣೆ (Operation) ಮೂಲಕ ಮತ್ತೆ ಬದುಕು ಕಟ್ಟುವ ಕಾಯಕಕ್ಕೆ ಮುನ್ನುಡಿ ಬರೆಯಲಾಗಿದೆ. ಮುರಿದು ಹೋದ ಪ್ರಮುಖ ಸೇತುವೆಗಳನ್ನು (Bridge) ಮಣ್ಣು, ಮರಳಿನ ಚೀಲಗಳ ಮೂಲಕ ಮತ್ತೆ ಬೆಸೆಯುವ ಸೇತುಬಂಧ ಮುಕ್ತಾಯಗೊಂಡಿದ್ದು, ಜನ- ವಾಹನ ಸಂಚಾರ ಆರಂಭಗೊಂಡಿದೆ.

IMD issues yellow alert for rain next two days Karnataka Weather Report 22 August 2022 mrq
ಸಾಂದರ್ಭಿಕ ಚಿತ್ರ


ಇದನ್ನೂ ಓದಿ:  Ghar Wapsi: ಇಸ್ಲಾಂಗೆ ಮತಾಂತರಗೊಳ್ಳೋಕೆ ಸಜ್ಜಾಗಿದ್ದ ಅರ್ಚಕ, ಈಗ ಹಿಂದೂ ಧರ್ಮಕ್ಕೆ ಮರಳಿದ್ದೇಕೆ?

ಕೊಡಗು-ದಕ್ಷಿಣ ಕನ್ನಡ ಜಿಲ್ಲೆಯ ಗಡಿಪ್ರದೇಶದಲ್ಲಿ ಮಳೆಯಿಂದ ಅವಾಂತರಗಳು ಸಂಭವಿಸಿತ್ತು. ಈಗ ಸಾಹಸಿಕ ಕಾರ್ಯಾಚರಣೆ ಮೂಲಕ ಮತ್ತೆ ಬದುಕು ಕಟ್ಟುವ ಕಾಯಕಕ್ಕೆ ಮುನ್ನುಡಿ ಬರೆಯಲಾಗಿದೆ. ಮುರಿದು ಹೋದ ಪ್ರಮುಖ ಸೇತುವೆಗಳನ್ನು ಮಣ್ಣು, ಮರಳಿನ ಚೀಲಗಳ ಮೂಲಕ ಮತ್ತೆ ಬೆಸೆಯುವ ಸೇತುಬಂಧ ಮುಕ್ತಾಯಗೊಂಡಿದ್ದು, ಜನ- ವಾಹನ ಸಂಚಾರ ಶುರುವಾಗಿದೆ.
Published by:Mahmadrafik K
First published: